Toxic: ಇಂತಹ ವಿಭಿನ್ನ ಸಿನಿಮಾ ಮಾಡಲು ಗಟ್ಸ್ ಬೇಕು; ಯಶ್ ಹಾಡಿ ಹೊಗಳಿದ ಕಿಚ್ಚ ಸುದೀಪ್!

ಟಾಕ್ಸಿಕ್ ಸಿನಿಮಾ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತನ್ನ ಅನಿಸಿಕೊಂಡಿರುವ ಕಿಚ್ಚ ಸುದೀಪ್, ಯಶ್ ಹೊಸ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
Yash, Sudeep
ಯಶ್, ಕಿಚ್ಚ ಸುದೀಪ್
Updated on

ಇತ್ತೀಚಿಗೆ ಬಿಡುಗಡೆಯಾದ ಕನ್ನಡದ 'ಪ್ಯಾನ್ ಇಂಡಿಯಾ ಸ್ಟಾರ್' ಯಶ್ ಅವರ ಟಾಕ್ಸಿಕ್ ಸಿನಿಮಾ ಬಗ್ಗೆ ಇದೀಗ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ಯಶ್ ಅವರ ಪ್ರಯತ್ನವನ್ನು ಕೊಂಡಾಡಿದ್ದಾರೆ.

ಟಾಕ್ಸಿಕ್ ಸಿನಿಮಾ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತನ್ನ ಅನಿಸಿಕೊಂಡಿರುವ ಕಿಚ್ಚ ಸುದೀಪ್, ಯಶ್ ಹೊಸ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಇದೊಂದು ಮಾತನ್ನು ಹೇಳಬೇಕು ಅನಿಸುತ್ತಿದೆ ಎನ್ನುವ ಮೂಲಕ ಯಶ್‌ ಅವರ ಸಿನಿಮಾವನ್ನು ಹಾಡಿಹೊಗಳಿದ್ದಾರೆ.

ಯಶ್ ನಿಮ್ಮ ಹಿಂದಿನ ಕಮರ್ಷಿಯಲ್ ಬ್ಲಾಕ್‌ಬಸ್ಟರ್‌ನ ಯಶಸ್ಸಿನ ಹಾದಿಯ ಸಿದ್ಧಸೂತ್ರವನ್ನ ಬ್ರೇಕ್ ಮಾಡಿದ್ದೀರಿ. ಅದೇ ರೀತಿಯ ಮತ್ತೊಂದು ಸಾಮಾನ್ಯ, ನಿರೀಕ್ಷಿತ ಹಾಗೂ ಫಾರ್ಮುಲಾ ಸಿನಿಮಾವನ್ನು ಮಾಡುವ ಬದಲು, ನೀವು ನಿಜವಾಗಿಯೂ ವಿಭಿನ್ನವಾದ, ಹೊಸ ರೀತಿಯ ಪ್ರಯತ್ನಕ್ಕೆ ಕೈ ಹಾಕಿದ್ದೀರಿ. ಇಂತಹ ವಿಭಿನ್ನ ಹಾಗೂ ವಿನೂತನ ಕಥಾಹಂದರವನ್ನು ಕೈಗೆತ್ತಿಕೊಳ್ಳಲು ವಿಶೇಷ ಮನಸ್ಥಿತಿ, ಬದ್ಧತೆ ಮತ್ತು ಅಪಾರ ಧೈರ್ಯ ಬೇಕು ಎಂದಿದ್ದಾರೆ.

`ಟಾಕ್ಸಿಕ್’ ಒಂದು ಶ್ಲಾಘನೀಯ ಪ್ರಯತ್ನ. ಇದರಲ್ಲಿ ಕುತೂಹಲ ಕೆರಳಿಸುವ, ಆರೋಗ್ಯಕರ ಚರ್ಚೆ ಹಾಗೂ ಕಲಿಕೆಯ ಅವಕಾಶ ಮಾಡಿಕೊಡುವ ಹಲವು ಅಂಶಗಳಿವೆ. ಸಾಂಪ್ರದಾಯಿಕ ಚೌಕಟ್ಟಿನಿಂದ ಹೊರಬಂದು, ವಿಭಿನ್ನವಾಗಿ ಪ್ರಯೋಗ ಮಾಡುವ ಧೈರ್ಯ ತೋರಿದ್ದಕ್ಕೆ ನಿಮಗೆ ಅಭಿನಂದನೆಗಳು. ಸ್ನೇಹಿತ.. ನಿಮ್ಮ ಮುಂದಿನ ಹಾದಿಗೆ ಪ್ರೀತಿ ತುಂಬಿದ ಶುಭ ಹಾರೈಕೆಗಳು ಎಂದು ಬರೆದುಕೊಂಡಿದ್ದಾರೆ.

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಯಶ್ ಹೊಸ ಪ್ರಯತ್ನ ಮಾಡಿದ್ದಕ್ಕೆ ಕಿಚ್ಚ ಸುದೀಪ್ ಅಭಿನಂದನೆ ಸಲ್ಲಿಸಿದ್ದಾರೆ. ಹೀಗೆ ಖುದ್ದು ಸುದೀಪ್ ಟಾಕ್ಸಿಕ್ ಸಿನಿಮಾ ವೀಕ್ಷಿಸಿ ಉತ್ತಮವಾಗಿ ವಿಮರ್ಶೆ ಮಾಡಿರೋದು ಇಬ್ಬರ ನಡುವಿನ ಬಾಂಧವ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

Yash, Sudeep
'ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ': ಕಿಚ್ಚ ಸುದೀಪ್ ದಿಢೀರ್ ಪೋಸ್ಟ್; ಇಲ್ಲಿದೆ ಕಾರಣ...

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com