BBK12 Big Update: ಬಿಗ್ ಬಾಸ್ ನಿರೂಪಣೆಗೆ ಒಪ್ಪಿಕೊಂಡ್ರಾ ಕಿಚ್ಚ ಸುದೀಪ್? ದಿಢೀರ್ ಪ್ರೆಸ್‌ಮೀಟ್‌ ಕರೆದ ಆಯೋಜಕರು!

ಬಿಗ್​ಬಾಸ್ ಕನ್ನಡ ಸೀಸನ್ 11 (Bigg Boss Kannada) ಮುಗಿದಿದ್ದು ಮತ್ತೊಂದು ಆವೃತ್ತಿಗೆ ತಯಾರಿಗಳು ಜೋರಾಗಿ ನಡೆಯುತ್ತಿವೆ.
Kiccha Sudeepa
ಕಿಚ್ಚ ಸುದೀಪ್
Updated on

ಬಿಗ್​ಬಾಸ್ ಕನ್ನಡ ಸೀಸನ್ 11 (Bigg Boss Kannada) ಮುಗಿದಿದ್ದು ಮತ್ತೊಂದು ಆವೃತ್ತಿಗೆ ತಯಾರಿಗಳು ಜೋರಾಗಿ ನಡೆಯುತ್ತಿವೆ. ಕಳೆದ ಬಾರಿ ಬಿಗ್ ಬಾಸ್ ಮುಗಿಯುತ್ತಿದ್ದಂತೆ ನಿರೂಪಣೆಗೆ ಕಿಚ್ಚ ಸುದೀಪ್ ಗುಡ್ ಬೈ ಹೇಳಿದ್ದರು. ಕನ್ನಡ ಬಿಗ್ ಬಾಸ್ ಶೋ ಆರಂಭವಾದಾಗಿನಿಂದಲೂ ಸುದೀಪ್ ಅವರು ನಿರೂಪಣೆ ಮಾಡಿಕೊಂಡು ಬಂದಿದ್ದಾರೆ. ಅವರ ಜಾಗದಲ್ಲಿ ಮತ್ತೊಬ್ಬರನ್ನು ಊಹಿಸುವುದು ಅಸಾಧ್ಯ. ಈಗಿರುವಾಗ ಹೊಸ ಆವೃತ್ತಿಯ ಕುರಿತಂತೆ ನಾಳೆ ಬಿಗ್ ಬಾಸ್ ಆಯೋಜಕರು ಪತ್ರಿಕಾಗೋಷ್ಠಿ ಆಯೋಜನೆ ಮಾಡಿದೆ.

ತಾಜ್ ಹೋಟೆಲ್​​ನಲ್ಲಿ ಜೂನ್ 30ರಂದು ಪತ್ರಿಕಾಗೋಷ್ಠಿ ಆಯೋಜನೆ ಮಾಡಲಾಗಿದ್ದು, ಸಾರ್ವಜನಿಕರಿಗೆ ಪ್ರವೇಶವಿಲ್ಲ. ನಾಳೆ ಬಿಗ್​ಬಾಸ್ ಕನ್ನಡ ಸೀಸನ್ 12 ಅನ್ನು ಯಾರು ನಿರೂಪಣೆ ಮಾಡಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಗುವ ಸಾಧ್ಯತೆ. ಒಂದು ವೇಳೆ ಕಿಚ್ಚ ಸುದೀಪ್ ಒಪ್ಪಿಕೊಂಡಿದ್ದರೆ ಮುಂದಿನ ಆವೃತ್ತಿಯನ್ನು ಅವರೇ ನಿರೂಪಣೆ ಮಾಡಲಿದ್ದಾರೆ. ಇಲ್ಲದಿದ್ದರೆ ಅವರ ಜಾಗಕ್ಕೆ ಯಾರೂ ಬರುತ್ತಾರೆ ಎಂಬುದು ನಾಳೆ ಸಂಜೆ 4 ಗಂಟೆಗೆ ತಿಳಿಯಲಿದೆ.

Kiccha Sudeepa
'ಬಿಲ್ಲ ರಂಗ ಬಾಷಾ' ಮೊದಲ ಹಂತದ ಶೂಟಿಂಗ್ ಮುಕ್ತಾಯ; ಕಿಚ್ಚ ಸುದೀಪ್ ಮುಂದಿನ ಚಿತ್ರ ಜುಲೈನಿಂದ ಪ್ರಾರಂಭ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com