ಯಾಸಿನ್ ಭಟ್ಕಳ್
- ಹೊರಗೆ ರಾಜಾರೋಷವಾಗಿ ಕಚಡಾ ಕೆಲಸ ಮಾಡ್ತಿದ್ದ ನಿನ್ನ ಒದ್ದು 'ಒಳಗಾಕಿದ್ರೂ' ಬುದ್ಧಿ ಬಂದಿಲ್ವಲ್ಲ ನಿಂಗೆ. ನಾನು ಮಾಡಿದ್ದರ ಬಗ್ಗೆ ಪಶ್ಚಾತ್ತಾಪ ಇಲ್ಲ ಅಂದ್ಯಂತೆ, 'ಒಳಗೊಂದು', 'ಹೊರಗೊಂದು' ಮಾತಾಡ್‌ಬಾರ್‌ದು ಅಂತಾನಾ?
ಏನೋಪ್ಪಾ, ಟೈಂಬಾಂಬ್ ಇಡೋದು, ನಮ್ಗೆ ಒಂಥರಾ ಟೈಮ್‌ಪಾಸ್ ಕೆಲ್ಸ ಇದ್ದಂಗೆ, ಅದಕ್ಕೆ ಹಾಗಂದೆ.
- ಅದಕ್ಕೆ ನಿಂಗೆ ಬ್ಯಾಡ್ ಟೈಮ್ ಶುರುವಾಗಿದೆ, ಅದ್ಸರಿ, ಜೈಲಲ್ಲಿ ರಾತ್ರಿ ಪೂರ್ತಿ ನಿದ್ದೆ ಮಾಡ್ಲಿಲ್ವಂತೆ. ಯಾಕೆ ಏನ್ ಮಾಡ್ತಿದ್ದೆ?
ಹಾಡೇಳ್ಕೊತಿದ್ದೆ, 'ತುಂಡ' ಹೈಕ್ಳ ಸಾವಾಸ ಮೂರ್ ಹೊತ್ತು ಉಪವಾಸ' ಅಂತ.
- ಉಪವಾಸ ಏನಿಲ್ಲ ಬಿಡು, ನಿನ್ನಂಥವ್ರಿಗೆ ಜೈಲಲ್ಲಿ ಭರ್ಜರಿ ಬಿರಿಯಾನಿನೇ ಸಿಗುತ್ತೆ, ಆದ್ರೂ ಬಾಂಬ್ ಇಟ್ಟು ಟೈಮ್ ನೋಡ್ತಾ ಕೂರ್ತಿದ್ದೆ ಅಲ್ಲ, ಈಗ ನಿನ್ ಟೈಮ್ ಎಷ್ಟಿದೆ ಅಂತ ಕೌಂಟ್ ಡೌನ್ ಮಾಡು..
ನಿಮ್ ಪೊಲೀಸ್ರು, ಕೌಂಟ್ ಡೌನ್ ಮಾಡೋಕಾದ್ರೂ ಟೈಮ್ ಕೊಡ್ತಾರಾ ಅಥವಾ ಎನ್‌ಕೌಂಟರ್ ಮಾಡಿ ಬಿಸಾಕ್ತಾರಾ ಅಂತ ಭಯ ಆಗ್ತಿದೆ.
- ಓಹೋ ಭಯ,... ಸರಿ, ಭಯ ಅಂದಿದ್ದಕ್ಕೆ ಹೇಳ್ತೀನಿ, ನಿಮ್ 'ತುಂಡ' ಬಾಯಿಬಿಟ್ಟಿರೋದೇ ಆಶ್ಚರ್ಯ ಅಲ್ವಾ, ಟೆರರಿಸ್ಟ್‌ಗಳಿಗೆ ನಿಯತ್ ಜಾಸ್ತಿ, ಅವರ ಬಾಯಿಂದ ಏನೂ ಬರಲ್ಲ ಅಂತಾರಲ್ಲ, ಅದಕ್ಕೆ ಹೇಳ್ದೆ...
ಅಯ್ಯೋ, ತುಂಡಾ ಮೋಚ್ತು, ಪೊಲೀಸ್ ಒದೆ ಬಿದ್ರೆ, ಬಾಯಿಂದ ಏನು, ಸತ್ಯ ಎಲ್ಲೆಲ್ಲಿಂದನೋ ಹೊರಗೆ ಬರುತ್ತೆ.
