ವಿಮಾನದಲ್ಲಿ ಬಂದು ಭರ್ಜರಿ ಸರ್ಪ್ರೈಸ್ ಕೊಟ್ಟ ಕಿಚ್ಚ; Bigg Boss ಟೇಕಾಫ್ ಯಾವಾಗ ಗೊತ್ತಾ? ಗ್ರ್ಯಾಂಡ್ ಓಪನಿಂಗ್ ಡೇಟ್ ಬಗ್ಗೆ ಬಿಗ್ ಅಪ್ಡೇಟ್

ಕಿರುತೆರೆಯ ಇತಿಹಾಸದಲ್ಲಿಯೇ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಎಂದೇ ಹೆಸರಾಗಿರುವ ಬಿಗ್ ಬಾಸ್ ಕನ್ನಡದ ನೂತನ ಸೀಸನ್ ಯಾವಾಗ ಶುರು ಎಂದು ಕಾಯುತ್ತಿದ್ದ ಪ್ರೇಕ್ಷಕರಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಆ ಕುರಿತ ವರದಿ ಇಲ್ಲಿದೆ:
Bigg Boss Kannada 13
ಬಿಗ್ ಬಾಸ್ ಕನ್ನಡ ಸೀಸನ್ 13
Updated on

ಬೆಂಗಳೂರು: ಕನ್ನಡ ಕಿರುತೆರೆಯ ಇತಿಹಾಸದಲ್ಲಿಯೇ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಎಂದೇ ಹೆಸರಾಗಿರುವ ಬಿಗ್ ಬಾಸ್ ಕನ್ನಡದ ನೂತನ ಸೀಸನ್ ಯಾವಾಗ ಶುರು ಎಂದು ಕಾಯುತ್ತಿದ್ದ ಪ್ರೇಕ್ಷಕರಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಹೌದು, ಇದೇ ಸೆಪ್ಟೆಂಬರ್ 6 ರಿಂದ ಬಿಗ್ ಬಾಸ್ ಕನ್ನಡ ಸೀಸನ್ 13 ಅಧಿಕೃತವಾಗಿ ಆರಂಭವಾಗಲಿದೆ ಎಂದು ಖುದ್ದು ಕಿಚ್ಚ ಸುದೀಪ್ ಅವರು ತಿಳಿಸಿದ್ದಾರೆ. ಈ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಇದರೊಂದಿಗೆ, ದೊಡ್ಮನೆಯ ಹೊಸ ಆಟವನ್ನು ಕಣ್ಣುಂಬಿಕೊಳ್ಳಲು ಇಡೀ ಕರ್ನಾಟಕವೇ ಕಾಯುತ್ತಿದೆ. ಆ ಕುರಿತ ವರದಿ ಇಲ್ಲಿದೆ:

ಫ್ಲೈಟ್ ಮೋಡ್ ಆನ್ ಮಾಡಲಿರುವ ಅಭಿನಯ ಚಕ್ರವರ್ತಿ

ಕನ್ನಡ ಚಿತ್ರರಂಗದ ಬಾದಷಾ ಕಿಚ್ಚ ಸುದೀಪ್ ಇಲ್ಲದೇ ಬಿಗ್ ಬಾಸ್ ಶೋ ಊಹಿಸಿಕೊಳ್ಳುವುದು ಕಷ್ಟ. ಈ ಬಾರಿಯೂ ಅವರೇ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಲಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ ಹೊಸ ಪ್ರೋಮೋದಲ್ಲಿ ಸುದೀಪ್ ಅವರು ವಿಮಾನದ ಪೈಲಟ್ ರೂಪದಲ್ಲಿ ಕಾಣಿಸಿಕೊಂಡು ವೀಕ್ಷಕರಲ್ಲಿ ರೋಮಾಂಚನ ಉಂಟುಮಾಡಿದ್ದಾರೆ. ಒಮ್ಮೆ ವಿಮಾನ ಟೇಕಾಫ್ ಆದರೆ ಹೊರಗಿನ ಜಗತ್ತಿನ ನೆಟ್‌ವರ್ಕ್ ಕಟ್ ಆಗುತ್ತದೆ ಮತ್ತು ನಿಮ್ಮ ನಿಜವಾದ ಬಣ್ಣ ಬಯಲಾಗುತ್ತದೆ ಎಂದು ಸುದೀಪ್ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈ ವಿಶಿಷ್ಟ ಥೀಮ್ ಪ್ರೇಕ್ಷಕರಲ್ಲಿ ಹೊಸ ಸೀಸನ್ ಬಗ್ಗೆ ಮತ್ತಷ್ಟು ನಿರೀಕ್ಷೆಗಳನ್ನು ಹೆಚ್ಚಿಸಿದೆ.

