

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12ನಲ್ಲಿ ಸ್ಪರ್ಧಿಗಳಿಗೆ ಮತ್ತೆ ಉಸ್ತುವಾರಿಗಳು ಆಹಾರವಾಗಿದ್ದು, ಈ ಹಿಂದೆ ಮನೆಯ ಕ್ಯಾಪ್ಟನ್ ಗೆ ಅಶ್ವಿನಿಗೌಡ ಕೊಟ್ಟಿದ್ದ ಕಾಟವೇ ಇನ್ನೂ ಹಸಿರಾಗಿದೆ. ಅದಾಗಲೇ ಮತ್ತೆ ಗಿಲ್ಲಿ ನಟನ ರೋಸ್ಟ್ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಹೌದು.. ಬಿಗ್ ಬಾಸ್ ಶೋನಲ್ಲಿ ಈ ವಾರ ಬಿಗ್ ಬಾಸ್ ಮನೆ ಒಂದು ಕಾಲೇಜ್ ಕ್ಯಾಂಪಸ್ ಆಗಿ ಬದಲಾಗಿದೆ. ಕಾಲೇಜು ದಿನಗಳ ತರಲೆ, ತಮಾಷೆ, ಕಿತಾಪತಿ ಮಾಡಲು ಹೇರಳ ಅವಕಾಶ ಸಿಕ್ಕಿದೆ. ಈ ನಡುವೆ ಈ ಬಿಗ್ ಬಾಸ್ ಕಾಲೇಜಿನ ಪ್ರಾಂಶುಪಾಲರಾಗಿರುವ ಕ್ಯಾಪ್ಟನ್ ರಘು ಮತ್ತೆ ಕೈಕೈ ಹಿಸುಕಿಕೊಳ್ಳುವಂತಾಗಿದೆ.
ಇನ್ನು ಈ ವಿಶೇಷ ಟಾಸ್ಕ್ ನ ಮೊದಲ ದಿನವೇ ಗಿಲ್ಲಿ ನಟ ತಮ್ಮ ಅಸಲಿ ಆಟ ಶುರು ಮಾಡಿಕೊಂಡಿದ್ದಾರೆ. ಅದೇ ರೀತಿ, ಚಂದ್ರಪ್ರಭ ಕೂಡ ಕಾಮಿಡಿ ಮೂಲಕ ಎಲ್ಲರನ್ನೂ ನಗಿಸಲು ಆರಂಭಿಸಿದ್ದಾರೆ.
ಗೌರವ ಪದದ ಅರ್ಥ ಕೇಳಿದ ರಘು, ಗಿಲ್ಲಿ ಉತ್ತರಕ್ಕೆ ನೆಗೆಗಡಲಲ್ಲಿ ತೇಲಿದ ಮನೆ
ಇದೇ ವೇಳೆ ಪ್ರಾಂಶುಪಾಲರಾದ ರಘು ಗಿಲ್ಲಿಗೆ ಗೌರವ ಪದದ ಅರ್ಥ ಕೇಳಿದ್ದು, ಈ ವೇಳೆ ಇದಕ್ಕೆ ಗಿಲ್ಲಿನಟ ವ್ಯಂಗ್ಯವಾಗಿ ಉತ್ತರ ನೀಡಿದ್ದಾರೆ. ರೆಸ್ಪೆಕ್ಟ್ ಅಂದ್ರೆ ಮರ್ಯಾದೆ ಎಂದು ಹೇಳಿದ ಗಿಲ್ಲಿ, ಇದಕ್ಕೆ ಉದಾಹರಣೆ ಕೂಡ ಕೊಟ್ಟಿದ್ದಾರೆ. 'ಲೋ ರಘು ಅಂದ್ರೆ ಅಗೌರವ.. ರಘು ಸರ್ ಎಂದರೆ ಗೌರವ ಎಂದು ಹೇಳಿದ್ದಾರೆ. ಅಲ್ಲದೆ ಏ ಮಗಾ ರಘು ಬಾರೋ.. ನೀನ್ ಯಾವ್ ಸೀಮೆ ಪ್ರಿನ್ಸಿಪಲ್ ಎಂದರೆ ಅಗೌರವ.. ಪ್ರಿನ್ಸಿಪಲ್ ರಘು ಸರ್ ಅನ್ನೋದು ಗೌರವ ಎಂದು ಹೇಳಿದ್ದಾರೆ. ಗಿಲ್ಲಿಯ ಈ ಮಾತಿಗೆ ಇಡೀ ಮನೆ ನಗೆಗಡಲ್ಲಲ್ಲಿ ತೇಲಿದೆ.
