Hmmm...ಪಾಂಚ್ ಸಿದ್ದರಾಮಯ್ಯ

Updated on: 

ಕರ್ನಾಟಕದ ಹೊಸ ಮುಖ್ಯಮಂತ್ರಿಯಾಗಿದ್ದೀರಿ, ಈ ಸಂದರ್ಭದಲ್ಲಿ ಏನು ಹೇಳೋಕೆ ಇಷ್ಟಪಡ್ತೀರಿ?
'ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ'.

-    ಓ..'ಕವಿರತ್ನ ಕಾಳಿದಾಸ'ನ ಸ್ಟೈಲು. ಆದ್ರೂ ಮುಖ್ಯಮಂತ್ರಿ ಆಗಿರೋ ಖುಷೀಲಿ ಏನಾದ್ರೂ ಹೇಳ್ರಿ?
ಏನ್ ಹೇಳೋದು, ನಾನು ಮುಖ್ಯಮಂತ್ರಿ ಆಗೋಕೆ ಅವಕಾಶ ಮಾಡಿಕೊಟ್ಟ ಯಡಿಯೂರಪ್ಪನವರಿಗೆ...ಸಾರಿ, ಐ ಮೀನ್ ಸೋನಿಯಾ ಗಾಂಧಿ ಅವರಿಗೆ ಧನ್ಯವಾದಗಳು ಅಂತ ಹೇಳ್‌ಬಹುದು ಅಷ್ಟೆ.

-   ಅಂತೂ ಕೆಜೆಪಿಯಂದಾಗಿ ಬಿಜೆಪಿ ಸೋತಿದ್ದರಿಂದ ನಿಮಗೆ ಅಧಿಕಾರ ಸಿಕ್ತು ಅಲ್ವಾ?
ಅದೆಲ್ಲ ಸುಳ್ಳು, ಇದು ಪೊಲಿಟಿಕಲ್ 'signs'. ಈ ವಿಷಯದಲ್ಲಿ 'ನೋ ಪಾಲಿಟಿಕ್ಸ್‌' ಪ್ಲೀಸ್. ಎಲ್ಲೋ ಒಂದ್ ಕಡೆ, ಕಾಂಗ್ರೆಸ್ ನಿಜವಾಗ್ಲೂ ಗೆದ್ದಿದೆ.

-    ಎಲ್ಲೋ ಒಂದ್ ಕಡೆ ಅಲ್ಲ ಸರ್, 121 ಕಡೆ ಗೆದ್ದಿದೆ. ಹೋಗ್ಲಿ ಬಿಡಿ, ಮುಖ್ಯಮಂತ್ರಿಯಾಗಿ ಕರ್ನಾಟಕದ ಜನರಿಗೆ ಯಾವ ಭರವಸೆ ಕೊಡ್ತೀರಿ?
ಇನ್ನೈದು ವರ್ಷ ನಾನೇ ಮುಖ್ಯಮಂತ್ರಿ ಆಗಿರ್ತೀನಿ ಅಂತ ಭರವಸೆ ಕೊಡ್ತೀನಿ. ನಾವು ಜಗಳ ಆಡೊಲ್ಲ, ಬ್ಲೂಫಿಲ್ಮ್ ನೋಡೊಲ್ಲ, ನರ್ಸ್‌ಗಳಿಗೆ ಮರ್ಯಾದೆ ಕೊಡ್ತೀವಿ, ಕಂಡೋರ್ ಹೆಂಡ್ತಿ ಮೇಲೆ ಕಣ್ಣು ಹಾಕಲ್ಲ ಅಂತ ಭರವಸೆ ಕೊಡ್ತೀವಿ.  

-    ಅದ್ಸರಿ, ಕಾಂಗ್ರೆಸ್ ಗೆದ್ದಿದ್ದೇ ತಡ ಕರ್ನಾಟಕದಲ್ಲಿ ಯಾವಾಗಂದ್ರೆ ಆವಾಗ ಕರೆಂಟ್ ಹೋಗೋಕೆ ಶುರುವಾಗಿದೆಯಲ್ಲ?
ಬಿ ಪಾಸಿಟಿವ್ ಐ ಸೇ. ಕಾಂಗ್ರೆಸ್ ಗೆದ್ದ ತಕ್ಷಣ ಕರ್ನಾಟಕದಲ್ಲಿ ಮಳೆ ಬರೋಕೆ ಶುರುವಾಗಿದೆ ಅಂತ ಯಾಕಂದ್ಕೊಬಾರ್ದು..?

