ಆರ್ಥಿಕ ಹೊರೆಯಾಗಿರುವ ವಿಧಾನಪರಿಷತ್ ಏಕೆ ಬೇಕು?
ರಾಜ್ಯದ ಬೊಕ್ಕಸಕ್ಕೆ ಅನಾವಶ್ಯಕವಾಗಿ ಖರ್ಚಾಗುತ್ತಿರುವ ಹಣವನ್ನು ತಡೆಗಟ್ಟಲು, ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮುಂದಾದರೆ ವರ್ಷಕ್ಕೆ 200ರಿಂದ 250 ಕೋಟಿ ರೂ. ಉಳಿಯುವುದರಿಂದ ವಿಧಾನ ಪರಿಷತ್ ರದ್ದು ಮಾಡುವ ದಿಟ್ಟ ನಿರ್ಧಾರವನ್ನು ಕೈಗೊಳ್ಳಬೇಕು. ಒಬ್ಬ ವಿಧಾನಪರಿಷತ್ ಸದಸ್ಯನಿಗೆ ಸಂಬಳ, ಸಾರಿಗೆ, ದೂರವಾಣಿ, ಆಪ್ತ ಸಿಬ್ಬಂದಿ, ವೆಚ್ಚ ಇತ್ಯಾದಿ ಕನಿಷ್ಟ ಒಂದು ತಿಂಗಳಿಗೆ ಒಂದು ಲಕ್ಷ ರೂ. ನೇರವಾಗಿ ಖರ್ಚಾಗುತ್ತದೆ. ಪರೋಕ್ಷವಾಗಿ ಖರ್ಚಾಗುವುದು ಸರ್ಕಾರಕ್ಕೆ ಗೊತ್ತಿರುವ ವಿಷಯ: ಮಾಜಿಗಳಾದ ಎಲ್ಲರಿಗೂ ಪಿಂಚಣಿಯಿಂದಲೂ ಆರ್ಥಿಕ ಹೊರೆ ಬೀಳುತ್ತದೆ. ಭಾರತ ಸಂವಿಧಾನದಲ್ಲಿ ವಿಧಾನಪರಿಷತ್ ರಚನೆಯನ್ನು ಆಯಾ ರಾಜ್ಯಗಳ ವಿವೇಚನೆಗೆ ಬಿಡಲಾಗಿದೆ. ಅದರಂತೆ ದೇಶದ 4 ರಾಜ್ಯಗಳಲ್ಲಿ ಮಾತ್ರ ವಿಧಾನಪರಿಷತ್ ಅಸ್ತಿತ್ವದಲ್ಲಿರುತ್ತದೆ. ಉತ್ತರ ಪ್ರದೇಶ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕ. ಆದರೆ ಆಂಧ್ರಪ್ರದೇಶದಲ್ಲಿ ದಿವಂಗತ ಎನ್.ಟಿ. ರಾಮರಾವ್ ಅಧಿಕಾರಕ್ಕೆ ಬಂದಾಗ ಅನಾವಶ್ಯಕ ಖರ್ಚು ಹೊರೆಯಾಗುತ್ತದೆಂದು 1982ರಲ್ಲಿ ಪರಿಷತ್ನ್ನು ರದ್ದುಗೊಳಿಸಿದರು. ಆದರೆ 2004ರಲ್ಲಿ ಅಧಿಕಾರಕ್ಕೆ ಬಂದ ಡಾ. ವೈ.ಎಸ್. ರಾಜಶೇಖರರೆಡ್ಡಿಯವರು ವಿಧಾನಪರಿಷತ್ ಅನ್ನು ಪುನಃ ಸ್ಥಾಪಿಸಿದರು. ಅದೇ ರೀತಿ ತಮಿಳುನಾಡಿನಲ್ಲಿ 1980ರಲ್ಲಿ ಅಂದಿನ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ರವರು ಪರಿಷತ್ನ್ನು ರದ್ದುಗೊಳಿಸಿದರು. ಆದರೆ ತದನಂತರ 2010ರಲ್ಲಿ ಅಧಿಕಾರಕ್ಕೆ ಬಂದ ಎಂ. ಕರುಣಾನಿಧಿಯವರು ವಿಧಾನಪರಿಷತ್ನ್ನು ಪುನಃ ಸ್ಥಾಪಿಸುವುದಕ್ಕೆ ಕಾರಣೀಭೂತರಾದರು. ವಿಧಾನಪರಿಷತ್ತಿನ ಆಡಳಿತ ಕಚೇರಿಗೆ ಸುಮಾರು ರೂ. 