ಅಂಕಣಗಳು

ಸಾಮಾಜಿಕ ಮೌಲ್ಯಗಳ ಅಧಃಪತನದಲ್ಲಿದೆ ಭ್ರಷ್ಟಾಚಾರದ ಬೇರು

Published On :

ಭ್ರಷ್ಟಾಚಾರ- ಅಭಿವ್ಯಕ್ತಿಂು ಮಿತಿ ದಾಟಿ ಬೆಳೆದು ನಿಂತಿರುವ ವಿಷ ವೃತ್ತದ ಹೆಮ್ಮರ. ಬೇರುಗಳು ನಿಲುಕದ ಆಳಕ್ಕೆ ಇಳಿದು ಎತ್ತೆತ್ತಲೋ ಂಾವಾವುದೋ ರೀತಿಂುಲ್ಲಿ ಸುತ್ತಿ ಬಳಸಿ ಒಂದಕ್ಕೊಂದು ತಿಡಿಹೊಡೆದುಕೊಂಡು ಹೆಬ್ಬಾವಿನಂತೆ ನಿತ್ಯ ಸರಿಂುತ್ತಿವೆ. ರೆಂಬೆಗಳು ಎಲ್ಲಾ ದಿಕ್ಕಗಳಿಗೂ ಮೈಚಾಚಿ ತೆಕ್ಕೆ ಹೊಡೆದು ತನ್ನ ಒಡಲನ್ನು ಭರ್ತಿ ಮಾಡಿಕೊಳ್ಳುತ್ತಿವೆ.
ಭಾರತದಲ್ಲಿ ಸಾಂಪ್ರದಾಯಿಕ ಮೂಲಭೂತ ಸಮಸ್ಯೆಗಳಾದ ಜಾತಿ, ಮತ-ಪಂಥ-ಪಂಗಡ, ಮೌಢ್ಯತೆ, ಲಿಂಗ ತಾರತಮ್ಯಗಳಿಗಿಂತ ಇಂದು ಅತ್ಯಂತ ಕ್ರೂರವಾಗಿ ವರ್ತಿಸುತ್ತಿರುವುದು, ಆ ಮೂಲಕ ಮನುಷ್ಯರನ್ನು ಹಿಂಡಿ ಹಿಪ್ಪಿ ಮಾಡಿ ಚಲ್ಲುತ್ತಿರುವುದು 'ಭ್ರಷ್ಟಾಚಾರ'ದ ಅಟ್ಟಹಾಸ ಎನ್ನುವುದರಲ್ಲಿ ಎರಡು ಮಾತಿಲ್ಲ. ಜಾತಿ-ಮತ-ಪಂಥ- ಪಂಗಡಗಳನ್ನು ಮೀರಿ ಬೆಳೆಂುತ್ತಿರುವ ಇದು, ತನ್ನದೇ ಆದ ಒಂದು ಪ್ರಬಲ ಜಾತಿವೃತ್ತವಾಗಿ ನಿರ್ಮಾಣಗೊಂಡಿರುವುದರಿಂದ ಸಾಂಪ್ರದಾಯಿಕ ಜಾತಿ ಸಮಸ್ಯೆ ಇದರ ಮುಂದೆ ಗೌಣವಾಗಿ ಕಾಣುತ್ತಿದೆ. ಈ ಜಾಲದ ಸೃಷ್ಟಿಗೆ ಜಾತಿಂು ಕಾಲಂ ಅಳಸಿಹೋಗಿದೆ. ಆ ಕಾಲಂನಲ್ಲಿ 'ಲಜ್ಜೆಗೆಟ್ಟವರು' ಎಂಬ ಶಬ್ದವನ್ನು ಭರ್ತಿ ಮಾಡಲಾಗಿದೆ. ಈ ಲಜ್ಜೆಗೆಟ್ಟವರು ಂಾವ ಜಾತಿಂುವರೇ ಆಗಿರಬಹುದು. ನಾಚಿಕೆ ಬಿಟ್ಟಿರಬೇಕಷ್ಟೇ.
