ಬಚ್ಚನ್ ಫ್ಯಾಮಿಲಿ ಕಿಚನ್ನಲ್ಲಿ ಏನೋ ಕಿರಿಕ್ ಆಗಿದೆಯಂತೆ?
ಏನ್ ಮಾಡೋದು ಈ 'ಜಯಾ' ಅಂತ ಹೆಸರಿಟ್ಟುಕೊಂಡೋರೆಲ್ಲಾ ಬರೀ ಸರ್ವಾಧಿಕಾರಿಗಳ ಥರಾನೇ ಆಡ್ತಾರೆ ಅನ್ಸುತ್ತೆ. ಅದಕ್ಕೆ ಹೀಗೆ. ಎಲ್ಲಾ ನನ್ ಹಣೆಬರಹ.
- ಅತ್ತೆ ಜೊತೆ ಜಗಳ ಆಡಿ ಅಳ್ತಾ ಇದೀರಾ? ಪಾಪ, ಸರಿ ನಿಮ್ಮತ್ತೆ ಏನಂತಿದಾರೆ?
ನಾನು ಮದುವೆಗೆ ಮುಂಚೆ ಇದ್ದ ಹಾಗೆ ಇಲ್ಲ ಅನ್ನೋದು ಅತ್ತೆ ದೂರು. ಈಗ 'ಬಣ್ಣ' ಬದಲಾಯಿಸಿದೀನಂತೆ. ಹಾಗಾಗಿ, ನನ್ನ ಮೇಲಿನ ಸಿಟ್ಟಿಗೆ ಈಗ 'ಬಹೂ ಕೇ ದೋ ರಂಗ್' ಅಂತ ಸಿನಿಮಾ ಪ್ರೊಡ್ಯೂಸ್ ಮಾಡ್ತಾರಂತೆ.
-ಅಷ್ಟೊಂದು ಬೇಜಾರಾಗಿದ್ರೆ, ನೀವು ಇಷ್ಟು ದಿನ ಯಾಕೆ ಸುಮ್ಮನೆ ಇದ್ರಿ?
ಏನ್ ಮಾಡೋದು, ಬಚ್ಚನ್ ಫ್ಯಾಮಿಲಿಯಲ್ಲಿ ಬಾಯಿ ಬಿಚ್ಚಂಗಿಲ್ಲ... ನಮ್ಮ ಸಂಪ್ರದಾಯದ ಪ್ರಕಾರ ಎಷ್ಟೇ ಕಷ್ಟ ಆದ್ರೂ ಗಂಡನ ಮನೆಯಿಂದ ಬಚ್ನಾ ಮನಾ ಹೈ ಅಲ್ವಾ...
- ಈಗ ಹೊಸ ಮನೆ ಮಾಡಬೇಕು ಅಂತಿದೀರಂತೆ, ಸಿನಿಮಾದಲ್ಲಿ ಆ್ಯಕ್ಟ್ ಮಾಡೋದ್ ಬಿಟ್ಟು ಮನೆಯಲ್ಲಿ ಅತ್ತೆ ಜೊತೆ ಕೂತು ಟಿವಿ ಸೀರಿಯಲ್ ನೋಡಿದ್ರೆ ಇನ್ನೇನಾಗುತ್ತೆ, ಮನೆಯೊಂದು ಮೂರು ಬಾಗಿಲು...ಹೋಗ್ಲಿ, ಅಭಿಶೇಕ್ ಇದರ ಬಗ್ಗೆ ಏನೂ ಹೇಳಲ್ವಾ?
ಅವರು ಫುಲ್ ಬ್ಯುಸಿ. ಭೀಮನ ಅಮಾವಾಸ್ಯೆ ದಿನ ಮಾತ್ರ ಅವರ 'ಕಾಲ್'ಶೀಟ್ ಸಿಗೋದು. ಅವರು ಇನ್ನೂ ಮಾತಾಡಿಲ್ಲ. ಆದ್ರೂ 'ಬೋಲ್ ಬಚ್ಚನ್' ಅಂತ ನಾನೂ ಹೇಳಿದೀನಿ ನೋಡ್ಬೇಕು ಏನಾಗುತ್ತೋ..
