ಅಂಕಣಗಳು

ಚಿನ್ನಕ್ಕೆ ಹೊಂಚಿದವರಿಗೆ ಟ್ವಿಟ್ಟರ್ ಗುನ್ನ

Published On :

ಆರ್ಥಿಕ ಸಂಕಷ್ಟದಿಂದ ಪಾರಾಗುವುದಕ್ಕೆ ಹಿಂದು ದೇವಾಲಯಗಳಲ್ಲಿ ಸಂಗ್ರಹವಾಗಿರುವ ಚಿನ್ನವನ್ನು ಬಳಸಿಕೊಳ್ಳುವುದಕ್ಕೆ ಆರ್‌ಬಿಐ ಯೋಚಿಸುತ್ತಿದೆ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಪ್ರಮುಖ ದೇವಾಲಯಗಳಿಗೆ ಪತ್ರ ಬರೆದ ಆರ್‌ಬಿಐ, ನಿಮ್ಮಲ್ಲಿರುವ ಚಿನ್ನದ ಸಂಗ್ರಹದ ಬಗ್ಗೆ ಮಾಹಿತಿ ಕೊಡಿ ಎಂದು ಕೇಳಿದೆ. ಈ ನಡೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ದೇವಾಲಯಗಳ ಆಸ್ತಿಯ ಮೇಲೆ ಸರ್ಕಾರ ಕಣ್ಣು ಹಾಕಿರುವುದನ್ನು ಜನ ಯಾವ ನೆಲೆಯಲ್ಲಿ ಆಕ್ಷೇಪಿಸುತ್ತಿದ್ದಾರೆ ಎಂಬುದನ್ನು ತಿಳಿಯುವುದಕ್ಕೆ ಜನಪ್ರಿಯ ಸಾಮಾಜಿಕ ತಾಣ ಟ್ವಿಟ್ಟರ್‌ನಲ್ಲಿ ನಡೆಯುತ್ತಿರುವ ಚುಟುಕು ಚರ್ಚೆ ಗಮನಿಸಬೇಕು. 'ಕೀಪ್‌ಆಫ್‌ಟೆಂಪಲ್ಸ್‌' ಹಣೆಪಟ್ಟಿಯಲ್ಲಿ ಟ್ವೀಟಿಗರು ತಮ್ಮ ಅಭಿವ್ಯಕ್ತಿ ಹೊರಗೆಡವಿದ್ದಾರೆ.

'ಭಾರತ ನಿರ್ಮಾಣವಾಗಿದೆ' ಎಂದು ಜಾಹೀರಾತು ನೀಡುವ ನಿಮಗೇಕೆ ದೇವಾಲಯಗಳ ಚಿನ್ನ?
- ರತ್ನಾಕರ ಕುಲಕರ್ಣಿ

ದೆಹಲಿಯಲ್ಲಿರುವ ಮೂರು ಸಮಾಧಿಗಳೇ- ಗಾಂಧಿ, ನೆಹರು, ಇಂದಿರಾರದ್ದು- ಒಟ್ಟಾಗಿ 57,489,75, 00,000 ರುಪಾಯಿ ಬೆಲೆ ಬಾಳುತ್ತವೆ. ಅವನ್ನೇ ಮಾರಿ, ದೇವಾಲಯಗಳಿಂದ ದೂರವಿರಿ.
- ಕಿರಣ ಕುಮಾರ್ ಕೆ.ಎಸ್.

ಚರ್ಚ್‌ಗಳಿಗೆ ಬರುತ್ತಿರುವ ವಿದೇಶಿ ಫಂಡ್ ನಮ್ಮ ನೌಕಾದಳದ ಬಜೆಟ್‌ಗೆ ಸಮನಾಗಿದೆ. ಆರ್ಥಿಕತೆ ಸುಧಾರಣೆಗಾಗಿ ಅವನ್ನೇಕೆ ಬಳಸಿಕೊಳ್ಳುವುದಿಲ್ಲ?
- ಕಾಮನ್‌ಮ್ಯಾನ್

ದೇವರಿಗೆ ಸೇರಿದ ದೇವಾಲಯಗಳ ಆಸ್ತಿ ವರ್ತಮಾನಕ್ಕಷ್ಟೇ ಸೀಮಿತವಲ್ಲ. ಭವಿಷ್ಯಕ್ಕೂ ಬೇಕದು. ನಾವದರ ಟ್ರಸ್ಟಿಗಳಷ್ಟೆ.
- ಆರ್. ವೈದ್ಯನಾಥನ್

