ಈ ವರ್ಷ ನನಗೆ 25 ತುಂಬಿದೆ. ನಾನು ನೋಡುವುದಕ್ಕೆ ತುಂಬ ಚಂದವಿದ್ದೇನೆ, ಸ್ಟೈಲ್ ಇದೆ, ಅಭಿರುಚಿ ಇದೆ. ವರ್ಷಕ್ಕೆ ನೂರು ಕೋಟಿ ಇಲ್ಲವೇ ಅದಕ್ಕೂ ಹೆಚ್ಚಿನ ಆದಾಯವಿರುವ ಹುಡುಗನನ್ನು ಮದುವೆ ಆಗಬೇಕು ಎಂಬುದು ನನ್ನ ಆಸೆ
ಶ್ರೀಮಂತ ಗಂಡನನ್ನು ದೊರಕಿಸಿಕೊಳ್ಳುವುದಕ್ಕೆ ಏನು ಮಾಡಬೇಕು ಎಂದು ಸುಂದರ ಹುಡುಗಿಯೊಬ್ಬಳು ಕೇಳಿದ ಪ್ರಶ್ನೆಗೆ ರಿಲಾಯನ್ಸ್ ಸಮೂಹದ ಮುಕೇಶ್ ಅಂಬಾನಿ ನೀಡಿದರು ಎನ್ನಲಾದ ಉತ್ತರವೊಂದು ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ. ಇದು ಯಾರದ್ದೋ ಕಾಲ್ಪನಿಕ ಸೃಷ್ಟಿಯೇ ಆಗಿದ್ದಿರಬಹುದು. ಆದರೆ ಆ ಉತ್ತರ ಮತ್ತು ಅದು ಸಾರುತ್ತಿರುವ ನೀತಿ ಭಲೇ ಆಸಕ್ತಿಕರವಾಗಿದೆ.
ಜನಪ್ರಿಯ ಸಾಮಾಜಿಕ ತಾಣದಲ್ಲಿ ಚೆಲುವಿನ ಖಣಿಯೊಬ್ಬಳು ಹೀಗೊಂದು ವಿಷಯವನ್ನು ಮಂಡಿಸುತ್ತಾಳೆ.
ವಿಷಯ: ಶ್ರೀಮಂತ ಹುಡುಗನನ್ನು ಮದುವೆಯಾಗೋಕೆ ನಾನು ಏನು ಮಾಡಬೇಕು?
ಈ ವೇದಿಕೆಯಲ್ಲಿ ಬಹಳ ಪ್ರಾಮಾಣಿಕವಾಗಿ ಕೆಲ ಮಾತುಗಳನ್ನು ಹೇಳುತ್ತಿದ್ದೇನೆ. ಈ ವರ್ಷ ನನಗೆ 25 ತುಂಬಿದೆ. ನಾನು ನೋಡುವುದಕ್ಕೆ ತುಂಬ ಚಂದವಿದ್ದೇನೆ, ಸ್ಟೈಲ್ ಇದೆ, ಅಭಿರುಚಿ ಇದೆ. ವರ್ಷಕ್ಕೆ ನೂರು ಕೋಟಿ ಇಲ್ಲವೇ ಅದಕ್ಕೂ ಹೆಚ್ಚಿನ ಆದಾಯವಿರುವ ಹುಡುಗನನ್ನು ಮದುವೆ ಆಗಬೇಕು ಎಂಬುದು ನನ್ನ ಆಸೆ. ನಂದು ದುರಾಸೆ ಎಂದು ನೀವೆಲ್ಲ ಅಂದುಕೊಳ್ಳಬಹುದು. ಆದರೆ ಈ ದಿನಗಳಲ್ಲಿ ವರ್ಷಕ್ಕೆ 2 ಕೋಟಿ ರುಪಾಯಿಗಳ ಆದಾಯವಿದ್ದರೂ ಅದು ಕೇವಲ ಮಿಡ್ಲ್ಕ್ಲಾಸ್ ಸಾಧನೆ ಎನ್ನಿಸಿಕೊಳ್ಳುತ್ತಿದೆ. ಹೀಗಾಗಿ ನನ್ನ ಅವಶ್ಯಕತೆಯೇನೂ ತುಂಬ ದೊಡ್ಡದಿಲ್ಲ. ಈ ವೇದಿಕೆಯಲ್ಲಿ ಭಾಗವಹಿಸುತ್ತಿರುವ ಯಾರಾದರೂ ವರ್ಷಕ್ಕೆ 100 ಕೋಟಿ ರು. ವಾರ್ಷಿಕ ಆದಾಯವನ್ನು ಹೊಂದಿರುವವರು ಇದ್ದೀರಾ? ನಿಮಗೆಲ್ಲ ಮದುವೆ ಆಗಿಬಿಟ್ಟಿದೆಯೇ? ಒಂದೊಮ್ಮೆ ಮದುವೆ ಆದವರಾಗಿದ್ದರೂ ನನಗೆ ಸಲಹೆಯನ್ನಾದರೂ ನೀಡಿ. ನಿಮ್ಮಂಥ ಶ್ರೀಮಂತರನ್ನು ಮದುವೆ ಆಗುವುದಕ್ಕೆ ನಾನು ಮಾಡಬೇಕಿರುವುದೇನು? ನಾನು ಸಲ್ಲಾಪಕ್ಕಿಳಿದ ಹುಡುಗರ ಪೈಕಿ ಒಬ್ಬನ ವಾರ್ಷಿಕ ಆದಾಯ 50 ಕೋಟಿ ರುಪಾಯಿಗಳಾಗಿತ್ತು. ಅದೇ ಹೆಚ್ಚಿನದು. ಆದರೆ ನ್ಯೂಯಾರ್ಕ್ ಸಿಟಿ ಗಾರ್ಡನ್ನ ಐಷಾರಾಮಿ ವಾಸ್ತವ್ಯ ಪ್ರದೇಶದಲ್ಲಿ ಮನೆ ಮಾಡುವುದಕ್ಕೆ ಆ ಆದಾಯ ಸಾಕಾಗುವುದಿಲ್ಲ. ಈ ನಿಟ್ಟಿನಲ್ಲಿ ನಾನು ವಿನಮ್ರಳಾಗಿ ನಿಮಗೆ ಕೆಲ ಪ್ರಶ್ನೆಗಳನ್ನು ಕೇಳುತ್ತೇನೆ.