ಗ್ರಾಮಗಳ ಮೇಲೆ ಬೆಳಕು ಚೆಲ್ಲೋಕೆ ಇರಲೊಂದು ಅಂಕಣ
ಕನ್ನಡಪ್ರಭದ ವಿಭಿನ್ನವಾದ ಮೌಲ್ಯಯುತವಾದ ಲೇಖನಗಳೊಂದಿಗೆ ಚೆನ್ನಾಗಿ ಮೂಡಿ ಬರುತ್ತಿದೆ. ಅನೇಕ ರಾಜ್ಯಗಳಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಸಂಸ್ಥೆ- ವ್ಯಕ್ತಿಗಳ ಪರಿಚಯ ಹೊಂದಿರುವ ಲೇಖನಗಳು ಹಾಗೂ ಇತರೆ ಪ್ರತಿಯೊಂದು ರಂಗದ ವೈವಿಧ್ಯಮಯ-ವಿಸ್ಮಯ-ನೈಜ ಘಟನೆಗಳ ಬಗ್ಗೆ ವಿಸ್ತೃತ ವರದಿ ತಮ್ಮ ಪತ್ರಿಕೆಯಲ್ಲಿ ಮೂಡಿ ಬರುವುದರೊಂದಿಗೆ ವಾರಕೊಮ್ಮೆ -"ಖುಷಿ"-ಚೆನ್ನಾಗಿದೆ. ತಾವು ರಾಜ್ಯದ ಪ್ರತಿ ಜಿಲ್ಲೆ, ತಾಲ್ಲೂಕು, ಗ್ರಾಮಗಳ ಮೇಲೆ ಬೆಳಕು ಚೆಲ್ಲಲು ವಾರಕ್ಕೊಂದು ಜಿಲ್ಲೆ-ತಾಲ್ಲೂಕು-ಗ್ರಾಮಗಳ - ಸ್ಥೂಲ ಪರಿಚಯ, ಮಾಹಿತಿ ಸಮಸ್ತ ಜನರ ಆಶಯ. ಹೀಗೆ ಅಲ್ಲಿಯ ಎಲ್ಲವನ್ನೂ ನೀಡಿದರೆ ಇನ್ನೂ ಹೆಚ್ಚು ಸಾಮಾಜಿಕವಾಗುವಲ್ಲಿ ಪತ್ರಿಕೆ ಸಹಕರಿಸಿದಂತಾಗುತ್ತದೆ.
- ಶ್ರೀ ಚಿದಂಬರ ಪಿ. ನಿಂಬರಗಿ, ಅಧ್ಯಕ್ಷರು, ಶ್ರೀ ಚಿದಂಬರ ಶಿಕ್ಷಣ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಶಿರೋಳ. ತಾ. ನರಗುಂದ. ಜಿ.ಗದಗ. ಮೊ. 900820 1422
1 9.1.14 ಭಾನುವಾರದ ಖುಷಿಯಲ್ಲಿ ಕೆ.ವಿ. ಪ್ರಭಾಕರ್ರವರು ತಮ್ಮ 'ಒಂದು ಗೋಡೆ ರಾಜಕಾರಣ' ಎಂಬ ಲೇಖನದಲ್ಲಿ ರಾಜಕಾರಣಿಗಳು ಹೇಗಿರಬೇಕೆಂಬುದನ್ನು 20.1.14ರ ಸೋಮವಾರ ಪಿ. ತ್ಯಾಗರಾಜ್ರವರು ತಮ್ಮ 'ಸಾವಿನ ಮನೆ ರಾಜಕೀಯಕ್ಕೆ ಬಂಡೆ ಕೂಡ ಕರಗಬೇಕು' ಎಂಬ ಲೇಖನದಲ್ಲಿ ಅಧಿಕಾರಿಗಳು ಹೇಗೆ ವರ್ತಿಸಬೇಕೆಂಬುದನ್ನು ಮನಸ್ಸನ್ನು ಮುಟ್ಟಿಕೊಳ್ಳುವಂತೆ ವಿವರಿಸಿದ್ದಾರೆ. ರಾಜಕಾರಣಿಗಳು-ಅಧಿಕಾರಿಗಳು ಕೆಟ್ಟ ರಾಜಕೀಯ ಮಾಡದೆ ಮಾನವ ಧರ್ಮ ಬಿಡದೆ ತಾಯಿ ತನ್ನ ಎಲ್ಲಾ ಮಕ್ಕಳನ್ನು ಸಮನಾಗಿ ನೋಡಿದಂತೆ ಪ್ರಜೆಗಳನ್ನು ಸಲಹಿದರೆ ಸಮಾಜ ಸಮೃದ್ಧಿಯಾಗುವುದರಲ್ಲಿ ಸಂಶಯವಿಲ್ಲ. ಆದರೆ ರಾಜಕಾರಣಿಗಳು ರಾಜಕಾರಣಿಗಳಾಗಿರುವುದು, ಅಧಿಕಾರಿಗಳು ಅಧಿಕಾರಿಗಳಾಗಿರುವುದೇ ಸಂಶಯ.