ಸೆಕ್ಯುಲರ್ ಪಕ್ಷಗಳಿಗೆ ತಮ್ಮ ಸೆಕ್ಯುಲರ್ ಯೋಜನೆಗಳನ್ನು ಜಾರಿಯಲ್ಲಿಡಲು ಈಗ ಕೋಮುವಾದಿ ಹಣ ಬೇಕಿದೆಯೇ?
- ಸರ್‌ನೇಮ್ಸ್ ಇನಫ್

ಈ ಹಿಂದೆ ಮುಸ್ಲಿಂ ಆಕ್ರಮಣಕಾರರು ಹಿಂದು ದೇವಾಲಯಗಳನ್ನು ದೋಚುತ್ತಿದ್ದರು. ಇದೀಗ ಸರ್ಕಾರವೇ ಬಹಿರಂಗವಾಗಿ ಆ ಕೆಲಸಕ್ಕೆ ಮುಂದಾಗಿದೆ.
- ಸಿದ್ಧಾರ್ಥ ಪೈ

ಅರ್ಥವ್ಯವಸ್ಥೆಯನ್ನು ಕೊಂದ ಕಾಂಗ್ರೆಸ್, ಅದರ ಅಂತ್ಯಕ್ರಿಯೆಗೆ ದೇವಾಲಯಗಳ ಸಂಪತ್ತಿನ ಮೇಲೆ ಕಣ್ಣಿಟ್ಟಿದೆ.
-ಹೊಮೊ ರ್ಯಾಷನಲ್

ಸೋನಿಯಾ ಗಾಂಧಿ ನಿರ್ವಹಿಸುತ್ತಿರುವ ಎಲ್ಲ ಟ್ರಸ್ಟ್‌ಗಳನ್ನೂ ಮೊದಲು ಹರಾಜಿಗಿಡಲಿ. ನಂತರ ದೇವಾಲಯಗಳ ಸಂಪತ್ತಿನತ್ತ ಕಣ್ಣುಹಾಯಿಸಲಿ.
- ಇವಿಲ್ ಯಿಂದೂ

'ಭಾರತ್ ನಿರ್ಮಾಣ್‌' ಜಾಹೀರಾತು ನೀಡುವುದಕ್ಕೆ ದೇವಾಲಯಗಳ ಸಂಪತ್ತು ದೋಚುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ.
-ಇಂಡಿಯಾ ಸ್ಪೀಕ್ಸ್

ಸೋನಿಯಾ ಅವರೇ, ರಾಜೀವ್ ಗಾಂಧಿ ಸಮಾಧಿ ವೀರ್‌ಭೂಮಿಯನ್ನು ರಾಬರ್ಟ್ ವಾದ್ರಾ ಅವರಿಗೆ ಮಾರಿ ನಿಮ್ಮ ಹಣದಾಹ ತೀರಿಸಿಕೊಳ್ಳಿ. ದೇವಾಲಯಗಳಿಂದ ದೂರವಿರಿ.
-ತೇಜಿಂದರ್ ಬಗ್ಗಾ

ಯಾವತ್ತೂ ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ಮುಳುಗಿದ ಸರ್ಕಾರಕ್ಕೆ ಅರ್ಥವ್ಯವಸ್ಥೆ ಸುಧಾರಿಸುವುದಕ್ಕೆ ಮಾತ್ರ ಹಿಂದುಗಳ ಚಿನ್ನ ಬೇಕೇ?
- ಸುಧಾ ನಾರಾಯಣನ್

ಅರ್ಥವ್ಯವಸ್ಥೆ ಸುಧಾರಣೆ ರಾಗ ಹಾಡುತ್ತಿರುವ ಸರ್ಕಾರಕ್ಕೆ ಜಾಮಾ ಮಸೀದಿ ಇಲ್ಲವೇ ವಕ್ಪ್‌ಬೋರ್ಡ್‌ನ ಸಂಪತ್ತು ಕೇಳುವ, ಹಜ್ ಸಬ್ಸಿಡಿ ಕೊನೆಗೊಳಿಸುವ ಧೈರ್ಯವಿದೆಯೇ?
-ಅಶುತೋಷ ಕುಲಕರ್ಣಿ

ಈವರೆಗೂ ನಾವು 90ರ ದಶಕಕ್ಕೆ ಹಿಂತಿರುಗುತ್ತಿದ್ದೇವೆ ಎಂಬ ಮಾತು ಕೇಳುತ್ತಿದ್ದೆವು. ಈಗೆನಿಸುತ್ತಿದೆ, ನಾವು ಮೊಘಲರ ಕಾಲಕ್ಕೆ ಜಾರುತ್ತಿದ್ದೇವೆ ಅಂತ!
-ರೊನಾಕ್ ಗೋಯಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.