ರಾಜಿ ರಾಜಕಾರಣಿಗಳನ್ನು ಎತ್ತಿ ಕುಣಿಯುವುದೇಕೆ?
"ಹೋರಾಟದ ನಾಯಕನಿಗೆ ಈ ಪರಿಸ್ಥಿತಿ ಏಕೆ?" (ಕನ್ನಡಪ್ರಭ 27/2/2013) ಕೆ.ವೈ. ಈಶ್ವರ್ ಕುಮಾರ್ ಲೇಖನಕ್ಕೆ ನನ್ನ ಪ್ರತಿಕ್ರಿಯೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಇಂದಿನ ಪರಿಸ್ಥಿತಿಗೆ ಅವರ ಸ್ವಯಂಕೃತ ಅಪರಾಧವೇ ಮುಖ್ಯ ಕಾರಣ ಎಂಬುದನ್ನು ಲೇಖಕರು ಮರೆತಿದ್ದಾರೆ. ವ್ಯಕ್ತಿಯೊಬ್ಬನನ್ನು ಮಿತಿ ಮೀರಿದ ಅಹಂ ಎಂಥ ಸ್ಥಿತಿಗೆ ತಲುಪಿಸಬಲ್ಲದು ಎಂಬುದಕ್ಕೆ ಮಾಜಿ ಮುಖ್ಯಮಂತ್ರಿಯೇ ನಿದರ್ಶನ. ಕುರ್ಚಿ ವ್ಯಾಮೋಹಕ್ಕೆ ಬಲಿಯಾಗಿ ಪ್ರಜಾಪ್ರಭುತ್ವಕ್ಕೆ ಮಸಿ ಬಳಿದ ಕೀರ್ತಿ ಇವರಿಗೆ ಸಲ್ಲಬೇಕು. ಇದು ಲೇಖಕರಿಗೆ ಗೊತ್ತಿಲ್ಲವೇ? ರಾಜಿ ರಾಜಕಾರಣದಿಂದ ಮೆರೆಯುತ್ತಿದ್ದ ಇಂಥ ವ್ಯಕ್ತಿಯನ್ನು ವೈಭವೀಕರಿಸಿ ಎತ್ತಿಕುಣಿಯುವಂತಿರುವ ಲೇಖನ ಕನ್ನಡಪ್ರಭಕ್ಕೆ ಅಗತ್ಯವಿತ್ತೆ?
-ವಿಜಯ್ ಕೆ., ಮೈಸೂರು.
ಪ್ರತಿ ನಿತ್ಯವೂ ಕನ್ನಡಪ್ರಭ ಪತ್ರಿಕೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚು ವಿಷಯಗಳು ಪ್ರಕಟವಾಗುತ್ತಿರುವುದು ಸಂತಸದ ವಿಷಯವೇ ಸರಿ. ದಿನನಿತ್ಯದ ಭವಿಷ್ಯ ಪ್ರಕಟಿಸಿರುವುದರಿಂದ ವಿಶೇಷ ಇರುವುದಿಲ್ಲ. ಅದನ್ನು ಓದುವುದರಿಂದ ನಿತ್ಯದ ಭವಿಷ್ಯ ನಿಜವಾಗುವುದಿಲ್ಲ. ಇದೊಂದು ಪೊಳ್ಳು ಸಂಗತಿ ಎಂದು ನಾನು ತಿಳಿಯುತ್ತೇನೆ. ಭವಿಷ್ಯವನ್ನು ಪ್ರಕಟಿಸುವ ಬದಲಿಗೆ ಎಲ್ಲರಿಗೂ ಮೆಚ್ಚುಗೆಯಾಗುವಂತಹ ಸಂಗತಿಗಳನ್ನು ತಿಳಿಸುವುದು ಒಳ್ಳೆಯದು. ಗೋಡೆ ಬರಹದಲ್ಲಿ ಸಿಲ್ಲಿ ಸಿಲ್ಲಿ ವಿಷಯಗಳನ್ನು ಪ್ರಕಟಿಸುವುದು ತಪ್ಪು. ಓದುಗರಿಗೆ ಒಳ್ಳೆಯ ಸುದ್ದಿ ಸಿಗಬೇಕು. 'ನೀವು ಏನ್ ಬರೆದ್ರೂ ಪ್ರಕಟಿಸ್ತೀವಿ, ಪ್ರಕಟಿಸ್ತೀವಿ ಅಂತ ಏನೇನೆಲ್ಲ ಬರೀಬೇಡಿ!'ಅಂತ ಅಂಕಣವೇ ತಿಳಿಸುತ್ತದೆ. ಆದರೆ ಫೆಬ್ರವರಿ 24ರಂದು ಪ್ರಕಟವಾದ ಗೋಡೆ ಬರಹದಲ್ಲಿ ಪ್ರಣತಿಯವರ ಮುಂದೆ ಹರೀಶ್ ಆಚಾರ್ಯ ವಿವಾಹದ ಪ್ರಸ್ತಾಪವಿಟ್ಟಿದ್ದಾರೆ. ಇದು ಪ್ರಣತಿಯವರಿಗೆ ಖುಷಿ ನೀಡಿರಬಹುದು ಅಥವಾ ಏನೇ ಅನಿಸಿರಬಹುದು. ಮನಸ್ಸಿಗೆ ಬಂದಂತೆ ಅವರು ಪತ್ರ ಬರೆದಿದ್ದು ಎಷ್ಟು ತಪ್ಪೋ, ಆ ಪತ್ರವನ್ನು ಪ್ರಕಟಿಸಿ ನೀವೂ ಅಷ್ಟೇ ತಪ್ಪು ಮಾಡಿದ್ದೀರಿ.
