ಮಗನೇ, ನಿನಗಿದು ಲಾಸ್ಟ್ ಕಾಲ್, ಹೇಗ್​​ ಓಡಾಡ್ತೀಯ ನೋಡ್ತೀನಿ: ಆ ನನ್ನ ಮಗನ ಚಪ್ ಚಪ್ಲಿಲಿ ಹೊಡಿಬೇಕು! ಕಾಮಿಡಿ ಕಿಲಾಡಿ ನಯನಾ ಆವಾಜ್!

ಜೀವ ಬೆದರಿಕೆ ಮತ್ತು ನಿಂದನೆ ಆರೋಪದ ಮೇಲೆ ಕಾಮಿಡಿ ಕಿಲಾಡಿ ನಟಿ ನಯನಾ ವಿರುದ್ಧ ದೂರು ದಾಖಲಾಗಿದೆ. ಹಣದ ಹಂಚಿಕೆ ವಿಚಾರಕ್ಕೆ ಬೆದರಿಕೆ ಹಾಕಿರೋ ಆರೋಪ ಮಾಡಲಾಗಿದ್ದುಕಾಮಿಡಿ ಕಿಲಾಡಿ ಗ್ಯಾಂಗ್ಸ್​ನಲ್ಲಿ ನಟಿಸಿದ್ದ ಸೋಮಶೇಖರ್  ದೂರು ನೀಡಿದ್ಧಾರೆ.
ನಯನಾ
ನಯನಾ
Updated on

ಬೆಂಗಳೂರು : ಜೀವ ಬೆದರಿಕೆ ಮತ್ತು ನಿಂದನೆ ಆರೋಪದ ಮೇಲೆ ಕಾಮಿಡಿ ಕಿಲಾಡಿ ನಟಿ ನಯನಾ ವಿರುದ್ಧ ದೂರು ದಾಖಲಾಗಿದೆ. ಹಣದ ಹಂಚಿಕೆ ವಿಚಾರಕ್ಕೆ ಬೆದರಿಕೆ ಹಾಕಿರೋ ಆರೋಪ ಮಾಡಲಾಗಿದ್ದುಕಾಮಿಡಿ ಕಿಲಾಡಿ ಗ್ಯಾಂಗ್ಸ್​ನಲ್ಲಿ ನಟಿಸಿದ್ದ ಸೋಮಶೇಖರ್  ದೂರು ನೀಡಿದ್ಧಾರೆ.

ಖಾಸಗಿ ಚಾನಲ್​​ನಲ್ಲಿ  ಕಾಮಿಡಿ ಕಿಲಾಡಿ ಗ್ಯಾಂಗ್ಸ್​ ಪ್ರಸಾರವಾಗಿದ್ದು, ದ್ವಿತೀಯ ಬಹುಮಾನ ಪಡೆದಿದ್ದ PUC ಟೀಂಗೆ 3 ಲಕ್ಷ ಹಣ ಬಂದಿತ್ತು, ಅದ್ರಲ್ಲಿ ಶೇ. 30ರಷ್ಟು ಕಟ್​ ಆಗಿ ಪ್ರತಿಯೊಬ್ಬರಿಗೆ 70 ಸಾವಿರ ಬಂದಿತ್ತು, PUC ಟೀಂನಲ್ಲಿ ಸೋಮಶೇಖರ್‌ ಸೇರಿ ಇನ್ನೂ ಮೂವರು ನಟಿಸಿದ್ದರು.

ಜ್ಯೂನಿಯರ್​ ಆರ್ಟಿಸ್ಟ್​ಗಳಿಗೆ ಅಂತಾ ಮೂವರಿಗೆ ಹಣ, ಟೀಂನ ಮತ್ತಿಬ್ಬರು ಸೀನಿಯರ್ಸ್​ ಅನೀಶ್​, ಚಿದಾನಂದ್​ಗೆ ತಿಂಗಳ ಪೇಮೆಂಟ್​ ನೀಡಲಾಗಿದೆ. ಇಬ್ಬರು ಸೀನಿಯರ್​ಗಳಿಗೆ ಹಣ ನೀಡಲು ನಯನಾ ಅವಾಜ್‌ ಹಾಕಿದ್ಧಾರೆ.

ಮೂವರಿಗೆ ಜೂನಿಯರ್ ಆರ್ಟಿಸ್ಟ್​ ಅಂತಾನೆ ಹಣ ನೀಡಲಾಗುತ್ತದೆ. ಆ ತಂಡದಲ್ಲಿ ಇನ್ನೂ ಇಬ್ಬರು ಸೀನಿಯರ್​ಗಳಿಗೆ ತಿಂಗಳ ಸಂಬಳ ಇರ್ತಿತ್ತು. ಅನೀಶ್ ಮತ್ತು ಚಿದಾನಂದ್ PUC ತಂಡದಲ್ಲಿ ಸೀನಿಯರ್​ಗಳಾಗಿದ್ದರು. ಇಬ್ಬರು ಸೀನಿಯರ್​ಗಳಿಗೆ ಹಣ ನೀಡುವಂತೆ ಇದೀಗ ನಯನಾ ಅವಾಜ್‌ ಹಾಕಿದ್ದಾರೆ.

ಚಪ್ ಚಪ್ಲಿಲಿ ಹೊಡಿಬೇಕು ಬೋ….ಮಗ ಎಂದೆಲ್ಲ ಬೈದಿದ್ದಾರೆ. ನೀನು ಹಣ ಕೊಟ್ರೆ ಸರಿ, ಇಲ್ಲ ಅಂದ್ರೆ ಸರಿ ಇರಲ್ಲ. ನೀನು ಹಣ ಕೊಟ್ಟಿಲ್ಲ ಅಂದ್ರೆ ನಾವು ಏನು ಮಾಡೋಕು ಯೋಚಿಸಲ್ಲ. ಮುಂದಿನ ಬಾರಿ ನಿನ್ನನ್ನು ಪೊಲೀಸರು ಬಂದು ಅರೆಸ್ಟ್ ಮಾಡ್ತಾರೆ. ನಾನು ಸ್ಟೇಷನ್​ನಲ್ಲೇ ಇದೀನಿ ಎಂದು ನಯನಾ ಅವಾಜ್​ ಹಾಕಿರುವ ಆಡಿಯೋ ವೈರಲ್​ ಆಗಿದೆ.

ನಯನಾ‌ ಏನೂ ಅಂತ ನಿನಗೆ ಗೊತ್ತಿಲ್ಲ ಮಗನೆ , ನಿನಗಿದು ಲಾಸ್ಟ್ ಕಾಲ್, ಬೆಂಗಳೂರಲ್ಲಿ ಹೇಗ್​​ ಓಡಾಡ್ತೀಯ ನೋಡ್ತೀನಿ, ನಟಿ ನಯನಾ ರೌಡಿಗಳ ರೀತಿ ಅವಾಜ್ ಹಾಕಿದ್ಧಾರೆ.  ನಯನಾ ಹಣದ ವಿಚಾರಕ್ಕೆ ಕೆಳ ಮಟ್ಟಕ್ಕೆ ಇಳಿದಿದ್ಧಾರೆ.ಈ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎನ್ ಸಿ ಆರ್ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com