ಪ್ಯಾನ್ ಇಂಡಿಯಾದತ್ತ 'ಕಾಂತಾರ': ಅಕ್ಟೋಬರ್ 9 ರಂದು ಹಿಂದಿ ಟ್ರೈಲರ್ ಬಿಡುಗಡೆ!

ಇತ್ತೀಚೆಗೆ ಕನ್ನಡದಲ್ಲಿ ಬಿಡುಗಡೆಯಾಗಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿರುವ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ ಇದೀಗ ಪ್ಯಾನ್ ಇಂಡಿಯಾದತ್ತ ಮುಖ ಮಾಡಿದೆ.
ಕಾಂತಾರ ಚಿತ್ರ
ಕಾಂತಾರ ಚಿತ್ರ

ಬೆಂಗಳೂರು: ಇತ್ತೀಚೆಗೆ ಕನ್ನಡದಲ್ಲಿ ಬಿಡುಗಡೆಯಾಗಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿರುವ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ ಇದೀಗ ಪ್ಯಾನ್ ಇಂಡಿಯಾದತ್ತ ಮುಖ ಮಾಡಿದೆ.

ಹೌದು..ಕಾಂತಾರ ಚಿತ್ರ ಪ್ರೇಕ್ಷಕರ ಅದ್ಭುತ ಪ್ರತಿಕ್ರಿಯೆ ಪಡೆಯುತ್ತಿದ್ದು, ಕರಾವಳಿ ಸೇರಿ ಬೆಂಗಳೂರಿನಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ದಿನೇ ದಿನೇ ಚಿತ್ರದ ಥಿಯೇಟರ್ ಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಹಲವರು ಟಿಕೆಟ್ ಸಿಗದೇ ನಿರಾಶರಾಗುತ್ತಿದ್ದಾರೆ. 

ಇನ್ನು ಕನ್ನಡ ಯಶಸ್ವೀ ಚಿತ್ರ ಕಾಂತಾರಗೆ ಇದೀಗ ಬೇರೆ ಭಾಷೆಗಳಲ್ಲಿಯೂ ವ್ಯಾಪಕ ಬೇಡಿಕೆ ಸೃಷ್ಟಿಯಾಗಿದ್ದು, ಹಲವು ಖ್ಯಾತನಾಮ ನಿರ್ಮಾಪಕರು ಚಿತ್ರದ ಡಬ್ಬಿಂಗ್ ಅವತರಣಿಕೆಗೆ ಬೇಡಿಕೆ ಇಡುತ್ತಿದ್ದಾರೆ. ಇದೇ ಕಾರಣಕ್ಕೆ ಇದೀಗ ಚಿತ್ರ ತಂಡ ಚಿತ್ರವನ್ನು ವಿವಿಧ ಭಾಷೆಗಳಿಗೆ ಡಬ್ ಮಾಡಲು ಸಿದ್ಧತೆ ನಡೆಸಿದೆ. ಇದಕ್ಕೆ ಇಂಬು ನೀಡುವಂತೆ ಮುಂಬೈ ಪ್ರದರ್ಶಕ ಮನೋಜ್ ದೇಸಾಯಿ ಮಾತನಾಡಿ, 'ನಾನು ಈ ಚಿತ್ರವನ್ನು ಹಾಕಿದ ದಿನ ಚಿತ್ರ ಥಿಯೇಟರ್‌ನಲ್ಲಿ ಹೌಸ್‌ಫುಲ್ ಆಗಿತ್ತು, ಇಂದೂ ಅದು ಹೌಸ್‌ಫುಲ್ ಆಯಿತು ಮತ್ತು ನಾನು ಈ ಚಿತ್ರವನ್ನು ಮುಂದುವರಿಸಲಿದ್ದೇನೆ ಎಂದು ಹೇಳಿದ್ದಾರೆ. 

ಚಿತ್ರಕ್ಕೆ ಭಾರಿ ಸ್ಪಂದನೆ ವ್ಯಕ್ತವಾಗಿದ್ದು, ಇತರ ಭಾಷೆಗಳಿಗೂ ಶೀಘ್ರ ಡಬ್ಬಿಂಗ್ ನಡೆಯಲಿದೆ ಎನ್ನಲಾಗಿದೆ.ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಹೊಂಬಾಳೆ ಫಿಲಂಸ್, ''ದೈವತ್ವದಿಂದ ಮಂತ್ರಮುಗ್ಧರಾಗಲು ಸಿದ್ಧರಾಗಿ. ಸಾಕ್ಷಿ ಮತ್ತು ದೈವಿಕ ಶಕ್ತಿಯನ್ನು ಅನುಭವಿಸಿ. ಕಾಂತಾರ ಹಿಂದಿ ಟ್ರೈಲರ್ ಅನ್ನು ಅಕ್ಟೋಬರ್ 9 ರಂದು ಬೆಳಗ್ಗೆ 9. 10 ಕ್ಕೆ ಬಿಡುಗಡೆ ಮಾಡಲಾಗುವುದು' ಎಂದು ಗುರುವಾರ ಟ್ವೀಟ್ ಮಾಡಿದೆ.

ಮಲಯಾಳ, ತೆಲುಗು, ತಮಿಳು ಭಾಷೆಗಳವರಿಂದ ಆ ಭಾಷೆಗಳಿಗೆ ಡಬ್ಬಿಂಗ್‌ಗೆ ಬೇಡಿಕೆ ಬರುತ್ತಿದ್ದು, ನಮ್ಮ ಪ್ರೊಡಕ್ಷನ್‌ ಹೌಸ್‌ ಇನ್ನೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

ಹೊಂಬಾಳೆ ಸಂಸ್ಥೆ ನಿರ್ಮಾಣದ `ಕಾಂತಾರಾ’ (Kantara Film) ಚಿತ್ರವನ್ನು ರಿಷಬ್ ಶೆಟ್ಟಿ, ನಟನೆಯ ಜೊತೆ ನಿರ್ದೇಶಿಸಿದ್ದಾರೆ. ಸೆಪ್ಟೆಂಬರ್ 30ರಂದು ರಿಲೀಸ್ ಆಗಿರುವ `ಕಾಂತಾರಾ’ ಸಿನಿಮಾ ಏಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಹೀಗಿರುವಾಗ ಪರಭಾಷೆಯ ಪ್ರೇಕ್ಷಕರಿಂದ ಚಿತ್ರಕ್ಕೆ ಡಿಮ್ಯಾಂಡ್ ಬಂದಿದೆ. ಚಿತ್ರವನ್ನು ಡಬ್ಬಿಂಗ್ ಮಾಡಲು ಬೇಡಿಕೆ ಕೂಡ ಇಡಲಾಗಿದೆ. ಕನ್ನಡದ `ಕಾಂತಾರಾ’ ಸಕ್ಸಸ್ ನಂತರ ಹೊಂಬಾಳೆ ನಿರ್ಮಾಣ ಸಂಸ್ಥೆ ಕೂಡ ಬಹುಭಾಷೆಗಳಲ್ಲಿ ಡಬ್ಬಿಂಗ್ ಮಾಡಿ, ತೆರೆಗೆ ತರಲು ಮುಂದಾಗಿದೆ. ಸದ್ಯ ಹಿಂದಿಯಲ್ಲಿ ಟ್ರೈಲರ್ ಕೌಂಟ್ ಡೌನ್ ಶುರುವಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com