ಬೆಂಗಳೂರಿನಿಂದಲೇ ನನ್ನ ಪಯಣ ಆರಂಭವಾಗಿದ್ದು: ರಾಮಾಯಣ ಕಾರ್ಯಕ್ರಮದಲ್ಲಿ ರಾಕುಲ್ ಪ್ರೀತ್ ಸಿಂಗ್

ಬೆಂಗಳೂರು ನನಗೆ ಅತ್ಯಂತ ವಿಶೇಷವಾದ ಸ್ಥಳ, ಏಕೆಂದರೆ ನನ್ನ ಮೊದಲ ಚಲನಚಿತ್ರ ಇಲ್ಲೇ ಆರಂಭವಾಯಿತು ಎಂದು 2009ರಲ್ಲಿ ಬಿಡುಗಡೆಯಾದ ತಮ್ಮ ಚೊಚ್ಚಲ ಕನ್ನಡ ಚಿತ್ರ 'ಗಿಲ್ಲಿ'ಯನ್ನು ನೆನಪಿಸಿಕೊಂಡಿದ್ದಾರೆ.
Rakul Preet Singh
ರಾಕುಲ್ ಪ್ರೀತ್ ಸಿಂಗ್
Updated on: 

ನಿತೇಶ್ ತಿವಾರಿ ನಿರ್ದೇಶಿಸುತ್ತಿರುವ, ಎರಡು ಭಾಗಗಳಲ್ಲಿ ಮೂಡಿಬರಲಿರುವ ಪೌರಾಣಿಕ ಕಥಾಹಂದರದ 'ರಾಮಾಯಣ' ಚಿತ್ರದಲ್ಲಿ ರಕುಲ್ ಪ್ರೀತ್ ಸಿಂಗ್ 'ಶೂರ್ಪನಖಿ' ಪಾತ್ರದಲ್ಲಿ ನಟಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡ ಅವರು, ತಮ್ಮ ವೃತ್ತಿಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡರು. ಈ ನಗರಕ್ಕೆ ಮರಳಿ ಬಂದಿರುವುದು ಒಂದು ಸುಂದರ ಅನುಭವವನ್ನು ನೀಡುತ್ತಿದೆ ಎಂದು ಅವರು ಹೇಳಿದರು.

ಬೆಂಗಳೂರು ನನಗೆ ಅತ್ಯಂತ ವಿಶೇಷವಾದ ಸ್ಥಳ, ಏಕೆಂದರೆ ನನ್ನ ಮೊದಲ ಚಲನಚಿತ್ರ ಇಲ್ಲೇ ಆರಂಭವಾಯಿತು ಎಂದು 2009ರಲ್ಲಿ ಬಿಡುಗಡೆಯಾದ ತಮ್ಮ ಚೊಚ್ಚಲ ಕನ್ನಡ ಚಿತ್ರ 'ಗಿಲ್ಲಿ'ಯನ್ನು ನೆನಪಿಸಿಕೊಂಡಿದ್ದಾರೆ. ಆ ಸಮಯದಲ್ಲಿ, ನನಗೆ ನಿಜವಾಗಿಯೂ ನಟಿಯಾಗಬೇಕೆಂಬ ಆಸೆ ಇದೆಯೇ ಎಂದು ಕೂಡ ನನಗೆ ತಿಳಿದಿರಲಿಲ್ಲ. ಕಳೆದ ವರ್ಷಗಳಲ್ಲಿ ಈ ನಗರದಿಂದ ನನಗೆ ಅಪಾರ ಪ್ರೀತಿ ಸಿಕ್ಕಿದೆ. ಇಷ್ಟು ಸಮಯದ ನಂತರ ಇಂದು ಇಲ್ಲಿ ನಿಂತು, 'ರಾಮಾಯಣ'ದಂತಹ ಚಿತ್ರದ ಭಾಗವಾಗಿರುವುದು ನನಗೆ ವಿಶೇಷವಾದ ಭಾವನೆ ನೀಡುತ್ತಿದೆ ಎಂದರು.

ನಿರ್ದೇಶಕ ನಿತೇಶ್ ತಿವಾರಿ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಈ ಮಹತ್ವಾಕಾಂಕ್ಷೆಯ ಚಿತ್ರದ ಭಾಗವಾಗಿರುವುದರ ಕುರಿತು ಮಾತನಾಡಿದ ರಕುಲ್, ಈ ಕಥೆಯು ಇದರಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರಿಗೂ ಭಾವನಾತ್ಮಕ ಮೌಲ್ಯ ಹೊಂದಿದೆ ಎಂದು ತಿಳಿಸಿದರು.

Rakul Preet Singh
Watch | 'ರಾಮಾಯಣ' ಬಜೆಟ್ ಗುಟ್ಟು ಬಿಚ್ಚಿಟ್ಟ ಯಶ್; ಕನ್ನಡದಲ್ಲಿ ಮಾತನಾಡಿದ ರಣಬೀರ್​!

ನಿತೇಶ್ ಸರ್ ಮತ್ತು ನಮಿತ್ ಸರ್ ರೂಪಿಸಿರುವ ಈ ಬೃಹತ್ ಯೋಜನೆಯ ಭಾಗವಾಗಿರುವುದು ನನಗೆ ತುಂಬಾ ಸಂತೋಷದ ವಿಷಯ ಎಂದು ಅವರು ಹೇಳಿದರು. ರಾಮಾಯಣ ನಮ್ಮೆಲ್ಲರ ಹೃದಯಕ್ಕೆ ತುಂಬಾ ಹತ್ತಿರವಾದದ್ದು. ಈ ಚಿತ್ರವನ್ನು ರೂಪಿಸಲು ಸಾಕಷ್ಟು ಕಠಿಣ ಪರಿಶ್ರಮ ಹಾಕಲಾಗಿದೆ.

ರಣಬೀರ್, ಸಾಯಿ ಪಲ್ಲವಿ ಮತ್ತು ನಮ್ಮ ರಾವಣನ ಪಾತ್ರಧಾರಿ ಯಶ್ ಸೇರಿದಂತೆ ಪ್ರತಿಯೊಬ್ಬರೂ ತಮ್ಮ ಅತ್ಯುತ್ತಮ ಕೊಡುಗೆಯನ್ನು ನೀಡಿದ್ದಾರೆ. ನೀವೆಲ್ಲರೂ ಈ ಚಿತ್ರವನ್ನು ಆನಂದಿಸುತ್ತೀರಿ ಮತ್ತು ನಿಮ್ಮ ಪ್ರೀತಿಯನ್ನು ನಮ್ಮ ಮೇಲೆ ಇರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com