ಈ ಮಧ್ಯೆ ಈ ಲಜ್ಜೆಗೆಟ್ಟವರ ಹದ್ದುಮೀರಿದ ನಾಚಿಕೆಗೇಡಿ ಮಹೋನ್ನತ ವರ್ತನೆ ಎಂದರೆ, ಸಾಮಾಜಿಕ ಮೌಲ್ಯ-ಆದರ್ಶಗಳ ಪಾಲನೆಗೆ ಕೂಗಿ ಹೇಳುವುದು. ನಾಯಿ, ಬೆಕ್ಕುಗಳು ಹಸಿವಿನಿಂದ ಬಳಲುವಾಗ ಆಹಾರ ದೊರಕದ ಸಂದರ್ಭದಲ್ಲಿ ಜನ್ಮ ನೀಡಿದ ತನ್ನ ಮರಿಗಳನ್ನೇ ತಿಂದುಹಾಕುತ್ತವೆ. ಹಾಗೆ ಸ್ವಾರ್ಥದ ಹಸಿವಿನ ದಾಹದಲ್ಲಿ ಮನುಷ್ಯರು ಜನ್ಮ ನೀಡಿದ ಮನುಷ್ಯತ್ವದ ಮೌಲ್ಯಗಳನ್ನು ತಿಂದು ಹಾಕಿ ಕನಿಕರದ ಮಾತುಗಳನ್ನಾಡುವ ಲಜ್ಜೆಗೆಟ್ಟವರ ಸಂಖ್ಯೆ ಸಮಾಜದಲ್ಲಿ ನಿತ್ಯ ಬೆಳೆಂುತ್ತಿದೆ. ಅಪ್ರಾಮಾಣಿಕರೇ ಪ್ರಾಮಾಣಿಕತೆ- ಸತ್ಯದ ಬಗ್ಗೆ ಸಮಾಜಕ್ಕೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ನಡುಬೀದಿಂುಲ್ಲಿ ಮನುಷ್ಯರನ್ನು ಹರಿದು ತಿನ್ನುತ್ತಿರುವ ನೀಚರು ಮನುಷ್ಯತ್ವದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಂುವಜನಾಂಗ ಮುನ್ನುಗ್ಗಬೇಕು ಎಂದು ಪ್ರೋತ್ಸಾಹಿಸಿ ಹಬ್ಬಕ್ಕೆ ತಂದಿರುವ ಹರಕೆಂು ಕುರಿಗಳಿಗೆ ಮೇವು ತಿನ್ನಿಸುತ್ತಿರುವುದು ವ್ಯವಸ್ಥೆ ಂಾವ ಹಂತಕ್ಕೆ ಮುಟ್ಟಿದೆ ಎಂಬುದನ್ನು ಅರ್ಥೈಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಮನುಷ್ಯನ ಬೌದ್ಧಿಕ ದಾರಿದ್ರ್ಯ, ನೀಚತನದ ಮನಸ್ಥಿತಿಗೆ ಮಿತಿ ಇಲ್ಲ ಎನ್ನುವ ವರ್ತನೆ ಸಮಾಜದಲ್ಲಿ ಅಧಿಕೃತವಾಗಿ ಚಲಾವಣೆಂುಲ್ಲಿದೆ.
'ಭ್ರಷ್ಟತೆ' ಎನ್ನುವುದು ಕೇವಲ ಲಂಚಗುಳಿತನಕ್ಕೆ ಮಾತ್ರ ಸೀಮಿತವಲ್ಲ. ಹೀನ ಮನಸ್ಥಿತಿಂು ಎಲ್ಲ ಬಗೆಂು ಕೃತ್ಯಗಳು ಇದರ ಒಡಲಿನಲ್ಲಿ ಸೇರಿಕೊಳ್ಳುತ್ತವೆ. ಅದು ಕುಟುಂಬದೊಳಗಿನ ತಾರತಮ್ಯ ಭಾವದಿಂದ ಆರಂಭಗೊಂಡು, ಸಮಾಜದ ರಕ್ತ ಹೀರುವ ಕ್ರೂರ ಜಂತುಗಳವರೆಗೂ ಹಬ್ಬಿಕೊಳ್ಳುತ್ತದೆ. ಆದರೂ ಭ್ರಷ್ಟಾಚಾರ ಎಂದರೆ ಲಂಚ ಎನ್ನುವಷ್ಟರ ಮಟ್ಟಿಗೆ, ಆರ್ಥಿಕ ದುರ್ವರ್ತನೆ ಭ್ರಷ್ಟಾಚಾರದ ಇನ್ನೊಂದು ಮುಖವಾಗಿದೆ. ಇತಿಹಾಸದಲ್ಲಿಂು ಕಂಡಿರಿಂುದ ರೀತಿಂುಲ್ಲಿ ಹಣಕ್ಕಾಗಿ ಇಂದು ಮನುಷ್ಯ ಎಲ್ಲ ರೀತಿಂು ಕೃತ್ಯಕ್ಕೆ ಸಿದ್ಧವಾಗಿ ನಿಂತಿದ್ದಾನೆ.