-ಇದರ ಬಗ್ಗೆ ನಿಮ್ಮ ಮಾವ ಅಮಿತಾಬ್ ಬಚ್ಚನ್ ಅವರು ಏನೂ ಹೇಳಿಲ್ವಾ, ಅವರು ನಿಮ್ಮನ್ನ ಹೇಗೆ ನೊಡ್ಕೊತಾರೆ?
ಅವರು ಈ ವಿಷಯದಲ್ಲಿ ತಲೆ ಹಾಕಲ್ಲ. ಆದ್ರೆ, ನನ್ ಕಂಡ್ರೆ ಅವರಿಗೆ ಇಷ್ಟ. ಯಾವಾಗ್ಲೂ, 'ರಿಶ್ತೇ ಮೇ ತೊ, ಹಮ್ ತೇರೆ ಬಾಪ್ ಲಗ್ತೇ ಹೈ' ಅಂತಾರೆ.
(ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
ನಾವು ಅತಿ ಹೆಚ್ಚು ಪ್ರೀತಿಸುವವರಿಗೇ ನಾವು ಅತಿ ಹೆಚ್ಚು ನೋವು ಕೊಡುತ್ತೇವೆ ಅನ್ನೋ ಮಾತನ್ನು ನಾವು ಕತೆ, ಕಾದಂಬರಿ ಸಿನಿಮಾಗಳಲ್ಲಿ ಕೇಳಿರುತ್ತೇವೆ. ಆದರೆ ಅದು ಎಷ್ಟು ನಿಜ. ಅದಕ್ಕೆ ಕಾರಣ ಏನು? ಅದನ್ನು ಅವಾಯ್ಡ್ ಮಾಡೋದು ಹೇಗೆ? ಎಂಬೆಲ್ಲಾ ಪ್ರಶ್ನೆಗಳಿಗೆ ಇಲ್ಲಿನ ಕೆಲವು ವೆಬ್ಸೈಟ್ಗಳಲ್ಲಿ ಉತ್ತರ ಹೇಳಲು ಯತ್ನಿಸಿದ್ದಾರೆ. ಅದನ್ನು ಓದಿ, ಅದರಲ್ಲಿ ಎಷ್ಟು ನಿಜ ಇದೆ, ಎಷ್ಟು ಸುಳ್ಳಿದೆ ಅಂತ ನೀವೇ ಡಿಸೈಡ್ ಮಾಡಿ.
bit.ly/18tRtwZ
bit.ly/1b5TXzh
yhoo.it/1b3tXFF
bit.ly/1fSwfuPhttp://bit.ly/1eA6lYQ
bit.ly/1j3O9KM
ಹರಿ-ಕಥೆ
ಯುವರಾಜ ಖೇಮುಗೆ ಮದುವೆ ಆಯ್ತು. ಖೇಮುಶ್ರೀ ಜೊತೆ ಭರ್ಜರಿ ರಿಸೆಪ್ಶನ್ನೂ ಆಯ್ತು. ಅತಿರಥ ಮಹಾರಥ ರಾಜರೆಲ್ಲಾ ವೆಡ್ಡಿಂಗ್ ಅಟೆಂಡ್ ಮಾಡಿದ್ರು ಅಂತ ಫುಲ್ ಖುಷಿಯಾಗಿದ್ದ ಖೇಮುಗೆ ಮರುದಿನವೇ ಸ್ಯಾಡ್ ನ್ಯೂಸ್ ಬಂತು. ಅವನ ವ್ಯಾಪ್ತಿಯಲ್ಲಿದ್ದ ದೂರದ ರಾಜ್ಯವೊಂದನ್ನು ವೈರಿಗಳು ಆಕ್ರಮಿಸಿಕೊಂಡಿದ್ದರು. ಹಾಗಾಗಿ ಅವನು ತಕ್ಷಣ ಹೊರಡಬೇಕಿತ್ತು. ಆದರೆ ಅವನಿಗೆ ಹೆಂಡತಿ ಒಬ್ಬಳೇ ಇರುತ್ತಾಳಲ್ಲ ಎಂಬ ಚಿಂತೆ. ಅದರ ಜೊತೆಗೆ ಯುದ್ಧಭೂಮಿಯಲ್ಲಿ ತನಗೇನಾದರೂ ಆದರೆ ಅವಳ ಗತಿ ಏನು ಎಂಬ ಚಿಂತೆ. ಹಾಗಾಗಿ ಖೇಮು ತನ್ನ ಹೆಂಡತಿಯನ್ನು ಒಂದು ಕೋಣೆಯೊಳಗೆ ಕೂಡಿ ಹಾಕಿ ಅದಕ್ಕೆ ಬೀಗ ಹಾಕಿದ. ಕೊಂಚ ಯೋಚನೆ ಮಾಡಿ ತನ್ನ ಆತ್ಮೀಯ ಗೆಳೆಯ ಸೋಮುವನ್ನು ಕರೆದು 'ನೋಡು ನಾನು ಯುದ್ಧಕ್ಕೆ ಅಂತ ದೂರದ ರಾಜ್ಯಕ್ಕೆ ಹೋಗುತ್ತಿದ್ದೇನೆ. ನಾನು ವಾಪಸ್ಸು ಬರುವುದು ಒಂದು ವರ್ಷ ಆಗಬಹುದು' ಎಂದು ಹೇಳಿ ಸೋಮು ಕೈಗೆ ಆ ಬೀಗದ ಕೀ ಕೊಟ್ಟು ಮತ್ತೆ ಮಾತು ಮುಂದುವರಿಸಿದ 'ಒಂದು ವರ್ಷದ ನಂತರವೂ ನಾನು ವಾಪಸ್ಸು ಬರದಿದ್ದರೆ ನೀನು ಈ ಕೀ ಬಳಸಿ ಬೀಗ ತೆಗೆದು ಒಳಗೆ ಹೋಗಬಹುದು. ಅಂದಿನಿಂದ ಅವಳು ನಿನ್ನವಳಾಗುತ್ತಾಳೆ'. ಸೋಮು ಭಾರವಾದ ಮನಸ್ಸಿನಿಂದಲೇ ಕೀ ತೆಗೆದುಕೊಂಡ. ಖೇಮು ಕುದುರೆ ಏರಿ ಹೊರಟ. ತನ್ನ ಊರಿನ ಗಡಿ ದಾಟುತ್ತಿದ್ದಂತೆ ಯಾರೋ ತನ್ನನ್ನು ಹಿಂಬಾಲಿಸುತ್ತಿದ್ದಾರೆ ಎನಿಸಿತು ಅವನಿಗೆ. ತಿರುಗಿ ನೋಡಿದರೆ ಹಿಂದೆ ಧೂಳಿನ ಅಲೆಯಲ್ಲಿ ವೇಗವಾಗಿ ಇನ್ಯಾರೋ ಕುದುರೆ ಮೇಲೆ ಬರುತ್ತಿದ್ದರು. ಅದನ್ನು ನೋಡಿ ತನ್ನ ಕುದುರೆಯನ್ನು ನಿಲ್ಲಿಸಿದ ಖೇಮುಗೆ ಕಂಡಿದ್ದು ತನ್ನ ಗೆಳೆಯ ಸೋಮು. ಹತ್ತಿರ ಬಂದ ಸೋಮುವನ್ನು ಖೇಮು 'ಏನಾಯ್ತು?' ಅಂತ ಕೇಳಿದ. ಅದಕ್ಕೆ ಏದುಸಿರು ಬಿಡುತ್ತಾ ಸೋಮು ಹೇಳಿದ 'ಗೆಳೆಯಾ ನೀನು ಯಾವುದೋ ರಾಂಗ್ ಕೀ ಕೊಟ್ಟಿದೀಯಾ...'
