Hmmm... ಪಾಂಚ್ ಮಿಸ್ಟರ್ ಮಳೆರಾಯ

Updated on: 

   ಹೇಳದೇ ಕೇಳದೆ ಯಾವಾಗಂದ್ರವಾಗ್ಲೇ ಬರ್ತೀಯಲ್ಲ, ಇದು ಸರೀನಾ?
ಅಯ್ಯೋ, ಯೋಗರಾಜಭಟ್ಟರಿಗೆ ಹೇಳಿದ್ದೆ ಕಣ್ರೀ. ಅವ್ರು ಯಾರ್ಗೂ ಹೇಳಿಲ್ವಾ?

-   ಸರ್‌ಹೋಯ್ತು, ಅಲ್ಲಾ, ನೀನ್ಯಾಕ್ ಹಿಂಗೆ ಇದ್ದಕ್ಕಿದ್ದಂಗೆ ಬಂದು ಎಲ್ಲಾರ್ಗೂ ತೊಂದ್ರೆ ಕೊಡ್ತೀಯ?
ನಿಮ್ಮ ಮೆಂಟಾಲಿಟಿನೇ ಅರ್ಥ ಆಗಲ್ಲ ಕಣ್ರೀ, ಬಂದ್ರೂ ಬಯ್ತೀರಾ, ಬರ್‌ದೇ ಇದ್ರೂ ಬಯ್ತೀರಾ. ಈ ಡಿಟಿಎಚ್‌ನವರಂತೂ ನಾನ್ ಬಂದ್ರೆ 'ಬ್ಯಾಡ್ ವೆದರ್‌' ಅಂತ ಬೋರ್ಡ್ ಹಾಕ್ತಾರೆ. ಮಳೆ ಬಂದ್ರೆ ಬ್ಯಾಡ್ ವೆದರ್ರಾ?

-    ಹೋಗ್ಲಿ ಬಿಡು. ಆದ್ರೆ, ನೀನೂ 'ಡೈರೆಕ್ಟ್ ಟು ಹೋಮ್‌' ಅನ್ನೋ ಥರ ಹೊತ್ತು ಗೊತ್ತು ಇಲ್ದೆ ಎಲ್ಲರ ಮನೆಗೂ 'ನುಗ್ತೀಯಲ್ಲ,' ನಿಮ್ಮನೆಗೆ ಒಂದಿನನಾದ್ರೂ 'ಬನ್ನಿ' ಅಂತ ಯಾರನ್ನಾದ್ರೂ ಕರೆದಿದ್ದೀಯಾ?
ನಾನ್ ಯಾರ್ನೂ ಕರೆದಿಲ್ಲ, ಆದ್ರೆ ಒಂದ್ಸಲ ನಾನು ಅವ್ರ ಮನೆಗೆ ನುಗ್ಗಿದ್ದಕ್ಕೆ ಸಿಟ್ ಮಾಡ್ಕೊಂಡು ರಜನೀಕಾಂತ್ ನನ್ನ ಹುಡುಕ್ಕೊಂಡ್ ಬಂದಿದ್ರಂತೆ. ನಾನ್ ಮನೇಲಿರ್‌ಲಿಲ್ವಲ್ಲ, ಬಚಾವ್ ಆದೆ.
-   ತೀರಾ ಮಧ್ಯರಾತ್ರಿ ಹೊತ್ನಲ್ಲೂ ಬರ್ತೀಯಲ್ಲ, ನಿಮ್ಮಪ್ಪ, ಅಮ್ಮ ಬಯ್ಯಲ್ವಾ 'ಅಷ್ಟೊತ್‌ವರೆಗೂ ಎಲ್ಲಿಗ್ ಹೋಗ್ತೀಯಾ ತಿರುಗೋಕೆ' ಅಂತ?
ಏನ್ ಮಾಡೋದು, 'ಫ್ರೆಂಡ್ಸು' ಮೋಡ ಬಿತ್ತನೆ ಮಾಡಿ ಬಲವಂತವಾಗಿ ಕರ್‌ಕೊಂಡ್ ಹೋದ್ರು ಅಂತ ಕಥೆ ಹೇಳ್ತೀನಿ..

-    ಸರಿ, ಇವತ್ತೇನ್ ಫುಲ್ ಫ್ರೀ ಇದ್ದಂಗಿದೆ, ರಜಾನ? ಹೊರಗಡೆ ಎಲ್ಲೂ ಹೋಗಿಲ್ವಾ?
ಹೋಗೋಣಾಂತಿದ್ದೆ. ಆದ್ರೆ ಹೊರಗೆ ಮಳೆ ಬರ್ತಿದೆ!!!! ಯಾವ್‌ದೋ ಸಿನಿಮಾದವರದ್ದು ಆರ್ಟಿಫಿಷಿಯಲ್
ರೈನ್ ಇರ್ಬೇಕು.

ಒಮ್ಮೆ ಭೇಟಿ ಕೊಡಿ
ಸಿಟಿಲೈಫ್‌ನಲ್ಲಿ ಮಳೆ ಬಂದ್ರೆ ಕಿರಿಕಿರಿ ಆಗೋದು ನಿಜ. ಆದರೆ, ಮನೆ ಸೇರಲು ಕಿರಿಕಿರಿ ಮಾಡುವ ಮಳೆಯ ನೆಗೆಟಿವ್ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ಅದರ ಪಾಸಿಟಿವ್ ಸೈಡ್ ಅನ್ನು ನೋಡುವುದಾದರೆ, ಇಲ್ಲಿ 'ಟಿಪ್ ಟಿಪ್ ಬರ್‌ಸಾ ಪಾನಿ' ಎನ್ನುವಂತೆ ಸುರಿಯುವ ಮಳೆ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಬಗ್ಗೆ ಒಂದಷ್ಟು ಟಿಪ್ಸ್‌ಗಳಿವೆ.
bit.ly/MidM n bit.ly/1v4pGL
 bit.ly/12W7Qu3
 bit.ly/MZN5K2
 bit.ly/10GT8sW

