Hmmm.. ಪಾಂಚ್ ರವೀಂದ್ರ ಜಡೇಜಾ

ಏನ್ ಜಡೇಜಾ ಅವ್ರೇ...ಹಲೋ, ಕಾಲ್ ಮಿ 'ಸರ್‌' ಜಡೇಜಾ, ಐ ಆ್ಯಮ್ ಬ್ಯಾಕ್ ಇನ್ ಫಾರ್ಮ್ ಯೂ ನೋ...
Hmmm.. ಪಾಂಚ್ ರವೀಂದ್ರ ಜಡೇಜಾ
Updated on: 

-    ಏನ್ ಜಡೇಜಾ ಅವ್ರೇ...
ಹಲೋ, ಕಾಲ್ ಮಿ 'ಸರ್‌' ಜಡೇಜಾ, ಐ ಆ್ಯಮ್ ಬ್ಯಾಕ್ ಇನ್ ಫಾರ್ಮ್ ಯೂ ನೋ...

-    ಹೌದು ಬಿಡಿ, ಅಂತೂ ಟೈಟ್ ಮ್ಯಾಚನ್ನ ಟೈ ಮಾಡಿಸ್‌ಬಿಟ್ರಿ, ಈಗ ನಿಮ್ಗೆ 'ಸರ್‌' ಅನ್ನೋ ಹೆಸರು ಮ್ಯಾಚ್ ಆಗುತ್ತೆ ಬಿಡಿ, ಈಗ ನೀವು 'ಟೈ' ಹಾಕ್ಕೊಂಡಿರೋ 'ಸರ್‌'..
ಹೌದು, ಇನ್ಮೇಲೆ ಸಚಿನ್ ಥರಾ ನನ್ ಬಗ್ಗೆನೂ ಹೊಸ ಮಾತು ಹುಟ್ಟಿಕೊಂಡಿದೆ ಗೊತ್ತಾ? 'ಇಫ್ ಕ್ರಿಕೆಟ್ ಈಸ್ ಎ 'ಜೆಂಟಲ್‌ಮನ್ಸ್‌' ಗೇಮ್, ಐ ಆ್ಯಮ್ ದಿ 'ಸರ್‌'.

-    ಅದ್ಸರಿ, ಗುಡ್ ಫಿನಿಶರ್ ಆಗಿರೋ ನೀವು ಕೊನೇವರೆಗೂ ಕುಟ್ಟಿಕೊಂಡೇ ಆಡಿ, ಆಮೇಲೆ ಫೀನಿಕ್ಸ್ ಥರಾ ಎದ್ದು ಬಂದ್ ಬಿಡ್ತೀರಾ ಅಲ್ವಾ?
ಎದ್ದು ಬರೋದೆಲ್ಲ ಏನಿಲ್ಲ, ಸ್ಟೇಡಿಯಂನಲ್ಲಿ ಆಟ ನೋಡೋಕ್ ಬಂದಿರೋ ಜನ, ಮ್ಯಾಚ್ ಫಿನಿಶ್ ಆಗೋವರೆಗೂ ಎದ್ದು ಹೋಗದೇ ಇರಲಿ ಅನ್ನೋದಷ್ಟೇ ನನ್ನ ಉದ್ದೇಶ.

-    ನಿನ್ನೆ ಚೆನ್ನಾಗೇ ಆಡಿದ್ರಿ, ಆದ್ರೂ ಯಾವತ್ತೋ ಒಂದಿನ ಆಡಿ 'ನಾನು ಸರ್‌' ಅಂತ ಇಷ್ಟೊಂದ್ ಪೋಸ್ ಕೊಡೋದು ಸರೀನಾ?
ಮತ್ತೆ? ದಿನಾ ಒಬ್ಬನೇ ಆಡೋಕಾಗುತ್ತೇನ್ರೀ, ಎಲ್ಲರೂ ಒಂದೊಂದು ದಿನ ಆಡ್‌ಬೇಕು ನನ್ನ 'ಸರ್‌'ದಿ ಬಂದಾಗ ನಾನು ಆಡ್ತೀನಿ ಸರ್‌ಜೀ.

