ಬೆಂಗಳೂರು: ಸೂಪರ್ ಸ್ಟಾರ್ ಯಶ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಇದೇ ವೇಳೆ ಕೆಜಿಎಫ್ ಸಿನಿಮಾ ಖ್ಯಾತಿಯ ಹೊಂಬಾಳೆ ಫಿಲ್ಮ್ಸ್ ಇದೀಗ ಯಶ್ ಅವರೊಂದಿಗೆ ಮತ್ತೊಂದು ಚಿತ್ರದ ಸುಳಿವು ನೀಡುವ ಮೂಲಕ ಸಿಹಿ ಸುದ್ದಿ ನೀಡಿದೆ.
ಕೆಜಿಎಫ್ ಮತ್ತು ಕೆಜಿಎಫ್ 2 ಮೂಲಕ ಯಶ್ ಅವರ ವೃತ್ತಿಜೀವನದಲ್ಲಿ ಭರ್ಜರಿ ಬ್ರೇಕ್ ನೀಡಿದ ಹೊಂಬಾಳೆ ಫಿಲ್ಸ್ಮ್ ಸಿನಿಮಾಗಳು, ಬಾಕ್ಸ್ ಆಫೀಸ್‌ನಲ್ಲಿ ಈ ದೊಡ್ಡ ಸಾಧನೆಯೊಂದಿಗೆ ಕನ್ನಡ ಸಿನಿಮಾ ರಂಗವನ್ನು ಒಂದು ಹಂತಕ್ಕೆ ಕೊಂಡೊಯ್ದಿವೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹೊಂಬಾಳೆ ಫಿಲ್ಮ್ಸ್ ಯಶ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದು, ಹೊಸ ಯೋಜನೆಗೆ ಮತ್ತೆ ಕೈಜೋಡಿಸುವ ಸುಳಿವು ನೀಡಿದ್ದಾರೆ.
'ಕೆಜಿಎಫ್ ಚಾಪ್ಟರ್ 2 ಅದ್ಭುತ ಸಿನಿಮಾವಾಗಿದೆ. ಶೀಘ್ರದಲ್ಲೇ ಮತ್ತೊಂದು ಸಿನಿಮಾಗಾಗಿ ಕಾಯುತ್ತಿದೆ. ಕನಸನ್ನು ರೂಪಿಸಿದ ಮತ್ತು ಅದನ್ನು ಮೀರಿದ ವ್ಯಕ್ತಿಯಾದ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಜನ್ಮದಿನದ ಶುಭಾಶಯಗಳು ಮತ್ತು ರಾಂಕಿಗ್ ಆಗಿರಿ ಮತ್ತು ಅದ್ಭುತವಾದ ವರ್ಷ ನಿಮ್ಮದಾಗಲಿ! #HBDRockingStarYash #HombaleFilms' ಎಂದು ಬರೆದಿದ್ದಾರೆ.
ಯಶ್ ಮತ್ತು ಹೊಂಬಾಳೆ ಫಿಲ್ಮ್ಸ್ 2022ರಲ್ಲಿ ಅವರ ಚಿತ್ರ ಕೆಜಿಎಫ್ 2 ವರ್ಷದ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾಗಳಲ್ಲಿ ಒಂದಾಗಿದೆ.
ಹೊಂಬಾಳೆ ಫಿಲ್ಮ್ಸ್‌ನೊಂದಿಗೆ ನಟ ಯಶ್ ನಟನೆಯ ಕೆಜಿಎಫ್ 2 ಸಿನಿಮಾವು ಬಿಡುಗಡೆಯಾದ ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ 54 ಕೋಟಿ ರೂ. ಸಂಗ್ರಹದೊಂದಿಗೆ ಭರ್ಜರಿ ಯಶಸ್ಸನ್ನು ಗಳಿಸಿತು. ಹಿಂದಿ ಮಾರುಕಟ್ಟೆ ಮತ್ತು ಎಲ್ಲೆಡೆಯಿಂದ 1200 ಕೋಟಿ ರೂ. ಸಂಗ್ರಹಿಸುವ ಮೂಲಕ ದೊಡ್ಡ ಸಿನಿಮಾವಾಗಿ ಗುರುತಿಸಿಕೊಂಡಿತು.
ಈ ವರ್ಷ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ್ದು ಕೇವಲ ಎರಡು ಚಿತ್ರಗಳಾದರೂ, ಕೆಜಿಎಫ್ 2 ಮತ್ತು ಕಾಂತಾರ ಈ ವರ್ಷದ ಎರಡು ದೊಡ್ಡ ಹಿಟ್ ಚಿತ್ರಗಳಾಗಿ ಹೊರಹೊಮ್ಮಿವೆ. ಅದು ಜನಸಾಮಾನ್ಯರನ್ನು ಗೆಲ್ಲುವುದಲ್ಲದೆ, ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸನ್ನು ಕಂಡವು. ಇದೇ ಬೆನ್ನಲ್ಲೇ, ಹೊಂಬಾಳೆ ಫಿಲಂಸ್ 2023 ರಲ್ಲಿ ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ನಟ ಪ್ರಭಾಸ್ ಅಭಿನಯದ 'ಸಲಾರ್' ಮೂಲಕ ಮತ್ತೊಂದು ಬ್ಲಾಕ್ಬಸ್ಟರ್ ಅನ್ನು ನೀಡಲು ಸಿದ್ಧವಾಗಿದೆ.
Advertisement