Hmmm... ಪಾಂಚ್, ಸಲಿಂಗಿ ಸಂದರ್ಶನ

ಹೈ ಕೋರ್ಟ್ 'ವರ' ಕೊಟ್ರೂ, ಸುಪ್ರೀಂ ಕೋರ್ಟ್ ಕೊಡ್‌ಲಿಲ್ವಲ್ಲ?
Updated on: 

-ಪಾಪ, ನಿಮಗೆ, ಹೈ ಕೋರ್ಟ್ 'ವರ' ಕೊಟ್ರೂ, ಸುಪ್ರೀಂ ಕೋರ್ಟ್ ಕೊಡ್‌ಲಿಲ್ವಲ್ಲ?
ಹೌದು ನೋಡಿ, ಈ ಕೋರ್ಟ್‌ಗಳು ನಮ್ ಜೊತೆನೂ 'ಡಬಲ್‌' 'ಗೇ'ಮ್ ಆಡ್ತಿವೆ. ಇದ್ರಲ್ಲೇನ್ ತಪ್ಪು?. 'ಆದ್‌ಮೀ ಹೂ ಆದ್‌ಮೀ ಸೆ ಪ್ಯಾರ್ ಕರ್‌ತಾ ಹೂ' ಅಂತ ಆ ಕಾಲದಲ್ಲೇ ಒಂದ್ ಹಾಡೂ ಬಂದಿತ್ತು, ಕನ್ನಡದಲ್ಲೂ 'ಹುಡುಗಾ, ಹುಡುಗ' ಅಂತ ಹಾಡಿದೆ, ಗೊತ್ತಾ...ನಮ್ ಕಷ್ಟ ಯಾರ್ಗೂ ಅರ್ಥ ಆಗಲ್ಲ..

-ರೀ, ಅವು ಆ ಥರಾ ಹಾಡುಗಳಲ್ಲ ಸುಮ್ನೆ ಇರ್ರೀ, ಹೋಗ್ಲಿ ಈ ಕಾಲದಲ್ಲೂ, ನೀವೇ ಒಂದ್ ಸಿನಿಮಾ ಮಾಡ್‌ಬಿಡಿ, ಅರ್ಥ ಆಗದೇ ಇದ್ದಾಗ್ಲೂ ನಮ್ ಜನ ಅರ್ಥ ಆಯ್ತು ಅನ್ನೋದು ಸಿನಿಮಾ ನೋಡಿದಾಗ ಮಾತ್ರ..
ಹೌದು, ಒಂದ್ ಸಿನಿಮಾ ಪ್ರೊಡ್ಯೂಸ್ ಮಾಡೋಣ ಅಂತಿದೀವಿ. 'ಜೊತೆ ಜೊತೆ'ಗೇ' ಅಂತ ಸಿನಿಮಾ ಹೆಸರು, ಅಡಿ ಬರಹ 'ಹೆಣ್ ಹೆಣ್ಣ ಸಲಿ'ಗೇ'.

-ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಎಲ್ಲರದ್ದೂ 'ಮಿಶ್ರ' ಪ್ರತಿಕ್ರಿಯೆ ಇದೆ. ಮುಂದೆ ಏನ್ ಮಾಡ್‌ಬೇಕಂತಿದೀರಾ?
'ಕಾಫಿ ವಿತ್ ಕರಣ್‌' ಕಾರ್ಯಕ್ರಮದಲ್ಲಿ ಈ ಬ'ಗ್ಗೇ' ಚರ್ಚೆ ಮಾಡ್ತೀವಿ. ಕರಣ್ ಜೋಹರ್‌'ಗೇ' ಜೈ, ಶಾರೂಖ್ ಖಾನ್‌'ಗೇ' ಜೈ
-ಸರಿ, ಸರಿ, ನೀವ್ಯಾಕೆ ಹಿಂಗಾದ್ರಿ, ಆಮೇಲೆ ಸಲಿಂಗಿಗಳಲ್ಲಿ ಲಿಂಗಭೇಧ ಬಿಟ್ಟು ನೋಡೋದಾದ್ರೆ, ನಿಮ್ ಕಡೆ ಯಾವುದಾದ್ರೂ ಹೆಣ್ಣು, ಹೆಣ್ಣು ಸಂಬಂಧಗಳೂ ಇವೆಯಾ?
ಅದೇನಾಯ್ತು ಅಂದ್ರೆ, ಅಪ್ಪ ಅಮ್ಮ ನನ್ನ ಹೆಣ್ಣು ನೋಡೋಕೆ ಅಂತ ಕರಕೊಂಡು ಹೋಗಿದ್ರು, ಆದ್ರೆ ನನಗೆ ಹುಡುಗೀಗಿಂತ, ಹುಡುಗಿ ತಮ್ಮನೇ ಇಷ್ಟ ಆದ. ಹಂಗಾಗಿ, ಈಗ ನನ್ನ ತಂಗೀನ ಅವರ ಹುಡುಗೀಗೆ ತಂದ್ಕೊಬೇಕು ಅಂದ್ಕೊಂಡಿದೀವಿ.