ಸ್ಯಾಂಡಲ್ವುಡ್
ಮೊನ್ನೆ ಮಲ್ಲೇಶ್ವ'ರಂ'ನ ಮುಖ್ಯರಸ್ತೆಯಲ್ಲೇ 'ಮದ್ಯ'ಪಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು 'ರ್ಯಾಂಬೋ' ಚಿತ್ರದ ನಾಯಕಿ ಮಾಧುರಿ. ಅವರ ಜೊತೆಗೆ ಒಂದಿಷ್ಟು ಪ್ರಭಾವಿಗಳೆನಿಸಿದ ಫ್ಯಾಷನ್ ಡಿಸೈನರ್ಗಳು. ಹಾಗಾಗಿ ಬೆಳ್ಳಂಬೆಳಗ್ಗೆ ರಸ್ತೆಯಲ್ಲಿ ಕುಡಿಯುವುದು ಫ್ಯಾಷನ್ ಎಂದುಕೊಂಡರೋ ಏನೋ ಅಂತೂ ವೀಣಾ ಸ್ಟೋರ್ಸ್ ಬಳಿ ಅಂದು ಪರಿಸ್ಥಿತಿ ಕೊಂಚ ಗರಂ ಆಗಿತ್ತು. ಅದೇನು ಬೆಳಗ್ಗೆ ನಡೆದ ಸಮಾರಾಧನೆಯೋ ಅಥವಾ ಇನ್ನೂ ಮುಗಿದಿರದ ರಾತ್ರಿ ಪಾರ್ಟಿಯೋ ಗೊತ್ತಿಲ್ಲ, ಆದರೆ ಅಷ್ಟೊಂದು ರಾಜಾರೋಷವಾಗಿ ನಡೆಯುತ್ತಿದ್ದ ಪಾರ್ಟಿ ನೋಡಿದವರಿಗೆ ಮಾತ್ರ ಆಶ್ಚರ್ಯ. ಅದಕ್ಕಿಂತಲೂ ಆಶ್ಚರ್ಯ ಎಂದರೆ ಪೊಲೀಸ್ ಕಾನ್ಸ್ಟೇಬಲ್ ಒಬ್ಬ ಏನೂ ಗೊತ್ತಿಲ್ಲದಂತೆ ಅಲ್ಲೇ ನಿಂತಿದ್ದುದು. ವಿಚಿತ್ರ ಎಂದರೆ ಮಲ್ಲೇಶ್ವರಂ ಟೀ ಅಂಗಡಿಗಳ ಮುಂದೆ ಸಿಗರೇಟು ಸೇದುವವರಿಗೆ ಲಾಠಿ ಏಟು ತೋರಿಸುವ, ಸಂದಿಗೊಂದಿಯಲ್ಲಿನ ಕಾಕಾ ಹೋಟೇಲ್ಗಳ ಸಂದಿಯಲ್ಲಿ ಅಡಗಿಕೊಂಡು ಧೂಮಪಾನ ಮಾಡುವ ಹುಡುಗರನ್ನು ಟೆರರಿಸ್ಟ್ಗಳಂತೆ ಅಟ್ಟಾಡಿಸಿಕೊಂಡು ಹಿಡಿದು ಅವರಿಂದ ಹಣ ವಸೂಲಿ ಮಾಡುವ ಇದೇ ಚಾಣಾಕ್ಷ ಪೊಲೀಸರು ಅವತ್ತಿನ ಹಗಲು ಮದ್ಯ ಸಮಾರಾಧನೆ ಮತ್ತು ಪುಂಡಾಟದ ಬಗ್ಗೆ ಸಾರ್ವಜನಿಕರು ಎಷ್ಟೇ ಹೇಳಿದರೂ ಕಮಕ್ ಕಿಮಕ್ ಎನ್ನಲಿಲ್ಲ. ಅದನ್ನು ನೋಡಿದ ಕೆಲವು ಲೋಕಲ್ ಹುಡುಗರು ಪ್ರಭಾವಿಗಳಾದ ಅವರ ಜಾಗದಲ್ಲಿ ನಾವಿದ್ದಿದ್ರೆ ಸುಮ್ನೆ ಬಿಡ್ತಿದ್ರಾ ಎಂದು ಗೊಣಗಿಕೊಂಡು, ಸಾರ್ವಜನಿಕರ ರೋಷ ಹೆಚ್ಚಾದ ಮೇಲೆ ಮಾತ್ರ ಕಾನೂನು ಎಲ್ಲರಿಗೂ ಒಂದೇ ಎಂಬ ಪರಿಸ್ಥಿತಿ ಬಂದಿದ್ದು ಸಮಾಧಾನದ ಸಂಗತಿ.