ಹರಿ-ಕಥೆ
ಯೋಗರಾಜ್‌ಭಟ್ಟರು ಮತ್ತು ಗುರುಪ್ರಸಾದ್ ಒಂದ್ಸಲ ಚಿರಾಪುಂಜಿ ಕಡೆ ಹೋಗಿಬರೋಣ ಅಂತ ಹೊರಟ್ರು. ಹೋಗಿ ತಲುಪುವಷ್ಟರಲ್ಲಿ ಸಂಜೆ ಆಗಿತ್ತು. ಗೆಸ್ಟ್‌ಹೌಸ್ ಮುಂದೆ ಕಾರಿಂದ ಇಳಿದ್ರು. ಎಂದಿನಂತೆ ಅಲ್ಲಿ ಮಳೆ ಬರ್ತಿತ್ತು. 'ಒಂಥರಾ ಚೆನ್ನಾಗಿದೆ, 'ಮಳೆ'ಯಲ್ಲೇ ನಿಂತ್ಕೊಳ್ಳೋಣ' ಅಂತ ಯೋಗರಾಜ ಭಟ್ಟರು, 'ಇಲ್ಲ 'ಮನೆ' ಒಳಗೆ ಹೋಗೋಣ' ಅಂತ ಗುರುಪ್ರಸಾದ್. ಸರಿ ಒಂದಷ್ಟು ಹೊತ್ತಿನ ನಂತರ ಇಬ್ಬರೂ ಮನೆಯೊಳಕ್ಕೆ ಹೋಗಿ ಮನೆಯೊಳಗಿನಿಂದಲೇ ಕಿಟಕಿಯಲ್ಲಿ ಮಳೆ ನೋಡಿ ಎಂಜಾಯ್ ಮಾಡಿ ನಿದ್ದೆಗೆ ಜಾರಿದರು. ಮರುದಿನ ಬೆಳಿಗ್ಗೆ ಎದ್ರೆ, ಮಳೆ ಬರ್ತನೇ ಇದೆ. ಹೊರಗೆ ಎಲ್ಲೂ ಹೋಗೋಕೇ ಆಗ್ತಿಲ್ಲ. ಸಂಜೆ ಆದ್ರೂ ಅದೇ ಕಥೆ. ಇಡೀ ದಿನ ಮನೆಯಲ್ಲೇ. ಸರಿ, ಮತ್ತೆ ಮಲಗಿ ಅದರ ಮರುದಿನ ಎದ್ರು. ಅವತ್ತೂ ಅದೇ ಕಥೆ. ಇಡೀ ದಿನ ಮನೆಯಲ್ಲೇ. ನಾಲ್ಕುದಿನ ಹಿಂಗೇ ಆಯ್ತು. ಐದನೇ ದಿನ ಮಳೆಗೆ ಹೆದರಿ ಮನೇಲಿ ಕುಂತ್ರೆ ಆಗಲ್ಲ ನಡೀರಿ ಅಂತ ಗುರುಪ್ರಸಾದ್‌ರನ್ನ ಕರ್ಕೊಂಡು ಹೊರಗೆ ಹೊರಟ್ರು ಭಟ್ಟರು. ಅಲ್ಲಿ ಒಬ್ಬ ಚಿಕ್ಕ ಹುಡುಗ ಆಟ ಆಡ್ತಾ ಇದ್ದ. ಅವನತ್ರ ಹೋಗಿ ಭಟ್ರು ಕೇಳಿದ್ರು 'ಏನ್ ಮರೀ ನಿಮ್ಮೂರಲ್ಲಿ ಮಳೆ ಎಷ್ಟು ದಿನ ಆದಮೇಲೆ ನಿಲ್ತದೆ?'. ಹುಡುಗ ಹೇಳ್ದ 'ಯಾವಾನಿಗ್ಗೊತ್ತು, ನಂಗಿನ್ನೂ ನಾಲ್ಕು ವರ್ಷ!'. 'ಇಲ್ಲಿ ನಾಲ್ಕು ವರ್ಷಗಟ್ಟಲೆ ಮಳೆ ಬತ್ತದಾ?, ಹಂಗಾರೆ ಯಾರ್‌ನಾದ್ರೂ  ದೊಡ್ಡವರನ್ನ ಕೇಳೋದ್ ಒಳ್ಳೇದು' ಅಂತ ಅಲ್ಲೇ ಇದ್ದ ತುಂಡ್ ಹೈಕ್ಳನ್ನ ಕರೆದರು.  ಈ ಸಲ ಗುರುಪ್ರಸಾದ್ ಆ ಹುಡುಗನ್ನ ಕೇಳಿದ್ರು 'ಏನಪ್ಪಾ, ನಿಮ್ಮೂರಲ್ಲಿ ಬೇಸಿಗೆ ಕಾಲ ಯಾವಾಗ ಬರೋದು?' ಅದಕ್ಕೆ ಅವನಂದ 'ಲಾಸ್ಟ್ ಟೈಮ್ ಐದು ವರ್ಷ ಮುಂಚೆ ಬುಧವಾರ ಬಂದಿತ್ತು, ಈ ಸಲ ಗುರುವಾರ ಬರ್‌ಬೋದು'. ಇಬ್ರಿಗೂ ತಲೆ ಗಿರ್ರಂತು. ಕಾರ್ ತಗೊಂಡ್ ಫಾಸ್ಟ್ ಆಗಿ ಗೆಸ್ಟ್ ಹೌಸ್ ಕಡೆ ಹೊಂಟ್ರು. ರೋಡಲ್ಲಿ ಟ್ರಾಫಿಕ್ ಪೊಲೀಸ್ ಕೈ ತೋರಿಸಿ ಗಾಡಿ ನಿಲ್ಲಿಸಿ ಕೇಳಿದ 'ನಿಮ್ಗೇನ್ ಬುದ್ಧಿ ಇದೆಯಾ ಇಲ್ವಾ? ಇಂಥ ಮಳೆಯಲ್ಲಿ ಇಷ್ಟು ಫಾಸ್ಟ್ ಆಗಿ ಗಾಡಿ ಓಡಿಸ್ತಿದೀರಲ್ಲ'. ಡೈಲಾಗ್ ಸ್ಪೆಷಲಿಸ್ಟ್ಸ್ ಭಟ್ರು- ಗುರು ಇಬ್ರೂ ಒಟ್ಟಿಗೇ ಹೇಳಿದ್ರು 'ನಾವು ಬೆಚ್ಚಗೆ ಕಾರಲ್ಲಿ ಕೂತ್ಕೊಂಡ್ ಹೋಗ್ತಿದೀವಿ. ಇಂಥ ಮಳೆಯಲ್ಲಿ ರೋಡಲ್ಲಿ ನಿಂತಿದೀಯಲ್ಲ, ಬುದ್ಧಿ ಇಲ್ದೇ ಇರೋದು ನಿಂಗೆ'.  