-ಕರ್ಮಕಾಂಡ,  ಅದ್ಸರಿ, ನಿಮ್ಮಣ್ಣ ಒಬ್ಬ ಇರ್‌ಬೇಕಲ್ಲ, ಅವರ ಮದುವೆ ಆಯ್ತಾ?
ಅವನು ಸರಿ ಇಲ್ಲ ರೀ, ಹುಡುಗ ಆಗಿ ಒಂದು ಹುಡುಗಿ ಜೊತೆ ಅಫೇರ್ ಇಟ್ಕೊಂಡಿದ್ದ, ಮದುವೆನೂ ಆದ..
ಥೂ ಅಸಹ್ಯ..ಹಾಳಾಗೋಗ್ಲಿ ಬಿಡಿ.

ಒಮ್ಮೆ ಭೇಟಿ ಕೊಡಿ

ಕರಕುಶಲ ಕಲೆಗಳಲ್ಲಿ ಪೇಪರ್ ಬ್ಯಾಗ್ಸ್ ಮಾಡೋದು ತುಂಬಾನೇ ಸಿಂಪಲ್ ನಿಜ. ಆದರೆ ಅದಕ್ಕೂ ಕೂಡ  ಒಂದಿಷ್ಟಾದರೂ ಪೇಪರ್ ವರ್ಕ್‌ನ ಅಗತ್ಯ ಇದೆ. ವೇಸ್ಟ್ ಪೇಪರ್ ಮತ್ತು ಫ್ಯಾನ್ಸಿ ಪೇಪರ್‌ಗಳನ್ನು ಬಳಸಿಕೊಂಡು ಚಿಕ್ಕ, ಚೊಕ್ಕ ಮತ್ತು ಉಪಯುಕ್ತ ಬ್ಯಾಗ್‌ಗಳನ್ನು ಮಾಡೋದು ಹೇಗೆ ಎಂಬ ಮಾಹಿತಿ ಇಲ್ಲಿನ ವೆಬ್‌ಸೈಟ್‌ಗಳಲ್ಲಿದೆ.
n bit.ly/18rHh7H n bit.ly/1c2R2Kz n bit.ly/18Ld4OV n bit.ly/JiYK6G n bit.ly/192eLKL