ಡಬ್ಕುಡಬಲ್ ತುದಾಂಡಲ್...
'ಅಂಗಾರಕ' ಸಿನಿಮಾ ಬಿಡುಗಡೆ
ಪಂಕಜ, ಪದ್ಮ, ಬಸಂತಿ, ಸರಳ ಆಯ್ತು, ಈಗ ಗಾಂಧಿನಗರದ ಹೊಸ ಐಟಂ 'ಮಂಗಳ'
ಮಾಡರ್ನ್ ಗಾದೆ
ಬಿಸಿಲೇರಿ ವಾಟರ್ ಕೇಳಿದರೆ 'ಕುಡಿಯೋಕಾ?' ಅಂತ ಕೇಳಿದ್ನಂತೆ..
ಮನೆಯಲ್ಲಿ ಕುಳಿತು ಹಾಡುತ್ತ ಅಕ್ಕಪಕ್ಕದ ಮನೆಯವರ ನಿದ್ದೆಗೆಡಿಸುವ ಸಂಗೀತ ಕಾರ್ಯಕ್ರಮ
ಗೃಹ 'ಕಚೇರಿ'
ಬಿ.ಎಸ್.ಯಡಿಯೂರಪ್ಪ 'ಶಾದಿ ಭಾಗ್ಯ' ಎಲ್ಲರಿಗೂ ಸಿಗಲಿ ಅಂತ ಸದನದ ಬಾವಿಗಿಳಿದು ಪ್ರತಿಭಟನೆಗೆ ಕೂತಿದ್ದಾರೆ. ಅದರ ಬಗ್ಗೆ ಒಂದಿಷ್ಟು ಪ್ರತಿಕ್ರಿಯೆಗಳು
- ಇಷ್ಟು ದಿನ ಅವರು ಮಾಜಿ ಮುಖ್ಯಮಂತ್ರಿ, ಈಗ 'ಬಾವಿ' ಮುಖ್ಯಮಂತ್ರಿ
- ಶಾದಿಭಾಗ್ಯ ಬೇಕು ಅಂತ ಬಾವಿಗಿಳಿದಿದ್ದಾರಲ್ಲ, ಶಾದಿ ಅಂದ್ರೆ ಅದೂ ಒಂಥರಾ ಬಾವಿಗೆ ಬೀಳೋದೇ ಅಂತಾನಾ?
- ಅವರ ಹೋರಾಟ ಫ್ಲಾಪ್ ಆಗ್ತಿರೋದು ನೋಡಿ, ಪಾಪಿ ಬಾವಿಗಿಳಿದರೂ ಮೊಣಕಾಲುದ್ದ ನೀರು ಅಂತ ಆಗದವರು ಆಡಿಕೋಬಹುದು
- ಬೆಂಗಳೂರಿನ ಗಾಂಧಿಸರ್ಕಲ್ನಲ್ಲಿ ಅಹೋ'ರಾತ್ರಿ' ಧರಣಿ ಮಾಡಿದ್ರೂ ಏನೂ ಯೂಸ್ ಆಗಲಿಲ್ಲ, ಈಗ ಸದನದ ಬಾವಿಯಲ್ಲಿ ಕೂತಿದ್ದಾರೆ. ಹಾಗಾಗಿ, ಇದೊಂಥರಾ ಇರುಳು ಕಂಡ ಬಾವಿಯಲ್ಲಿ ಹಗಲು ಬಿದ್ದ ಹಾಗೆ.
- ಹರಿ
harikannadaprabha@gmail.com