'ಲಿಂಗಾಯತರು ಮಾಂಸಾಹಾರ ಸೇವಿಸ್ತಾರಾ?' ವೈರಲ್ ಆಯ್ತು ನಟ ಡಾಲಿ ಧನಂಜಯ ಬಿರಿಯಾನಿ ಸವಿದ VIDEO!

ಬಿರಿಯಾನಿ ಹೋಟೆಲ್‌ವೊಂದರ ಉದ್ಘಾಟನೆಗೆ ಹೋಗಿದ್ದ ನಟ ಡಾಲಿ ಧನಂಜಯ ಕಾರ್ಯಕ್ರಮ ಮುಗಿದ ಬಳಿಕ ಹೋಟೆಲ್‌ನಲ್ಲಿಯೇ ಬಾಳೆಎಲೆಯಲ್ಲಿ ಭರ್ಜರಿ ಬಿರಿಯಾನಿ ಊಟ ಮಾಡಿದ್ದಾರೆ.
Why is the video of actor Dolly Dhananjaya eating biryani going viral?
ಹೊಟೆಲ್ ನಲ್ಲಿ ಬಿರಿಯಾನಿ ಸವಿದ ನಟ ಡಾಲಿ ಧನಂಜಯ
Updated on

ಬೆಂಗಳೂರು: ನಟ ಡಾಲಿ ಧನಂಜಯ್ ಅವರು ಬಿರಿಯಾನಿ ಸೇವಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಲಿಂಗಾಯತರಾಗಿ ಅವರು ಮಾಂಸಾಹಾರ ಸೇವಿಸಬಹುದೇ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಇತ್ತೀಚೆಗೆ ಬಿರಿಯಾನಿ ಹೋಟೆಲ್‌ವೊಂದರ ಉದ್ಘಾಟನೆಗೆ ಹೋಗಿದ್ದ ನಟ ಡಾಲಿ ಧನಂಜಯ ಕಾರ್ಯಕ್ರಮ ಮುಗಿದ ಬಳಿಕ ಹೋಟೆಲ್‌ನಲ್ಲಿಯೇ ಬಾಳೆಎಲೆಯಲ್ಲಿ ಭರ್ಜರಿ ಬಿರಿಯಾನಿ ಊಟ ಮಾಡಿದ್ದಾರೆ.

ಈ ಕುರಿತ ಫೋಟೋಗಳು ಮತ್ತು ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ. ಅಂತೆಯೇ ಲಿಂಗಾಯತರಾಗಿರುವ ಡಾಲಿ ಧನಂಜಯ ಮಾಂಸಾಹಾರ ಸೇವನೆ ಮಾಡಬಹುದಾ..? ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ.

Why is the video of actor Dolly Dhananjaya eating biryani going viral?
ಮದುವೆಯಾದ ವರ್ಷಕ್ಕೆ ಖುಷಿ ಸುದ್ದಿ ಕೊಟ್ಟ ನಟ ಡಾಲಿ ಧನಂಜಯ್

@sanatan_kannada ಪೋಸ್ಟ್‌ ಮಾಡಿರುವ ವಿಡಿಯೋಗೆ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದು,'ಲಿಂಗಾಯತರ ಮಾಂಸಾಹಾರ ಸೇವನೆ ಮಾಡೋದಿಲ್ಲ ಅಂತಾ ಹೇಳಿದವರು ಯಾರು? ಲಿಂಗಾಯುತ ಧರ್ಮದ ಆರಂಭದಲ್ಲೇ ವೇದಗಳನ್ನು ವಿರೋಧಿಸಿದ್ದವು.

ಅವರು ಆಗಲೇ ಮಾಂಸಾಹಾರ ಸೇವನೆ ಮಾಡುತ್ತಿದ್ದರು. ಲಿಂಗಾಯತ ಧರ್ಮ ಯಾರಿಗೂ ಯಾವುದನ್ನೂ ಹೇರೋದಿಲ್ಲ' ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ.

'ದಯವಿಲ್ಲದ ಧರ್ಮವದೇವುದಯ್ಯಾ? ದಯವೇ ಬೇಕು ಸಕಲಪ್ರಾಣಿಗಳೆಲ್ಲರಲ್ಲಿಯೂ; ದಯವೇ ಧರ್ಮದ ಮೂಲವಯ್ಯಾ: ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ. ಬಸವಾದಿ ಶರಣರ ವಚನಗಳೆಲ್ಲವೂ ರಾಜಕೀಯ ಲಾಭಕ್ಕೂ ಹಾಗೂ ಹೊಟ್ಟೆಪಾಡಿಗಷ್ಟೇ ಬಳಸಲಾಗುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ, ಇದು ಸರಿಯಲ್ಲ' ಎಂದು ಡಾಲಿ ಬಿರಿಯಾನಿ ತಿನ್ನೋ ವಿಡಿಯೋವನ್ನು ಕಿರಣ್‌ ಆರಾಧ್ಯ ಎನ್ನುವವರು ಟೀಕಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com