ಹರಿ-ಕಥೆ
ಖೇಮುಗೆ ತನ್ನ ಹೆಂಡತಿ ಖೇಮುಶ್ರೀ ಕಂಡರೆ ಸಖತ್ ಪ್ರೀತಿ. ಆರೇಂಜ್ಡ್ ಮ್ಯಾರೇಜ್ ಆದ್ರೂ ಖೇಮುಗೆ ಮದ್ವೆ ಆದ್‌ಮೇಲೆ ಲವ್ ಆದಂಗಿತ್ತು ಅವ್ರ್ ಸಂಸಾರ. ಹಂಗಿದ್‌ಮೇಲೆ ಮಕ್ಕಳಾಗೋಕ್ ಎಷ್ಟ್ ದಿನ ಹೇಳಿ. ಸರಿ, ಖೇಮು ಹೆಂಡ್ತಿ ಒಂದಿನ ಬಂದು 'ನೀವು ಅಪ್ಪ ಆಗ್ತಾ ಇದೀರಾ' ಅಂದ್ಳು. ಖೇಮು ಪುಲ್ ಕುಷ್. ಅವತ್ತಿಂದ ಹೆಂಡ್ತಿ ಮೇಲೆ ಇನ್ನೂ  ಪ್ರೀತಿ ಜಾಸ್ತಿ ಆಯ್ತು. ಜೊತೆಗೆ ಏನಾಗುತ್ತೋ ಏನೋ ಅಂತ ಟೆನ್‌ಷನ್ ಕೂಡ ಶುರುವಾಯ್ತು. ಹೆಂಡತಿಗೆ ಒಂಭತ್ತು ತಿಂಗಳು ತುಂಬೋವರೆಗೂ ಕಣ್ಣಲ್ಲಿ ಕಣ್ಣಿಟ್ಕೊಂಡ್ ನೊಡ್ಕೊಂಡ. ಇನ್ನೇನು ಹೆರಿಗೆ ನೋವು ಕಾಣಿಸಿಕೊಳ್ಳೋ ಸಮಯ. ಒಂದಿನ ನೋವು ಕಾಣಿಸಿಕೊಂಡೇ ಬಿಡ್ತು. ಅವಳ ನೋವು ನೋಡಿ ಖೇಮುಗೆ ಮತ್ತೆ ಗಾಬರಿ. ತಕ್ಷಣವೇ ಆಸ್ಪತ್ರೆಗೆ ಕರಕೊಂಡು ಹೋದ. ಸಂಜೆ ಖೇಮುಶ್ರೀಯನ್ನು ಆಡ್ಮಿಟ್ ಮಾಡಿಕೊಂಡ ಡಾಕ್ಟರ್ ಬಹುಷಃ ಇನ್ನೊಂದು ಗಂಟೆಯ ಒಳಗೆ ಹೆರಿಗೆ ಆಗುತ್ತೆ ಅಂದ್ರು. ಹೊರಗೆ ಕೂತ ಖೇಮುಗೆ ಬೆವರು ಸುರೀತಿತ್ತು. ಎದೆ ಢವ ಢವ ಅಂತ ಹೊಡಕೋತಿತ್ತು. ನಿಮಿಷಕ್ಕೊಮ್ಮೆ ಬಾಗಿಲ ಸಂದಿಯಿಂದ ಇಣುಕಿ ನೋಡಿ ಬರ್ತಾ ಇದ್ದ. ಟೆನ್‌ಶನ್ ಕಡಿಮೆ ಮಾಡಿಕೊಳ್ಳೋಕೆ ಆಗದೆ ಅಲ್ಲೇ ಇದ್ದ ಮಹಡಿ ಮೆಟ್ಟಿಲು ಹತ್ತಿ ಇಳಿಯುತ್ತಿದ್ದ. ಕೊನೆಗೂ ಮಗು ಅಳೋ ಸೌಂಡ್ ಕೇಳಿಸ್ತು. ನರ್ಸ್ ಬಂದು ಖೇಮುಗೆ ಹೇಳಿದ್ಳು, 'ಕಂಗ್ರಾಟ್ಸ್ ನಿಮಗೆ ಹೆಣ್ಣು ಮಗು ಆಗಿದೆ'. ಅದನ್ನು ಕೇಳಿದ ಖೇಮು ನಿರಾಳವಾಗಿ ಉಸಿರಾಡ್ತಾ ಹೇಳಿದ 'ಅಬ್ಬಾ, ಥ್ಯಾಂಕ್ ಗಾಡ್..ಸದ್ಯ, ಹೆಣ್ಣು ಮಗು ತಾನೇ...ಗಂಡು ಮಗು ಏನಾದ್ರೂ ಆಗಿದ್ದಿದ್ರೆ ನಾನು ಇಷ್ಟು ದಿನ ಅನುಭವಿಸಿದ ಭಯಾನಕ ಕಷ್ಟನಾ ಮುಂದೆ ದೊಡ್ಡೋನಾದ್ಮೇಲೆ ಅವನೂ ಅನುಭವಿಸಬೇಕಾಗ್ತಿತ್ತು'.

