ಸಸ್ಪೆನ್ಸ್ ಥ್ರಿಲ್ಲರ್ 'ನೇತ್ರಂ' ಚಿತ್ರ ನವೆಂಬರ್ 17ಕ್ಕೆ ಬಿಡುಗಡೆ

ಯುವ ಪಡೆಗಳ ಬಳಗ ಸೇರಿಕೊಂಡು ನಿರ್ಮಾಣ ಮಾಡಿರುವ ಸಸ್ಪೆನ್ಸ್ ಥ್ರಿಲ್ಲರ್ “ನೇತ್ರಂ” ಚಿತ್ರ ನವೆಂಬರ್ 17ಕ್ಕೆ ಬಿಡುಗಡೆಯಾಗುತ್ತಿದೆ.
ನೇತ್ರಂ ಚಿತ್ರದ ಸ್ಟಿಲ್.
ನೇತ್ರಂ ಚಿತ್ರದ ಸ್ಟಿಲ್.

ಯುವ ಪಡೆಗಳ ಬಳಗ ಸೇರಿಕೊಂಡು ನಿರ್ಮಾಣ ಮಾಡಿರುವ ಸಸ್ಪೆನ್ಸ್ ಥ್ರಿಲ್ಲರ್ “ನೇತ್ರಂ” ಚಿತ್ರ ನವೆಂಬರ್ 17ಕ್ಕೆ ಬಿಡುಗಡೆಯಾಗುತ್ತಿದೆ.

ಚಿತ್ರವನ್ನು ಕನ್ನಡ ಮತ್ತು ತೆಲುಗು ಎರಡು ಭಾಷೆಗಳಲ್ಲಿ ನಿರ್ಮಾಣ ಮಾಡಲಾಗಿದ್ದು, ಈ ಚಿತ್ರದ ಮೂಲಕ ಯಂಗ್ ಅಂಡ್ ಗುಡ್ ಲುಕಿಂಗ್ ಹೀರೋ ದಕ್ಷ್ ಪಟೇಲ್ ನಾಯಕನಾಗಿ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ನಿಂದ ‘ಎ’ ಸರ್ಟಿಫಿಕೇಟ್ ಸಿಕ್ಕಿದೆ.

ಚಿತ್ರ ಬೇಗನೆ ಸಿದ್ಧಗೊಂಡಿತ್ತು. ಆದರೆ, ಕೊರೋನಾ ಕಾರಣದಿಂದಾಗಿ ಬಿಡುಗಡೆ ತಡವಾಗಿತ್ತು. ಆದರೀಗ ಚಿತ್ರ ತಂಡ ಕೊನೆಗೂ ಚಿತ್ರ ಬಿಡುಗಡೆಗೆ ದಿನಾಂಕವನ್ನು ನಿಗದಿ ಮಾಡಿದೆ.

ರನ್ನಿಂಗ್ ಹಾರ್ಸ್ ಪ್ರೊಡಕ್ಷನ್ಸ್ ಅಡಿಯಲ್ಲಿ ಮೊಕ್ತುಮ್ ಪಟೇಲ್ ಮತ್ತು ಶೇಕ್ ಸಬೀರ್ ಅವರು ಜಂಟಿಯಾಗಿ ನಿರ್ಮಿಸಿದ್ದು, ಚೈತನ್ಯ ರಾಜ ಅವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಛಾಯಾಗ್ರಹಣವನ್ನು ಪ್ರಸಾದ್, ಗೋಪಾಲ್ ಮತ್ತು ಶ್ಯಾಮ್ ಸಿಂದನೂರ್ ಅವರು ನಿರ್ವಹಿಸಿದ್ದು, ಚಿತ್ರದಲ್ಲಿ ಮೂವರು ನಾಯಕಿ ನಟಿಯರಾಗಿ ಅಭಿನಯಿಸಿದ್ದಾರೆ ಈ ಪೈಕಿ ಧನುಶ್ರೀ ಕೂಡ ಒಬ್ಬರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com