ಈ ವೇಳೆ ಕುಪಿತರಾದ ಪ್ರಿನ್ಸಿಪಲ್ ರಘು ಗಿಲ್ಲಿಯನ್ನು ಕ್ಲಾಸ್ ರೂಮಿನಿಂದ ಹೊರಗೆ ಅಟ್ಟಿದ್ದಾರೆ. ಆದಾಗ್ಯೂ ಆಗಾಗ ಕ್ಲಾಸಿಗೆ ಬರುತ್ತಿದ್ದ ಗಿಲ್ಲಿ ರಘು ಹೇಳುತ್ತಿದ್ದ ಮಾತಿಗೆ ತಮ್ಮದೇ ಶೈಲಿಯಲ್ಲಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ರಘು ಫುಲ್ ರೋಸ್ಟ್
ಇನ್ನು ರಘು ಮನೆಯ ಕ್ಯಾಪ್ಟನ್ ಆದ ಬಳಿಕ ಅಶ್ವಿನಿಗೌಡ ಅವರಿಗೆ ಕಳಪೆ ನೀಡಿದ್ದರು. ಹೀಗಾಗಿ ಅವರನ್ನು ಬಿಗ್ ಬಾಸ್ ಜೈಲಿಗೆ ಹಾಕಲಾಗಿತ್ತು. ಈ ವೇಳೆ ಮನೆ ನಿಯಮಗಳ ಪ್ರಕಾರ ಶಿಕ್ಷೆಯ ರೂಪದಲ್ಲಿ ಅವರಿಂದ ಕೆಲ ಕೆಲಸಗಳನ್ನು ಮಾಡಿಸಬೇಕಿತ್ತು.
ಆದರೆ ಕ್ಯಾಪ್ಟನ್ ರಘು ಅಶ್ವಿನಿಗೌಡರಿಂದ ಕೆಲಸ ತೆಗೆಸಲು ಮತ್ತು ಮನೆಯ ನಿಯಮಗಳನ್ನು ಪಾಲಿಸುವಂತೆ ಮಾಡಲು ಹರಸಾಹಸವನ್ನೇ ಪಟ್ಟಿದ್ದರು. ಈ ಬೆಳವಣಿಗೆ ಮಾಸುವ ಮುನ್ನವೇ ಇದೀಗ ಗಿಲ್ಲಿ ಕೂಡ ಕ್ಯಾಪ್ಟನ್ ರಘುಗೆ ಕಾಟ ನೀಡಲು ಆರಂಭಿಸಿದ್ದಾರೆ.
ಮಾತ್ರವಲ್ಲದೇ ಕ್ಯಾಪ್ಟನ್ ಕೆಂಗಣ್ಣಿಗೆ ಗುರಿಯಾಗಿ ಶಿಕ್ಷೆ ಕೂಡ ಅನುಭವಿಸಿದ್ದಾರೆ.
ಜಾಹ್ನವಿ, ಅಶ್ವಿನಿ ಗೌಡಗೆ ಪಾಠ ಕಲಿಸಿದ ಬಿಗ್ ಬಾಸ್
ಇನ್ನು ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶುರು ಆದಾಗಿನಿಂದ ಅಶ್ವಿನಿ ಗೌಡ ಮತ್ತು ಜಾಹ್ನವಿ (Jahnavi) ಅವರು ಸ್ನೇಹ ಹೊಂದಿದ್ದರು. ಬಿಗ್ ಬಾಸ್ ಕೊಟ್ಟ ಟಾಸ್ಕ್ ನ ಅನ್ವಯ ಈ ವಾರ ಎರಡು ತಂಡಗಳಾಗಿ ಸ್ಪರ್ಧಿಗಳನ್ನು ವಿಂಗಡಿಸಲಾಗಿದೆ.
