
ಅಕ್ಟೋಬರ್ 2ರಂದು ತೆರೆಕಂಡ 'ಕಾಂತಾರ: ಚಾಪ್ಟರ್ 1' ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಕಾಣುತ್ತಾ ಸಾಗಿದ್ದು, ರಿಷಭ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ ಕಾಂತಾರ ಚಿತ್ರಕ್ಕೂ ಇದೀಗ ಬೇಡಿಕೆ ಉಂಟಾಗಿದೆ. 2022ರಲ್ಲಿ ತೆರೆಕಂಡಿದ್ದ ಕಾಂತಾರ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ಬಳಿಕ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿತ್ತು. ಇದೀಗ ಕಾಂತಾರ OTT ವೀಕ್ಷಕರ ಸಂಖ್ಯೆಯೂ ಹೆಚ್ಚಾಗಿದೆ.
ಫ್ಲಿಕ್ಸ್‌ಪ್ಯಾಟ್ರೋಲ್ ಪ್ರಕಾರ, ಕಾಂತಾರ (2022) ಇಂದು ನೆಟ್‌ಫ್ಲಿಕ್ಸ್‌ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಚಿತ್ರವಾಗಿದೆ. ಸನ್ ಆಫ್ ಸರ್ದಾರ್ 2 ಮತ್ತು ಮಹಾವತಾರ ನರಸಿಂಹ ನೆಟ್‌ಫ್ಲಿಕ್ಸ್‌ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಎರಡನೇ ಮತ್ತು ಮೂರನೇ ಚಿತ್ರಗಳಾಗಿವೆ.
ಇದಲ್ಲದೆ, ಕಾಂತಾರ (2022) ಪ್ರೈಮ್ ವಿಡಿಯೋದಲ್ಲಿ ಸಹ ಟಾಪ್ ಕಂಟೆಂಟ್‌ಗಳಲ್ಲಿ ಒಂದಾಗಿದೆ. ಪ್ಲಾಟ್‌ಫಾರ್ಮ್‌ನಲ್ಲಿ ಒಟ್ಟಾರೆ ಅತಿಹೆಚ್ಚು ವೀಕ್ಷಣೆ ಕಂಡ ಕಂಟೆಂಟ್ ಪೈಕಿ ನಾಲ್ಕನೇ ಸ್ಥಾನದಲ್ಲಿದೆ ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ಮೂರನೇ ಅತಿ ಹೆಚ್ಚು ವೀಕ್ಷಿಸಿದ ಚಿತ್ರವಾಗಿದೆ. ಈಮಧ್ಯೆ, 'ಟೂ ಮಚ್ ವಿತ್ ಕಾಜೋಲ್ ಮತ್ತು ಟ್ವಿಂಕಲ್', ಜೂನಿಯರ್ ಮತ್ತು ಅನುಷ್ಕಾ ಶೆಟ್ಟಿ ಅಭಿನಯದ ಘಾಟಿ ಚಿತ್ರ ಇಂದು ಪ್ರೈಮ್ ವಿಡಿಯೋದಲ್ಲಿನ ಕಂಟೆಂಟ್ ವೀಕ್ಷಣೆಯಲ್ಲಿ ಎರಡನೇ, ಮೂರನೇ ಮತ್ತು ಐದನೇ ಸ್ಥಾನಗಳನ್ನು ಪಡೆದುಕೊಂಡಿದೆ.
ರಿಷಭ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ ಕಾಂತಾರ ಚಿತ್ರದಲ್ಲಿ ಸಪ್ತಮಿ ಗೌಡ, ಕಿಶೋರ್ ಕುಮಾರ್, ಮಾನಸಿ ಸುಧೀರ್, ಅಚ್ಯುತ್ ಕುಮಾರ್ ಮತ್ತು ಪ್ರಕಾಶ್ ತುಮಿನಾಡ್ ಸೇರಿದಂತೆ ಹಲವರು ನಟಿಸಿದ್ದರು.
ಜಿಯೋಹಾಟ್‌ಸ್ಟಾರ್‌ನಲ್ಲಿ, ಬಿಗ್ ಬಾಸ್ (ಹಿಂದಿ), ಸು ಫ್ರಮ್ ಸೋ (ಕನ್ನಡ), ಹೃದಯಪೂರ್ವಂ (ಮಲಯಾಳಂ) ಮತ್ತು ಸುಂದರಕಾಂಡ (ತೆಲುಗು) ಆಯಾ ಭಾಷೆಗಳಲ್ಲಿ ಮೊದಲ ಸ್ಥಾನ ಪಡೆದಿವೆ. Zee5 ನಲ್ಲಿ, ಸುಮತಿ ವಳವು ಟಾಪ್ ರ್ಯಾಂಕ್ ಪಡೆದ ಕಂಟೆಂಟ್ ಆಗಿದೆ.
Advertisement