-    ಹಂಗಲ್ಲ,  ನೀವು 'ಸೌ'ರಾಷ್ಟ್ರದವರಲ್ವಾ, ಹಂಗಾಗಿ ಪ್ರತಿದಿನಾ 'ಸೌ' ರನ್ ಹೊಡೀಬೇಕಪ್ಪ...
ಹೌದೌದು, ಸೌರವ್ ಗಂಗೂಲಿನೂ ಇದೇ ಪ್ರಶ್ನೆ ಕೇಳಿದ್ರಾ ನೀವು, ಅಲ್ಲದೆ, ಅಶ್‌'ವಿನ್‌' ಅಂತ ಹೆಸರಿಟ್ಟುಕೊಂಡಿದ್ದಕ್ಕೆ ಪ್ರತಿ ಮ್ಯಾಚೂ ಅವ್ನೇ ಗೆಲ್ಲಿಸ್‌ಬೇಕು ಅಂದಗಾಯ್ತು..
(ಕಾಲ್ಪನಿಕ ಸಂದರ್ಶನ)

ಒಮ್ಮೆ ಭೇಟಿ ಕೊಡಿ
ಹಣೆಬರಹ ನಮ್ಮ ಕೈಲಿಲ್ಲ ನಿಜ. ಆದರೆ ನಮ್ಮ ಕೈಬರಹವಂತೂ ನಮ್ಮ ಕೈಯಲ್ಲೇ ಇರುತ್ತೆ ಅಲ್ವಾ. ಇತ್ತೀಚಿನ ದಿನಗಳಲ್ಲಿ ಕೈಯಲ್ಲಿ ಬರೆಯೋದಕ್ಕಿಂತ ಕಂಪ್ಯೂಟರ್‌ನಲ್ಲೇ ಬರೆಯುವವರು ಹೆಚ್ಚು. ಆದರೂ ಕೂಡ ಕೈಬರಹಕ್ಕೆ ಇನ್ನೂ ಬೆಲೆ ಇದೆ. ಇಲ್ಲಿ ಕೈಬರಹವನ್ನು ಆಕರ್ಷಕವಾಗಿಸಿಕೊಳ್ಳುವ ಬಗ್ಗೆ ಒಂದಷ್ಟು ಟಿಪ್ಸ್‌ಗಳಿವೆ. ಆದರೆ ಸಿಗ್ನೇಚರ್‌ಗಳು ಯಾವಾಗಲೂ ವಿಚಿತ್ರವಾಗಿ ಗೀಚಿದಂತೆಯೇ ಇರಬೇಕು. ಹ್ಯಾಂಡ್‌ರೈಟಿಂಗ್ ಇಂಪ್ರೂವ್ ಮಾಡಿಕೊಳ್ಳಲು ಹೋಗಿ ನಿಮ್ಮ ಸಿಗ್ನೇಚರ್ ಅನ್ನು ಸುಂದರವಾಗಿ ಬರೆಯಲು ಹೋಗಬೇಡಿ.
 bit.ly/1hwhxHq n bit.ly/1aV1Xkw n bit.ly/KUDlkW n bit.ly/1fe4dbg n abt.cm/1hwhBqM

ಹರಿ-ಕಥೆ
ಖೇಮುಗೆ ಇಷ್ಟು ದಿನ ನಾನು ಮೋಸ ಮಾಡಿದ್ದು ಸಾಕು ಎಂದೆನಿಸಿತು. ತನ್ನ ಬಗ್ಗೆಯೂ ಗಿಲ್ಟ್ ಕಾಡತೊಡಗಿತು. ಪಕ್ಕದ ಮನೆಯ ಸ್ನೇಹಿತ ಸೋಮುಗೆ ನಾನು ಹೀಗೆ ಮೋಸ ಮಾಡಬಾರದು, ಆಗಿದ್ದಾಗ್ಲಿ ಅಂತ ನಿರ್ಧರಿಸಿ ಒಂದು ದಿನ ಬೆಳಗ್ಗೆ ಅವನಿಗೆ ಎಸ್ಸೆಮ್ಮೆಸ್ ಮಾಡಿದ. 'ಡಿಯರ್ ಸೋಮು, ನಾನು ಇಂಥ ಮೋಸ ಮಾಡ್ತೀನಿ ಅಂತ ನೀನು ಅಂದುಕೊಂಡಿರಲಿಕ್ಕಿಲ್ಲ. ಆದರೆ ನಾನು ಮಾಡಿದ್ದು ಹೌದು. ಇಷ್ಟು ದಿನ ನಾನು ನಿನ್ನ ವೈಫ್ ಜೊತೆ ಕನೆಕ್ಷನ್ ಇಟ್ಟುಕೊಂಡಿದ್ದೆ. ನೀನು ಮನೆಯಲ್ಲಿರದ ಯಾವುದೋ ಒಂದು ಕೆಟ್ಟ ಗಳಿಗೆಯಲ್ಲಿ ನಾನು ಈ ಕೆಲಸ ಶುರು ಮಾಡಿದ್ದು. ಅದಕ್ಕೆ ನಿನ್ನ ಬೇಜವಾಬ್ದಾರಿತನವೂ ಕಾರಣ ಇರಬಹುದು. ಆದರೆ ನಾನೂ ತಪ್ಪು ಮಾಡಿದ್ದೇನೆ. ಆದರೂ ಪಕ್ಕದ ಮನೆಯವನಾಗಿ ನಿನ್ನ ವೈಫ್ ಅನ್ನು ನಾನು ದುರ್ಬಳಕೆ ಮಾಡಿಕೊಳ್ಳಬಾರದಿತ್ತು. ಆದರೆ ತಪ್ಪು ಈಗ ಆಗಿಹೋಗಿದೆ. ಆದರೆ ನನ್ನ ತಪ್ಪಿನ ಬಗ್ಗೆ ನನಗೆ ನಾಚಿಕೆಯಾಗುತ್ತಿದೆ. ನೀನು ನನ್ನ ಮೇಲಿಟ್ಟಿರುವ ನಂಬಿಕೆಗೆ ನಾನು ಮಾಡಿರುವ ದ್ರೋಹ ಇದು. ಇನ್ನು ಮುಂದೆ ನಾನು ಈ ರೀತಿ ತಪ್ಪು ಮಾಡುವುದಿಲ್ಲ. ಬೇಕಿದ್ದರೆ ನಾನು ಇಷ್ಟು ದಿನ ಮಾಡಿದ ತಪ್ಪಿಗೆ ದಂಡ ತೆರುತ್ತೇನೆ. ಕಾಂಪೆನ್ಸೇಶನ್ ಅಂತ ನಿನಗೆ ದುಡ್ಡು ಕೊಡಲೂ ನಾನು ತಯಾರಿದ್ದೇನೆ. ನನ್ನ ನಿನ್ನ ಸಂಬಂಧ ಈ ವಿಷಯಕ್ಕಾಗಿ ಕೆಡುವುದಿಲ್ಲ ಎಂದು ನಂಬಿದ್ದೇನೆ. ಯಾವುದಕ್ಕೂ ನಿನ್ನ ನಿರ್ಧಾರ ತಿಳಿಸು'. ಈ ಮೆಸೇಜ್ ನೋಡಿ ಸೋಮು ಕೆಂಡಾಮಂಡಲವಾಗಿ ಸೀದಾ ತನ್ನ ರೂಮಿಗೆ ಹೋಗಿ ರಿವಾಲ್ವರ್ ತೆಗೆದುಕೊಂಡು ತನ್ನ ಹೆಂಡತಿಯನ್ನು ಕರೆದು ಒಂದೇ ಸಮ 3 ಗುಂಡು ಹಾರಿಸಿ ಅವಳನ್ನು ಕೊಂದು, ಅದೇ ರಿವಾಲ್ವರ್ ಎತ್ತಿಕೊಂಡು ಸೀದಾ ಖೇಮು ಮನೆಗೆ ಹೊರಟ. ಇನ್ನೇನು ಖೇಮು ಮನೆಯ ಒಳಗೆ ಹೋಗಬೇಕು ಎನ್ನುವಷ್ಟರಲ್ಲಿ ಅವನ ಮೊಬೈಲ್‌ಗೆ ಖೇಮುನಿಂದ ಇನ್ನೊಂದು ಮೆಸೇಜ್ ಬಂತು ' ಸಾರಿ,  ಮೊಬೈಲ್ ಡಿಕ್ಷನರಿ ಪ್ರಾಬ್ಲಂ. ಆಟೋ ಕರೆಕ್ಷನ್ ಆಪ್ಷನ್‌ನಿಂದಾಗಿ, 'ವೈಫೈ' ಅನ್ನೋದು 'ವೈಫ್‌' ಆಗಿದೆ. ತಿದ್ದಿಕೊಂಡು ಓದುವುದು, ಇಂತಿ ನಿನ್ನ ಗೆಳೆಯ ಖೇಮು'.

