ನೀರಿಗೆ ಸಂಬಂಧಿಸಿದ ಕಾರ್ಯ ಬೇಡ ಅಂದ್ರೆ ಏನ್ರೀ ಅರ್ಥ?
ಪತ್ರಿಕೆಯಲ್ಲಿ ನಿತ್ಯವೂ ಪ್ರಕಟಿಸುವ 'ನಿತ್ಯಫಲ' ದಿನಭವಿಷ್ಯವನು ನಾನು ಒಂದು ದಿನವೂ ಓದುವುದಿಲ್ಲ. ಆದರೆ ಜೂನ್ 13ರಂದು ಸಿಂಹ ರಾಶಿಯವರೊಬ್ಬರು ತಮ್ಮ ಭವಿಷ್ಯವನು ಸ್ವಲ್ಪ ಗಟ್ಟಿ ಧ್ವನಿಯಲ್ಲಿ ಓದಿದ್ದರಿಂದ ಅದು ನನ ಕಿವಿಗೆ ಬಿತ್ತು. ಅದು ಈ ರೀತಿ ಇದೆ. 'ನೀರಿಗೆ ಸಂಬಂಧಪಟ್ಟ ಕಾರ್ಯವನು ಮುಂದೂಡಿ' ಎಂದಿದೆ. ಇದನು ಕೇಳಿದ ತಕ್ಷಣ ನನಗೆ ನಗು ತಡೆಯಲಾಗಲಿಲ್ಲ ಹಾಗೂ ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯಿಸಬೇಕೆಂದುಕೊಂಡೆ. ಸಾಮಾನ್ಯವಾಗಿ ನಾವು ಪ್ರತಿದಿನ ಎದ್ದ ತಕ್ಷಣ ನಮ್ಮ ನಿತ್ಯ ಕರ್ಮಗಳನು ಪೂರೈಸಿಕೊಳ್ಳಲು ನೀರು ಅತ್ಯವಶ್ಯಕ ಮತ್ತು ಇವೆಲ್ಲವೂ ನೀರಿಗೆ ಸಂಬಂಧಿಸಿದ ಕಾರ್ಯಗಳೇ ಆಗಿರುತ್ತವೆ. ದಿನ ಭವಿಷ್ಯದಲ್ಲಿ ತಿಳಿಸಿದಂತೆ ಈ ಕಾರ್ಯಗಳನೆಲ್ಲ ಮುಂದೂಡಲು ಸಾಧ್ಯವೇ? ಪತ್ರಿಕೆಯಲ್ಲಿ ಇಂತಹ ಋಣಾತ್ಮಕ ವಿಚಾರಗಳನು ಬಿತ್ತುವ ನಿತ್ಯಫಲ ವಿಭಾಗಕ್ಕೆ ಸ್ಥಳಾವಕಾಶ ನೀಡುವ ಬದಲು ಧನಾತ್ಮಕವಾಗಿ ಯೋಚಿಸುವ ವೈಜ್ಞಾನಿಕ ಚಿಂತನೆಯುಳ್ಳ ಅಂಕಣಗಳಿಗೆ ಪ್ರಾಶಸ್ತ್ಯ ನೀಡಿದರೆ ಓದುಗರಿಗೆ ಅನುಕೂಲವಾಗಬಲ್ಲದು.
-ಆರ್.ಸಿ. ಪರಶುರಾಮ್
ಶಿಕಾರಿಪುರ, ಮೊ. 990 220 3492
ಕ.ಪ್ರ.ದ ಅಂತರ್ಜಾಲದಲ್ಲಿ ಓದಬಲ್ಲ, ತಾವು ಇತ್ತೀಚೆಗೆ ಹರಿಯಬಿಟ್ಟ ಇ- ಪೇಪರ್, ಓದುಗರಿಗೆ ಮೊದಲು ಇದ್ದ ಪಿಡಿಎಫ್ನಂತೆ 'ಬಳಕೆದಾರ ಸೇಹಿ'ಯಾಗಿರದೆ, ಹಿಂದಿದ್ದ ಯಾವುದೇ ಹಳೆಯ ಆವೃತ್ತಿಗಳನು 'ಥಟ್' ಎಂದು ನೋಡಬಹುದಾಗಿದ್ದ 'ಆರ್ಚೀವ್ಸ್' ಆಯ್ಕೆಯೂ ಈಗ ಇಲ್ಲದೆ, ಒಂದೊಂದು ಸುದ್ದಿಯನೂ ಅಥವಾ ಅಂಕಣವನೂ ನೋಡಲು ಪ್ರತ್ಯೇಕವಾಗಿ ನಿಮಿಷಗಟ್ಟಲೆ 'ಬಫರಿಂಗ್' ಸುತ್ತುವುದನು ನೋಡುತ್ತಾ ಕಾಯುವಂತೆ ಮಾಡಿ, ಓದುಗನ ತಾಳ್ಮೆ ಪರೀಕ್ಷಿಸುತ್ತಿದೆ. ಹಳೆಯ ಪಿಡಿಎಫ್ ವರ್ಷನ್ಗೇ ತಾವು ಮರಳಿದರೆ, ನಾವು ನಿಮಗೆ ಜನ್ಮ ಜನ್ಮಕ್ಕೂ ಆಭಾರಿಯಾಗಿರುತ್ತೇವೆ.
