'6 ವರ್ಷಗಳ...' ಅಭಿಮಾನಿಗಳಿಗೆ 'ಸಿಹಿ' ಸುದ್ದಿ ಕೊಟ್ಟ ನಟಿ Meghana Gaonkar

ಕನ್ನಡದ ಚಾರ್‌ಮಿನಾರ್‌, ಛೂ ಮಂಥರ್‌ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಜನಪ್ರಿಯ ನಟಿ ಮೇಘನಾ ಗಾಂವ್ಕರ್‌ ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಮ್ಮ ತಂದೆ ತಾಯಿಯ ಆಶೀರ್ವಾದ ಫಲಿಸಿದೆ ಎಂದು ಹೇಳಿದ್ದಾರೆ.
Actress Meghana Gaonkar
ನಟಿ ಮೇಘನಾ ಗಾಂವ್ಕರ್
Updated on

ಬೆಂಗಳೂರು: ಕನ್ನಡದ ಖ್ಯಾತ ನಟಿ ಮೇಘನಾ ಗಾಂವ್ಕರ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು, '6 ವರ್ಷಗಳ ಸತತ ಪರಿಶ್ರಮ ಫಲ ನೀಡಿದೆ' ಎಂದು ಹೇಳಿದ್ದಾರೆ.

ಕನ್ನಡದ ಚಾರ್‌ಮಿನಾರ್‌, ಛೂ ಮಂಥರ್‌ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಜನಪ್ರಿಯ ನಟಿ ಮೇಘನಾ ಗಾಂವ್ಕರ್‌ ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಮ್ಮ ತಂದೆ ತಾಯಿಯ ಆಶೀರ್ವಾದ ಫಲಿಸಿದೆ ಎಂದು ಹೇಳಿದ್ದಾರೆ.

ಮದುವೆ ಸುದ್ದಿ ಅಲ್ಲ..

ಇದೇ ವೇಳೆ ಅಭಿಮಾನಿಗಳಿಗೆ ಇದು ತಮ್ಮ ಮದುವೆ ಸುದ್ದಿಯಲ್ಲ ಎಂದು ನಟಿ ಮೇಘನಾ ಗಾಂವ್ಕರ್ ಸ್ಪಷ್ಟನೆ ನೀಡಿದ್ದು, ಇದು ನನ್ನ ಶೈಕ್ಷಣಿಕ ಸಾಧನೆ ಎಂದು ಹೇಳಿದ್ದಾರೆ. ಸಿನಿಮಾ ಮತ್ತು ಸಾಹಿತ್ಯ ವಿಚಾರದಲ್ಲಿ ಮೇಘನಾ ಗಾಂವ್ಕರ್‌ ಡಾಕ್ಟರೇಟ್‌ ಪದವಿ ಪಡೆದ ವಿಚಾರವಾಗಿ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

'ನಿಮಗೆಲ್ಲರಿಗೂ ಡಾ. ಮೇಘನಾ ಗಾಂವ್ಕರ್ ಅವರನ್ನು ಪ್ರಸ್ತುತಪಡಿಸುತ್ತಿದ್ದೇನೆ. ಈ ಮಹಿಳೆಯ ಬಗ್ಗೆ ತುಂಬಾ ಹೆಮ್ಮೆಯಿದೆ. ಕಳೆದ 6 ವರ್ಷಗಳಿಂದ ಈ ಪಿಎಚ್‌ಡಿ ಪ್ರಯಾಣ ಸುಲಭವಾಗಿರಲಿಲ್ಲ. ಆದರೆ ನಾನು ನನ್ನ ಶ್ರದ್ಧೆ ಹಾಗೂ ಇಚ್ಛಾಶಕ್ತಿಯಿಂದ ಇದನ್ನು ಪೂರ್ಣಗೊಳಿಸಿದ್ದೇನೆ' ಎಂದು ಪಿಎಚ್‌ಡಿ ಪ್ರಮಾಣ ಪತ್ರದೊಂದಿಗಿನ ಫೋಟೋವನ್ನು ಮೇಘನಾ ಗಾಂವ್ಕರ್ ಹಂಚಿಕೊಂಡಿದ್ದಾರೆ.