ಸೆಪ್ಟೆಂಬರ್ 6 ರಂದು ಗ್ರ್ಯಾಂಡ್ ಲಾಂಚ್

ಮುಂದುವರೆದು, ಇದೇ ಪ್ರೋಮೋದಲ್ಲಿ, ಬಹುನಿರೀಕ್ಷಿತ ಬಿಗ್ ಬಾಸ್ ಕನ್ನಡ ಸೀಸನ್ 13 ಸೆಪ್ಟೆಂಬರ್ 6 ರಂದು ಅದ್ಧೂರಿಯಾಗಿ ಚಾಲನೆ ಪಡೆಯಲಿದೆ ಎಂದು ಸುದೀಪ್ ತಿಳಿಸಿದ್ದಾರೆ. ಅಂದು ಸಂಜೆ 7 ಗಂಟೆಗೆ ಸರಿಯಾಗಿ ಗ್ರ್ಯಾಂಡ್ ಓಪನಿಂಗ್ ಸಂಚಿಕೆಯು ಪ್ರಸಾರವಾಗಲಿದ್ದು, ಸುದೀಪ್ ಅವರು ಎಲ್ಲಾ ಸ್ಪರ್ಧಿಗಳನ್ನು ಮನೆಗೆ ಬರಮಾಡಿಕೊಳ್ಳಲಿದ್ದಾರೆ. ಇನ್ನೂ, ಈ ಬಾರಿಯ ಕಾರ್ಯಕ್ರಮವು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರಲಿದ್ದು, ಇಂಟರ್ನೆಟ್ ಬಳಕೆದಾರರು ಜಿಯೋಹಾಟ್‌ಸ್ಟಾರ್ ಒಟಿಟಿ ಪ್ಲಾಟ್‌ಫಾರ್ಮ್ ಮೂಲಕ 24 ಗಂಟೆಗಳ ಕಾಲ ಲೈವ್ ವೀಕ್ಷಣೆ ಮಾಡಬಹುದಾಗಿದೆ.

Bigg Boss Kannada 13
ಬಿಡುಗಡೆಗೂ ಮುನ್ನವೇ ದಾಖಲೆ ಬರೆಯುತ್ತಾ 'Toxic'? Yash ಮಾಸ್‌ ಎಂಟ್ರಿಗೆ ಅಭಿಮಾನಿಗಳು ಕಾತರ; ಬುಕಿಂಗ್ ಓಪನ್ ಆಗುತ್ತಿದ್ದಂತೆ ಟಿಕೆಟ್‌ಗಳು ಸೋಲ್ಡ್‌ ಔಟ್

ಸೆಲೆಬ್ರಿಟಿಗಳ ಜೊತೆಗೆ ಕಾಮನ್ ಮ್ಯಾನ್ ಎಂಟ್ರಿಯ ಅಗ್ನಿಪರೀಕ್ಷೆ

ಈ ಬಾರಿಯ ಬಿಗ್ ಬಾಸ್ ಸೀಸನ್ 13ರ ಮತ್ತೊಂದು ದೊಡ್ಡ ವಿಶೇಷತೆ ಎಂದರೆ ಸಾಮಾನ್ಯ ಜನರಿಗೂ ದೊಡ್ಮನೆ ಪ್ರವೇಶಿಸಲು ಸುವರ್ಣ ಅವಕಾಶ ಕಲ್ಪಿಸಲಾಗಿದೆ. ಜನಸಾಮಾನ್ಯರ ಆಯ್ಕೆಗಾಗಿ ಈಗಾಗಲೇ ಅಗ್ನಿಪರೀಕ್ಷೆ ಎಂಬ ವಿಶೇಷ ಪ್ರಕ್ರಿಯೆ ಯಶಸ್ವಿಯಾಗಿ ನಡೆಯುತ್ತಿದೆ.

ಏತನ್ಮಧ್ಯೆ, ಈ ಬಾರಿಯ ದೊಡ್ಮನೆಗೆ ಅವರು ಎಂಟ್ರಿ ಅಗಲಿದ್ದಾರೆ, ಇವರು  ಎಂಟ್ರಿ ಅಗಲಿದ್ದಾರೆ ಎನ್ನುವ ಕುರಿತ ಹೆಸರುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದ್ದರೂ, ಅಂತಿಮ ಸ್ಪರ್ಧಿಗಳ ಪಟ್ಟಿಯನ್ನು ರಹಸ್ಯವಾಗಿಯೇ ಇದೆ. ಅದರಂತೆ, ಸೆಪ್ಟೆಂಬರ್ 6 ರಂದು ಯಾರೆಲ್ಲಾ ಮನೆಗೆ ಪ್ರವೇಶಿಸಲಿದ್ದಾರೆ ಎಂಬುದು ಅಧಿಕೃತವಾಗಿ ಜಗತ್ತಿಗೆ ತಿಳಿಯಲಿದೆ.

Bigg Boss Kannada 13
Toxic: ಟಾಕ್ಸಿಕ್ ಬಿಡುಗಡೆಗೂ ಮುನ್ನವೇ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ರಾ ನಯನತಾರಾ? ಫೋಟೋ ವೈರಲ್!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com