ಜನರ ಸಹಭಾಗಿತ್ವವೇ ಉತ್ತಮ ಆಡಳಿತಕ್ಕೆ ರಹದಾರಿ

Updated on: 

ಬಹುತೇಕ ಭಾರತದ ನಗರಗಳಿಗಿಂದು ಕಳಪೆ ಆಡಳಿತವೇ ಪಾಷಾಣವಾಗಿ ಪರಿಣಮಿಸಿದೆ. ಹೆಚ್ಚುತ್ತಿರುವ ನಗರಗಳ ಅವಶ್ಯಕತೆಯನ್ನು ಪೂರೈಸುವಷ್ಟು ಸೌಕರ್ಯಗಳು ನಾಗರಿಕ ಸಂಸ್ಥೆಗಳ ಬಳಿಯಿಲ್ಲ. 24್ಢ7 ವಿದ್ಯುತ್ ಅಥವಾ ನೀರು ಆಡಳಿತದಲ್ಲಿ ಜನತೆಯ ಭಾಗವಹಿಸುವಿಕೆಯೂ ಅವಶ್ಯಕ..
ಸರಬರಾಜು, ಘನತ್ಯಾಜ್ಯ ವಿಲೇವಾರಿ, ರಸ್ತೆ ಮತ್ತು ಫುಟ್‌ಪಾತ್‌ಗಳ ನಿರ್ವಹಣೆ, ತುರ್ತು ಸಾಗಣೆ ಅಥವಾ ಸಂವಹನ, ಬೀದಿ ದೀಪಗಳ ಬಳಕೆ, ಪರಿಸರ ರಕ್ಷಣೆಯಂತಹ ಯಾವ ಅವಶ್ಯಕತೆಗಳನ್ನೂ ಸರಿಯಾಗಿ ನಿಭಾಯಿಸಲು ನಾಗರಿಕ ಸಂಸ್ಥೆಗಳಿಗಾಗುತ್ತಿಲ್ಲ. ಚುನಾಯಿತ ಪ್ರತಿನಿಧಿಗಳಿಂದ ಹಿಡಿದು ಅಧಿಕಾರಿಗಳವರೆಗಿನ ಎಲ್ಲರೂ ಸಮಸ್ಯೆಯ ಪರಿಹಾರಕ್ಕಾಗಿ ಶ್ರಮಿಸದೆ, ನಗರದ ಸುತ್ತ ಗಿರಕಿ ಹೊಡೆಯುವುದರಲ್ಲೇ ಕಾಲಕಳೆಯುತ್ತಿದ್ದಾರೆ. ಇಷ್ಟು ಸಾಲದೆಂಬಂತೆ ಪರಿಣತರು ನೀಡುವ ಸುಲಭ ಪರಿಹಾರೋಪಾಯಗಳನ್ನು ಅಪ್ಪಿಕೊಳ್ಳುವ ಗುಣವೂ ಅವರಿಗಿಲ್ಲ.