ಸ್ಕ್ಯಾಂಡಲ್‌ವುಡ್
ಚಿತ್ರರಂಗದಿಂದಾಗಿ ನಾನು ದುಡ್ಡು ಕಳೆದುಕೊಂಡಿದ್ದೇನೆ, ಹಾಗಾಗಿ ಅದನ್ನು ವಾಪಸ್ಸು ಪಡೆಯಲು ಡಬ್ಬಿಂಗ್ ಬೇಕು ಎಂದು ಕೆಲವು ಸೋ ಕಾಲ್ಡ್ ಸೀನಿಯರ್ ನಿರ್ದೇಶಕ ನಿರ್ಮಾಪಕರು ಹೇಳುತ್ತಿರುವುದು ನಿಜಕ್ಕೂ ವಿಪರ್ಯಾಸ. ಈ ಮಾತಿನ ಅರ್ಥ ಏನು? ಒಳ್ಳೆಯ ಕನ್ನಡ ಸಿನಿಮಾ ಮಾಡಿ ದುಡ್ಡು ಮಾಡಲು ಸಾಧ್ಯ ಇಲ್ಲ ಎಂದೇ? ಇತ್ತೀಚಿನ ದಿನಗಳಲ್ಲೂ ಮುಂಗಾರು ಮಳೆಯಿಂದ ಇತ್ತೀಚಿನ ಭಜರಂಗಿ ವರೆಗೂ ಕನ್ನಡ ಚಿತ್ರಗಳು ಎಷ್ಟು ಸಂಪಾದಿಸಬಲ್ಲವು ಎಂಬುದಕ್ಕೆ ಉದಾಹರಣೆಯಾಗಿ ನಿಂತಿದೆ ಕನ್ನಡ ಚಿತ್ರರಂಗ. ಅದರಲ್ಲೂ ಕಳೆದ ವರ್ಷವಂತೂ ಕನ್ನಡ ಚಿತ್ರಗಳಿಗೆ ಗೆಲುವಿನ ಸುಗ್ಗಿ. ಹೊಸ ಆಲೋಚನೆಯ ಯುವ ನಿರ್ದೇಶಕರೂ ಬಂದಿದ್ದೂ ಆಯ್ತು ಗೆದ್ದಿದ್ದೂ ಆಯ್ತು. ಸ್ಟಾರ್‌ಗಳ ಚಿತ್ರಗಳೂ ಸಾಕಷ್ಟು ದುಡ್ಡು ಮಾಡಿವೆ. ಆದರೆ ಇಂಥ ಕೆಲವು ನಿರ್ದೇಶಕ ನಿರ್ಮಾಪಕರಿಗೆ ಕನ್ನಡ ಚಿತ್ರಗಳಿಂದ ದುಡ್ಡು ಮಾಡಲು ಸಾಧ್ಯವಿಲ್ಲ ಎನಿಸುತ್ತಿದೆ. ವಿಶೇಷ ಎಂದರೆ ಈ ಮಂದಿ ಡಬ್ಬಿಂಗ್ ಬಂದರೆ ಕನ್ನಡ ಚಿತ್ರಗಳಿಗೆ ಸ್ಪರ್ಧೆ ಇರುತ್ತದೆ. ಚಿತ್ರೋದ್ಯಮ ಬೆಳೆಯುತ್ತದೆ ಎಂದೆಲ್ಲ ಬೊಗಳೆ ಬಿಡುತ್ತಿದ್ದಾರೆ. ಆದರೆ, ಇವರಿಗೆ ಅಸಲಿಗೆ ಹೊಸ ನಿರ್ದೇಶಕರ ಹೊಸರೀತಿಯ ಕನ್ನಡ ಚಿತ್ರಗಳ ಜೊತೆಗೆ ಸ್ಪರ್ಧೆ ಮಾಡಲೇ ಸಾಧ್ಯವಾಗುತ್ತಿಲ್ಲ. ಆದರೂ ಇವರಿಗೆ ಡಬ್ಬಿಂಗ್ ಚಿತ್ರಗಳ ಸ್ಫರ್ಧೆ ಬೇಕಂತೆ. ವಾಸ್ತವ ಎಂದರೆ ಇದು ಅವರಿಗೂ ಗೊತ್ತು. ಒಂದು ಕಾಲದಲ್ಲಿ ತಾವೇ ದೊಡ್ಡವರಂತೆ ಮೆರೆದ ಈ ನಿರ್ದೇಶಕ, ನಿರ್ಮಾಪಕರ ತಲೆ ಈಗ ಖಾಲಿ ಆಗಿದೆ. ತಮ್ಮಿಂದ ಒಂದು ಒಳ್ಳೆಯ ಕನ್ನಡ ಸಿನಿಮಾ ಮಾಡಿ ಹಣ ಮಾಡುವುದು ಆಗುವುದಿಲ್ಲ ಎಂಬ ಜ್ಞಾನೋದಯ ಆಗಿದೆ. ಹಾಗಾಗಿ ಡಬ್ಬಿಂಗ್ ಮೂಲಕ ಸುಲಭವಾಗಿ ಹಣ ಮಾಡುವ ಹುನ್ನಾರ ನಡೆಸಿದ್ದಾರೆ ಎಂಬುದು ಎಂಥವರಿಗೂ ಅರ್ಥವಾಗುವ ವಿಷಯ.

