ಮದುವೆ ಹೆಸರಲ್ಲಿ ವಂಚನೆ: ಯೂಟ್ಯೂಬರ್ ಹರ್ಷ ಸಾಯಿ ವಿರುದ್ಧ ಅತ್ಯಾಚಾರ, ಬೆದರಿಕೆ ದೂರು ದಾಖಲು

ಮದುವೆ ಹೆಸರಲ್ಲಿ ಮೋಸ ಮಾಡಿದ್ದಾರೆ ಎಂದು ಯೂಟ್ಯೂಬರ್ ಹರ್ಷ ಸಾಯಿ ವಿರುದ್ಧ ಯುವತಿ ದೂರು ನೀಡಿದ್ದಾರೆ. ನರಸಿಂಗಿ ಪಿಎಸ್‌ಗೆ ಯುವತಿಯೊಬ್ಬಳು ವಕೀಲರ ಜೊತೆ ಬಂದು ಹರ್ಷಸಾಯಿ ವಿರುದ್ಧ ವಂಚನೆ ಮತ್ತು ಅತ್ಯಾಚಾರ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.
ಯೂಬ್ಯೂಟರ್ ಹರ್ಷ ಸಾಯಿ
ಯೂಬ್ಯೂಟರ್ ಹರ್ಷ ಸಾಯಿ
Updated on

ಸೋಶಿಯಲ್ ಮೀಡಿಯಾ ಸ್ಟಾರ್ ಹರ್ಷ ಸಾಯಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಬೆಟ್ಟಿಂಗ್ ಆಪ್‌ಗಳನ್ನು ಪ್ರಚಾರ ಮಾಡಿದ ಆರೋಪ ಹೊತ್ತಿದ್ದ ಹರ್ಷ ವಿರುದ್ಧ ಯುವತಿಯೊಬ್ಬರು ಪೊಲೀಸ್ ದೂರು ದಾಖಲಿಸಿದ್ದಾರೆ.

ಮದುವೆ ಹೆಸರಲ್ಲಿ ಮೋಸ ಮಾಡಿದ್ದಾರೆ ಎಂದು ಯೂಟ್ಯೂಬರ್ ಹರ್ಷ ಸಾಯಿ ವಿರುದ್ಧ ಯುವತಿ ದೂರು ನೀಡಿದ್ದಾರೆ. ನರಸಿಂಗಿ ಪಿಎಸ್‌ಗೆ ಯುವತಿಯೊಬ್ಬಳು ವಕೀಲರ ಜೊತೆ ಬಂದು ಹರ್ಷಸಾಯಿ ವಿರುದ್ಧ ವಂಚನೆ ಮತ್ತು ಅತ್ಯಾಚಾರ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.

ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಯೂಟ್ಯೂಬ್‌ನಲ್ಲಿ ಸುಮಾರು 14 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಹರ್ಷ ಸಾಯಿ, ಬೆಟ್ಟಿಂಟಾ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡುವ ಮೂಲಕ ಎರಡೂ ಕೈಗಳಿಂದ ಗಳಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಇದೀಗ ಹರ್ಷ ಸಾಯಿ ವಿರುದ್ಧ ಯುವತಿಯೊಬ್ಬರು ಪ್ರಕರಣ ದಾಖಲಿಸಿದ್ದಾರೆ. ಮದುವೆ ಹೆಸರಿನಲ್ಲಿ 2 ಕೋಟಿ ರೂಪಾಯಿವರೆಗೂ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸಂತ್ರಸ್ತೆ ಹರ್ಷ ಸಾಯಿ ಹಾಗೂ ಆತನ ತಂದೆ ರಾಧಾಕೃಷ್ಣ ವಿರುದ್ಧ ದೂರು ದಾಖಲಿಸಿದ್ದಾರೆ.

ಯೂಬ್ಯೂಟರ್ ಹರ್ಷ ಸಾಯಿ
ಲೈಂಗಿಕ ದೌರ್ಜನ್ಯ ಪ್ರಕರಣ: ಜನಪ್ರಿಯ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಬಂಧನ

ಹರ್ಷ ಸಾಯಿ ಬಡವರಿಗೆ ಸಹಾಯ ಮಾಡುವ ವೀಡಿಯೊಗಳನ್ನು ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾರೆ. ಹೀಗಾಗಿಯೇ ಆತ ಹೆಚ್ಚಿನ ಅನುಯಾಯಿಗಳನ್ನು ಸಂಪಾದಿಸಿದ್ದಾರೆ. ಹರ್ಷ ಸಾಯಿ ನಾಯಕನಾಗಿ ಒಂದು ಚಿತ್ರ ಕೂಡ ಶುರುವಾಗಿದೆ. ಅವರೇ ಕಥೆ ಬರೆದಿದ್ದಾರೆ. ಆ ವೇಳೆ ಟೀಸರ್ ಕೂಡ ರಿಲೀಸ್ ಆಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com