-ಶ್ವೇತಾ ಎಂ.ಎಚ್., ದ್ವಿತೀಯ ಬಿ.ಎ., ತುಮಕೂರು ವಿ.ವಿ. ,ತುಮಕೂರು.
ಕನ್ನಡಪ್ರಭ ಮಾರ್ಚ್ 1ರ 'ಹಿತಾಯ ಸುಖಾಯ ಕಷಾಯ' ಬಜೆಟ್ ವಿಶ್ಲೇಷಣೆ ಹೊತ್ತ ಪತ್ರಿಕೆ ಯಾವುದೇ ಋ್ಝಟಿಛಟ್ಛ್ಝಿಛಟ ಉಛ್ಝಟಣಗೂ ಕಡಿಮೆಯಾಗದಷ್ಟು ಮಾಹಿತಿಯನ್ನು ಓದುಗರಿಗೆ ನೀಡಿತು. ಅಷ್ಟೆ ಅಲ್ಲ, ಪುಟ ವಿನ್ಯಾಸದಲ್ಲೂ ಎಷ್ಟೊಂದು ಹೊಸತನವಿತ್ತೆಂದರೆ ಓದುಗನಿಗೆ ಯಾವುದೇ ರೀತಿಯ ತಲೆನೋವು ಬರುವಂತಿರಲಿಲ್ಲ. ಸಾಮಾನ್ಯವಾಗಿ ಬಜೆಟ್ ವಿಶ್ಲೇಷಣೆ ಅಂದ ಕೂಡಲೇ ಅಂಕಿ-ಸಂಖ್ಯೆಗಳ ಗೊಂದಲಾಟ ಇದ್ದದ್ದೇ. ಆದರೆ ನಿಮ್ಮ ನಿರೂಪಣೆ ಎಷ್ಟೊಂದು ಸರಳ ಹಾಗೂ ಪ್ರಭಾವಶಾಲಿಯಾಗಿತ್ತೆಂದರೆ ಮನ ತಟ್ಟುವ ಶೀರ್ಷಿಕೆಗಳಿಂದಾಗಿ ಸಮಾಜದ ವಿವಿಧ ಜನಾಂಗದವರಿಗೆ ತಮಗೆ ಬೇಕಾದ್ದನ್ನು ಹುಡುಕಿಕೊಂಡು, ಓದಿ ಮಾಹಿತಿ ಪಡೆಯುವಂತಿತ್ತು. ಬಜೆಟ್ ಭಾಷಣ ಕೇಳುವವರಿಗೂ ಎಲ್ಲ ವಿಷಯಗಳ ಸರಿಯಾದ ಕಲ್ಪನೆ ಬಾರದಿರುವಾಗ 'ಕನ್ನಡಪ್ರಭ' ಚಿಕ್ಕ-ಚಿಕ್ಕ ವಿಷಯಗಳ ಬಗ್ಗೆಯೂ ಚೊಕ್ಕ ಮಾಹಿತಿ ನೀಡಿ ಹೆಚ್ಚಿನ ವಿಷಯಗಳನ್ನು ತಿಳಿಯುವಂತೆ ಮಾಡಿದೆ. ಮುಖಪುಟದ ವಿನ್ಯಾಸವಂತೂ ಊ್ಢಡಿಛ್ಟ್ಠಜ್ಝಟಿಛ್ಠಣ. ಉಳ್ಳವರ ಚೋರ-ಬಡವರ ಚಕೋರ, ಮೊಬೈಲ್ ಮಾತು ಜೇಬಿಗೆ ತೂತು, ಸುಡುವ ಸಿಗರೇಟ್, ಹೋಟೆಲ್ ಊಟ ಮತ್ತಷ್ಟು ಬಿಸಿ, ನಕ್ಕರು ನೇಕಾರರು ಇಂಥ ಶೀರ್ಷಿಕೆಗಳೇ ಸಂಪೂರ್ಣವರದಿ ನೀಡುವಂತಿವೆ. ಒಟ್ಟಾರೆ ಈ ವರ್ಷದ ಮಾರ್ಚ್1ರ ಕನ್ನಡಪ್ರಭ, ಮುಂದಿನ ವರ್ಷದ ಮಾರ್ಚ್1ರ ತನಕ ಕಾಯ್ದಿಡುವಂತಹವಸ್ತುವಾಗಿ ಬಿಟ್ಟಿತು!
-ಶಂಕರನಾರಾಯಣಭಟ್, ಮಾಡಗೇರಿ, ಹೊನ್ನಾವರ, ಉ.ಕ. ಮೊ.9632 821920.
ಸಿಂಹಗಳ ಜೊತೆ ಮಗುವಾಗಿ ಆಡುವ ಬಹದ್ದೂರ್ ಗಂಡು 'ಕೆವಿನ್ ರಿಚರ್ಡ್ಸ್' ಬಗೆಗಿನ ಲೇಖನ (ನೂರೆಂಟು ನೋಟ- ಕ.ಪ್ರ. ಫೆ.28) ತನ್ನ ವಿಶಿಷ್ಟ ವಸ್ತುವಿನಿಂದ ಅನನ್ಯವೆನಿಸಿತು. ಲೇಖನದಲ್ಲಿ ಒಂದೆಡೆ ಕನ್ನಡದಲ್ಲಿ "ಲಯನ್ ಗಜಪತಿ" ಎಂಬ ಸಿನೆಮಾ ಬಂದಿತ್ತು" ಎಂದು ಉಲ್ಲೇಖಿಸಲಾಗಿದೆ. ವಿಷ್ಣುವರ್ಧನ್ "ಲಯನ್ ಜಗಪತಿರಾವ್" ಗೊತ್ತು. ರಾಘವೇಂದ್ರ ರಾಜ್‌ಕುಮಾರ್‌ರ "ಗಜಪತಿ ಗರ್ವಭಂಗ " ಗೊತ್ತು. ಆದರೆ ಈ "ಲಯನ್ ಗಜಪತಿ" ಯಾರು?!
-ಕೆ. ಶ್ರೀನಿವಾಸರಾವ್, ಹರಪನಹಳ್ಳಿ,
ದಾವಣಗೆರೆ ಜಿಲ್ಲೆ.
ಮಾರ್ಚ್ ನಾಲ್ಕರ ಕನ್ನಡ ಪ್ರಭವನ್ನು ಓದಿ ತುಂಬಾ ಮೆಚ್ಚುಗೆಯಾಯಿತು. ಪ್ರತಿ ದಿನ ಮುಖಪುಟದಲ್ಲಿ ಕೇವಲ ರಾಜಕಾರಣಿಗಳ ಮತ್ತು ಅದಕ್ಕೆ ಸಂಬಂಧಪಟ್ಟ ವ್ಯಕ್ತಿಗಳ ಬಗ್ಗೆ ಓದಿ ಓದಿ ತಲೆ ಚಿಟ್ಟು ಹಿಡಿದುಹೋಗಿತ್ತು. ಆದರೆ ಅಂದು ಮುಖಪುಟದಲ್ಲಿ, ವಿದ್ಯಾರ್ಥಿಗಳ ಬಗೆಗಿನ ನಿಮ್ಮ ಕಾಳಜಿ ಎದ್ದು ಕಾಣಿಸಿತು. 'ಚೆನ್ನಾಗಿ ಓದಿ ಪರೀಕ್ಷೆ ಬರೆಯಿರಿ ಆಲ್‌ದಿ ಬೆಸ್ಟ್' ಎನ್ನುವ ಹಾರೈಕೆ, ವಿದ್ಯಾರ್ಥಿಗಳಿಗೆ ಆತ್ಮ ವಿಶ್ವಾಸ ತುಂಬುವ ಜೊತೆಗೆ, ಪಾಲಕರಿಗೂ ಕೂಡ ಒಳ್ಳೆಯ ಸಂದೇಶ ಕಳುಹಿಸುವಂತಿತ್ತು.
-ಶ್ರೀಪಾದ್ ರಾವ್ ಗುಮಾಸ್ತೆ, sripad.gumaste@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

