- ನಿಮ್ಮ ಸಿನಿಮಾ ಕೆರಿಯರ್ ಲೆಕ್ಕದಲ್ಲಿ ಈಗ ಮಳೆ ಆರ್ಭಟ ಕಡಿಮೆಯಾಗಿದೆ. ಇಂಟರೆಸ್ಟಿಂಗ್ ವಿಷ್ಯ ಅಂದ್ರೆ, ಎಲ್ರೂ ಮಳೆ ಬಂದಾಗ ಆಟೋ ಹಿಡೀತಾರೆ. ಆದ್ರೆ 'ಮಳೆ' ನಿಂತ ಮೇಲೆ ಆಟೋ ಹಿಡಿದಿದ್ದು ನೀವೇ ಫಸ್ಟ್ ಅನ್ಸತ್ತೆ?
ಏನ್ ಮಾಡೋದು? ನನ್ ಸಿನಿಮಾ ಓಡಲ್ಲ ಅಂತ ಗಾಂಧಿನಗರದ ಆಟೋಸ್ಟ್ಯಾಂಡ್ನಲ್ಲಿ ಮಾತಾಡಿಕೊಳ್ತಿದ್ರು. ಅದಕ್ಕೆ ಆಟೋ ಓಡಿಸಿಯಾದ್ರೂ ನನ್ನ 'ಆಟೋಗ್ರಾಫ್'ಗೆ ಮತ್ತೆ ಡಿಮ್ಯಾಂಡ್ ಬರಿಸೋಣ ಅಂತ.
- ಯಾವ ಗಾಡ್ಫಾದರ್ನ ಸಹಾಯವೂ ಇಲ್ಲದೆ ಚಿತ್ರರಂಗದಲ್ಲಿ 'ಆಟೋ ಸ್ಟ್ಯಾಂಡ್' ಆದವರು ನೀವು. ಈಗ ಆಟೋ ಓಡಿಸ್ಕೊಂಡ್ ಜೀವನ ಮಾಡೋ ಥರಾ ಆಗ್ಬಿಡ್ತಲ್ಲ?
ಅಯ್ಯೋ, ಇದೊಂದ್ ಸಿನಿಮಾ ಹಿಟ್ ಆಗ್ಲಿ. ನೋಡ್ತಾ ಇರಿ. ಆಟೋಮ್ಯಾಟಿಕ್ ಆಗಿ ಎಲ್ಲಾ ಸರಿಹೋಗ್ಬಿಡುತ್ತೆ.
- ಸರಿ, ಹೆಂಗಿದೆ, ನಿಮ್ಮ ಆಟೋರಾಜನ ಕಲೆಕ್ಷನ್ನು?
ಈಗ ಆಟೋಸ್ಟಾರ್ಟ್ ಆಗಿದೆ. ಜನ 'ಸಖತ್ ಆಟೋ ಮಗಾ' ಅಂತಿದಾರೆ. ಹೆಂಗೋ ಫಸ್ಟ್ ವಾರ ಚೆನ್ನಾಗಿ ಹೋಗಿ, ಮುಂದಿನ ಒಂದು ಗಾಲಿ ತೂರ್ಕೊಂಬಿಟ್ರೆ ಸಾಕು ಉಳಿದಿದ್ದು ಎರಡು ತಾನಾಗೇ ಹೆಂಗೋ ಹೋಗ್ಬಿಡುತ್ತೆ.
- ಓಹೋ, 'ಗಾಲಿ' ಬಂದ ಕಡೆ ತೂರಿಕೋ - ಅನ್ನೋ ಹೊಸ ಪ್ರಿನ್ಸಿಪಲ್ಲು. ಸರಿ, ನಿಮಗೆ 'ಗೋಲ್ಡ'ನ್ ಸ್ಟಾರ್ ಅನ್ನೋ ಹೆಸರಿದೆ ಅಂತಾನೇ ನಿಮ್ಮನ್ನ ಇಷ್ಟಪಡೋ ಹುಡುಗೀರು, ಈಗೀಗ ಗೋಲ್ಡ್ ರೇಟ್ ಜಾಸ್ತಿ ಅಂತ ಆಟೋರಾಜನ್ನ ನೋಡದೇ ಇದ್ರೆ?
