ತಲೈವರ್-170: 32 ವರ್ಷಗಳ ಬಳಿಕ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳಲಿರುವ ಅಮಿತಾಬ್‌-ರಜನಿ ಕಾಂತ್

ಕಾಲಿವುಡ್​ನ ಸೂಪರ್​ಸ್ಟಾರ್​, ರಜನಿಕಾಂತ್​ ಅಭಿನಯದ ‘ಜೈಲರ್’​ ಆಗಸ್ಟ್​ 10 ರಂದು  ಬಿಡುಗಡೆಗೊಂಡು ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್​ ಮಾಡುವ ಮುಖೇನ ಬ್ಲಾಕ್​ಬಸ್ಟರ್​ ಸಿನಿಮಾವಾಗಿ ಹೊರಹೊಮ್ಮಿತು.
ಅಮಿತಾಬ್ ಬಚ್ಚನ್ ಮತ್ತು ರಜನಿಕಾಂತ್
ಅಮಿತಾಬ್ ಬಚ್ಚನ್ ಮತ್ತು ರಜನಿಕಾಂತ್

ನವದೆಹಲಿ: ಕಾಲಿವುಡ್​ನ ಸೂಪರ್​ಸ್ಟಾರ್​, ರಜನಿಕಾಂತ್​ ಅಭಿನಯದ ‘ಜೈಲರ್’​ ಆಗಸ್ಟ್​ 10 ರಂದು  ಬಿಡುಗಡೆಗೊಂಡು ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್​ ಮಾಡುವ ಮುಖೇನ ಬ್ಲಾಕ್​ಬಸ್ಟರ್​ ಸಿನಿಮಾವಾಗಿ ಹೊರಹೊಮ್ಮಿತು. ಸದ್ಯ ಈ ಗೆಲುವಿನ ಬೆನ್ನಲ್ಲೇ ಲೈಕಾ ಪ್ರೊಡಕ್ಷನ್ಸ್​​ ರಜನಿ ಅವರ ಮುಂದಿನ ಚಿತ್ರ ‘ತಲೈವರ್​ 170’ ಸಿನಿಮಾ ಅಧಿಕೃತವಾಗಿ ಘೋಷಣೆ ಮಾಡಿದೆ.

ಭಾರತೀಯ ಚಿತ್ರರಂಗದ ಪ್ರಮುಖ ನಟರಾದ ಅಮಿತಾಬ್‌ ಬಚ್ಚನ್‌ –ರಜನಿಕಾಂತ್ ಅವರು 32 ವರ್ಷಗಳ ಬಳಿಕ ಮತ್ತೆ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ‘ಹಮ್’, ‘ಗಿರಫ್ತಾರ್’ ಹಾಗೂ ‘ಅಂಧಾ ಕಾನೂನ್’ ಚಿತ್ರಗಳಲ್ಲಿ ಅಮಿತಾಬ್‌ –ರಜನಿ ಜೊತೆಯಾಗಿ ನಟಿಸಿದ್ದರು. ಇದೀಗ ರಜನಿಕಾಂತ್‌ ಅಭಿನಯದ ಹೆಸರಿಡದ ಹೊಸ ಚಿತ್ರ ‘ತಲೈವರ್ 170’ನಲ್ಲಿ ಇವರಿಬ್ಬರು ಮತ್ತೆ ಒಟ್ಟಿಗೆ ಅಭಿನಯಿಸಲಿದ್ದಾರೆ.

ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸುಭಾಸ್ಕರನ್ ನಿರ್ಮಿಸಲಿದ್ದಾರೆ. ಅಮಿತಾಬ್ ಬಚ್ಚನ್ ಅವರು ಈ ಚಿತ್ರಕ್ಕೆ 20 ದಿನಗಳ ಕಾಲ್‌ಶೀಟ್ ನೀಡಿದ್ದು, ಇದಕ್ಕೆ ಅವರು 15 ಕೋಟಿ ರು. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಉಳಿದಂತೆ ಈ ಚಿತ್ರದಲ್ಲಿ ಮಂಜು ವಾರಿಯರ್ ಮತ್ತು ಫಹಾದ್ ಫಾಸಿಲ್, ತೆಲುಗಿನ ರಾಣಾ ದಗ್ಗುಬಾಟಿ, ರಿತಿಕಾ ಸಿಂಗ್ ಮತ್ತು ದುಶಾರಾ ವಿಜಯನ್ ಕೂಡ ಇರಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com