-ಚಿಕ್ಕಣ್ಣ, ಉಪನ್ಯಾಸಕರು, ಕೊರಟಗೆರೆ.
ಡಾ. ರಾಧಾಕೃಷ್ಣ ಬೆಳ್ಳೂರುರವರು ಭಾನುವಾರ 19ರಂದು 'ಮಾಹಿತಿಗಳ ಸಂಗ್ರಹವೇ ಜ್ಞಾನವೆಂಬ ಭ್ರಮೆ' ಎಂಬ ಲೇಖನವೂ ಮಾಹಿತಿ, ಜ್ಞಾನ, ಭ್ರಮೆ ಎಂಬ ಉತ್ತಮ ಪದಗಳ ಆಗರವಾಗಿದೆ. ಕನ್ನಡ ಭಾಷೆ, ಅಧ್ಯಾಪಕರ ನಿರುತ್ಸಾಹ, ಕಳಪೆ ಸಂಶೋಧನೆ, ತೋರ್ಪಡಿಕೆಯ ವಿಚಾರ ಸಂಕಿರಣ, ಪಿಎಚ್ಡಿಯ ಹಂಬಲ, ಶಿಕ್ಷಣ ಎಂಬ ಹಲವು ಚಿಂತನೆಗಳನ್ನೊಳಗೊಂಡಿದೆ.
-ನಾಗಮಣಿ. ಹೆಚ್.ಎನ್. ಯ.ನಾ. ಹೊಸಕೋಟೆ, ತುಮಕೂರು.
ಜನವರಿ 2, 2014ರ ಪತ್ರಿಕೆಯಲ್ಲಿ ಸಂಪಾದಕರು ಬರೆದ 'ಮಾನ ಮರ್ಯಾದೆ ಬಿಟ್ಟವರೆಂದರೆ ಭಾರತೀಯರು' ಈ ಲೇಖನ ಓದಿ ಮನಸ್ಸಿಗೆ ಬೇಸರವಾಗಲಿಲ್ಲ. ನಮ್ಮ ನಿಜಸ್ಥಿತಿ ಹಾಗೆಯೇ ಇದೆ. ಶಾಲಿನಿ ರಜನೀಶ್ರವರು ಪ್ರತೀ ಸೋಮವಾರ ಬರೆಯುವ ಲೇಖನ ತುಂಬಾ ಇಷ್ಟ. ನಿಮ್ಮಂತಹ ದಕ್ಷ, ಉತ್ತಮ ಅಧಿಕಾರಿಗಳಿದ್ದರೆ ನಮ್ಮ ರಾಜ್ಯ ಖಂಡಿತವಾಗಿಯೂ ಸುಧಾರಣೆ ಕಾಣಬಹುದು. ನೀವು ಬೆಳಗಾವಿ ಜಿಲ್ಲಾಧಿಕಾರಿಯಾಗಿದ್ದ ವೇಳೆ ಉತ್ತಮ ಆಡಳಿತವನ್ನು ನೀಡಿದ್ದೀರಿ. ನಿಮ್ಮ ಕರ್ತವ್ಯಕ್ಕೆ ಶುಭ ಹಾರೈಸುತ್ತೇವೆ.
