

ಬೆಂಗಳೂರು: ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ಎಪಿಸೋಡ್ ಟಿಆರ್ ಪಿಯಲ್ಲಿ ದಾಖಲೆ ನಿರ್ಮಿಸಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBK 12) ಫಿನಾಲೆ ನಡೆದು ಕೆಲವು ದಿನಗಳೇ ಕಳೆದಿದ್ದು, ಗಿಲ್ಲಿನಟ ವಿನ್ನರ್ ಆಗಿದ್ದಾರೆ. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12 ಕುರಿತು ಮತ್ತೊಂದು ಮಹತ್ವದ ಸುದ್ದಿಯೊಂದು ವ್ಯಾಪಕ ವೈರಲ್ ಆಗುತ್ತಿದೆ.
ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಎಪಿಸೋಡ್ ದಾಖಲೆಯ ಪ್ರೇಕ್ಷಕರನ್ನು ಕಂಡಿದೆ ಎನ್ನಲಾಗಿದೆ. ಇದಕ್ಕೆ ಇಂಬು ನೀಡುವಂತೆ ಫಿನಾಲೆ ಎಪಿಸೋಡ್ ದಾಖಲೆಯ 16.8 ಟಿಆರ್ ಪಿ ರೇಟಿಂಗ್ಸ್ ಪಡೆದಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳು ಹರಿದಾಡುತ್ತಿದ್ದು, ಫಿನಾಲೆ ಎಪಿಸೋಡ್ಗೆ 16.8 ಟಿವಿಆರ್ ಸಿಕ್ಕಿದೆ ಎನ್ನಲಾಗಿದೆ.
ಸಾಮಾನ್ಯವಾಗಿ ವಾರಾಂತ್ಯಗಳಲ್ಲಿ ಬಿಗ್ ಬಾಸ್ ಎಪಿಸೋಡ್ಗೆ 10-12 ಟಿವಿಆರ್ ಸಿಗುತ್ತಿತ್ತು. ಆದರೆ, ಫಿನಾಲೆ ಎಪಿಸೋಡ್ ಮಾತ್ರ ಭರ್ಜರಿ ಟಿಆರ್ಪಿ ಪಡೆದುಕೊಂಡು ಗಮನ ಸೆಳೆದಿದೆ. ಮೂಲಗಳ ಪ್ರಕಾರ ಫಿನಾಲೆ ಎಪಿಸೋಡ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಮಾಡಿದ್ದಾರೆ.
ಇದಕ್ಕೆ ಕಾರಣ ಗಿಲ್ಲಿ ನಟ ಎಂದರೂ ತಪ್ಪಾಗಲಾರದು. ಗಿಲ್ಲಿ ನಟ ಕಪ್ ಎತ್ತೋದನ್ನು ನೋಡಲು ಎಲ್ಲರೂ ಕಾದು ಕುಳಿತಿದ್ದರು. ಹೀಗಾಗಿ, ಒಳ್ಳೆಯ ಟಿಆರ್ಪಿ ಸಿಕ್ಕಿದೆ ಎನ್ನಲಾಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ ಕಳೆದ ವರ್ಷ ಸೆಪ್ಟೆಂಬರ್ 28ರಂದು ಆರಂಭವಾಗಿತ್ತು. ಜನವರಿ 18ರಂದು ಫಿನಾಲೆ ನಡೆದಿತ್ತು. ಈ ಎಪಿಸೋಡ್ನ ಜನರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ. ಈ ಫಿನಾಲೆಯಲ್ಲಿ ತಮ್ಮ . ಇದಕ್ಕೆ ಕಾರಣ ಗಿಲ್ಲಿ ನಟ ಎಂದರೂ ತಪ್ಪಾಗಲಾರದು. ಗಿಲ್ಲಿ ನಟ ಕಪ್ ಎತ್ತೋದನ್ನು ನೋಡಲು ಎಲ್ಲರೂ ಕಾದು ಕುಳಿತಿದ್ದರು. ಹೀಗಾಗಿ, ಒಳ್ಳೆಯ ಟಿಆರ್ಪಿ ಸಿಕ್ಕಿದೆ.
ಕಲರ್ಸ್ ಕನ್ನಡ ವಾಹಿನಿ ಜೀ ಕನ್ನಡ ವಾಹಿನಿಯನ್ನು ಹಿಂದಿಕ್ಕಿ ನಂಬರ್ 1 ಸ್ಥಾನ ಪಡೆದುಕೊಂಡಿದೆ. ಇದಕ್ಕೆ ಕಾರಣವೂ ಇದೆ. ಶನಿವಾರ (ಜನವರಿ 17) ಬಿಗ್ ಬಾಸ್ ಪ್ರೀ ಫಿನಾಲೆ ಹಾಗೂ ಭಾನುವಾರ ಫಿನಾಲೆಯನ್ನು ಜನರು ಸಾಕಷ್ಟು ಶ್ರದ್ಧೆಯಿಂದ ವೀಕ್ಷಿಸಿದ್ದಾರೆ.
ಈ ಫಿನಾಲೆಯಲ್ಲಿ ನಟ ಗಿಲ್ಲಿ ವಿನ್ನರ್ ಆದರೆ ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆದರು. 3ನೇ ಸ್ಥಾನ ಅಶ್ವಿನಿಗೌಡ ತೃಪ್ತಿ ಪಟ್ಟುಕೊಂಡಿದ್ದರು.
Advertisement