- ಬಾಂಬ್ ಬ್ಲಾಸ್ಟ್ ಎಲ್ಲ ಕಾಮನ್ ವಿಷ್ಯ ನಿಂಗೆ, ಆದ್ರೆ ಪೊಲೀಸರತ್ರ, ನಾನು ಟೆರರಿಸ್ಟ್ ಅಲ್ಲ, ಡಾಕ್ಟರು ಅಂತ ಆ್ಯಕ್ಟ್ ಮಾಡಿದ್ಯಲ್ಲ ಯಾಸೀನ್, ನೀನ್ ಯಾವ್ ಸೀಮೆ ಗಂಡಸೋ ಏನೋ. ಗಂಡಸು ಅಂತ ಪ್ರೂವ್ ಮಾಡ್ಕೊಳೋಕೆ, ಡ್ಯೂಪ್ಲಿಕೇಟ್ ಡಾಕ್ಟರ್ ಸರ್ಟಿಫಿಕೇಟ್ ಏನಾದ್ರೂ ಇಟ್ಕೊಂಡಿದ್ಯಾ?
ಥುತ್...ನೀನ್ ಕೇಳೋ ಪ್ರಶ್ನೆಗಳಿಗಿಂತ ಪೊಲೀಸ್ರು ಕೇಳೋ ಪ್ರಶ್ನೆಗೆ ಉತ್ತರ ಹೇಳೋದೆ ಸುಲಭ...ನೋ ಕಾಮೆಂಟ್ಸ್, ಜೈಲಿಗೆ ಹೋಗೋಕೆ ಲೇಟ್ ಆಗ್ತಿದೆ..ಬೈ ಬೈ..
(ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
ಡಸ್ಟ್‌ನಿಂದ ಮನುಷ್ಯನ ಆರೋಗ್ಯದ ಮೇಲಾಗುವ ತೊಂದರೆಗಳು ಅಷ್ಟಿಷ್ಟಲ್ಲ. ಧೂಳ್ ಮಗಾ ಧೂಳ್ ಎಂದರೆ ಕೆಲವರಿಗೆ ಅಲ್ಲಿ ತೊಂದರೆ ಕಟ್ಟಿಟ್ಟ ಬುತ್ತಿ. ಸ್ವಲ್ಪ ಹೊತ್ತು ದೂಳಿನ ವಾತಾವರಣದಲ್ಲಿ ತಿರುಗಾಡಿ ಬಂದರೆ ಅಲರ್ಜಿ ಕಥೆಗಳು ಶುರುವಾಗುತ್ತವೆ. ಆದರೆ ಕೆಲವೊಂದು ಎಚ್ಚರ ವಹಿಸಿ, ಈ ಡಸ್ಟ್ ಅಲರ್ಜಿಯನ್ನು ಜಸ್ಟ್ ಅವಾಯ್ಡ್ ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿ ಕೆಲವು ಮಾಹಿತಿಗಳಿವೆ.
yhoo.it/18sKePg bit.ly/1e0ACkK
bit.ly/12Xg7kd bit.ly/18eoDeE
bit.ly/179BVZo
ಹರಿ-ಕಥೆ
65 ವರ್ಷದ ಖೇಮುನ ಹೆಂಡ್ತಿಗೆ ಖೇಮು ಕುಡಿಯೋದು ಇಷ್ಟ ಇಲ್ಲ. ಆದರೂ ಖೇಮು ಬಿಡಲ್ಲ. ಹೆಂಡ್ತಿಗೆ ಗೊತ್ತಾಗದಂತೆ ಕುಡಿಯೋ ಕಾಯಕ ಮುಂದುವರಿಸುತ್ತಲೇ ಇದ್ದ. ಕುಡಿದು ರಾತ್ರಿ ತಡವಾಗಿ ಬಂದರೂ ಹೆಂಡತಿಗೆ ಗೊತ್ತಾಗದಂತೆ ಕಳ್ಳ ಹೆಜ್ಜೆ ಇಟ್ಕೊಂಡು ರೂಮು ಸೇರಿ ಮಲಗಿಬಿಡುತ್ತಿದ್ದ. ಅವತ್ತೂ ಕೂಡ ಖೇಮು ಬಾರಿಗೆ ಹೋಗಿದ್ದ. ಒಂದೆರಡು ಪೆಗ್ಗಿಗೆ ಮುಗಿಸಿಬಿಡಬೇಕು