ಒಮ್ಮೆ ಭೇಟಿ ಕೊಡಿ
ಶ್ರವಣ ದೋಷ ಇರುವವರೊಂದಿಗೆ ಸಂವಹನ ನಡೆಸಲು ಬಳಸುವ ಭಾಷೆ ಸೈನ್ ಲ್ಯಾಂಗ್ವೇಜ್. ಮಾತಿನಲ್ಲಿ ಹೇಳಲಾಗದ್ದನ್ನು ಕೈ, ಬಾಯಿಗಳ ಸನ್ನೆಯ ಮೂಲಕ ಹೇಳುವ ಕಲೆ ಇದು. ಸುಮ್ಮನೇ ನಮಗಿಷ್ಟ ಬಂದಂತೆ ಕೈ, ಬಾಯಿ ಆಡಿಸಿದರೆ ಅದು ಸರಿಯಾಗಿ ಕಮ್ಯೂನಿಕೇಟ್ ಆಗುವುದು ಕಷ್ಟ. ಹಾಗಾಗಿ, ಅದಕ್ಕೆಂದೇ ಇರುವ ಈ  ಸೈನ್ ಲ್ಯಾಂಗ್ವೇಜ್ ಸಿಲಬಸ್‌ನ ಅರಿವಿದ್ದರೆ ಎಲ್ಲವೂ ಸುಲಭ. ಒಮ್ಮೆ ಈ ಲಿಂಕ್‌ಗಳ ಮೇಲೆ ಕಣ್ಣಾಡಿಸಿ.
bit.ly/AEX2aX n bit.ly/bAW9tU n bit.ly/11a57f n bit.ly/10NddZz n bit.ly/YcmP
ಹರಿ-ಕಥೆ
ಒಬ್ಬ ಸಾಹುಕಾರ ತನ್ನ ತೋಟದಲ್ಲ್ಲಿ ಕಲ್ಲಂಗಡಿ ಹಣ್ಣುಗಳನ್ನು ಬೆಳೆಯುತ್ತಿದ್ದ. ಆದರೆ ಅವನ ತೋಟಕ್ಕೆ ಪ್ರತಿದಿನ ಕತ್ತಲಾದ ಮೇಲೆ ಒಂದಿಷ್ಟು ಜನ ಹುಡುಗರು ಬಂದು ಹಣ್ಣುಗಳನ್ನು ಕದ್‌ಕೊಂಡ್ ಹೋಗ್ತಿದ್ರು. ಏನೇ ಕಷ್ಟ ಪಟ್ಟರೂ ಅವನಿಗೆ ಆ ಹುಡುಗರನ್ನು ಕಂಟ್ರೋಲ್ ಮಾಡೋಕಾಗಲಿಲ್ಲ. ಏನಾದರೂ ಮಾಡಿ ಇವರನ್ನು ಮಟ್ಟ ಹಾಕಬೇಕು ಎಂದುಕೊಂಡ ಸಾಹುಕಾರ ಒಂದು ದಿನ ರಾತ್ರಿ ಮನೆಗೆ ಹೋಗುವಾಗ ತನ್ನ ತೋಟದ ಎಂಟ್ರೆನ್ಸ್‌ನಲ್ಲೇ ಇರುವ ಮರವೊಂದಕ್ಕೆ ಒಂದು ಬೋರ್ಡ್ ತೂಗುಹಾಕಿದ. ಆ ಬೋರ್ಡ್‌ನಲ್ಲಿ ಹೀಗೆ ಬರೆದಿತ್ತು 'ನನ್ನ ತೋಟದಲ್ಲಿ ಹಣ್ಣು ಕದಿಯುವವರಿಗೆ ಈ ವಿಷಯ ಗೊತ್ತಿರಲಿ, ಈ ತೋಟದಲ್ಲಿರುವ ಒಂದು ಕಲ್ಲಂಗಡಿ ಹಣ್ಣಿನಲ್ಲಿ ಸಯನೈಡ್ ಇಂಜೆಕ್ಟ್ ಮಾಡಲಾಗಿದೆ'. ಅಂದು ರಾತ್ರಿ ತೋಟಕ್ಕೆ ಹಣ್ಣು ಕದಿಯಲು ಬಂದ ಹುಡುಗರು ಬೋರ್ಡ್ ನೋಡಿದರು, ವಾಪಸ್ಸು ಹೋದರು. ಮರುದಿನ ಬೆಳಿಗ್ಗೆ ತನ್ನ ಯೋಜನೆ ವರ್ಕ್ ಔಟ್ ಆಗಿದೆಯಾ ಎಂಬುದನ್ನು ಚೆಕ್ ಮಾಡಲು ಸಾಹುಕಾರ ತೋಟಕ್ಕೆ ಬಂದ. ಅಲ್ಲಿ ನೋಡಿದರೆ ತೋಟದಲ್ಲಿ ಒಂದೂ ಹಣ್ಣು ಕಳ್ಳತನವಾಗಿರಲಿಲ್ಲ. ಹುಡುಗರು ಹೆದರಿಕೊಂಡಿದ್ದಾರೆ ಎಂದುಕೊಂಡು ಖುಷಿಯಿಂದ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತ ಸಾಹುಕಾರ ತಾನು ತೂಗುಹಾಕಿದ್ದ ಬೋರ್ಡ್ ಕಡೆಗೆ ನೋಡಿದ. ಅದರ ಪಕ್ಕದಲ್ಲಿ ಇನ್ನೊಂದು ಚಿಕ್ಕ ಬೋರ್ಡ್ ಹಾಕಲಾಗಿತ್ತು. ಅದರಲ್ಲಿ ಹೀಗೆ ಬರೆದಿತ್ತು 'ಒಂದಲ್ಲ, ಈಗ ಎರಡು ಹಣ್ಣುಗಳಿಗೆ ಸಯನೈಡ್  ಇಂಜೆಕ್ಟ್ ಮಾಡಲಾಗಿದೆ. ತಾಕತ್ತಿದ್ರೆ ಹುಡುಕ್ಕೋ ಮಗನೆ'.