ಡಬ್ಕುಡಬಲ್ ತುದಾಂಡಲ್...
- ಹೆಂಡತಿಗೂ ಕಾಶ್ಮೀರಕ್ಕೂ ಏನು ಹೋಲಿಕೆ?
ಎರಡೂ ದೊಡ್ಡ ಸಮಸ್ಯೆಗಳೇ, ಆದರೆ ನೆರೆಯವರು ಅದರ ಮೇಲೆ ಕಣ್ಣು ಹಾಕಿದರೆ ಮಾತ್ರ ಕೆಂಡದಂಥ ಕೋಪ ಬರುತ್ತೆ.
-  ಹೆಂಡತಿಗೂ ಟಿವಿ ಚಾನೆಲ್‌ಗಳಿಗೂ ಏನು ಹೋಲಿಕೆ?
ಇಬ್ಬರಿಗೂ ಒಂದೇ ವಿಷಯವನ್ನು ನೂರು ಸಲ ಹೇಳೋವರೆಗೂ ಸಮಾಧಾನ ಇರಲ್ಲ.
-ಒಬ್ಬ ಹುಡುಗನ ಮುಂದೆ ಹುಡುಗಿ ತನ್ನ ಎಲ್ಲಾ ಬಟ್ಟೆಗಳನ್ನೂ ತೆಗೆದರೆ ಏನಾಗುತ್ತದೆ?
ಅವಳ ವಾರ್ಡ್‌ರೋಬ್ ಖಾಲಿ ಆಗುತ್ತೆ!
- ಇಂಡಿಯಾ ಕ್ರಿಕೆಟ್ ಟೀಮ್ 'ನ್ಯೂ'ಜಿಲ್ಯಾಂಡ್‌ನಲ್ಲಿ ಯಾಕೆ ಸರಿಯಾಗಿ ಆಡ್ತಿಲ್ಲ?
ಅದು ಇವರಿಗೆ 'ನ್ಯೂ' ಪಿಚ್ ಅದಕ್ಕೆ.
- ಹಂಗಿದ್ರೆ, ಇಂಗ್ಲೆಂಡ್‌ನ 'ಓಲ್ಡ್‌' ಟ್ರಾಫರ್ಡ್‌ನಲ್ಲೂ ಯಾಕೆ ಸರಿಯಾಗಿ ಆಡಲ್ಲ?
ಯಾಕಂದ್ರೆ ಅದು ಹಾಳಾಗಿರೋ 'ಓಲ್ಡ್‌' ಪಿಚ್ಚು ಅದಕ್ಕೆ.
- ಹಾಗಿದ್ರೆ, ಆಸ್ಟ್ರೇಲಿಯನ್ ಪಿಚ್ಚಲ್ಲಿ ಯಾಕೆ ಸರಿಯಾಗಿ ಆಡಲ್ಲ?
ಅದೂ, ಏನಪ್ಪಾ ಅಂದ್ರೆ, ಫಾರಿನ್ ಪಿಚ್ಚಲ್ಲಿ ನಮ್ಮವರಿಗೆ ಆಡೋಕ್ ಬರಲ್ಲ ಅದಕ್ಕೆ.


   -ಹರಿ
harikannadaprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com