ಭ್ರಷ್ಟಾಚಾರದ ವ್ಯಾಪಕತೆಗೆ ರಾಜಕೀಂು ವ್ಯವಸ್ಥೆ ಮೂಲ ಸೆಲೆಂಾಗಿದೆ. ಜನಸೇಮೆಂು ಹೆಸರಿನಲ್ಲಿ ಕೊಳ್ಳೆ ಹೊಡೆಂುವುದಕ್ಕಾಗಿಂು ಎಲ್ಲ ಬಗೆಂು ಅನುಕೂಲಸ್ಥರು ರಾಜಕೀಂುಕ್ಕೆ ಎಲ್ಲವನ್ನೂ ತೊರೆದು ಧುಮುಕುತ್ತಿದ್ದಾರೆ. ಹಣ ಸುಲಿಂುವುದಕ್ಕೆ ಂಾವುದಕ್ಕೂ ಹೇಸದ ರಾಜಕಾರಣಿಗಳು ಶೌಚಾಲಂುದಲ್ಲಿನ ಹಣಕ್ಕೂ ಹೇಸಿಗೆ ಪಟ್ಟುಕೊಳ್ಳುತ್ತಿಲ್ಲ. ಗಟಾರಿನಲ್ಲಿ ದುಡ್ಡು ಬಿದ್ದರೂ ನಾಲಿಗೆಯಿಂದ ಎತ್ತಿಕೊಳ್ಳುವ ಮಟ್ಟ ಇವರದು. ಸರ್ಕಾರದ ಅಭಿವೃದ್ಧಿಪರ ಂೋಜನೆಗಳು ಭ್ರಷ್ಟತೆಂು ರಾಜಮಾರ್ಗಗಳಾಗಿವೆ. ಇಂಥ ಭ್ರಷ್ಟ ರಾಜಕೀಂು ವ್ಯವಸ್ಥೆಂು ಸೃಷ್ಟಿಗೆ ಕಾರಣಕರ್ತರಾದ ಪ್ರಜಾಪ್ರಭುತ್ವದ ಭಾರತೀಂು ಪ್ರಜ್ಞಾವಂತ ನಾಗರಿಕರೂ ಮಹಾಭ್ರಷ್ಟರಾಗಿದ್ದಾರೆ. ರಾಜಕಾರಣಿಗಳ ಆಮಿಷಗಳಿಗೆ ಬಹಿರಂಗವಾಗಿ ಮತಗಳನ್ನು ಮಾರಿಕೊಳ್ಳುತ್ತಿರುವ ಇವರು, ಭ್ರಷ್ಟತೆಂು ಮೂಲ ಕಾರಣಕರ್ತರಾಗಿದ್ದಾರೆ. ಇಂಥ ವ್ಯವಸ್ಥೆಂುನ್ನು ಬಂುಲಿಗೆಳೆಂುಬೇಕಾದ ಪ್ರಜಾಪ್ರಭುತ್ವದ ಮೂರು ಮತ್ತು ನಾಲ್ಕನೆಂು ಕಂಬಗಳಿಗೆ ಹುಳಹತ್ತಿವೆ. ಮೂರನೇ ಕಂಬದೊಳಗಿನ ಹುಳಗಳು ಒಂದೊಂದಾಗಿ ಹೊರಬಿಳುತ್ತಿದ್ದರೆ, ನಾಲ್ಕನೇ ಕಂಬ ಕೊಳೆತು ನಿಂತಿದೆ. ಈ ಕಂಬಗಳು ಸಮಾಜದ ಸಂಪೂರ್ಣವಾದ ಶೂನ್ಯವಿಶ್ವಾಸದ ಸ್ಥಿತಿಗೆ ತಲುಪಿವೆ.