ಬೆಂಗಳೂರಿನ ವಿಷಯವನ್ನೇ ತೆಗೆದುಕೊಳ್ಳಿ. ಭಾರತದ ಉಳಿದ ಎಲ್ಲಾ ನಗರಗಳಂತೆ, ಇದು ಕೂಡ ತೀವ್ರ ಬೆಳವಣಿಗೆಯಿಂದಾಗಿ ಕಷ್ಟ ಅನುಭವಿಸುತ್ತಿದೆ. ನಗರದ ಬೆಳವಣಿಗೆಗೆ ಸರಿಹೊಂದುವಂತಹ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಸರ್ಕಾರ ವಿಫಲವಾಗುತ್ತಿದೆ. ಇದರಿಂದಾಗಿ ನಗರದ ನಾಗರಿಕರ ಬದುಕು ಅತ್ಯಂತ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದೆ. ನಗರದ ನಿರ್ವಾಹಕರು ಕಳೆದ ಕೆಲವು ತಿಂಗಳುಗಳಿಂದ, ಜನರಿಗೆ ನರಕ ದರ್ಶನ ಮಾಡಿಸುತ್ತಿರುವ ಕಸದ ಸಮಸ್ಯೆಯನ್ನು ಬಗೆಹರಿಸಲು ವಿಫಲರಾಗುತ್ತಿರುವುದು ಇದಕ್ಕೊಂದು ಉತ್ತಮ ಉದಾಹರಣೆ. ಬೆಂಗಳೂರು ಸುತ್ತಲಿನ ಹಳ್ಳಿಯ ಜನರು, ತಮ್ಮ ಊರುಗಳಲ್ಲಿ ಕಸ ಎಸೆಯುವುದನ್ನು ವಿರೋಧಿಸುತ್ತಿದ್ದಾರಾದ್ದರಿಂದ, ಬೆಂಗಳೂರಿನ ರಸ್ತೆಗಳೇ ಈಗ ಕಸದ ಗುಂಡಿಯಾಗಿ ಬದಲಾಗಿವೆ. ಅದಾಗಲೇ ಬಹುತೇಕ ನಿವಾಸಿಗಳು ಕಸವನ್ನು ಪ್ರತ್ಯೇಕವಾಗಿರಿಸಲು ಶುರುಮಾಡಿದ್ದಾರೆ, ಇನ್ನು ಹಲವಾರು ಎನ್‌ಜಿಒಗಳು ಕಸವಿಲೇವಾರಿಗೆ ಸಹಾಯ ಮಾಡಲು ಮುಂದೆ ಬಂದಿವೆಯಾದರೂ ಬಿಬಿಎಂಪಿಗೆ ಮಾತ್ರ ಅದನ್ನೆಲ್ಲ ಎಲ್ಲಿ ಹೂಳಬೇಕು ಎನ್ನುವುದೇ ತಿಳಿಯುತ್ತಿಲ್ಲ.   
ನಗರ ನಿರ್ವಹಣೆಯ ಜವಾಬ್ದಾರಿ ಹೊತ್ತುಕೊಂಡಿರುವ ನಾಗರಿಕ ಸಂಸ್ಥೆಗಳಲ್ಲಿ ಉತ್ತರದಾಯಿತ್ವ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಬೇಕಿದ್ದರೆ, ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ವಾರ್ಡ್ ಸಮಿತಿಗಳ ರಚನೆಯಾಗಬೇಕು. ಈ ಸಮಿತಿಗಳಲ್ಲಿ ಕೇವಲ ಕಾರ್ಪೋರೇಟರ್ ಮತ್ತು ಅಧಿಕಾರಿಗಳಷ್ಟೇ ಅಲ್ಲದೆ ನಿವಾಸಿಗಳ ಕ್ಷೇಮಾಭ್ಯುದಯ ಸಂಘಗಳ ಪ್ರತಿನಿಧಿಗಳನ್ನು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಸದಸ್ಯರುಗಳನ್ನಾಗಿ ಮಾಡಬೇಕು. ಬೆಂಗಳೂರಿನಲ್ಲಿ ಸರ್ಕಾರಿ ನೇಮಿತ ಟಾಸ್ಕ್ ಫೋರ್ಸ್ ಆಛ್ಝಿಜಜ( ಆ್ಜಜಟಿಜಛ ಋ್ಟ್ಠ ಇಛಟ್ಜಿಛಟ್ಟ್ಠಜ ಐಟಿಜ್ಠಿಛಡಡ್ಠ್ಡ್ಛಿಡ್ಡ್ಠಿಜ ಉಜಢಜಟ್ಟಠಟಜಟಿಡಿ), ವಾರ್ಡ್ ಸಮಿತಿಗಳ ಸ್ಥಾಪನೆ, ನಗರ ಸುಧಾರಣ ಕ್ರಮಗಳಲ್ಲಿ ಸ್ಥಾನ ಪಡೆಯಬೇಕು ಎಂದು ಶಿಫಾರಸು ಮಾಡಿದೆ. ರಾಜೀವ್ ಚಂದ್ರಶೇಖರ್ ಅವರು ಹೇಳುವುದೇನೆಂದರೆ, ವಾರ್ಡ್ ಸಮಿತಿಗಳ ಸ್ಥಾಪನೆಯಿಂದಾಗಿ ಜನತೆಗೆ ತಮ್ಮ ಪ್ರದೇಶಗಳಲ್ಲಿ ಯಾವ ರೀತಿಯ ಅಭಿವೃದ್ಧಿ ಕೆಲಸಗಳಾಗುತ್ತಿವೆ, ಎಷ್ಟು ತಡವಾಗುತ್ತಿದೆ, ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೋ ಇಲ್ಲವೋ ಎನ್ನುವುದರ ಸ್ಪಷ್ಟ ಚಿತ್ರಣ ಸಿಗುತ್ತದೆ. ಆದರೆ ಈ ವ್ಯವಸ್ಥೆ ಜಾರಿಯಾದರೆ ತಮ್ಮ ಅಧಿಕಾರವೆಲ್ಲಿ ಮೊಟಕುಗೊಳ್ಳುತ್ತದೋ ಎನ್ನುವ ಭಯದಿಂದ ಕಾರ್ಪೋರೇಟರ್‌ಗಳು ಮತ್ತು ಎಮ್‌ಎಲ್‌ಎಗಳು ಈ ಶಿಫಾರಸ್ಸನ್ನು ಬದಿಗೆಸೆದಿದ್ದಾರೆ.
ಈಗ ವಾರ್ಡ್ ಸಮಿತಿಗಳ ಸ್ಥಾಪನೆಯಾಗಬೇಕು ಎಂದು ಹೈಕೋರ್ಟ್ ಕೂಡ ಸ್ಪಷ್ಟ ಆದೇಶ ನೀಡಿದೆ. ಆದರೆ ಕಾರ್ಪೋರೇಟರ್‌ಗಳು ಸಾಮಾಜಿಕ ಕಾರ್ಯಕರ್ತರನ್ನು ಮತ್ತು ಕ್ಷೇಮಾಭ್ಯುದಯ ಸಂಘಗಳ ಪ್ರತಿನಿಧಿಗಳನ್ನು ಕಡೆಗಣಿಸಿ, ತಮಗೆ ಬೇಕಾದವರ ಹೆಸರನ್ನು ನಾಮನಿರ್ದೇಶನ ಮಾಡಿ ಮೂಲ ಉದ್ದೇಶವನ್ನೇ ಮಣ್ಣುಪಾಲು ಮಾಡಲು ಮುಂದಾಗಿದ್ದಾರೆ. ಹಾಗಾಗೇ ನೇಮಕಾತಿಯಲ್ಲಿ ಪಾರದರ್ಶಕತೆಯಿರಬೇಕೆಂದು ಆಛ್ಝಿಜಜ ಒತ್ತಾಯಿಸುತ್ತಿದೆ. ಸಾಮಾಜಿಕ ಕಾರ್ಯಕರ್ತ ವಿ. ರವಿಚಂದ್ರ, ಈ ಕುರಿತು ಮಾತನಾಡುತ್ತಾ, 'ಅವರು ವಾರ್ಡ್ ಸಮಿತಿಯ ಸ್ಥಾಪನಾ ಪ್ರಕ್ರಿಯೆ ವಿಳಂಬವಾಗುವಂತೆ ಮಾಡಲು ಎಲ್ಲಾ ರೀತಿಯಿಂದಲೂ ಪ್ರಯತ್ನಿಸಲಿದ್ದಾರೆ. ಜನರಿಗೆ ಆಡಳಿತ ಪ್ರಕ್ರಿಯೆಯಲ್ಲಿ ಭಾಗಿಗಳಾಗಬೇಕು ಎಂಬ ಆಸೆಯಿದ್ದರೆ, ಅದಕ್ಕಾಗಿ ಅವರುಗಳು ಹೋರಾಡಲೇಬೇಕು' ಎನ್ನುತ್ತಾರೆ. ರವಿಚಂದ್ರ ಹೇಳುವುದು ಸರಿಯಾಗಿಯೇ ಇದೆ. ವಾರ್ಡ್ ಸಮಿತಿಯ ಭಾಗವಾಗಬೇಕು ಎಂದು ಜನತೆ ಬಯಸುವುದೇ ಆದರೆ ಅವರುಗಳು ಕಾರ್ಯಸಾಧನೆಗಾಗಿ, ನ್ಯಾಯಾಲಯಗಳನ್ನು ಅಲೆಯುವ ಪ್ರಮೇಯ ಬಂದರೂ ಹಿಂಜರಿಯಬಾರದು. ತಮ್ಮ ಪಾರದರ್ಶಕತೆಯನ್ನು, ಉತ್ತರದಾಯಿತ್ವವನ್ನು ತೊರಿಸಿಕೊಳ್ಳಲು ರಾಜಕೀಯ ಪಕ್ಷಗಳಿಗೆ ಇದು ಸುಸಮಯ. ಇಲ್ಲದಿದ್ದರೆ ಅವುಗಳ ಬಣ್ಣ ಬಯಲಾಗಲಿದೆ  ಎನ್ನುತ್ತಾರೆ ರಾಜೀವ್ ಚಂದ್ರಶೇಖರ್.
ಸಂತೋಷದ ಸುದ್ದಿಯೆಂದರೆ ಬಿಬಿಎಂಪಿ, ಹೈಕೋರ್ಟ್‌ನ ಆದೇಶದ ಮೇರೆಗೆ ವಾರ್ಡ್ ಸಮಿತಿಗಳ ಸ್ಥಾಪನೆಗೆ ಕೊನೆಗೂ ಮುಂದಾಗಿರುವುದು. ಬೆಂಗಳೂರು 2020 ಎನ್ನುವ ತನ್ನ ಯೋಜನಾ ವರದಿಯಲ್ಲಿ ಆಛ್ಝಿಜಜ ಈ ವಿಷಯವನ್ನು ಸರ್ಕಾರಕ್ಕೆ ಬಹಳ ಹಿಂದೆಯೇ ತಿಳಿಸಿತ್ತು. ಈಗ ಅದರ ಆಕಾಂಕ್ಷೆಗೆ ಅಧಿಕೃತ ಚಾಲನೆಯಂತೂ ದೊರಕಿದೆ. ಚುನಾಯಿತ ಪ್ರತಿನಿಧಿಗಳು ಮತ್ತು ನಾಗರಿಕರು ಒಟ್ಟಾಗಿ ಅಭಿವೃದ್ಧಿಯತ್ತ ಗಮನಹರಿಸಬೇಕು. ಬೆಂಗಳೂರಿನಲ್ಲಿ ಸುಮಾರು 198 ವಾರ್ಡ್‌ಗಳಿವೆ. ಒಂದು ವೇಳೆ ಪ್ರತಿಯೊಂದು ವಾರ್ಡಿಗೂ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳುವ ಕ್ಷಮತೆ ಬಂದಿತೆಂದರೆ, ಬೆಂಗಳೂರು ಬದುಕಲು ಇನ್ನಷ್ಟು ಉತ್ತಮ ಸ್ಥಳವಾಗಲಿದೆ. ಆಡಳಿತದಲ್ಲಿ ಜನತೆಯ ಭಾಗವಹಿಸುವಿಕೆ ಯಶಸ್ಸಿನ ಸೂತ್ರವಾಗಬಲ್ಲದು. ಜನತೆ ತಾವು ಬದುಕುತ್ತಿರುವ ಊರಿನ ಭವಿಷ್ಯವನ್ನು ಸುಂದರಗೊಳಿಸಲು ಬಯಸುತ್ತಾರೆಂದರೆ ಅದರ ಅಭಿವೃದ್ಧಿಯಲ್ಲಿ ಅವರೂ ಭಾಗಿಗಳಾಗುವ ಅಗತ್ಯವಿರುತ್ತದೆ.