ಸ್ಕ್ಯಾಂಡಲ್‌ವುಡ್
ಮೂರು ಹೊತ್ತು ತೆಲುಗು, ತಮಿಳು, ಹಿಂದಿ ಭಾಷೆಗಳ ಚಿತ್ರಗಳನ್ನು ಪ್ರಮೋಟ್ ಮಾಡುತ್ತ, ಹೆಸರಿಗೆ ಮಾತ್ರ ಕನ್ನಡದ್ದು ಎನ್ನುವಂತಿರುವ 'ಲೋಕಲ್‌' ಚಾನೆಲ್ ಒಂದು ಶಿವರಾಜ್‌ಕುಮಾರ್ ಅವರ ಭಜರಂಗಿ ಚಿತ್ರದ ಒಂದು ಝಲಕ್ ಅನ್ನೂ ಪ್ರಸಾರ ಮಾಡ್ತಿಲ್ಲವಂತೆ. ಮೊನ್ನೆ ಗುರುವಾರ ಕರ್ನಾಟಕದಲ್ಲಿ 'ಭಜರಂಗಿ' ಹವಾ ನಡೆಯುತ್ತಿದ್ದರೆ ಅದಕ್ಕೆ ಜಾಣಕುರುಡು ಪ್ರದರ್ಶಿಸಿ ರಜನೀಕಾಂತ್ ರಂಜನೆಗೆ ಮಣೆ ಹಾಕಿತ್ತು ಈ ಚಾನೆಲ್. ತೆಲುಗು, ತಮಿಳು ಚಿತ್ರರಂಗದ ಇನ್ನೂ ಕಣ್ಣು ಬಿಟ್ಟಿರದ ಕೂಸುಗಳ ಚಿತ್ರಗಳನ್ನೂ ಸೂಪರ್‌ಮ್ಯಾನ್‌ಗಳಂತೆ ಬಿಂಬಿಸುವ ಈ ಚಾನೆಲ್, ಭಜರಂಗಿಯ ಪ್ರಮೋಷನ್ ಪ್ಯಾಕೇಜ್ ವಿಚಾರದಲ್ಲಿ ತಕರಾರು ಮಾಡಿಕೊಂಡು 'ಇನ್ಮೇಲೆ ಶಿವರಾಜ್‌ಕುಮಾರ್ ಸಿನಿಮಾಗಳನ್ನೇ ಬ್ಯಾನ್ ಮಾಡ್ತೀವಿ' ಎಂದೆಲ್ಲ ಪುಂಗಿ ಊದುತ್ತಿದೆಯಂತೆ ಎಂಬುದು ವಿಶೇಷ. ಮ್ಯಾನೇಜ್‌ಮೆಂಟ್ ಮತ್ತು ಚಿತ್ರತಂಡದ ಜೊತೆಗಿನ ಮನಸ್ತಾಪಕ್ಕಾಗಿ ಶಿವರಾಜ್‌ಕುಮಾರ್ ಅವರನ್ನೇ ಬ್ಯಾನ್ ಮಾಡ್ತೀವಿ ಎನ್ನುವ ಈ ಚಾನೆಲ್ ಧೋರಣೆ ನೋಡಿ, ಟಿವಿ ನೋಡೋ ಜನ ಶಿವರಾಜ್‌ಕುಮಾರ್‌ರಂಥ ಸಿನಿಮಾ ನಟರ ಮುಖ ಬಿಟ್ಟು, ಇನ್ನೇನು ಈ ಚಾನೆಲ್ ಮ್ಯಾನೇಜ್‌ಮೆಂಟ್‌ನವರ ಮುಖ ನೋಡೋಕೆ ಇಷ್ಟ ಪಡ್ತಾರಾ ಅಂತ ಗಾಂಧಿನಗರ ಕೇಳ್ತಾ ಇರೋದು ಈ ಚಾನೆಲ್‌ನಲ್ಲಿ ಸದ್ಯಕ್ಕೆ ಇನ್ನೂ ಬ್ರೇಕಿಂಗ್ ನ್ಯೂಸ್ ಆಗಿಲ್ಲ.

ಡಬ್ಕುಡಬಲ್ ತುದಾಂಡಲ್...
ಖೇಮು ಡೌಟು: 'ಕ್ಲೋಸ್‌' ಫ್ರೆಂಡ್ಸ್ ಅಂದ್ರೆ ಫ್ರೆಂಡ್ಸ್ ಕಥೆ ಮುಗಿಸಿಬಿಡೋದು ಅಂತಾನಾ?

ಬಾಯ್‌ಫ್ರೆಂಡ್ ಜೊತೆ ನಿಂತಿರೋ ಹುಡುಗಿ ಮತ್ತು ಸೂರ್ಯ ಇಬ್ಬರೂ ಒಂದೇ. ಒಂದೆರಡು ಸೆಕೆಂಡ್ ನೋಡಬಹುದು ಅಷ್ಟೆ. ಗುರಾಯಿಸಬೇಕು ಅಂದ್ರೆ ಕೂಲಿಂಗ್ ಗ್ಲಾಸ್ ಹಾಕ್ಕೊಂಡಿರಬೇಕು.

ವಿಚಿತ್ರ: ದಿಲ್ಲಿಯಲ್ಲಿ, ಯಾರಿಗೂ ಬಹುಮತ ಇಲ್ಲ. ಅದಕ್ಕೆ ಕಾರಣ 'ಆಪ್‌' ಪಕ್ಷ. ಅದಕ್ಕೇ ಇರಬೇಕು, ಅಲ್ಲಿ ಸರ್ಕಾರ ರಚಿಸೋಕೆ ಎಲ್ಲರೂ 'ಪೆಹಲೇ ಆಪ್‌' ಅಂತಿದಾರೆ.

ಆಮ್ ಆದ್ಮೀ ಪಾರ್ಟಿ ಕಂಡ್ರೆ ಕಾಂಗ್ರೆಸ್‌ಗೆ ಆಗಲ್ಲ. ಯಾಕೆ?
ಯಾಕಂದ್ರೆ ಅದು 'ಆದ್ಮೀ' ಪಕ್ಷ, ಪೊರಕೆ ಗುರುತಿದ್ರೂ 'ಔರತ್‌' ಪಕ್ಷ ಅಲ್ಲ.

ಬಹುಮತ ಇಲ್ಲದ ಆಮ್‌ಆದ್ಮೀ ಪಕ್ಷ ಸರ್ಕಾರ ರಚಿಸೋ ಪ್ರಯತ್ನ ಮಾಡಿದ್ರೆ ಅದು ಆಮ್‌ಕೇ ವಾಸ್ತೇ ಪ್ರಯತ್ನ.

ಕಾಂಗ್ರೆಸ್ ಪಕ್ಷದ ಜೊತೆ ಆಪ್ ಪಕ್ಷ ಸಮ್ಮಿಶ್ರ ಸರ್ಕಾರ ಮಾಡಿದ್ರೆ 'ಕೈ'ಯಲ್ಲಿ 'ಪೊರಕೆ' ಹಿಡ್‌ಕೊಂಡ್ ಆಡಳಿತ ನಡೆಸಬಹುದು

'ಹುಡುಗ, ಹುಡುಗಿ' ಅಂತ ಸಿನಿಮಾ ಮಾಡಿದ್ದ ಇಂದ್ರಜಿತ್ ಲಂಕೇಶ್ ಈಗ ಸಲಿಂಗಿಗಳ ಬಗ್ಗೆ ಒಂದ್ ಸಿನಿಮಾ  ಮಾಡಿದರೆ ಅದಕ್ಕೆ ಟೈಟಲ್
'ಹುಡುಗ, ಹುಡುಗ'

- ಹರಿ
harikannadaprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com