ಜಾಹ್ನವಿ ಮತ್ತು ಅಶ್ವಿನಿ ಗೌಡ (Ashwini Gowda) ಅವರು ಎದುರುಬದರು ಟೀಮ್ನಲ್ಲಿ ಇದ್ದಾರೆ. ಇಬ್ಬರಲ್ಲಿ ಯಾರಿಗೆ ಅರ್ಹತೆ ಇಲ್ಲ ಎಂಬುದನ್ನು ಚರ್ಚೆ ಮಾಡಲು ಬಿಗ್ ಬಾಸ್ ವೇದಿಕೆ ನಿರ್ಮಿಸಿಕೊಟ್ಟರು. ಆದರೆ ಬಿಗ್ ಬಾಸ್ ಕೊಟ್ಟ ಟಾಸ್ಕ್ ನಿಭಾಯಿಸುವ ವೇಳೆಯೂ ಅವರು ತಮ್ಮ ಸ್ನೇಹಕ್ಕೆ ಧಕ್ಕೆಯಾಗದ ರೀತಿಯಲ್ಲಿ ಮಾತನಾಡುತ್ತಿದ್ದರು.
ಜಾಹ್ನವಿ ಮತ್ತು ಅಶ್ವಿನಿ ಒಬ್ಬರನ್ನೊಬ್ಬರು ಬಿಟ್ಟಕೊಡಲಿಲ್ಲ. ಆಗ ಬಿಗ್ ಬಾಸ್ ಚಾಟಿ ಬೀಸಿದರು. ಈ ವೇಳೆ ಇಬ್ಬರೂ ಪರಸ್ಪರ ತಮ್ಮ ಸ್ನೇಹವೇ ತಮ್ಮ ಆಟಕ್ಕೆ ಅಡ್ಡಿಯಾಗುತ್ತಿದ್ದರೆ ಅಂತಹ ಸ್ನೇಹವೇ ಬೇಡ ಎಂದು ವಾದಪ್ರತಿವಾದ ಮಾಡಿದರು. ಈ ವೇಳೆ ಅಶ್ವಿನಿಗೌಡ ‘ಜಾಹ್ನವಿ ನನ್ನ ಜೊತೆಗೆ ಇದ್ದುಕೊಂಡು ನನಗೇ ಭಾವಿ ತೋಡುತ್ತಿದ್ದಾರೆ ಅಂತ ನನಗೆ ಈಗ ಗೊತ್ತಾಯಿತು’ ಎಂದು ಅಶ್ವಿನಿ ಗೌಡ ಅವರು ಹೇಳಿದರು.
‘ಮೊಲ ಮತ್ತು ಆಮೆ ಕಥೆ ನಿಮಗೆ ಗೊತ್ತಿದೆ ಅಲ್ವಾ? ತುಂಬಾ ಮಾತನಾಡಿದರೆ ಗೆಲ್ಲೋಕೆ ಆಗುತ್ತೆ ಅಂತ ಭಾವಿಸಬೇಡಿ’ ಎಂದು ಜಾಹ್ನವಿ ಹೇಳಿದರು. ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಜಗಳ ಶುರುವಾಯಿತು.
ಇವು ಟಾಸ್ಕ್ ಸಲುವಾಗಿ ಆಡಿದ ಮಾತುಗಳು ಆದರೂ ಕೂಡ ಅಶ್ವಿನಿ ಗೌಡ ಮತ್ತು ಜಾಹ್ನವಿ ನಡುವೆ ಮನಸ್ತಾಪ ಉಂಟಾಗಿದೆ. ಜಾಹ್ನವಿ ಹೇಳಿದ್ದು ಅಶ್ವಿನಿ ಗೌಡ ಅವರಿಗೆ ಬೇಸರ ಉಂಟುಮಾಡಿದೆ. ಅಲ್ಲದೇ, ಅಶ್ವಿನಿ ಗೌಡ ಅವರು ಖಾರವಾಗಿ ಮಾತನಾಡಿದ್ದರಿಂದ ಜಾಹ್ನವಿ ಅವರಿಗೆ ನೋವಾಗಿದೆ.
Advertisement