ಸ್ಕ್ಯಾಂಡಲ್‌ವುಡ್
ಅಂತೂ ಮಳೆ ಹುಡುಗಿ ಪೂಜಾಗಾಂಧಿ ತಮ್ಮ ಚುನಾವಣೆ ಆಸೆ ತೀರಿಸಿಕೊಂಡಿದ್ದಾರೆ. ಆದರೆ ಅದು ಠೇವಣಿ  ಕಳೆದುಕೊಳ್ಳುವ ಮೂಲಕ ಎಂಬುದು ನಿರಾಸೆಯ ಸಂಗತಿ. ಚುನಾವಣಾ ಕಣದಲ್ಲಿ ಪೂಜಾ ಏನೇ ಪೂಜೆ ಮಾಡಿದರೂ ದೇವರೂ ವರ ಕೊಡಲಿಲ್ಲ, ಪೂಜಾರಿಯೂ ವರ ಕೊಡಲಿಲ್ಲ. ಪೂಜಾ ಕರ್ನಾಟಕದವರಲ್ಲ ಎಂಬ ಕಾರಣಕ್ಕೋ ಏನೋ ಫಾರಿನ್ನು ಹುಡುಗಿ ಬಂದ್ಳು ಕಣ್‌ಮುಚ್ರೋ ಎಂದುಬಿಟ್ಟ ಮತದಾರ. ಇಲ್ಲಿ ಇಂಟರೆಸ್ಟಿಂಗ್ ವಿಷಯ ಎಂದರೆ, ಈ ಚುನಾವಣೆಯಲ್ಲಿ ಅವರು ಗಳಿಸಿದ್ದು ಒಂದೂವರೆ ಸಾವಿರ ಚಿಲ್ಲರೆ ಓಟು. ಇದು ಪೂಜಾ ಹೆಸರಿಗೆ ನಿಜವಾಗಲೂ ದೊಡ್ಡ ಏಟು. ಇಲ್ಲಿ ಕೇಳಬಹುದಾದ ಆಸಕ್ತಿಕರ ಪ್ರಶ್ನೆ ಎಂದರೆ, ಕೇವಲ ಒಂದೂವರೆ ಸಾವಿರ ಓಟು ಗಳಿಸಲು ಪೂಜಾಗಾಂಧಿಯಂಥಹ ಸೋ ಕಾಲ್ಡ್ ಸೆಲೆಬ್ರಿಟಿಯೇ ಬೇಕಿತ್ತೆ?. ಪೂಜಾ ಬದಲು, ಬೇರೆ ಯಾವ ಸಾಮಾನ್ಯ ಪ್ರಜೆ ನಿಂತಿದ್ದರೂ, ಅಲ್ಲಿ ತಮ್ಮ ಸ್ನೇಹಿತರು, ಸಂಬಂಧಿಕರಿಂದಲೇ ಪೂಜಾ ಗಾಂಧಿ ಅವರಿಗಿಂತ ಹೆಚ್ಚು ಓಟು ಪಡೆಯುತ್ತಿದ್ದರು ಎಂಬುದು 'ಜೋಕ್ ಇದೆ ನಗ್‌ಬೇಕು, ನಗ್‌ಬೇಕು' ಎನ್ನುತ್ತಿರುವ ಗಾಂಧಿನಗರದ ಕುಹಕ.