ಸಾರ್ವಜನಿಕ ಆಡಳಿತ ವಲಂುದ ಕೆ.ಪಿ.ಎಸ್.ಸಿ., ಂು.ಪಿ.ಎಸ್.ಸಿ.ಯಂತಹ ಸಾಂವಿಧಾನಿಕ ಸಂಸ್ಥೆಗಳು ತಮ್ಮ ಅವ್ಯವಹಾರದ ನಾಮಫಲಕಗಳನ್ನು ತೂಗುಬಿಟ್ಟು, ಭ್ರಷ್ಟಾಚಾರದ ಪ್ರಶ್ನಾತೀತ ಕೇಂದ್ರಗಳಾಗಿ ನಿಂತಿವೆ. ತಮ್ಮ ವ್ಯವಹಾರವನ್ನು ಪ್ರಶ್ನಿಸುವುದು ಮಹಾಪರಾಧ ಎಂದು ಬೀದಿಗೆ ನಿಂತು ಹೇಳುವ ಮಟ್ಟದ ಅಧಿಕಾರವನ್ನು ಈ ಸಂಸ್ಥೆಗಳು ಪ್ರಂೋಗಿಸಲು ನಾಚಿಕೆಪಟ್ಟುಕೊಳ್ಳುತ್ತಿಲ್ಲ. ಇಂಥ ಸಂಸ್ಥೆಗಳಲ್ಲಿ ಲಕ್ಷಾಂತರ ರೂಪಾಯಿಗಳನ್ನು ಗೋಣಿ ಚೀಲಗಳ ಮೂಲಕ ಸುರಿದು ಹೊರಬರುವ ಅಧಿಕಾರಿಗಳು ಸಾರ್ವಜನಿಕರ ಂಾವ ಸೇವೆಗೆ ಇವರು ಸಿದ್ಧರಾಗಬಹುದು ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಲೋಕಾಂುಕ್ತದಂತಹ ಸಂಸ್ಥೆಗಳು ಇಂಥವರನ್ನು ಬಂುಲಿಗೆಳೆದರೆ, ಮರುದಿನವೇ ಸರ್ಕಾರ ಅಂಥವರನ್ನು ಉನ್ನತ ಹುದ್ದೆಗೇರಿಸಿ ಅವರ ದಂಧೆಗೆ ಅಧಿಕೃತ ಪರವಾನಿಗೆ ಪತ್ರ ನೀಡಿ ಸಮಾಜದ ನಡುಬೀದಿಂುಲ್ಲಿ ತಂದು ಬಿಡುತ್ತಿವೆ.
ಭ್ರಷ್ಟಾಚಾರದಲ್ಲಿ ಶಾಮೀಲಾದ ರಾಜಕಾರಣಿಗಳು ಜೈಲಿಗೆ ಹೋಗಿ, ಮರಳಿ ಬರುವಾಗ ವಾದ್ಯ ಸಮ್ಮೇಳನ ಸಹಿತ ವೈಭವದ ಮೆರವಣಿಗೆಂೊಂದಿಗೆ ಬರಮಾಡಿಕೊಂಡು, ಹಣೆಗೆ ತಿಲಕವಿಟ್ಟು, ಮಂಗಳಾರತಿ ಬೆಳಗಿ ಬರಮಾಡಿಕೊಳ್ಳಲಾಗುತ್ತಿದೆ. ಸಾರ್ವಜನಿಕ ಪ್ರಭಾವಿತ ವ್ಯಕ್ತಿ, ಜೈಲಿನಿಂದ ಮನೆಗೆ ಮರಳಿದರೆ, ಆತನಿಗೆ ಜನ್ಮ ನೀಡಿದ ತಂದೆ-ತಾಯಿ, ಆರೈಕೆ ಮಾಡಿದ ಬಂಧು- ಬಳಗ ತಮ್ಮ ಮೇಲೆ ದೊಡ್ಡ ಅನ್ಯಾಂು ನಡೆದೊಯಿತೆಂದು ಗೋಗರೆದು ಜೈಲಿನಿಂದ ಮರಳಿದ ಲಫಂಗನಿಗೆ ಮೃಷ್ಟಾನ್ನ ಭೋಜನ ನೀಡಿ ಸಂತೈಸುವ ಹೀನ ಪರಿಸ್ಥಿತಿ ಸೃಷ್ಟಿಂಾಗಿರುವುದು ಸಾಮಾಜಿಕ ಮೌಲ್ಯದ ಸ್ಥಿತಿ ಎಂಥ ಅಧೋಗತಿಗೆ ಇಳಿದಿದೆ ಎನ್ನುವುದಕ್ಕೆ ಇಂಥ ಸಾಕ್ಷಿಗಳು ಸಾಮಾನ್ಯವಾಗಿವೆ.