ಎಂದುಕೊಂಡವನು ಐದು ಪೆಗ್ಗು ದಾಟಿದ. ಎದ್ದು ಹೊರಡುವ ಹೊತ್ತಿಗೆ ಫುಲ್ ಟೈಟ್. ಎದ್ದು ನಿಂತವ ಧೊಪ್ಪನೆ ನೆಲಕ್ಕೆ ಬಿದ್ದ. ಓಹೋ, ಬಹಳ ಟೈಟ್ ಆಗಿದೀನಿ ಅಂದ್ಕೊಂಡ. ಮತ್ತೆ ಆ ಕಡೆ ಈ ಕಡೆ ನೋಡಿ, ಸದ್ಯ ಯಾರೂ ನೋಡಲಿಲ್ಲ ಅಂತ ಮತ್ತೆರಡು ಹೆಜ್ಜೆ ಇಡಲು ಟ್ರೈ ಮಾಡಿದ. ಇಟ್ಟ. ಮತ್ತೆ ಬಿದ್ದ. ಬಿದ್ದವನಿಗೆ ಮತ್ತೆ ಏಳುವುದು ಕಷ್ಟ ಎನಿಸಿತು. ಹಾಗೆಯೇ ನೆಲದ ಮೇಲೆ ತೆವಳಿಕೊಂಡು ಬಾರ್‌ನ ಬಾಗಿಲವರೆಗೂ ಬಂದ. ಹೊರಗೆ ಎದ್ದು ನಿಂತು 'ಆಟೋ' ಎಂದು ಕರೆಯುವ ಹೊತ್ತಿಗೆ ಮತ್ತೆ ಧೊಪ್ಪನೆ ಬಿದ್ದ. ಆಟೋರಾಜ ಕೆಳಗೆ ಬಿದ್ದ ಇವನನ್ನು ನೋಡಿ ಅಯ್ಯೋ ಪಾಪ ಅಂತ ಎತ್ತಿಕೊಂಡು ಆಟೋದಲ್ಲಿ ಕೂರಿಸಿ ಮನೆವರೆಗೂ ಬಿಟ್ಟ. ಆಟೋಗೆ ದುಡ್ಡು ಕೊಟ್ಟು, ಕೆಳಗೆ ಇಳಿಯುತ್ತಾ ನೆಲಕ್ಕೆ ಕಾಲಿಟ್ಟ ಖೇಮು ಮತ್ತೆ ಗೇಟಿನ ಬಳಿಯೇ ಧೊಪ್ಪನೆ ಬಿದ್ದ. ಮತ್ತೆ ಬಾರಿನಲ್ಲಿ ಮಾಡಿದಂತೆ, ಏಳುವ ಪ್ರಯತ್ನ ಮಾಡದೆ ತೆವಳಿಕೊಂಡು ಮನೆ ಬಾಗಿಲ ಬಳಿ ಹೋದ. ಅಲ್ಲಿಂದ ಎದ್ದು ತನ್ನ ಬೆಡ್‌ರೂಮ್‌ನ ಕಡೆ ಎರಡು ಹೆಜ್ಜೆ ಹಾಕಿ ಮತ್ತೆ ಬಿದ್ದವನು ಈ ಬಾರಿ ಸೀದಾ ಹಾಸಿಗೆಯ ಮೇಲೆಯೇ ಬಿದ್ದದ್ದರಿಂದ ಸಮಸ್ಯೆ ಆಗಲಿಲ್ಲ. ನೆಮ್ಮದಿಯಾಗಿ ಮಲಗಿಕೊಂಡ. ಬೆಳಗ್ಗೆ ಆಯ್ತು. ಹೆಂಡತಿ ಇವನನ್ನು ಎಬ್ಬಿಸುತ್ತಾ ಫುಲ್ ಗಲಾಟೆ ಮಾಡತೊಡಗಿದಳು 'ಎಷ್ಟ್ ಸಲ ಹೇಳಿದ್ರೂ ಮತ್ತೆ ಮತ್ತೆ ಕುಡಿಯೋಕೆ ಹೋಗ್ತೀರ ನೀವು, ನಿಮಗೆ ಬುದ್ಧಿ ಹೇಳಿ ಸಾಕಾಯ್ತು, ನಂಗೆ'. ಖೇಮುಗೆ ಆಶ್ಚರ್ಯ, 'ನಾನು ಹೋಗಿದ್ದು, ಕುಡಿದಿದ್ದು ನಿಂಗೆ ಹೆಂಗೆ ಗೊತ್ತಾಯ್ತು?' ಅಂತ ಕೇಳಿದ. ಹೆಂಡತಿ ಹೇಳಿದಳು 'ಈಗ ತಾನೆ ಬಾರ್‌ನಿಂದ ಫೋನ್ ಬಂದಿತ್ತು. ನಿಮ್ಮ ಗಂಡ ವೀಲ್ ಛೇರ್ ಇಲ್ಲೇ ಬಿಟ್ ಹೋಗಿದಾರೆ ಅಂತ'.