Actress Meghana Gaonkar
ಮಲಯಾಳಂ ಇತಿಹಾಸದಲ್ಲೇ ಮೊದಲು: ಅಡ್ವಾನ್ಸ್ ಬುಕಿಂಗ್‌ನಲ್ಲಿ ದಾಖಲೆಯ 58 ಕೋಟಿ ರೂ ಬಾಚಿದ 'L2 ಎಂಪುರಾನ್'!

ಮೇಘನಾ ಹೇಳಿದ್ದೇನು?

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿರುವ ಅವರು, 'ಇವತ್ತು ನಾನು ನಿಮ್ಮೆಲ್ಲರ ಜೊತೆ ಖುಷಿಯ ವಿಚಾರ, ಹೆಮ್ಮೆಯ ವಿಚಾರ, ಸಿಹಿ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇನೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕಳೆದ ಆರು ವರ್ಷಗಳಿಂದ ನಾನು ನನ್ನ ಪಿಎಚ್‌ಡಿ ಮಾಡುತ್ತಿದ್ದೆ. 2024ರ ಅಕ್ಟೋಬರ್‌ನಲ್ಲಿ ನಾನು ನನ್ನ ಪಿಎಚ್‌ಡಿ ವರದಿಯನ್ನು ಯಶಸ್ವಿಯಾಗಿ ಸಲ್ಲಿಸಿದ್ದೆ. ಕಳೆದ ವಾರ ನನ್ನ ವೈವಾ ಕೂಡ ಆಯ್ತು. ಇವತ್ತು ನಾನು ನನ್ನ ಡಾಕ್ಟರೇಟ್‌ ಪದವಿಯನ್ನು ಹೆಮ್ಮೆಯಿಂದ ಸ್ವೀಕರಿಸಿದ್ದೇನೆ. ಇದು ತುಂಬಾ ವಿಶೇಷವಾದದ್ದು. ಯಾಕೆಂದರೆ ಈ ಪಿಎಚ್‌ಡಿ ಪಯಣ ಅಷ್ಟು ಸುಲಭ ಆಗಿರಲಿಲ್ಲ' ಎಂದು ಹೇಳಿದ್ದಾರೆ.

ಅಂತೆಯೇ 'ನಾನು ನನ್ನ ಈ ಪಿಎಚ್‌ಡಿ ಡಾಕ್ಟರೇಟ್‌ ಪದವಿಯನ್ನು ನನ್ನ ತಂದೆಗೆ ಅರ್ಪಿಸುತ್ತೇನೆ. ಯಾಕೆಂದರೆ ನಾನು ಪಿಎಚ್‌ಡಿ ಮಾಡಬೇಕು ಎನ್ನುವುದು ನನ್ನ ತಂದೆಯ ಕನಸು. ನನ್ನ ಪಿಎಚ್‌ಡಿ ವಿಷಯ ಸಿನಿಮಾ ಮತ್ತು ಸಾಹಿತ್ಯ. ಈ ವಿಷಯ ನನಗೆ ತುಂಬಾ ಹತ್ತಿರವಾಗಿತ್ತು. ಈ ವಿಡಿಯೋ ಮೂಲಕ ನಾನು ನಿಮಗೆಲ್ಲರಿಗೂ ಧನ್ಯವಾದ ಹೇಳುತ್ತೇನೆ. ಯಾಕೆಂದರೆ ನಾನು ಮೊದಲು ಪಿಎಚ್‌ಡಿ ಬಗ್ಗೆ ಹೇಳಿಕೊಂಡ ದಿನದಿಂದ ಈವರೆಗೆ ನೀವೆಲ್ಲರೂ ನನಗೆ ತುಂಬಾ ಬೆಂಬಲ ಕೊಟ್ಟಿದ್ದೀರಿ. ಈ ಪಯಣದಲ್ಲಿ ನನ್ನ ಜೊತೆಯಲ್ಲಿ ನಿಂತಿರುವುದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು' ಎಂದು ಮೇಘನಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com