ಆರೋಗ್ಯಕರ ಸಮಾಜದೊಂದಿಗೆ ಸದೃಢವಾದ ರಾಷ್ಟ್ರನಿರ್ಮಾಣಕ್ಕೆ ಂುವಶಕ್ತಿಂುನ್ನು ಸಿದ್ಧಗೊಳಿಸಬೇಕಾದ ಶಿಕ್ಷಣ ವ್ಯವಸ್ಥೆ ಅನ್ಯಾಂು-ಅನೀತಿ, ಅನಾಚಾರದ ತರಬೇತಿ ಕೇಂದ್ರಗಳಿಗೆ ನಿತ್ಯ ಜನ್ಮ ನೀಡುತ್ತಿದೆ. ಶಿಕ್ಷಣ ಸಂಸ್ಥೆಗಳು ನಾಯಿಕೊಡೆಗಳಂತೆ ಬೀದಿಗೊಂದರಂತೆ ಬೆಳೆಂುತ್ತಿವೆ. ಇದರಲ್ಲಿ ಸರ್ಕಾರ ಮತ್ತು ಸರ್ಕಾರೇತರ ಎಂಬ ತಾರತಮ್ಯವಿಲ್ಲ. ಅಭಿವೃದ್ಧಿ ಹಾಗೂ ನೌಕರರ ನೇಮಕಾತಿಂು ಹೆಸರಿನಲ್ಲಿ ಶಿಕ್ಷಣ ವ್ಯವಸ್ಥೆ ಬೇಕಾಬಿಟ್ಟಿ ಹಣ ಲೂಟಿ ಮಾಡುತ್ತಿರುವಂತೆ, ಇನ್ನೊಂದೆಡೆ, ಅಸಹಾಂುಕ ಅಗಮ್ಯ ಂುವಶಕ್ತಿಂು ಶ್ರಮವನ್ನು ಅವ್ಯಾಹತವಾಗಿ ದರೋಡೆ ಮಾಡಲಾಗುತ್ತಿದೆ. ಕೆಲಸವಿಲ್ಲದೆ ಲಕ್ಷಾಂತರ ರೂಪಾಯಿಗಳ ಸಂಬಳ ಪಡೆಂುವವರ ಮಧ್ಯದಲ್ಲಿಂು ಅದೆಷ್ಟೋ ಪದವೀಧರರು ಕನಿಷ್ಠ ವೇತನಕ್ಕೂ ಗತಿ ಇಲ್ಲದೆ, ಬಡತನವನ್ನು ಬೆನ್ನಿಗೆ ಕಟ್ಟಿಕೊಂಡು ಬಾಯಿಗೆ ಹೊಲಿಗೆ ಹಾಕಿ ಶ್ರಮ ಧಾರೆ ಎರೆಂುತ್ತಿದ್ದಾರೆ. ಇವರ ಬೆವರಿನ ಅನ್ನ ಉಣ್ಣುವವರು ಬೇರೆ ಇನ್ನಾರೋ. ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರ ನಿರ್ವಹಿಸಬೇಕಾದ ವಿಶ್ವವಿದ್ಯಾಲಂುಗಳಂತೂ ಅನೈತಿಕ ಚಟುವಟಿಕೆಗಳ ಗುತ್ತಿಗೆ ಕೇಂದ್ರಗಳಾಗಿವೆ. ವಿಶ್ವ ವಿದ್ಯಾಲಂುದ ಕುಲಪತಿಂಾಗುವವ ಕೋಟ್ಯಂತರ ರುಪಾಯಿಗಳನ್ನು ಲಂಚಕೊಟ್ಟು ಬರುತ್ತಿರುವ ಬಗ್ಗೆ ವಿಧಾನ ಮಂಡಲದಲ್ಲಿಂು ಪ್ರತಿಧ್ವನಿಗೊಂಡಿದೆ. ಹೀಗೆ ಕೋಟ್ಯಾಂತರ ರೂಪಾಯಿಗಳನ್ನು ನೀಡಿದಾತ ಕುಲಪತಿ ವಿಶ್ವವಿದ್ಯಾಲಂುದಲ್ಲಿ ಅದೇನು ಮಾಡಲು ಸಾಧ್ಯವಿದೆ? ಎಲ್ಲಿ ಅಧ್ಯಂುನ, ಅಧ್ಯಾಪನ, ಸಂಶೋಧನೆ, ಕಾಂರ್ಾಗಾರ, ವಿಚಾರ ಸಂಕಿರಣಗಳು ನಡೆಂುಬೇಕಾಗಿತ್ತೋ ಆ ಸ್ಥಳಗಳಲ್ಲಿ ಕುಲಪತಿಗಳ ಜನ್ಮದಿನಾಚರಣೆಗಳು, ಷಷ್ಟಬ್ದಿ ಸಮಾರಂಭಗಳು ನಡೆಂುತ್ತಿವೆ. ಪ್ರಾಧ್ಯಾಪಕರು ವಿಸಿಗಾಗಿ ಹೂವಿನ ಮಾಲೆಗಳನ್ನು  ಜೋಡಿಸುವುದರಲ್ಲಿಂು ಬ್ಯುಜಿ ಆಗಿದ್ದಾರೆ. ಸಂಶೋಧನಾ ವಿದ್ಯಾರ್ಥಿಗಳು ಷಷ್ಟಬ್ಧಿ ಸಮಾರಂಭದ ಬ್ಯಾನರ್ ಕಟ್ಟುವಲ್ಲಿ ಮೈಮರೆತ್ತಿದ್ದಾರೆ. ನೌಕರಿ ಕೊಡಿಸುವುದಕ್ಕಾಗಿ ವಿಶ್ವವಿದ್ಯಾಲಂುದ ಅಂತರಂಗದಲ್ಲಿ ಸೆನೆಟ್-ಸಿಂಡಿಕೇಟ್ ಸದಸ್ಯರು ಅಧಿಕೃತ ಏಜೆಂಟರಾಗಿದ್ದಾರೆ. ಹೊರಗಡೆ ಸ್ವಂುಂ ಘೋಷಿತ ಏಜೆಂಟರುಗಳು ಹುಟ್ಟಿಕೊಂಡಿದ್ದಾರೆ. ಇದಕ್ಕಾಗಿ ವಿಶ್ವವಿದ್ಯಾಲಂುದ ಸಮಾರಂಭಗಳು, ಏಜೆಂಟರ ದಂಧೆ ಕುದುರಿಸುವ ತರಬೇತಿ ನೀಡುವ ಕಾಂರ್ಾಗಾರಗಳಾಗಿವೆ. ಗೌರವ ಡಾಕ್ಟರೇಟ್ ಪದವಿಗಳು ಬಿಕರಿಂಾಗಿ, ಪರಸ್ಪರ ಋಣಾನುಬಂಧದ ಕೊಡುಕೊಳ್ಳುವಿಕೆಂು ಮಾಧ್ಯಮಗಳಾಗಿವೆ. ಇನ್ನೂ ಏನೋನೋ ನಡೆದಿವೆ. ಹೇಳುವುದಕ್ಕೆ ಹೇಸಿಗೆ.
ಹೀಗೆ ಭ್ರಷ್ಟಾಚಾರದಿಂದಾಗಿ ಂಾವ ರಂಗವೂ ಪವಿತ್ರವಾಗಿ ಉಳಿದುಕೊಂಡಿಲ್ಲ. ಂಾವ ವ್ಯಕ್ತಿಯೂ ಪವಿತ್ರವಾಗಿ ಉಳಿದುಕೊಂಡಿಲ್ಲ ಎನ್ನುವಂತೆ ಎಲ್ಲರನ್ನೂ ಸಂಶಂುದಿಂದ ನೋಡುವ ಮನಸ್ಥಿತಿ ನಿರ್ಮಾಣವಾಗಿದೆ.

  -ಡಾ. ಕೆ.ಎನ್. ದೊಡ್ಡಮನಿ
ಜೈನ್ ಮಹಾವಿದ್ಯಾಲಯ
ಬೆಳಗಾವಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.