ಸ್ಯಾಂಡಲ್‌ವುಡ್
ಕನ್ನಡ ಚಿತ್ರಗಳಲ್ಲಿ ರಿಪೀಟ್ ಟೈಟಲ್‌ಗಳಷ್ಟೇ ಅಲ್ಲ, ರಿಪೀಟ್ ಕಥೆಗಳೂ ಹೆಚ್ಚುತ್ತಿವೆ ಎನ್ನಬಹುದು. ಕಳೆದ ವಾರ ಬಿಡುಗಡೆಯಾಗಿ ವಿಕ್ಟರಿಯ ಹಾದಿಯಲ್ಲಿರುವ ವಿಕ್ಟರಿಯಲ್ಲಿ ಗಣೇಶನ ಗಲಾಟೆ ಕೇಳಿಸಿತ್ತು. ಈ ವಾರ ಬಿಡುಗಡೆಯಾಗಿರುವ ಶತ್ರು ಚಿತ್ರ ಯಥಾವತ್ ಅದೇ ಕಥೆ ಅಲ್ಲದಿದ್ದರೂ ಸಿಂಗಂ ಅರ್ಥಾತ್ ಕೆಂಪೇಗೌಡನ ನೆರಳಿನಲ್ಲೇ ಸಾಗುತ್ತದೆ. ಅದರ ಜೊತೆಗೆ ವರ್ಷಗಳ ಹಿಂದೆ ಶುರುವಾಗಿದ್ದ ಮಂದಹಾಸ ಚಿತ್ರದ್ದೂ ರಿಪೀಟ್ ಕಥೆಗಳ ವಿಷಯದಲ್ಲಿ ಹೆಚ್ಚು ಕಮ್ಮಿ ಇದೇ ಕಥೆ. ಸುಮಾರು 3 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಅಂತರಾತ್ಮ ಚಿತ್ರಕ್ಕೂ ಮಂದಹಾಸಕ್ಕೂ ಕಥೆಯ ವಿಷಯದಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಪ್ರೇಮಿಯೊಬ್ಬ ದೆವ್ವವಾದ ಮೇಲಿನ ಮಿಸ್ಟರಿ ಕಥೆ ಇದು. ಮಂದಹಾಸದ್ದೂ ಇದೇ ಮಿಸ್ಟರಿ ಕಥೆಯಾದ್ದರಿಂದ ಮಿಸ್ಟರಿ ರಿಪೀಟ್ಸ್ ಎನ್ನಬಹುದು. ಮಂದಹಾಸ ನೋಡಿ, ಸಿನಿಮಾ ಚೆನ್ನಾಗಿದೆ ಆದ್ರೆ ಇದು ಸಿನಿಮಾ ಆರಂಭದ ಸಮಯದಲ್ಲೇ ಬರಬೇಕಿತ್ತು ಎಂದವರೂ ಉಂಟು. ಆದರೆ, ಆಗಲೇ ಬಂದಿದ್ರೆ ಒಂದೇ ಕಥೆಯ ಎರಡು ಚಿತ್ರಗಳು ಬಂದ ಹಾಗಾಗ್ತಿತ್ತು. ಈ ಮೂರು ವರ್ಷದ ಗ್ಯಾಪ್ ನಂತರ ಬಂದಿದ್ದು ಒಂಥರಾ ಒಳ್ಳೇದೇ ಬಿಡಿ ಎನ್ನುವುದು ಗಾಂಧಿನಗರದ ಮರೆಗುಳಿ ಪ್ರೊಫೆಸರ್‌ನ ಮಾತು.
