Bigg Boss ಅಭಿಮಾನಿಗಳಿಗೆ ಅಗ್ನಿಪರೀಕ್ಷೆ! ಲಾಲ್‌ಬಾಗ್ ಫ್ಲವರ್ ಶೋನಲ್ಲಿ ಸಿಗಲಿದೆ ಗೋಲ್ಡನ್ ಟಿಕೆಟ್; ಗೆಲ್ಲೋದು ಹೇಗೆ?

ಬಿಗ್ ಬಾಸ್ ಆಡಿಷನ್‌ನಲ್ಲಿ ಪಾಲ್ಗೊಳ್ಳಬೇಕಾ? ಹಾಗಾದ್ರೆ, ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ ವೀಕ್ಷಿಸಿ; ಬಿಗ್ ಬಾಸ್ ಮನೆಗೆ ಹೋಗುವ ಸುವರ್ಣ ಅವಕಾಶ ನಿಮ್ಮದಾಗಿಸಿ ಕೊಳ್ಳಿ! ಗೋಲ್ಡನ್ ಟಿಕೆಟ್ ಪಡೆಯೋದು ಹೇಗೆ ಗೊತ್ತಾ?
Bigg Boss
ಬಿಗ್ ಬಾಸ್Online Desk
Updated on

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದೆ. ಇದರೊಂದಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಿರುತರೆ ಮೂಲಕ ಮತ್ತೆ ಮನೆ ಮನೆಗೂ ಎಂಟ್ರಿ ಕೊಡಲಿದ್ದಾರೆ. ಅದ್ರಂತೆ, ಬಿಗ್ ಬಾಸ್ ಆರಂಭಕ್ಕೆ ಮುನ್ನವೇ ಕಲರ್ಸ್ ಕನ್ನಡ ವಾಹಿನಿಯು ಬಿಗ್ ಬಾಸ್ ಅಭಿಮಾನಿಗಳಿಗೆ ಅತಿ ದೊಡ್ಡ ಅಗ್ನಿಪರೀಕ್ಷೆ ನೀಡಿದ್ದಾರೆ. ಇನ್ನು ಈ ಅಗ್ನಿಪರೀಕ್ಷೆ ಪಾಸಾದವರು ಬಿಗ್ ಬಾಸ್ ಎಕ್ಸ್‌ಪೀರಿಯೆನ್ಸ್ ಪಡೆಯಲಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಹೌದು, ಕಲರ್ಸ್ ಕನ್ನಡ ವಾಹಿನಿಯು ಲಾಲ್‌ಬಾಗ್ ಫ್ಲವರ್ ಶೋನಲ್ಲಿ 'ಬಿಗ್ ಬಾಸ್ ಅಗ್ನಿಪರೀಕ್ಷೆ ಎಕ್ಸ್‌ಪೀರಿಯೆನ್ಸ್ ಝೋನ್' (Bigg Boss Agnipariksha Experience Zone) ಅನ್ನು ಆಯೋಜಿಸಿದೆ. ಇನ್ನು, ಅಗ್ನಿಪರೀಕ್ಷೆ ಎಕ್ಸ್‌ಪೀರಿಯೆನ್ಸ್ ಝೋನ್ ಗೆಲ್ಲುವರು, ಮಾಣಿಕ್ಯ ಕಿಚ್ಚ ಸುದೀಪ್ ಅವರೊಂದಿಗೆ ಬಿಗ್ ಬಾಸ್ ವೀಕೆಂಡ್ ಎಪಿಸೋಡ್ ಅನ್ನು ಲೈವ್ ಆಗಿ ವೀಕ್ಷಿಸುವ ಮತ್ತು ವಿಶೇಷ ಬಹುಮಾನಗಳನ್ನು ಗೆಲ್ಲುವ ಅಪರೂಪದ ಸುವರ್ಣಾವಕಾಶ ಸಿಗಲಿದೆ.

ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ಭಾಗವಹಿಸೋದು ಹೇಗೆ?

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಪ್ರಸಿದ್ಧ ಸಸ್ಯಕಾಶಿ ಲಾಲ್‌ಬಾಗ್ ಫ್ಲವರ್ ಶೋ ಆಗಸ್ಟ್ 6 ರಿಂದ ಆಗಸ್ಟ್ 17 ರ ವರೆಗೆ ಲಾಲ್‌ಬಾಗ್ ಬೋಟಾನಿಕಲ್ ಗಾರ್ಡನ್ ನಲ್ಲಿರುವ ಗ್ಲಾಸ್ ಹೌಸ್ ಹತ್ತಿರ ನಡೆಯಲಿದೆ.

Bigg Boss
Bigg Bossನಲ್ಲಿ ದಾದಾಗಿರಿ: 6 ಭಾಷೆಗಳಲ್ಲಿ ಏಕಕಾಲಕ್ಕೆ ಶೋ; ಈ ಬಾರಿ ಸೌರವ್ ಗಂಗೂಲಿ ಹೊಸ ಎಂಟ್ರಿ

ಕಿಚ್ಚ ಸುದೀಪ್ ಜೊತೆ ಲೈವ್ ಶೋ ನೋಡುವ ಅವಕಾಶ ಪಡೆಯುವುದು ಹೇಗೆ?

  • ಲಾಲ್‌ಬಾಗ್‌ನ ಈ ಎಕ್ಸ್‌ಪೀರಿಯನ್ಸ್ ಝೋನ್‌ಗೆ ಭೇಟಿ ನೀಡಿ, ಚಾಲೆಂಜ್‌ಗಳಲ್ಲಿ ಭಾಗವಹಿಸಿ.

  • ಅಲ್ಲಿರುವ ಬಿಗ್ ಬಾಸ್ ಚೇರ್ ಅಥವಾ ಸೆಲ್ಫಿ ಝೋನ್‌ನಲ್ಲಿ ಸುಂದರವಾದ ಸೆಲ್ಫಿ/ಫೋಟೋ ತೆಗೆದುಕೊಳ್ಳಿ.

  • ಆ ಫೋಟೋವನ್ನು ನಿಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ #BBKAGNIPARIKSHE ಹ್ಯಾಶ್‌ಟ್ಯಾಗ್ ಬಳಸಿ ಪೋಸ್ಟ್ ಮಾಡಿ ಮತ್ತು @ColorsKannada ಅಧಿಕೃತ ಖಾತೆಯನ್ನು ಟ್ಯಾಗ್ ಮಾಡಿ.

  • ನಿಮ್ಮ ಇನ್‌ಸ್ಟಾಗ್ರಾಂ ಪ್ರೊಫೈಲ್ ಅನ್ನು 'Public' ಆಗಿ ಇಡುವುದು ಕಡ್ಡಾಯ.

  • ಹೀಗೆ ಪೋಸ್ಟ್ ಮಾಡಿದವರಲ್ಲಿ ಆಯ್ದ ಅದೃಷ್ಟಶಾಲಿ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ನಡೆಸಿಕೊಡುವ ವೀಕೆಂಡ್ ಪಂಚಾಯಿತಿ ಶೋ ಅನ್ನು ವೇದಿಕೆಯಲ್ಲೇ ನೇರವಾಗಿ ಲೈವ್ ನೋಡುವ ಪಾಸ್ ಮತ್ತು ಬಿಗ್ ಬಾಸ್ ವಿಶೇಷ ಗಿಫ್ಟ್‌ಗಳನ್ನು ನೀಡಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com