'ಆಪ್ತಮಿತ್ರ' ಸಿನಿಮಾಗೆ 18 ವರ್ಷ: ವಿಷ್ಣುವರ್ಧನ್, ಸೌಂದರ್ಯ ನೆನಪು ಹಂಚಿಕೊಂಡ ರಮೇಶ್ ಅರವಿಂದ್

ಡಾ. ವಿಷ್ಣುವರ್ದನ್ ನಾಯಕರಾಗಿದ್ದ ಆಪ್ತಮಿತ್ರ ಸಿನಿಮಾ ಬಿಡುಗಡೆಯಾಗಿ 18 ವರ್ಷವಾಗಿದೆ. ಈ ಸಂದರ್ಭದಲ್ಲಿ ನಟ ರಮೇಶ್ ಅರವಿಂದ್ ಆಪ್ತಮಿತ್ರ ಸಿನಿಮಾದ ಕೆಲವು ಫೋಟೋಗಳನ್ನು ಹಂಚಿಕೊಂಡು ಸಿನಿಮಾದ ಗೋಲ್ಡನ್ ಗಳಿಗೆಯನ್ನು ಸ್ಮರಿಸಿದ್ದಾರೆ.
ಆಪ್ತಮಿತ್ರ ಸಿನಿಮಾ ಸ್ಟಿಲ್
ಆಪ್ತಮಿತ್ರ ಸಿನಿಮಾ ಸ್ಟಿಲ್

ಬೆಂಗಳೂರು: ಡಾ. ವಿಷ್ಣುವರ್ದನ್ ನಾಯಕರಾಗಿದ್ದ ಆಪ್ತಮಿತ್ರ ಸಿನಿಮಾ ಬಿಡುಗಡೆಯಾಗಿ 18 ವರ್ಷವಾಗಿದೆ. ಈ ಸಂದರ್ಭದಲ್ಲಿ ನಟ ರಮೇಶ್ ಅರವಿಂದ್ ಆಪ್ತಮಿತ್ರ ಸಿನಿಮಾದ ಕೆಲವು ಫೋಟೋಗಳನ್ನು ಹಂಚಿಕೊಂಡು ಸಿನಿಮಾದ ಗೋಲ್ಡನ್ ಗಳಿಗೆಯನ್ನು ಸ್ಮರಿಸಿದ್ದಾರೆ.

ವಿಷ್ಣುವರ್ಧನ್ ಜೊತೆಗೆ ಪ್ರೇಮಾ, ಸೌಂದರ್ಯ, ರಮೇಶ್ ಅರವಿಂದ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ದುರಂತವೆಂದರೆ ಇದು ಸೌಂದರ್ಯಾ ಅವರ ಕೊನೆಯ ಸಿನಿಮಾವಾಗಿತ್ತು. ಈ ಸಿನಿಮಾದ ಹಾಡುಗಳು ಇಂದಿಗೂ ಜನಪ್ರಿಯ.

ಸಾಹಸಸಿಂಹ ಡಾ. ವಿಷ್ಣುವರ್ಧನ್‌ ಅವರ ಕರಿಯರ್‌ನ ಟಾಪ್‌ 5 ಸಿನಿಮಾಗಳಲ್ಲಿ 'ಆಪ್ತಮಿತ್ರ' ಚಿತ್ರ ಸ್ಥಾನ ಪಡೆದುಕೊಳ್ಳುತ್ತದೆ. 2004ರಲ್ಲಿ ತೆರೆಕಂಡ ಈ ಸಿನಿಮಾ ಆ ಕಾಲಕ್ಕೆ ಮಾಡಿದ ಸಾಧನೆ ಸಾಮಾನ್ಯದ್ದಲ್ಲ. ಇದೀಗ ಈ ಸಿನಿಮಾ ತೆರೆಕಂಡು 18 ವರ್ಷಗಳಾಗಿದ್ದು, ಚಿತ್ರತಂಡ ಅದನ್ನು ನೆನಪು ಮಾಡಿಕೊಂಡಿದೆ.  ದ್ವಾರಕೀಶ್‌ ನಿರ್ಮಾಣದ ಈ ಸಿನಿಮದಲ್ಲಿ ವಿಷ್ಣು ತುಂಬ ಗ್ಯಾಪ್‌ ನಂತರ ಬಣ್ಣ ಹಚ್ಚಿದ್ದರು. ಚಿತ್ರ ಕೂಡ ದೊಡ್ಡಮಟ್ಟದ ಗೆಲುವು ಕಾಣುವಲ್ಲಿ ಯಶಸ್ವಿಯಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com