

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋ ದಿನಕ್ಕೊಂದು ವಿಚಾರವಾಗಿ ಸುದ್ದಿಯಾಗುತ್ತಿದ್ದು ಪ್ರಮುಖವಾಗಿ ಶನಿವಾರದಂದು ಕಿಚ್ಚಾ ಸುದೀಪ್ ಪಂಚಾಯಿತಿಗಾಗಿ ಪ್ರೇಕ್ಷಕರು ಕಾಯುವಂತೆ ಮಾಡುತ್ತಿದೆ.
ಹೌದು.. ಬಿಗ್ಬಾಸ್ ಕನ್ನಡ ಮನೆಯಲ್ಲಿ ರಕ್ಷಿತಾ ಶೆಟ್ಟಿ ಸಖತ್ ಸದ್ದು ಮಾಡುತ್ತಿದ್ದು, ರಕ್ಷಿತಾ ಶೆಟ್ಟಿಯನ್ನು ಟಾರ್ಗೆಟ್ ಮಾಡುತ್ತದ್ದ ಅಶ್ವಿನಿಗೌಡ ಅವರಿಗೆ ಕಿಚ್ಚಾ ಸುದೀಪ್ ಚಳಿ ಬಿಡಿಸಿದ್ದಾರೆ.
ಇತ್ತೀಚೆಗಷ್ಟೆ ರಕ್ಷಿತಾ ಶೆಟ್ಟಿ ಹೇಳಿದ ಮಾತಿಗೆ ಕೆರಳಿದ ಅಶ್ವಿನಿ ಗೌಡ, 'ರಕ್ಷಿತಾ ಕಲಾವಿದರಿಗೆ ಚಪ್ಪಲಿ ತೋರಿಸಿದ್ದಾಳೆ, ಕಲಾವಿದರಿಗೆ ಅವಮಾನ ಮಾಡಿದ್ದಾಳೆ' ಎಂದು ಆರೋಪಿಸಿದ್ದರು.
ಅದು ಬಿಗ್ಬಾಸ್ ಮನೆಯಲ್ಲಿ ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಲ್ಲಿಯೂ ವ್ಯಾಪಕ ಚರ್ಚೆಯಾಗಿತ್ತು. ಇದೀಗ ಸುದೀಪ್, ಶನಿವಾರದ ಪಂಚಾಯ್ತಿಯಲ್ಲಿ ಸತ್ಯ ಏನೆಂಬುದನ್ನು ಬಿಡಿಸಿ ಜನರ ಮುಂದೆ ಇರಿಸಿದ್ದಾರೆ.
ಆಗಿದ್ದೇನು?
ಕಳೆದ ವಾರ ರಕ್ಷಿತಾ ಶೆಟ್ಟಿ ಮತ್ತು ಅಶ್ವಿನಿ ಗೌಡ ನಡುವೆ ನಡೆದ ವಾಗ್ವಾದದಲ್ಲಿ, ರಕ್ಷಿತಾ ನಾಟಕ ಆಡಬೇಡಿ ಎನ್ನುತ ಕಲಾವಿದರಿಗೆ ಚಪ್ಪಲಿ ತೋರಿಸಿ ಅವಮಾನ ಮಾಡಿದ್ದಾಳೆ ಎಂದು ಅಶ್ವಿನಿ ಗೌಡ ಆರೋಪಿಸಿದ್ದರು.
ಈ ಗಂಭೀರ ಆರೋಪಕ್ಕೆ ದೃಶ್ಯದ ಮೂಲಕ ಇಂದಿನ ಪಂಚಾಯಿತಿಯಲ್ಲಿ ಪ್ರತಿಕ್ರಿಯಿಸಿರುವ ಸುದೀಪ್, ಇಲ್ಲಿ ಯಾರದ್ದು ತಪ್ಪು ಎಂಬುದನ್ನು ಸ್ಪಷ್ಟವಾಗಿ ಎತ್ತಿಹಿಡಿಯುವ ಪ್ರಯತ್ನಕ್ಕೆ ಮುಂದಾಗಿರುವುದು ಸದ್ಯ ವೀಕ್ಷಕರ ಮೆಚ್ಚುಗೆಗೆ ಕಾರಣವಾಗಿದೆ.
ಪಂಚಾಯ್ತಿ ಟ್ರೇಲರ್
ಕಲಾವಿದರಿಗೆ ಅವಮಾನ ಮಾಡಿದ ವಿಚಾರಕ್ಕೆ ಸುದೀಪ್ ಅವರು ಪ್ರತಿಕ್ರಿಯಿಸಬೇಕು ಎಂಬುದು ನೋಡುಗರ ಅಭಿಪ್ರಾಯವಾಗಿತ್ತು. ಕೊನೆಗೂ ಕಿಚ್ಚಾ ಸುದೀಪ್ ಈ ವಿಚಾರ ಸಂಬಂಧ ಮಾತನಾಡಿದ್ದು, ಇದರ ವಿಡಿಯೋ ತುಣುಕು ಈಗ ಹೊರಬಿದ್ದಿದೆ.
ನಿಜಕ್ಕೂ ರಕ್ಷಿತಾ ಆ ರೀತಿ ಮಾಡಿದ್ರಾ ಎಂಬುದನ್ನು ಸುದೀಪ್ ಅವರು ಅಂದು ನಡೆದ ಘಟನೆಯ ಫೂಟೇಜ್ ಅನ್ನು ಮುಂದಿಟ್ಟು ಅಶ್ವಿನಿ ಅವರಿಗೆ ಪ್ರಶ್ನಿಸಿದ್ದಾರೆ. ವಿಡಿಯೋ ತೋರಿಸುವ ಮುನ್ನ ಅಶ್ವಿನಿ ಗೌಡ ನೀಡಿದ ಹೇಳಿಕೆಗೂ, ಘಟನೆಯ ವೇಳೆ ಬಂದ ಹೇಳಿಕೆಗೂ ಸಂಬಂಧವೇ ಇಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ ಎಂದು ಕಂಡುಬಂದಿದೆ.
Advertisement