ಪೃಥ್ವಿರಾಜ್ ಪ್ರೊಡಕ್ಷನ್ಸ್ ಅಡಿಯಲ್ಲಿ 'ಕಾಂತಾರ' ಮಲಯಾಳಂ ಆವೃತ್ತಿ ರಿಲೀಸ್

ನಟ ಪೃಥ್ವಿರಾಜ್ ಸುಕುಮಾರನ್ ಅವರ ಬ್ಯಾನರ್ ಪೃಥ್ವಿರಾಜ್ ಪ್ರೊಡಕ್ಷನ್ಸ್ ಅಡಿಯಲ್ಲಿ ಕಾಂತಾರ ಮಲಯಾಳಂ ಆವೃತ್ತಿಯನ್ನು ಕೇರಳದಾದ್ಯಂತ ಬಿಡುಗಡೆ ಮಾಡಲಿದೆ
ಪೃಥ್ವಿರಾಜ್ ಸುಕುಮಾರನ್
ಪೃಥ್ವಿರಾಜ್ ಸುಕುಮಾರನ್
Updated on

ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿರುವ ಕಾಂತಾರ ಸಿನಿಮಾಗೆ ನೋಡುಗರಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಕನ್ನಡದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಕಾಂತಾರ ಚಿತ್ರವು ಎಲ್ಲಾ ಮೂಲೆಗಳಿಂದ ಅದ್ಭುತ ಪ್ರತಿಕ್ರಿಯೆಗಳನ್ನು ಪಡೆಯುತ್ತಲೇ ಇದೆ.  ಕರ್ನಾಟಕದ ಹೊರಗೂ ಬ್ಲಾಕ್‌ಬಸ್ಟರ್ ವ್ಯಾಪಾರ ಮಾಡುತ್ತಿದೆ.

ಕಾಂತಾರ ಯಶಸ್ಸಿನಿಂದ ಪ್ರೇರಿತರಾದ ಚಿತ್ರತಂಡ ತಮಿಳು ಮತ್ತು ಮಲಯಾಳಂ ಸೇರಿದಂತೆ ಚಿತ್ರದ ಡಬ್ಬಿಂಗ್ ಆವೃತ್ತಿಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ.

ನಟ ಪೃಥ್ವಿರಾಜ್ ಸುಕುಮಾರನ್ ಅವರ ಬ್ಯಾನರ್ ಪೃಥ್ವಿರಾಜ್ ಪ್ರೊಡಕ್ಷನ್ಸ್ ಮಲಯಾಳಂ ಆವೃತ್ತಿಯನ್ನು ಕೇರಳದಾದ್ಯಂತ ಬಿಡುಗಡೆ ಮಾಡಲಿದೆ. ಈ ಬಗ್ಗೆ ಪೃಥ್ವಿರಾಜ್ ಸುಕುಮಾರನ್ ಸಾಮಾಜಿಕ ಜಾಲತಾಣದ ಮೂಲಕ ಖಚಿತ ಪಡಿಸಿದ್ದಾರೆ.  ಆದರೆ ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.

ಈ ಹಿಂದೆ ಪೃಥ್ವಿರಾಜ್ ಕೂಡ 'ಕಾಂತಾರ' ಸಿನಿಮಾವನ್ನು ಹೊಗಳಿ ಟ್ವೀಟ್ ಮಾಡಿದ್ದರು. ಚಿತ್ರದ ನಾಯಕನಾಗಿ ನಟಿಸಿರುವ ಮತ್ತು ನಿರ್ದೇಶನ ಮಾಡಿರುವ ರಿಷಬ್ ಶೆಟ್ಟಿ ಅವರದ್ದು'ಅದ್ಭುತ ಸಿನಿಮಾ ಸಾಧನೆಎಂದು ಪೃಥ್ವಿರಾಜ್ ಹಾಡಿಹೊಗಳಿದ್ದರು. ಕಾಂತಾರ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com