ಉಪೇಂದ್ರ ನಟನೆಯ ಬಹುಭಾಷಾ ಸಿನಿಮಾ 'UI' ಡಬ್ಬಿಂಗ್ ಹಂತಕ್ಕೆ; ಡಿಸೆಂಬರ್‌ನಲ್ಲಿ ಬಿಡುಗಡೆಗೆ ಸಿದ್ಧತೆ!

ಉಪೇಂದ್ರ ಅವರ ಬಹು ನಿರೀಕ್ಷಿತ ಪ್ಯಾನ್-ಇಂಡಿಯಾ 'UI' ಸಿನಿಮಾವನ್ನು ಚಿತ್ರತಂಡ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದು, ಚಿತ್ರವು ಸದ್ಯ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ.
ಉಪೇಂದ್ರ
ಉಪೇಂದ್ರ

ಉಪೇಂದ್ರ ಅವರ ಬಹು ನಿರೀಕ್ಷಿತ ಪ್ಯಾನ್-ಇಂಡಿಯಾ 'UI' ಸಿನಿಮಾವನ್ನು ಚಿತ್ರತಂಡ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದು, ಚಿತ್ರವು ಸದ್ಯ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರತಂಡದ ಒಂದು ವಿಭಾಗವು ಚಿತ್ರದ ಫಸ್ಟ್ ಲುಕ್‌ ಕುರಿತಾಗಿ ಕೆಲಸ ಮಾಡುತ್ತಿದ್ದರೆ, ಉಪೇಂದ್ರ ಅವರು ಈಗಾಗಲೇ ಎಡಿಟ್ ಮಾಡಿರುವ ತುಣುಕುಗಳಿಗೆ ಡಬ್ಬಿಂಗ್ ಮಾಡಲು ಪ್ರಾರಂಭಿಸಿದ್ದಾರೆ. ಅವರು ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿರುವ ಕೆಲವು ಚಿತ್ರಗಳು ಇತ್ತೀಚೆಗಷ್ಟೇ ಹೊರಬಿದ್ದಿವೆ.

ಡಬ್ಬಿಂಗ್ ಪ್ರಕ್ರಿಯೆಯು ಒಂದು ತಿಂಗಳ ಕಾಲ ಮುಂದುವರಿಯುವ ನಿರೀಕ್ಷೆಯಿದೆ. ಉಪೇಂದ್ರ ಅವರು ಕನ್ನಡ ಮತ್ತು ತೆಲುಗು ಆವೃತ್ತಿಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದು, ಹಿಂದಿ ಆವೃತ್ತಿಯ ಡಬ್ಬಿಂಗ್ ಮಾಡುವ ಸಾಧ್ಯತೆ ಕುರಿತು ಎದುರುನೋಡುತ್ತಿದ್ದಾರೆ. ಇದರೊಂದಿಗೆ, ತಮಿಳು ಮತ್ತು ಮಲಯಾಳಂ ಆವೃತ್ತಿಗಳಲ್ಲಿ ಡಬ್ಬಿಂಗ್‌ಗೆ ಸೂಕ್ತ ಧ್ವನಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.

<strong>ಯುಐ ಸಿನಿಮಾದ ಸ್ಟಿಲ್</strong>
ಯುಐ ಸಿನಿಮಾದ ಸ್ಟಿಲ್

ಇದೇ ವೇಳೆ, ನುರಿತ ವಿಎಫ್ಎಕ್ಸ್ ತಜ್ಞ ಮತ್ತು ಯುಐನ ನಿರ್ಮಾಪಕರಲ್ಲಿ ಒಬ್ಬರಾದ ನವೀನ್ ಮನೋಹರ್ ನೇತೃತ್ವದ ತಂಡವು ಚಿತ್ರದ ವಿಶ್ಯುಯಲ್ ಎಫೆಕ್ಟ್‌ಗಳಿಗೆ ತಮ್ಮ ಸಮಯವನ್ನು ಮೀಸಲಿಟ್ಟಿದೆ. ವಿಎಫ್ಎಕ್ಸ್ ಕೆಲಸವನ್ನು ನಿರ್ಮಲ್ ಮತ್ತು ಅವರ ತಂಡವು ಯುಎಸ್ಎನಲ್ಲಿ ರಿಮೋಟ್ ಮೂಲಕ ನಡೆಸುತ್ತಿದೆ.

ಚಿತ್ರ ಬಿಡುಗಡೆ ದಿನಾಂಕ ಇನ್ನು ಅಧಿಕೃತವಾಗಿ ಘೋಷಣೆಯಾಗದಿದ್ದರೂ, ಯುಐ ಅನ್ನು ಲಹರಿ ಫಿಲಂಸ್‌ನ ಜಿ ಮನೋಹರನ್ ಮತ್ತು ವೀನಸ್ ಎಂಟರ್‌ಟೈನರ್ಸ್ ಬ್ಯಾನರ್‌ನಡಿಯಲ್ಲಿ ಕೆಪಿ ಶ್ರೀಕಾಂತ್ ಜಂಟಿಯಾಗಿ ನಿರ್ಮಿಸಿದ್ದಾರೆ. 

ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ. ಮುರಳಿ ಶರ್ಮಾ ಅವರು ಮಹತ್ವದ ಪಾತ್ರವನ್ನು ನಿರ್ವಹಿಸಿದ್ದರೆ, ಸನ್ನಿ ಲಿಯೋನ್ ಮತ್ತು ನಿಧಿ ಸುಬ್ಬಯ್ಯ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

UI ನಿಪುಣ ಕನ್ನಡ ತಂತ್ರಜ್ಞರನ್ನು ಒಳಗೊಂಡಿದೆ. ಶಿವಕುಮಾರ್ ಕಲಾ ನಿರ್ದೇಶನವನ್ನು ನಿರ್ವಹಿಸುತ್ತಿದ್ದಾರೆ ಮತ್ತು ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com