100 ಕೋಟಿ ಖರ್ಚು ಮಾಡಿ ಭವ್ಯ ಭವನವನ್ನು ಸಹ ನಿರ್ಮಾಣ ಮಾಡಲಾಯಿತು. ಆದರೆ ಕಟ್ಟಡ ಪೂರ್ಣ ನಿರ್ಮಾಣವಾಗುವ ಮೊದಲೇ, ಮತ್ತೆ ಅಧಿಕಾರಕ್ಕೆ ಬಂದ ಕು. ಜಯಲಲಿತ ವಿಧಾನಪರಿಷತ್ನ್ನು ರದ್ದುಗೊಳಿಸಿ ಈ ಕಟ್ಟಡವನ್ನು ಸಾರ್ವಜನಿಕರ ಆಸ್ಪತ್ರೆ ಉಪಯೋಗಕ್ಕೆ ಬಳಸಿಕೊಂಡರು. ವಿಧಾನಪರಿಷತ್ 'ಹಿರಿಯರ ವೇದಿಕೆ' ಹಾಗೂ ವಿವಿಧ ಕ್ಷೇತ್ರಗಳ ಜನರ ಕಲ್ಯಾಣಕ್ಕಾಗಿ ಇದ್ದರೂ ಸಹ ಅಧಿಕಾರಕ್ಕೆ ಬಂದ ಪಕ್ಷಗಳು ಪರಿಷತ್ ಅನ್ನು ದುರ್ಬಲ ಮಾಡಿಕೊಂಡು, ಸಿದ್ಧಾಂತಗಳಿಗೆ ವಿರುದ್ಧವಾದ ವ್ಯಕ್ತಿಗಳನ್ನು ನಾಮಕರಣ ಮಾಡುವಂತಾಗಿದೆ. ನಾಮನಿರ್ದೇಶನ ಪಡೆಯಲು ಮುಖ್ಯಮಂತ್ರಿಗಳಿಗೆ ಒತ್ತಡ ಲಾಬಿ ನಂತರ ಮಂತ್ರಿಗಿರಿಗಾಗಿ ಲಾಬಿ, ಕೆಲವು ಸಂದರ್ಭ ಬ್ಲಾಕ್ಮೇಲ್ ಮಾಡಿ ಅವಕಾಶವನ್ನು ಪಡೆಯುವಂತಿದ್ದು, ಸ್ಥಳೀಯ ಸಂಸ್ಥೆಗಳಿಂದ ಆಯ್ಕೆ ಮಾಡುವವರು ಅನಾವಶ್ಯಕ ಕಾರಣಕ್ಕೆ ರಾಜೀನಾಮೆ ನೀಡಿ ಮತ್ತೊಂದು ಚುನಾವಣೆಗೆ ಆಸ್ಪದ ನೀಡುವುದು ಮರು ಚುನಾವಣೆ ಬಂದಾಗ ನಿಗದಿತ ಸಂಹಿತೆ ಎಂದು ಹೇಳಿ ಆ ಜಿಲ್ಲೆಯಲ್ಲಿ ಅಭಿವೃದ್ಧಿಗೆ ತಡೆಯುಂಟು ಮಾಡುವುದು ಕೆಲವು ಸಂದರ್ಭ ವಿಧಾನಸಭೆಯಲ್ಲಿ ವಿವಾದ ಬಿಲ್ಗಳನ್ನು ಪರಿಷತ್ನಲ್ಲಿ ತಡೆ ಹಿಡಿದು ವಿಳಂಬ ಮಾಡುವುದು ಹಾಗೂ ಸರ್ಕಾರಕ್ಕೆ ಮುಜುಗರ ಮಾಡುವುದು. ಇದರಿಂದ ಸಮಯ ಹಾಗೂ ಅಭಿವೃದ್ಧಿ ಕುಂಠಿತವಾಗುವುದು. ಇಂತಹ ವಿಧಾನಪರಿಷತ್ ನಮಗೆ ಬೇಕೆ? ಇದರ ಹಣವನ್ನು ರೈತರ ಅಭಿವೃದ್ಧಿಗಾಗಿ ಅಥವಾ ಬಡಜನರ ಅನುಕೂಲಕ್ಕಾಗಿ ಏಕೆ ಬಳಸಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಕಠಿಣ ಕ್ರಮವನ್ನು ಕೈಗೊಳ್ಳುವ ಮೂಲಕ ಜನರ ಪ್ರೀತಿಪಾತ್ರರಾಗಬೇಕು ಹಾಗೂ ಖಜಾನೆಯ ಹಣವನ್ನು ಸದ್ವಿನಿಯೋಗ ಪಡಿಸಲು ಚಿಂತನೆ ಮಾಡಬೇಕು.
- ಕುರುಬೂರು ಶಾಂತಕುಮಾರ್
ಅಧ್ಯಕ್ಷರು, ರಾಜ್ಯ ಕಬ್ಬು ಬೆಳೆಗಾರರ ಸಂಘ (ರಿ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