ಸ್ಕ್ಯಾಂಡಲ್‌ವುಡ್
ಸ್ಪಾಟ್ ಫಿಕ್ಸಿಂಗ್ ಬಿಸಿ ಸ್ಯಾಂಡಲ್‌ವುಡ್‌ಗೂ ತಟ್ಟಿದೆ. ಮಾತು ಮಾತಿಗೆ 'ಐಪಿಎಸ್‌' ಎನ್ನುತ್ತಿದ್ದ ನಟಿಯೊಬ್ಬಳು 'ಐಪಿಎಲ್‌' ಫಿಕ್ಸಿಂಗ್‌ನಲ್ಲಿ ತನ್ನ ಹೆಸರು ಕೇಳಿಬಂದ ಕೂಡಲೇ ಸಿಂಗಾಪುರದ ಫ್ಲೈಟ್ ಹತ್ತಿದ್ದಾಳೆ. ಆದರೆ ಇದನ್ನು ಪ್ರತಿಭಾ ಪಲಾಯನ ಅಂತ ಕರೆಯಂಗಿಲ್ಲ ಬಿಡಿ. ಈ ಹಿಂದೆ, ನಿಜವಾದ ಪ್ರತಿಭಾ ಪಲಾಯನ ಮಾಡಿ ಬಾಲಿವುಡ್‌ಗೆ ಹೋಗಿದ್ದ ಇನ್ನೊಬ್ಬ ನಟಿ ಈ ಸುದ್ದಿ ಕೇಳಿ 'ಓ ಮೈ ಗಾಡ್‌' ಎಂದಿದ್ದು ಬಿಟ್ಟರೆ ಆಕೆಯಿಂದ ಬೇರೆ ಪ್ರತಿಕ್ರಿಯೆ ಬಂದಿಲ್ಲ. ಆದರೆ, ಗಾಂಧಿನಗರದಲ್ಲಿ ಮಾತ್ರ 'ಕಳ್ಳಿ ಇವಳು, ಕಳ್ಳಿ ಇವಳು' ಹಾಡು ಮತ್ತೆ ಚಾಲ್ತಿಗೆ ಬಂದಿದೆ. ಆದರೆ, ಕ್ರಿಕೆಟ್‌ನಲ್ಲಿ ರಾಜಕಾರಣ ನಡೆಯುವುದಕ್ಕೆ ಸಾಕ್ಷಿ ಎನ್ನುವಂತೆ ತಮ್ಮ ಮೇಲೆ ಏನೇ ಆರೋಪ ಬಂದಿದ್ದರೂ, ಏನೇ ಆಗಲಿ ರಾಜಿನಾಮೆ ಕೊಡಲ್ಲ ಅಂತ ಶ್ರೀನಿವಾಸನ್ ಯಡಿಯೂರಪ್ಪನವರ ಥರ ಆಗಿರುವುದನ್ನು, ಚೆನ್ನೈ ಟೀಮ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಫಿಕ್ಸಿಂಗ್ ಬಗ್ಗೆ ಮಾತೇ ಆಡದೆ ಮನಮೋಹನ್‌ಸಿಂಗ್ ಆಗಿರುವುದನ್ನು ನೋಡಿ 'ಮಳ್ಳನಿವನು ಮಳ್ಳನಿವನು' ಅಂತ ಯಾರೂ ಹಾಡಿದ ಸುದ್ದಿ ಮಾತ್ರ ಇನ್ನೂ ಬಂದಿಲ್ಲ.