ಡಬ್ಕುಡಬಲ್ ತುದಾಂಡಲ್...
-ದೇವ್ರು, ದೆವ್ವಗಳ ನಡುವಿನ ಸ್ವಾರಸ್ಯ.
-ಜನ, ತಮ್ಮ ಮನೆಯಲ್ಲಿ ದೆವ್ವ ಇದೆ ಅಂತ ಅನಿಸಿದಾಗಲೂ, 'ದೇವ್ರಿದ್ದಾನೆ' ಅಂದ್ಕೊಂಡು ಮನೆ ಮಾರಿಬಿಡ್ತಾರೆ.
- ದೇವ್ರು ಮತ್ತು ದೆವ್ವಕ್ಕೆ ಎಷ್ಟೊಂದು ವ್ಯತ್ಯಾಸ. ಆದರೆ, ಮೈಮೇಲೆ ದೇವರು ಬಂದವರೂ ಮತ್ತು ಮೈಮೇಲೆ ದೆವ್ವ ಬಂದವರೂ ಆಲ್‌ಮೋಸ್ಟ್ ಒಂದೇ ಥರ ಆಡ್ತಾರೆ.

- ಪಪ್ಪ ಅಂದ್ರೆ ಲಿಪ್‌ಸ್ಟಿಕ್ ಹಾಳಾಗುತ್ತೆ ಅಂತ ಡ್ಯಾಡಿ ಅನ್ನೋ ಹುಡುಗೀರು ಯಾಕೆ ಓಟು ಹಾಕೊಲ್ಲ?
ನೈಲ್ ಪಾಲಿಷ್ ಹಾಳಾಗುತ್ತೆ ಅಂತ.

-ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿದೆ
ರಾಜ್ಯದಲ್ಲಿ ಇನ್ನು 'ಕಾಂಗೈ ಓಝ್ಝ್ಜಿಡಿಡ'

-ಕಾಂಗ್ರೆಸ್ ಗೆದ್ದಿದ್ದಕ್ಕೆ ರಮ್ಯಾ ಪ್ರತಿಕ್ರಿಯೆ ಹೀಗಿರಬಹುದೇ?
ನಮ್ಮತ್ರನೂ ಕಾಂಗ್ರೆಸ್ ಕಡ್ಲೆಬೀಜ ಇದೆ ಅಂತ ಪ್ರೂವ್ ಆಯ್ತು.

- ರೈತನಾಗಿದ್ದುಕೊಂಡು ಪ್ರೈಮ್ ಮಿನಿಸ್ಟರ್ ಆಗಿದ್ದ ದೇವೇಗೌಡರನ್ನು ಏನೆನ್ನಬಹುದು?
'ಫಾರ್ಮರ್‌' ಪ್ರೈಮ್ ಮಿನಿಸ್ಟರ್

- ಹುಬ್ಳಿ ಭಾಷೆಯಲ್ಲಿ 'ಫಾಸ್ಟ್‌'ಫುಡ್‌ಗೆ ಏನೆನ್ನುತ್ತಾರೆ?
'ಲಗೂ' ಉಪಹಾರ

- ಒಬ್ಬ ಅಭ್ಯರ್ಥಿ ಐದು ಸಲ ಆಯ್ಕೆಯಾಗಿ ಒಂಚೂರೂ ಕೆಲ್ಸ ಮಾಡಿಲ್ಲ ಆದ್ರೂ ಜನ ಮತ್ತೆ ಅವನನ್ನೇ ಗೆಲ್ಲಿಸಿದ್ದಾರಂತೆ.
ಬಹುಷಃ, ಅದೆಂಗ್ ಬಿಟ್‌ಬಿಡ್ತೀವಿ, ಅವನತ್ರ ಒಂದ್‌ಸಲನಾದ್ರೂ ಕೆಲ್ಸ ಮಾಡಿಸಿದ್ ಮೇಲೇ ಅವನನ್ ಸೋಲಿಸೋದು ಅಂತ ಇರಬಹುದು.

   ಹರಿ
ಛ್ಠ್ಝ್ಞಛಟಿಟಿಛಜಛಠ್ಠಛಝಿಛಅ್ಜಟಛ್ಝಟ.್ಛ್ಟಟ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com