ಮಲ್ಟಿಪ್ಲೆಕ್ಸ್‌ಗಳ ಇತಿಹಾಸದಲ್ಲೇ ಹೆಚ್ಚು ಗಳಿಕೆ; ದಾಖಲೆ ಬರೆದ ಕೆಜಿಎಫ್ ಚಾಪ್ಟರ್ 2
ನಟ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್–2 ದಾಖಲೆಗಳ ಸರಣಿ ಇನ್ನೂ ನಿಂತಂತೆ ಕಾಣುತ್ತಿಲ್ಲ.. ಸಾಲು ಸಾಲು ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುತ್ತಿದ್ದರೂ ರಾಕಿ ಭಾಯ್ ದಾಖಲೆ ಸರಣಿ ಮಾತ್ರ ಮುಂದುವರೆಯುತ್ತಲೇ ಇದೆ.
Published: 27th July 2022 07:24 PM | Last Updated: 27th July 2022 07:40 PM | A+A A-

ಕೆಜಿಎಫ್ ಚಾಪ್ಟರ್ 2
ಹೈದರಾಬಾದ್: ನಟ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್–2 ದಾಖಲೆಗಳ ಸರಣಿ ಇನ್ನೂ ನಿಂತಂತೆ ಕಾಣುತ್ತಿಲ್ಲ.. ಸಾಲು ಸಾಲು ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುತ್ತಿದ್ದರೂ ರಾಕಿ ಭಾಯ್ ದಾಖಲೆ ಸರಣಿ ಮಾತ್ರ ಮುಂದುವರೆಯುತ್ತಲೇ ಇದೆ.
#KGFChapter2 : With ₹121.4 Cr NETT in PVR Cinemas, it has set an “All Time” Record as the Biggest Earner in Multiplex History.
— AndhraBoxOffice.Com (@AndhraBoxOffice) July 26, 2022
Recent, 2022.#RRRMovie ₹93.7 Cr#BhoolBhulaiyaa2 ₹47.4 Cr#DoctorStrange2 ₹45.8 Cr#Vikram ₹26.6 Cr
Note : PVR Cinemas NETT from 173 Multiplexes. pic.twitter.com/WMHQ0dGrbG
ಈ ಬಾರಿಯೂ ಕೆಜಿಎಫ್ ಚಾಪ್ಟರ್ 2 ಚಿತ್ರ ತನ್ನ ಗಳಿಕೆ ಮೂಲಕವೇ ಮತ್ತೆ ದಾಖಲೆ ಮೂಲಕ ಸುದ್ದಿಗೆ ಗ್ರಾಸವಾಗುತ್ತಿದ್ದು, ಕೆಜಿಎಫ್ 2 ಚಿತ್ರ ಗಳಿಕೆಯಲ್ಲಿ ಎಲ್ಲ ದಾಖಲೆಗಳನ್ನು ಮುರಿದಿದೆ. ಸಿಂಗಲ್ ಸ್ಕ್ರೀನ್ ಮಾತ್ರವಲ್ಲದೇ ಇದೀಗ ಮಲ್ಟಿಪ್ಲೆಕ್ಸ್‌ಗಳಲ್ಲೂ ದಾಖಲೆ ಮಾಡಿದ್ದು, ಮಲ್ಟಿಪ್ಲೆಕ್ಸ್‌ಗಳ ಇತಿಹಾಸದಲ್ಲೇ ಹೆಚ್ಚು ಗಳಿಕೆ ಕಂಡ ಚಿತ್ರ ಎಂಬ ಖ್ಯಾತಿಗೆ ಕೆಜಿಎಫ್ 2 ಪಾತ್ರವಾಗಿದೆ.
ಇದನ್ನೂ ಓದಿ: ಕೆಜಿಎಫ್ 2 ಜೊತೆಗೇ 'ಲಾಲ್ ಸಿಂಗ್ ಚಡ್ಡಾ' ಬಿಡುಗಡೆ ಮಾಡದೆ ಬದುಕಿದೆವು: ರಾಕಿ ಭಾಯ್ ಖದರ್ ಗೆ ಬೆಚ್ಚಿದ್ದ ಅಮೀರ್ ಖಾನ್!
ಈ ಕುರಿತಂತೆ ಆಂಧ್ರ ಬಾಕ್ಸಾಫೀಸ್ ಡಾಟ್ ಕಾಮ್ (@AndhraBoxOffice) ಟ್ವಿಟರ್ ಖಾತೆ ವರದಿ ಮಾಡಿದ್ದು, ಮಲ್ಟಿಪ್ಲೆಕ್ಸ್‌ನ ಪಿ.ವಿ.ಆರ್. ಸಿನಿಮಾಸ್‌ಗಳಲ್ಲಿ ಈ ಚಿತ್ರ ದಾಖಲೆಯ 121.4 ಕೋಟಿ ರೂ ಗಳ ಕಲೆಕ್ಷನ್ ಮಾಡಿದೆ ಎಂದು ಟ್ವೀಟ್ ಮಾಡಿದೆ. ಇದು ಮಲ್ಟಿಪ್ಲೆಕ್ಸ್ ಇತಿಹಾಸದಲ್ಲೇ ದಾಖಲೆಯ ಗಳಿಕೆಯಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: 100 ದಿನ ಪೂರೈಸಿದ ಕೆಜಿಎಫ್-2: ಇದು ಕೇವಲ ಆರಂಭ ಎಂದು ನಿರ್ಮಾಪಕ!
ದೇಶದಾದ್ಯಂತ 173 ಪಿವಿಆರ್ ಸಿನಿಮಾ ಮಂದಿರಗಳಲ್ಲಿ ಈ ಚಿತ್ರ ದಾಖಲೆ ಮಾಡಿದ್ದು,. 2022ರಲ್ಲಿ ಪಿವಿಆರ್ ಚಿತ್ರಮಂದಿರಗಳಲ್ಲಿ ಆರ್‌ಆರ್‌ಆರ್ ಸಿನಿಮಾ 93.7 ಕೋಟಿ ರೂ, ಭೂಲ್‌ಭೂಲ್ಲಯಾ 47.4 ಕೋಟಿ ರೂ, ಡಾಕ್ಟರ್ ಸ್ಟ್ರೇಂಜ್–2 45.8 ಕೋಟಿ ರೂ ಹಾಗೂ ವಿಕ್ರಮ್ ಸಿನಿಮಾ 26.6 ಕೋಟಿ ರೂ ಗಳಿಕೆ ಕಂಡಿತ್ತು.
ಇದನ್ನೂ ಓದಿ: ರಾಕಿಂಗ್ ಸ್ಟಾರ್ ಯಶ್ ನಟನೆಯ 19ನೇ ಸಿನಿಮಾ ಇನ್ನೂ ನಿಗೂಢ; ಮುಂದಿನ ಚಿತ್ರದಲ್ಲೂ ಮಾಡ್ತಾರಾ ಹಂಗಾಮ?
ಚಿತ್ರ ಬಿಡುಗಡೆಯಾಗಿ 20 ದಿನಗಳಲ್ಲಿ 1000 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಸಿನಿಮಾ ಎಂಬ ಹೊಸ ದಾಖಲೆ ಕೂಡ ಕೆಜಿಎಫ್ 2 ಮಾಡಿತ್ತು.