ರಾಕಿಂಗ್ ಸ್ಟಾರ್ ಯಶ್ ನಟನೆಯ 19ನೇ ಸಿನಿಮಾ ಇನ್ನೂ ನಿಗೂಢ; ಮುಂದಿನ ಚಿತ್ರದಲ್ಲೂ ಮಾಡ್ತಾರಾ ಹಂಗಾಮ?

ಕೆಜಿಎಫ್ ಸಿನಿಮಾ ನಂತರ ರಾಕಿಂಗ್ ಸ್ಟಾರ್ ಯಶ್ ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವರ ಗಡ್ಡಕ್ಕೂ ಅಪಾರ ಪ್ರಮಾಣದ ಅಭಿಮಾನಿಗಳಿದ್ದಾರೆ.
ಯಶ್
ಯಶ್

ಕೆಜಿಎಫ್ ಸಿನಿಮಾ ನಂತರ ರಾಕಿಂಗ್ ಸ್ಟಾರ್ ಯಶ್ ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವರ ಗಡ್ಡಕ್ಕೂ ಅಪಾರ ಪ್ರಮಾಣದ ಅಭಿಮಾನಿಗಳಿದ್ದಾರೆ.

ಸದ್ಯಕ್ಕೆ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಇರುವುದು ಒಂದೇ ಚರ್ಚೆ, ಒಂದೇ ಪ್ರಶ್ನೆ, ‌ಅದು ಯಶ್ ಮುಂದಿನ ಚಿತ್ರದ ಬಗ್ಗೆ. ನಟ ಯಶ್ ಮುಂದಿನ ಸಿನಿಮಾ ಯಾವಾಗ ಮತ್ತು ಯಾವುದು ಎನ್ನುವುದೇ ಯಕ್ಷ ಪ್ರಶ್ನೆ ಆಗಿದೆ‌.

ಯಶ್ 19ನೇ ಸಿನಿಮಾದ ಬಗ್ಗೆ ನಾನಾ ಸುದ್ದಿಗಳು ಹರಿದಾಡುತ್ತಿವೆ. ಯಶ್ 19ನೇ ಚಿತ್ರದ ನಿರ್ದೇಶನ ಯಾರು ಮಾಡುತ್ತಾರೆ, ಸಿನಿಮಾ ಯಾವಾಗ ಶುರುವಾಗಲಿದೆ ಎನ್ನುವ ಬಗ್ಗೆ ಹಲವು ಸುದ್ದಿಗಳು ಹಬ್ಬಿವೆ.  ನಿರ್ಮಾಣ ಯಾರು ಮಾಡುತ್ತಾರೆ ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.

ಸದ್ಯಕ್ಕೆ ಯಶ್ 19ನೇ ಸಿನಿಮಾಗೆ ಕೇಳಿ ಬರುತ್ತಿರುವುದು ನಿರ್ದೇಶಕ ನರ್ತನ್ ಹೆಸರು. ನರ್ತನ್, ಯಶ್ ಗೆ ಮುಂದಿನ ಸಿನಿಮಾವನ್ನು ನಿರ್ದೇಶನ ಮಾಡುತ್ತಾರೆ ಎನ್ನಲಾಗುತ್ತಿದೆ. ಈ ಸುದ್ದಿ ಸಾಕಷ್ಟು ದಿಗಳಿಂದ ಹರಿದಾಡುತ್ತಲೇ ಇದೆ. ಹಾಗಾಗಿ ಯಶ್ 19ನೇ ಸಿನಿಮಾಗೆ, ನರ್ತನ್ ಫಿಕ್ಸ್ ಎನ್ನಲಾಗುತ್ತಿದೆ.

ಆದರೆ ಇದು ಅಧಿಕೃತವಾಗಿಲ್ಲ. ಈ ಬಗ್ಗೆ ನರ್ತನ್ ಕೂಡ ಯಾವ ಸುಳಿವು ಕೊಟ್ಟಿಲ್ಲ.  ಯಶ್ ಅವರ ಮುಂದಿನ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಇರದ ಕಾರಣ ಯಶ್  ಅಭಿಮಾನಿಗಳು Yash19 ಸಿನಿಮಾ ಬಗ್ಗೆ ಅಧಿಕೃತ ಘೋಷಣೆಗಾಗಿ ಮತ್ತಷ್ಟು ಸಮಯ ಕಾಯಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com