
ಬೆಂಗಳೂರು: ಇತ್ತೀಚೆಗೆ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿರುವ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಸ್ಪರ್ಧಿ ಆ್ಯಂಕರ್ ಜಾಹ್ನವಿ ಬಿಕ್ಕಿ ಬಿಕ್ಕಿ ಅತ್ತ ಘಟನೆ ನಡೆದಿದೆ.
ʻಬಿಗ್ ಬಾಸ್ ಕನ್ನಡ ಸೀಸನ್ 12ʼರ ಸ್ಪರ್ಧಿಯಾಗಿರುವ ಜಾಹ್ನವಿ, ಇತ್ತೀಚೆಗೆ ನಡೆದ ಘಟನೆಯಲ್ಲಿ ರಕ್ಷಿತಾ ಶೆಟ್ಟಿ ವಿಚಾರದಲ್ಲಿ ತಪ್ಪು ಮಾಡಿಬಿಟ್ಟಿದ್ದೇನೆ ಎಂದು ಕಣ್ಣೀರಾಕಿದ್ದಾರೆ.
ರಕ್ಷಿತಾ ವಿಚಾರದಲ್ಲಿ ತಪ್ಪು ಮಾಡಿಬಿಟ್ಟೆ ಎಂದು ಹೇಳಿಕೊಂಡಿರುವ ಜಾಹ್ನವಿ ಇದರಿಂದ ನಮ್ಮಮ್ಮ ಮತ್ತು ಅಣ್ಣಂಗೆ ಅವಮಾನವಾಗುತ್ತದೆ ಎಂದು ಬಿಕ್ಕಿ ಬಿಕ್ಕಿ ಅತ್ತು ಕಣ್ಣೀರು ಹಾಕಿದ್ದಾರೆ.
ಕಳೆದ ವಾರ ರಕ್ಷಿತಾ ಶೆಟ್ಟಿ ವಿಚಾರವಾಗಿ ಅಶ್ವಿನಿ ಗೌಡ ಹಾಗೂ ಜಾಹ್ನವಿ ವ್ಯಾಪಕ ಆಕ್ರೋಶಕ್ಕೆ ತುತ್ತಾಗಿದ್ದರು. ಸ್ವತಃ ಸುದೀಪ್ ಕೂಡ ಈ ವಿಚಾರವಾಗಿ ಇಬ್ಬರೂ ಸ್ಪರ್ಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ಅಲ್ಲದೆ ಬಿಗ್ ಹೌಸ್ ಗೆ ವೈಲ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ ಹೊಸ ಸ್ಪರ್ಧಿಗಳೂ ಕೂಡ ಈ ಇಬ್ಬರ ವಿರುದ್ಧ ಅಸಮಾಧಾನ ಹೊರಹಾಕಿದ್ದರು.
ಜಾಹ್ನವಿಗೆ ಪಶ್ಚಾತ್ತಾಪ
ಕಳೆದ ವಾರ ನಡೆದ ಹೈಡ್ರಾಮಾದ ಬಳಿಕ ಇದೀಗ ಆ್ಯಂಕರ್ ಜಾಹ್ನವಿ ಅವರಿಗೆ ಪಶ್ಚಾತ್ತಾಪ ಕಾಡುತ್ತಿದೆಯಂತೆ. ಈ ಬಗ್ಗೆ ಮತ್ತೋರ್ವ ಸ್ಪರ್ಧಿ ಬಳಿ ಅಳಲು ತೋಡಿಕೊಂಡಿರುವ ಜಾಹ್ನವಿ, 'ನಾನು ತಪ್ಪು ಮಾಡಿಬಿಟ್ಟಿದ್ದೇನೆ, ನನ್ನ ಗುಂಡಿ ನಾನೇ ತೋಡಿಕೊಂಡಿದ್ದೇನೆ. ನನ್ನ ಅಮ್ಮ ಮತ್ತು ಅಣ್ಣನಿಗೆ ನಾನು ಮಾಡಿರುವ ಅವಮಾನ ಇದು ಅನ್ನೋ ತರಹ ಫೀಲ್ ಆಗ್ತಿದೆ' ಎಂದು ಕಣ್ಣೀರಿಟ್ಟಿದ್ದಾರೆ.