ಕೊನೆಯ ಗುಟುಕು: 2009ರ ಒಬಾಮಾ ಅವರ ನೋಬೆಲ್ ಭಾಷಣದ ಆಯ್ದ ಭಾಗ ಫೇಸ್‌ಬುಕ್‌ನಲ್ಲಿ ಕಣ್ಣಿಗೆ ಬಿತ್ತು.  ಅದು  ಈ ರೀತಿಯಿದೆ- ಮುಂದೊಂದು ದಿನ ರಾಷ್ಟ್ರಗಳು ತಮ್ಮ ಸೇನಾ ಬಳಕೆಯನ್ನು ಕೇವಲ  ಅಗತ್ಯ  ಎಂದಷ್ಟೇ ಭಾವಿಸದೆ ಅದನ್ನು ನೈತಿಕವಾಗಿಯೂ ಸಮರ್ಥಿಸಿಕೊಳ್ಳಲಿವೆ. ಮಹಾತ್ಮ ಗಾಂಧಿ ಮತ್ತು ಮಾರ್ಟಿನ್ ಲೂಥರ್ ಕಿಂಗ್‌ರ ಬದುಕು ಮತ್ತು ನಂಬಿಕೆಗಳಲ್ಲಿ ದೌರ್ಬಲ್ಯ, ನಿಷ್ಕ್ರಿಯತೆ ಮತ್ತು ಕಪಟತೆ ಇರಲಿಲ್ಲ ಎನ್ನುವುದೇನೋ ನಿಜ. ಆದರೆ ಅವರನ್ನಷ್ಟೇ ಉದಾಹರಣೆಯನ್ನಾಗಿ ಇಟ್ಟುಕೊಂಡು ನಾನು ದೇಶವನ್ನು ಮುನ್ನಡೆಸಲಾರೆ. ದೇಶವನ್ನು ರಕ್ಷಿಸುವ ಜವಾಬ್ದಾರಿ ನನ್ನ ಮೇಲಿದೆ. ಅಮೆರಿಕದ ಜನತೆಗೆ ಅಪಾಯ ಬಂದೊದಗಿದಾಗ ನಾನು ಪ್ರತ್ಯೇಕವಾಗಿ ನನ್ನದೇ ಲೋಕದಲ್ಲಿ ಬದುಕುವುದಕ್ಕೆ ಇಷ್ಟಪಡುವುದಿಲ್ಲ. ಪ್ರಪಂಚದಲ್ಲಿ ದುಷ್ಟ ಶಕ್ತಿಗಳು ತುಂಬಿಕೊಂಡಿವೆ. ಅಹಿಂಸೆಯಿಂದ ಹಿಟ್ಲರ್‌ನ ಸೇನೆಯನ್ನು ತಡೆಯುವುದು ಸಾಧ್ಯವಿರಲಿಲ್ಲ. ಅಲ್ ಖೈಯಿದಾ ನಾಯಕರೊಂದಿಗೆ ಮಾತುಕತೆಯಾಡಿದರೆ ಅವರುಗಳು ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಕ್ಕಿಟ್ಟುಬಿಡುವುದಿಲ್ಲ. ನಾನು ಈ ವಿಷಯವನ್ನು ಏಕೆ ಪ್ರಸ್ತಾಪಿಸುತ್ತಿದ್ದೇನೆಂದರೆ, ಸಮಸ್ಯೆಯ ವ್ಯಾಪ್ತಿ ಎಷ್ಟೇ ಇರಲಿ, ಕೆಲವು ರಾಷ್ಟ್ರಗಳು ಸೇನಾ ಕಾರ್ಯಾಚರಣೆ ನಡೆಸಲು ಚಾಂಚಲ್ಯ ಪ್ರದರ್ಶಿಸುತ್ತಿವೆ ಎನ್ನುವ ಕಾರಣಕ್ಕೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com