ಡಬ್ಕುಡಬಲ್ ತುದಾಂಡಲ್...
- ಜಯಮ್ಮನ ಮಗ ಸಿನಿಮಾ ಹಿಟ್ ಆಗಿ ಅದರ ಸೆಕೆಂಡ್ ಪಾರ್ಟ್ ಮಾಡಿದ್ರೆ ಸಿನಿಮಾ ಹೆಸರು ಏನಿಡಬಹುದು?
ಸೆಕೆಂಡ್ ಪಾರ್ಟ್ ಆಗಿರೋದ್ರಿಂದ - 'ಜಯಮ್ಮನ ಎರಡನೇ ಮಗ'
ಮಾಟ ಮಂತ್ರದ ಕಾನ್ಸೆಪ್ಟ್‌ನಿಂದ ಸಕ್ಸಸ್ ಸಿಕ್ಕಿರೋದ್ರಿಂದ -'ಕೋಟಿ ವಿದ್ಯೆಗಳಲ್ಲಿ ಮಾಟ ವಿದ್ಯೆಯೇ ಮೇಲು'
ನಿರ್ಮಾಪಕ ವಿಜಯ್ ಮತ್ತು ವಿತರಕ ಜಯಣ್ಣ ಇಬ್ಬರೂ ಸೇರಿ ಸಿನಿಮಾ ನಿರ್ಮಾಣ ಮಾಡಿದರೆ - 'ಜಯಣ್ಣ'ನ ಮಗ'
***
ಮಗಳು ಯಾವಾಗ್ಲೂ ಲ್ಯಾಂಡ್‌ಲೈನ್ ಫೋನ್‌ನಲ್ಲೇ ಇರ್ತಾಳೆ, ಅದರಿಂದ ತನಗೆ ಬರೋ ಕರೆಗಳು ತಪ್ಪಿ ಹೋಗ್ತಿವೆ ಅಂತ ಅಪ್ಪ ಮಗಳಿಗೆ ಮೊಬೈಲ್ ಫೋನ್ ಕೊಡಿಸಿದ. ಮೂರುದಿನ ಎಲ್ಲಾ ಚೆನ್ನಾಗಿತ್ತು. ಆದ್ರೆ ನಾಲ್ಕನೇ ದಿನ ಮಗಳು ಮತ್ತೆ ಲ್ಯಾಂಡ್‌ಲೈನ್‌ನಲ್ಲೇ ಬ್ಯುಸಿಯಾಗಿದ್ದಳು. ಅಪ್ಪನಿಗೆ ಸಿಟ್ಟು ಬಂದು 'ನಿಂಗೆ ಅಂತ ಬೇರೆ ಫೋನ್ ಕೊಡಿಸಿಲ್ವಾ, ಈಗ್ಲೂ ಇದರಲ್ಲೇ ಯಾಕೆ ಮಾತಾಡ್ತೀಯಲ್ಲ' ಅಂತ ಕೇಳ್ದ. ಅದಕ್ಕೆ ಮಗಳು ಹೇಳಿದ್ಳು, 'ನನ್ ಫೋನ್‌ಗೆ ಒಂದ್ ಇಂಪಾರ್ಟೆಂಟ್ ಕಾಲ್ ಬರೋದಿದೆ ಪಪ್ಪಾ, ಅದಕ್ಕೆ ಈ ಫೋನ್‌ನಲ್ಲಿ ಮಾತಾಡ್ತಿದ್ದೆ'.
- ಹೆಂಗಸರಿಗೆ ಚಪ್ಪಲಿ ಅಂದ್ರೆ ಯಾಕೆ ಅಷ್ಟು ಇಷ್ಟ
ಎಷ್ಟೇ ದಪ್ಪ ಆದ್ರೂ ಚಪ್ಪಲಿ ಮಾತ್ರ ಫಿಟ್ ಆಗಲ್ಲ ಅನ್ನೋ ಪ್ರಾಬ್ಲಂ ಇರಲ್ಲ.
- ಬುಕ್‌ಮಾರ್ಕರ್‌ಗಳಿಗೆ 'ಅಚ್ಚ' ಕನ್ನಡದಲ್ಲಿ ಏನೆನ್ನಬಹುದು
'ಪುಟ'ಗೋಸಿ
- ಹರಿ
harikannadaprabha@gmail.com