ಅಯ್ಯೋ ಅವರೆಲ್ಲಾ ನನ್ನ 'ಪ್ರೀಪೇಯ್ಡ್' ಅಭಿಮಾನಿಗಳು. ಕೈ ಕೊಡೋ ಛಾನ್ಸೇ ಇಲ್ಲ.
- ಅದ್ಸರಿ, ರಾತ್ರಿ 10 ಗಂಟೆ ಮೇಲಿನ ಶೋಗಳಿಗೆ 'ಆಟೋ ರಾಜ' ಸಿನಿಮಾಗೆ 'ಒನ್ ಅಂಡ್ ಹಾಫ್' ಚಾರ್ಜ್ ಅಂತೆ. ಹೌದಾ?
ರೀ ಸುಮ್ನಿರ್ರೀ, ಹಿಂಗೆಲ್ಲಾ 'ಗಾಲಿಸುದ್ದಿ' ಹಬ್ಬಿಸಿ, ಬರೋ ಜನಾನೂ ಬರದೇ ಇರೋ ಥರಾ ಆಗ್ಬಿಟ್ಟೀತು.
(ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
'ವರ್ಕ್ ಫ್ರಮ್ ಹೋಮ್' ಎಲ್ಲರಿಗೂ ಗೊತ್ತು. ಇದು 'ಕುಕ್ ಅಟ್ ಹೋಮ್' ಕಾನ್ಸೆಪ್ಟ್. ಫಾಸ್ಟ್ಪುಡ್ ಎಂದರೆ ಎಲ್ಲರಿಗೂ ಇಷ್ಟ. ಆದರೆ ಅದನ್ನು ಹುಡುಕಿಕೊಂಡು ಹೋಗಿ ತಿನ್ನುವ ಕೆಲಸ ಸ್ವಲ್ಪ ಸ್ಲೋ ಎನಿಸಿದರೆ, ಮನೆಯಲ್ಲೇ ಕೂತು ನಿಮ್ಮ ನೆಚ್ಚಿನ ಪಿಜ್ಜಾ ಮಾಡಿಕೊಂಡು ತಿನ್ನುವ, ಮಾಡಿದ್ದುಣ್ಣೋ ಮಹರಾಯ ಕಾನ್ಸೆಪ್ಟ್ ಅನುಸರಿಸಿ. ಇಲ್ಲಿರುವ, ಮನೆಯಲ್ಲೇ ಪಿಜ್ಜಾ ಮಾಡುವ ಕೆಲವೊಂದು ಟಿಪ್ಸ್ಗಳನ್ನು ಬಳಸಿ, ಅಂಗಡಿಯಲ್ಲಿ ಪಿಜ್ಜಾ ತಿಂದಮೇಲೆ ವೇಟರ್ಗೆ ಕೊಡುವ ಟಿಪ್ಸ್ ಅನ್ನು ಉಳಿಸಿ.
n bit.ly/L9EW3z n bit.ly/14PJPIk n bit.ly/MRvt1K n bit.ly/17u8l5q n bit.ly/AaIawA
ಹರಿ-ಕಥೆ
ಅಮಾಯಕತೆಯ ಪರಮಾವಧಿ ಎನ್ನುವಂತಿದ್ದ ಖೇಮು ಅದು ಹೇಗೋ ಒಂದು ಹುಡುಗಿಯ ಬಲೆಗೆ ಬಿದ್ದುಬಿಟ್ಟ. ಫೇಸ್ಬುಕ್ನಲ್ಲೇ ಪರಿಚಯವಾದ ಆವಳ ಜೊತೆ, ದಿನ, ರಾತ್ರಿಯೆಲ್ಲಾ ಚಾಟ್ ಮಾಡಿ ಸ್ನೇಹ, ಪ್ರೇಮಕ್ಕೆ ತಿರುಗಿ ಪ್ರಣಯದ ಕಡೆ ಮನಸ್ಸು ಮಾಡುವ ನಿರ್ಧಾರ ಮಾಡಿದರು, ಇಬ್ಬರೂ. ಒಂದು ದಿನ ಖೇಮು, ಯಾವಾಗ ಭೇಟಿಯಾಗೋಣ ಡಿಯರ್ ಎಂದ. ಹುಡುಗಿ ಹೇಳಿದಳು 'ನಾಳೆ ಕತ್ತಲಾದ ಮೇಲೆ ಸಂಜೆ ಏಳೂವರೆಗೆ ಕೋರಮಂಗಲದ ನನ್ನ ಅಪಾರ್ಟ್ಮೆಂಟ್ಗೆ ಬಾ. ಅಲ್ಲಿ ಅಂಡರ್ಗ್ರೌಂಡ್ನಲ್ಲಿರುವ ಪಾರ್ಕಿಂಗ್ ಲಾಟ್ನ ಮೂಲೆಯಲ್ಲಿ ನಿಂಗೆ ಸಿಕ್ತೀನಿ'. ಸರಿ ಎಂದು ಫುಲ್ ಥ್ರಿಲ್ ಆದ ಖೇಮು, ಮರುದಿನ ಫುಲ್ ಜೋಷ್ನಲ್ಲಿ ರೆಡಿ ಆಗಿ ಅವಳ ಅಪಾರ್ಟ್ಮೆಂಟ್ಗೆ ಹೋದ. ಮೆಲ್ಲನೆ ಯಾರಿಗೂ ಗೊತ್ತಾಗದಂತೆ ಪಾರ್ಕಿಂಗ್ ಲಾಟ್ಗೆ ನುಸುಳಿ ಅವಳು ಹೇಳಿದ ಜಾಗಕ್ಕೆ ಹೋದ. ಪೂರ್ತಿ ಕತ್ತಲು. ಯಾರೂ ಕಾಣಿಸಲಿಲ್ಲ. ಇದ್ದಕ್ಕಿದ್ದಂತೆ ಹಿಂದಿನಿಂದ ನಾಲ್ಕು ಜನ ಅವನ ಮೇಲೆ ಅಟ್ಯಾಕ್ ಮಾಡಿದರು. ಖೇಮು ಸುಧಾರಿಸಿಕೊಳ್ಳುವಷ್ಟರಲ್ಲಿ ಅವನ ಬಳಿ ಇದ್ದ ಹಣ, ಮೊಬೈಲು ದೋಚಿಕೊಂಡು ನಾಲ್ಕೂ ಜನ ಪರಾರಿಯಾದರು. ಹೇಗೋ ಸಾವರಿಸಿಕೊಂಡು ಅಲ್ಲಿಂದ ಬಂದ ಖೇಮುಗೆ ಸುಧಾರಿಸಿಕೊಳ್ಳಲು ಮೂರುದಿನ ಬೇಕಾಯ್ತು. ಮೂರುದಿನದ ನಂತರ ಸಿಕ್ಕ ತನ್ನ ಗೆಳೆಯನಿಗೆ ನಡೆದಿದ್ದೆಲ್ಲವನ್ನೂ ಹೇಳಿಕೊಂಡ ಖೇಮು. ಗೆಳೆಯ ಇವನ ಪರಿಸ್ಥಿತಿ ನೋಡಿ, 'ಪಾಪ, ನಿನ್ನಂಥವನಿಗೆ ಹೀಗೆ, ಮೋಸ ಆಗಬಾರದಿತ್ತು. ಹೋಗ್ಲಿ, ಆ ಹುಡುಗಿ ಮತ್ತೆ ಸಿಕ್ಕಳಾ?' ಎಂದು ಕೇಳಿದ. ಅದಕ್ಕೆ ಅಮಾಯಕ ಖೇಮು ಹೇಳಿದ, 'ಇಲ್ಲ ಕಣೋ, ಅವಳು ಮೂರುದಿನದಿಂದ ಫೇಸ್ಬುಕ್ನಲ್ಲೂ ಸಿಕ್ಕಿಲ್ಲ, ಅವಳ ಮೊಬೈಲೂ ಸ್ವಿಚ್ ಆಫ್ ಆಗಿದೆ. ಬಹುಶಃ, ನನಗನ್ನಿಸುತ್ತೆ, ನನ್ನನ್ನು ಅಟ್ಯಾಕ್ ಮಾಡಿದ ಅದೇ ಗ್ಯಾಂಗ್ ಅವಳನ್ನೂ ಅಟ್ಯಾಕ್ ಮಾಡಿರಬಹುದು. ಪಾಪ ಅವಳಿಗೇನಾಯ್ತೋ ಏನೋ'
ಸ್ಯಾಂಡಲ್ವುಡ್
ಶೃತಿ, ಸಾಯಿಪ್ರಕಾಶ್, ಎಸ್.ನಾರಾಯಣ್, ಎಸ್,ಮಹೇಂದರ್ ಅವರ ಕಣ್ಣೀರಿನ ಕಥೆಗಳಿಗೆ ಪ್ರೇಕ್ಷಕ 'ನೋ' ಎಂದು ಬಹಳದಿನಗಳೇ ಆಗಿದ್ದರೂ ಸಾಯಿಪ್ರಕಾಶ್ ಅನುಪ್ರಭಾಕರ್, ಮೋಹನ್ ಅವರ ಆಸರೆಯಲ್ಲಿ ಮತ್ತೆ ಅಳಿಸುವ ಸಿನಿಮಾ ಮಾಡಿದ್ದಾರೆ. ಹೆಸರು 'ಗರ್ಭದ ಗುಡಿ'. ಈಗಂತೂ ಪ್ರೇಕ್ಷಕರು ಎಷ್ಟು ಬದಲಾಗಿದ್ದಾರೆಂದರೆ, 'ಸಿನಿಮಾದಲ್ಲಿ ಎಲ್ಲವೂ ಚೆನ್ನಾಗಿದೆ. ಆದರೆ ಕಾಮಿಡಿ ಇಲ್ಲ' ಎಂದು ತಿರಸ್ಕರಿಸುವ ಮಟ್ಟಿಗೆ. ಅಳುವ ಆಸಕ್ತಿ ಯಾರಿಗೂ ಇಲ್ಲ. ತೀರಾ ಅಳುವ ಆಸೆ ಇರುವವರಿಗೆ ಟಿವಿ ಧಾರಾವಾಹಿಗಳಿವೆ. ಹಾಗೆ ನೋಡಿದರೆ ಟಿವಿ ಧಾರಾವಾಹಿಗಳಲ್ಲೂ ಈಗ ನಗಿಸುವವರೇ ಹೆಚ್ಚು. ಜೊತೆಗೆ ರಿಯಾಲಿಟಿ ಶೋಗಳು. ಆದರೆ ಅಳುವ ಪ್ರೇಕ್ಷಕರ ಸಂತತಿ ಕಡಿಮೆಯಾಗಿದೆ, ಅಳಿಸುವ ಸಿನಿಮಾ ಮಾಡುವವರ ಗೋಳು ಕೇಳುವವರಿಲ್ಲ ಎನ್ನುವ ರಿಯಾಲಿಟಿ ಮಾತ್ರ ಹಿರಿತೆರೆಯ ಹಿರಿಯ ನಿರ್ದೇಶಕರುಗಳಿಗೆ ಯಾಕೋ ಗೊತ್ತಾಗಿಲ್ಲ. ಅಳುವುದು ಒತ್ತಟ್ಟಿಗಿರಲಿ ಇಂಥ ಚಿತ್ರಗಳ ಹೆಸರು ಕೇಳಿದರೇ ಆಕಳಿಸುವ ಪ್ರೇಕ್ಷಕರು 'ಗರ್ಭದ ಗುಡಿ'ಯ ಬಗ್ಗೆ ಯಾವ ರೀತಿಯ ಉತ್ಸಾಹ ತೋರಿಸಬಹುದು ಎಂಬ ಕುತೂಹಲಕ್ಕೆ ಮೊನ್ನೆ ಶುಕ್ರವಾರ ಕಂಡಿದ್ದು, ದೇವಸ್ಥಾನದ ಗರ್ಭ ಗುಡಿಯಲ್ಲಿ ದೇವರಿದ್ದರೂ ಆವರಣದಲ್ಲಿ ಮಾತ್ರ ಯಾರೂ ಕಾಣಿಸಲಿಲ್ಲ ಎಂಬ ನಿರಾಶಾದಾಯಕ ಉತ್ತರ.
ಡಬ್ಕುಡಬಲ್ ತುದಾಂಡಲ್...