-ಓಸ್ವಾಲ್ಡ್ ಪಡಿವಾಳೆ, ಕೆನರಾ ಪೈಂಟ್ಸ್, ಧಾರವಾಡ್ ರಸ್ತೆ, ಬೆಳಗಾವಿ-16. ಮೊ. 944 99456 78
'ನೋಡ್ತಾ ಇರಿ ಏನೇನ್ ಮಾಡ್ತೀವಿ'ಎಂದಾಗ ಏನೆಲ್ಲಾ ಆಸೆ-ಕನಸುಗಳನ್ನಿಟ್ಟುಕೊಂಡು ಖುಷಿಯಿಂದ ಕಾಯ್ತಿದ್ದೆ. ಒಂದೆರಡು ವಾರದಲ್ಲಿಯೇ ವಿಶೇಷ ಖುಷಿಯೂ ಬಂದು ಬಿಡ್ತು. ಅದ್ರೊಳ್ಗೆ ಆ 'ಬೆಡ್ ಜಾಮ್'ನೂ ಇಟ್ರಿ! ಸೋಬ್ನ ಎಲ್ಲಾರ್ಗೂ ಗೊತ್ತಿದ್ದದ್ದೇ ಅಂತ ಹಾದಿ ಬೀದೀಲಿ ಮಂಚ ಹಾಕ್ಕೊಂಡು ಸೋಬ್ನ ಮಾಡಕ್ಕಾಯ್ತದಾ? ಬೇಡ ಭಟ್ರೇ ಇಂಥವೆಲ್ಲ ಬಿಟ್ಟು ಒಳ್ಳೆ ಖುಷಿ ಕೊಡಿ ಭಟ್ರೇ-" ನಿಮ್ ತಲೇನಾಗೆ ಏನೇನೋ ಐತೆ ನಿಜ. ಅದ್ರಾಗೆ ಅನುಮಾನ್ವೇ ಇಲ್ಲ. ಆದ್ರೆ ಯುವಪೀಳಿಗೆನಾ ಕೆರಳಿಸೋ ಬೆಡ್ಜಾಮ್ ಕೊಡ್ಬೇಡ್ರಿ. ಅರಳಿಸೋ ಬ್ರೆಡ್ ಜಾಮ್-ಫಾಸ್ಟ್ ಫುಡ್ಡಾದ್ರೂ ಇರ್ಲಿ.
-ಚನ್ನಬಸವ ಪುತ್ತೂರು, ಚಿತ್ರದುರ್ಗ. ಮೊ. 94816 89667
ದಿ.12.1.2014ರ ಕನ್ನಡಪ್ರಭದಲ್ಲಿ ಪ್ರಣತಿಯವರ ಲೇಖನ ಓದುತ್ತಿದ್ದಂತೆ ನನಗೆ ಬಾಲ್ಯದ ನೆನಪುಗಳು ಮರುಕಳಿಸಿದವು. ನಾನು 4ನೇ ತರಗತಿಯಲ್ಲಿದ್ದಿರಬೇಕು. ಆಗ ಪತ್ರ ಬರೆಯುವುದರ ಬಗ್ಗೆ ಅವರು ಪತ್ರವನ್ನು ಓದಿ ಖುಷಿಯಿಂದ ನನ್ನ ಮೊಮ್ಮಗಳು ಪತ್ರ ಬರೆಯಲು ಕಲಿತಿದ್ದಾಳೆ ಎಂದು ಮಾತನಾಡಿಸಲು ಊರಿಂದ ಬಂದಿದ್ದರು. ನನ್ನ ತಂದೆಯವರು ಹೆಚ್ಚಾಗಿ ನನ್ನಿಂದ ಪತ್ರಗಳನ್ನು ಬರೆಸುತ್ತಿದ್ದರು. ಅವರು ತಮ್ಮ ಸಹೋದರಿಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಹೀಗಾಗಿ ದೂರವಾಣಿ ಇರದ ಕಾಲದಲ್ಲಿ ಪತ್ರಗಳೇ ಸಂಗಾತಿಗಳಾಗಿದ್ದವು. ಅಕ್ಕ-ಪಕ್ಕದ ಮನೆಯವರು ಸಹ ನನ್ನಿಂದ ಪತ್ರಗಳನ್ನು ಬರೆಸುತ್ತಿದ್ದರು. ಇದರಿಂದ ನನಗೆ ಹೆಮ್ಮೆಯ ಗರಿ ಮೂಡಿತ್ತು. ಈಗಲೂ ಸಹ ನನಗೆ ಪತ್ರಗಳನ್ನು ಬರೆಯುವುದೆಂದರೆ ಇಷ್ಟ. ಪತ್ರಿಕೆಗಳಿಗೆ ಪತ್ರಗಳನ್ನು ಬರೆಯುವುದರ ಮೂಲಕ ಪತ್ರ ಸಂಸ್ಕೃತಿ ಮುಂದುವರಿದಿದೆ.
-ಅಂಬಮ್ಮ ಪ್ರತಾಪ್ಸಿಂಗ್, ಮಾನ್ವಿ
ನಿಮ್ಮ ಅನಿಸಿಕೆಗಳನ್ನು ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