ಡಬ್ಕುಡಬಲ್ ತುದಾಂಡಲ್...
ಟಿ ಚಾರ್ಲಿ ಚಾಪ್ಲಿನ್
-ನಾನು ಮಳೆಯಲ್ಲಿ ನಡೆಯೋಕೆ ಇಷ್ಟಪಡ್ತೀನಿ,
  ನನ್ನ ಕಣ್ಣೀರು ಯಾರ್ಗೂ ಕಾಣಲ್ಲ ಅಂತ.
ಟಿ ಬೆಂಗಳೂರು ಪ್ರಜೆ
-ನಾನು ಮಳೆಯಲ್ಲಿ ನಡೆಯೋಕೆ ಇಷ್ಟಪಡ್ತೀನಿ.
 ಹೆವೀ ಟ್ರಾಫಿಕ್‌ನಲ್ಲಿ ನನ್ನ ಕಾರು ಸಿಕ್ಕಾಕ್ಕೊಂಡು ರೋಡ್ ಜಾಮ್ ಆಗಿದೆ ಅಂತ.
ಟಿ ಹಣದ ಮಳೆ ಸುರಿಯುವುದು ಯಾವಾಗ?
ವೆದರ್ 'ಚೇಂಜ್‌' ಆದಾಗ.
ಟಿ ಹಾರುವ ತಟ್ಟೆಗಳ ಮೇಲೆ ನಂಬಿಕೆ ಬರುವುದು ಯಾವಾಗ?
ಹೆಂಡತಿ ಜೊತೆ ಜಗಳ ಆಡಿದ ಮೇಲೆ ಅಡುಗೆ ಮನೆಯಿಂದ ಬರುವ ಸದ್ದು ಕೇಳಿದಾಗ

ನೆನ್ನೆ ಸಂಜೆ ನಮ್ಮತ್ತೆಯನ್ನು ಯಾರೋ ನಾಲ್ಕು ಜನ ನಮ್ಮ ಮನೆ ಮುಂದೆ ಹೊಡೀತಾ ಇದ್ರು.
ನೀನು ಹೋಗಿ ಸಹಾಯ ಮಾಡಿದೆಯಾ?
ಇಲ್ಲ, ನಾಲ್ಕೇ ಜನ ಸಾಕು ಬಿಡು ಅಂತ ಸುಮ್ಮನಾದೆ.

-ಪ್ರವಾಹ ಬಂದು ನಾಳೆ ಬೆಳಿಗ್ಗೆ ಪ್ರಪಂಚ ಮುಳುಗುತ್ತೆ ಅಂತ ಸುದ್ದಿ ಆಯ್ತು.
ಬ್ರಹ್ಮಾಂಡ ಸ್ವಾಮಿ ಟಿವಿಯಲ್ಲಿ ಬಂದು ಹೇಳಿದ್ರು 'ಎಲ್ಲ ದೈವೇಚ್ಛೆ, ದೇವರನ್ನು ಭೇಟಿ ಮಾಡಲು ಸಿದ್ಧರಾಗಿ'.
ಜನ ತಲೆ ಕೆಡಿಸ್ಕೊಳ್ಳಲಿಲ್ಲ.
ರಾಷ್ಟ್ರಪತಿಗಳು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ್ರು 'ನಾವು ಎಲ್ಲ ಪ್ರಯತ್ನ ಮಾಡಿದ್ದೇವೆ. ಇನ್ನು ಪರಿಸ್ಥಿತಿ ನಮ್ಮ ಕೈಲಿಲ್ಲ. ಅಂತ್ಯ ಸಮೀಪದಲ್ಲಿದೆ'.
ಜನ ತಲೆ ಕೆಡಿಸ್ಕೊಳ್ಳಲಿಲ್ಲ.
ಸಂಜೆ ಹವಾಮಾನ ವರದಿ ಬಂತು 'ಇನ್ನು ನಾಲ್ಕು ದಿನಗಳವರೆಗೆ ಒಣಹವೆ ಮುಂದುವರಿಯಲಿದೆ'
ಈಗ ಜನ ಗಾಬರಿಯಾದ್ರು. ಪ್ರವಾಹ ಬಂದ್ರೂ ಬರ್‌ಬಹುದು ಅಂತ!


   -ಹರಿ
harikannadaprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com