'ನನಗೆ ಬೇಜಾರಾಗ್ತಿದೆ.. ಗೊತ್ತಿದ್ದು ಗೊತ್ತಿದ್ದು ತಪ್ಪುಗಳನ್ನ ಮಾಡಿಕೊಂಡ್ವಿ ಅಲ್ವಾ? ನನಗೆ ಪಾಪ ಎಲ್ಲರೂ ಸಪೋರ್ಟ್ ಮಾಡಿದ್ರು. ನೀನು ʻಬಿಗ್ ಬಾಸ್ʼಗೆ ಹೋಗು ಅಂತ ಮನೆಯಲ್ಲೂ ಎಲ್ಲರೂ ಪುಷ್ ಮಾಡಿ ಕಳಿಸಿದ್ರು. ಒಂದ್ವೇಳೆ ನಾವು ಸುಮ್ಮನೆ ನೆಗೆಟಿವ್ ಮಾಡಿಕೊಂಡು ಹೋದ್ರೆ, ಅದೆಲ್ಲಾ ವೇಸ್ಟ್ ಆಗುತ್ತೆ. ಗೊತ್ತಿಲ್ಲದೆ ತಪ್ಪಾದ್ರೆ ಒಂಥರ. ಗೊತ್ತಿದ್ದು ಗೊತ್ತಿದ್ದು ತಪ್ಪು ಮಾಡಿದ್ದೀವಿ.
ನಮ್ಮ ಗುಂಡಿಯನ್ನ ನಾವೇ ತೋಡಿಕೊಂಡಿದ್ದೇವೆ. ಒಂದ್ವೇಳೆ ನಾನು ಹೊರಗೆ ಹೋದ್ರೆ, ʻಬಿಗ್ ಬಾಸ್ʼಗೆ ಬಂದು ನೆಗೆಟಿವ್ ಮಾಡಿಕೊಂಡು ಹೊರಗೆ ಬಂದ್ಲು ಅಂತ ಆಗುತ್ತೆ. ನನಗಾಗಿ ನನ್ನ ಮಗ ಮತ್ತು ಫ್ರೆಂಡ್ ಎಲ್ಲರೂ ಒಂದು ತಿಂಗಳು ಓಡಾಡಿದ್ದಾರೆ. ನಾವು ಏನೂ ಮಾಡದೇ ಹೋದರೆ ಅದು ಒಂಥರ. ಆದರೆ, ನೆಗೆಟಿವ್ ಮಾಡಿಕೊಂಡು ಹೋಗೋದು ಎಷ್ಟು ಸರಿ?' ಎಂದು ಹೇಳಿದ್ದಾರೆ.
'ನನ್ನ ಫ್ರೆಂಡ್, ನನ್ನ ಅಮ್ಮ ಹಾಗೂ ಅಣ್ಣ ಇವೆರಲ್ಲರೂ, ʻನೀನು ಬೇಗ ಬಂದರು ಪರವಾಗಿಲ್ಲ. ಕೆಟ್ಟ ಹೆಸರು ಮಾತ್ರ ತಗೊಂಡು ಬರಬೇಡ ಅಂತ ಹೇಳಿದ್ದರು. ಈಗ ನಾನು ಅವರೆಲ್ಲರಿಗೂ ಮಾಡಿರುವ ಅವಮಾನ ಇದು ಅನ್ನೋ ತರಹ ಫೀಲ್ ಆಗ್ತಿದೆ. ನಮ್ಮ ಮನೆಯಲ್ಲಿ ನನ್ನ ಅಣ್ಣ ಎಲ್ಲಾ ಹೇಗೆ ಅಂತಂದರೆ, ಇದೆಲ್ಲಾ ಅವರು ಯಾರು ಸಹಿಸಲ್ಲ. ಆ ಹುಡುಗಿಗೆ ಹೋಗಿ ನೀನು ಹಂಗೆ ಮಾಡಿದ್ಯಲ್ಲಾ? ಅವಳಿಗೆ ಅಷ್ಟು ಅಳಿಸಿದ್ಯಲ್ಲ? ಸಿಲ್ಲಿ ಅನಿಸಿದೆ ಅಂತ ಎಲ್ಲರೂ ಅಂದುಕೊಳ್ತಾರೆ' ಎಂದು ಜಾಹ್ನವಿ ಗೋಳಾಡಿದ್ದಾರೆ.
ಈ ವೇಳೆ ಕಾವ್ಯ ಮತ್ತು ಅಶ್ವಿನಿಗೌಡ ಅವರು ಜಾಹ್ನವಿ ಅವರನ್ನು ಸಂತೈಸಿದ್ದಾರೆ.
Advertisement