ವಿಷ್ಣುವರ್ಧನ್, ರವಿಚಂದ್ರನ್, ಉಪೇಂದ್ರ, ದರ್ಶನ್, ಸುದೀಪ್, ಗಣೇಶ್ ಸೇರಿ ಸಿನಿಮಾದಲ್ಲಿ ಆಟೋ ಓಡಿಸೋ ಹೀರೋಗಳ ಸಂಖ್ಯೆ ಜಾಸ್ತಿ ಆಗ್ತಾ ಇದೆ. ಹಾಗಾಗಿ, ಇನ್ಮೇಲೆ ಸಿನಿಮಾದಲ್ಲಿ ಹೀರೋ ಆಗಬೇಕು ಅಂದ್ರೆ ಕುದುರೆ ಸವಾರಿ ಜೊತೆ ಆಟೋ ಓಡಿಸೋಕೂ ಬರಬೇಕಂತೆ.
ಅಮೆರಿಕಾ, ಇಂಗ್ಲೆಂಡ್ ಹೀಗೆ ಹೊರದೇಶಕ್ಕೆ ಹೋಗಿದ್ದವ್ರನ್ನ ಫಾರಿನ್ ರಿಟರ್ನ್ಡ್ ಅಂತಾರೆ. ಆದರೆ 'ಪಾಕಿಸ್ತಾನ, ಅಫ್ಘಾನಿಸ್ತಾನ'ಕ್ಕೆ ಹೋಗಿದ್ದವ್ರನ್ನ 'ಫಾರಿನ್ ರಿಟರ್ನ್ಡ್' ಅನ್ನೋಕಾಗಲ್ಲ. ಯಾಕೆ?
ಅಲ್ಲಿಂದ ರಿಟರ್ನ್ ಆದ್ರೆ ತಾನೆ, ಫಾರಿನ್ ರಿಟರ್ನ್ಡ್ ಅನ್ನೋಕೆ.
ಹಳ್ಳಿ ಕಡೆ ಬಯಲು ಪ್ರದೇಶದಲ್ಲಿ ಬಹಿರ್ದೆಸೆಗೆ ಹೋಗುವುದನ್ನು ಏನೆನ್ನಬಹುದು
'ಶಿಟ್' ಔಟ್
ಕಳ್ಳ 1: ಪೊಲೀಸರು ಮೇಲೆ ಬರ್ತಾ ಇದ್ದಾರೆ. ಇಲ್ಲಿಂದ ಕೆಳಗೆ ಜಂಪ್ ಮಾಡೋಣ.
ಕಳ್ಳ 2: ಬೇಡ. ನಾವಿರೋದು '13'ನೇ ಪ್ಲೋರ್ನಲ್ಲಿ.
ಕಳ್ಳ 1: ಅಯ್ಯೋ, ಇದು ಮೂಢನಂಬಿಕೆಯ ಹೊತ್ತಲ್ಲ. ಬೇಗ ಹಾರು.
ಮಗನ ಟಿವಿ ಹುಚ್ಚು ಬಿಡಿಸೋಕೆ ಸೈಕಿಯಾಟ್ರಿಸ್ಟ್ ಅನ್ನು ಕರೆಸಿದ ಅಪ್ಪ. ಮಗನ ಕೋಣೆಯೊಳಕ್ಕೆ ಬಂದ ಡಾಕ್ಟರ್ ಹುಡುಗನ ಹತ್ತಿರ ಹೋಗಿ ನೋಡಪ್ಪಾ ಎಂದು ಮಾತು ಆರಂಭಿಸುತ್ತಿದ್ದಂತೆ, ಆ ಹುಡುಗ, 'ನಂಗೇನೂ ಕಾಣಿಸ್ತಿಲ್ಲ, ನಂಗೇನೂ ಕಾಣಿಸ್ತಿಲ್ಲ' ಎಂದು ಕೂಗಲಾರಂಭಿಸಿದ. ಡಾಕ್ಟರ್ ಕೇಳಿದ್ರು, ಯಾವಾಗಿಂದ ಈ ಪ್ರಾಬ್ಲಂ? ಹುಡುಗ ಹೇಳಿದ 'ನೀವು ಟಿವಿಗೆ ಅಡ್ಡ ನಿತ್ಕೊಂಡಾಗಿನಿಂದ'.
ಹರಿ
harikannadaprabha@gmail.com