- ನಾಗಮಂಗಲ ನರಸಿಂಹಮೂರ್ತಿ, ಮೈಸೂರು
ವಿಶ್ವೇಶ್ವರ ಭಟ್ಟರ ನೇತೃತ್ವದಲ್ಲಿ ಕನಡಪ್ರಭವು ತನ ಸೆಕ್ಯುಲರ್ ಚಹರೆಯನೇ ಕಳೆದುಕೊಂಡು ಮೋದಿಯ ಮುಖವಾಣಿ ಆಗಿದೆ. ಎಲ್ಲೋ ಜಮ್ಮುವಿನಲ್ಲಿ ನರೇಂದ್ರ ಮೋದಿ ಮಾತನಾಡಿದರೂ ಅದು ನಿಮಗೆ ಮುಖಪುಟದ ಸುದ್ದಿ ಆಗುತ್ತದೆ. ಮೋದಿ- ರಾಹುಲ್ ಯಾರನೂ ಖುಷಿಪಡಿಸುವುದಕ್ಕೆ ಹೋಗದೇ ಮೊದಲಿನಂತಿರಲು ಪ್ರಯತಿಸಿ.
-ಮಿಕ್ಕಿ ಗೋವಿಯಾಸ್, mikkigoveas@gmail.com
ಜೂನ್ 20ರ ಮುಖಪುಟ ಲೇಖನದ ಶೀರ್ಷಿಕೆ- 'ಬೆಂಗಳೂರಿನಲ್ಲಿ ನಿತ್ಯ ತ್ಯಾಜ್ಯೋತ್ಸವ' -ರಾಶಿ ರಾಶಿಯಾಗಿ ಬಿದ್ದಿರುವ ಕಸದ ವಿರಾಟ ರೂಪವನೇ ಚಿತ್ರಿಸುವಂತಿದೆ. ಜಾತಿ, ಧರ್ಮಕ್ಕಿಲ್ಲದ 'ಕಸ' ಯಾರಿಗೂ ಬೇಕಾಗಿಲ್ಲ. ವಿದೇಶ ಪ್ರವಾಸ ಹೋಗುವ ಜನಪ್ರತಿನಿಧಿಗಳಿಗೆ ಅಲ್ಲಿ ಕಸ ಸಂಸ್ಕರಿಸುವ ರೀತಿ ಅಧ್ಯಯನ ವಸ್ತುವಾಗಿಲ್ಲ ಎಂಬ ನಿಮ್ಮ ಮಾತು ನಿಜ. ವರದಿಗಾರರೆಂದಂತೆ, ನಮ್ಮನಾಳುವವರಿಗೆ ಕಿಂಚಿತ್ ಗಂಭೀರತೆಯೂ ಇಲ್ಲ. ದೂರದೃಷ್ಟಿಯಂತೂ ಇಲ್ಲವೇ ಇಲ್ಲ. ಅಧಿಕಾರಿಗಳನು ಹೆದರಿಸಿ, ರಾಜ್ಯದ ಜನತೆಯ ಕಣ್ಣಿಗೆ ಮಣ್ಣೆರಚುವ ಕೆಲಸವೊಂದೇ ಸದಾ ಸಾಗುತ್ತಿದೆ ಅನಬಹುದೇನೋ? ಅಧಿಕಾರಿಗಳೇ ಎದ್ದೇಳಿ ಅನುವ ನಮ್ಮ ಮುಖ್ಯಮಂತ್ರಿಗಳು ನಿದ್ದೆಗಣ್ಣಿನಿಂದ ಯಾವಾಗ ಹೊರಬರುತ್ತಾರೋ ತಿಳಿಯದು.
-ಶಂಕರನಾರಾಯಣ ಭಟ್
ಮಾಡಗೇರಿ, ಹೊನಾವರ. 9632 821920
ತಾ. 14.6.14ರ ಪುಟ 5ರಲ್ಲಿ 'ಕಾಂಗ್ರೆಸ್ ಬತ್ತಳಿಕೆಯಲ್ಲಿರುವ ಅಸ್ತ್ರಗಳು ಹೇಗಿವೆ?' ಎಂಬ ಲೇಖನದಲ್ಲಿ ಟಿ.ಜೆ.ಎಸ್. ಜಾರ್ಜ್ ಅವರು ಮ್ಯಾನೇಜ್ಮೆಂಟ್ ಗುರುಗಳ 4 ತಂತ್ರಗಳನು ಬಹಳ ಚೆನಾಗಿ ಉದಾಹರಿಸಿದ್ದಾರೆ. ಕಾಂಗ್ರೆಸ್ ಅಂತೂ ಸತ್ತ ಕುದುರೆಯಾಗಿದೆ. ನೆಲಮೂಲ ಸಂಸ್ಕೃತಿಯ ಅರಿವು ಇಲ್ಲದ ಆಕಾಶದಲ್ಲೇ ವಿಹರಿಸುವ, ಅನನುಭವಿ ರಾಹುಲರನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷ ನೆಲ ಕಚ್ಚಿದ್ದನು ಚೆನಾಗಿ ವಿವರಿಸಿದ್ದಾರೆ. ಹೈಕಮಾಂಡ್ ಸಂಸ್ಕೃತಿಯವರು ಭಾರತೀಯರು ದಡ್ಡರೆಂದು ಬಗೆದಿದ್ದಾರೆ. ಅನ್ಯಾಯವನು ಸಹಿಸದ ಅವರು ಇಂದಿರಾರವರ ಆಳ್ವಿಕೆಯನು 1977ರಲ್ಲಿ ಕೊನೆಗೊಳಿಸಿದ್ದರು. ಲೇಖನದಲ್ಲಿ 'ಆಚ್ಛೆ ದಿನ್ ಆನೇ ವಾಲ್ ಹೇ' ಎಂಬುದು 'ಅಚ್ಛೇ ದಿನ ಆನೇವಾಲೇ ಹೈ' ಎಂದಾಗಬೇಕಿತ್ತು.
-ಸಂಗಪ್ಪ ಗಾಣಿಗೇರ
ಹುನಗುಂದ , ಬಾಗಲಕೋಟೆ ಜಿಲ್ಲೆ.
ನಾನು ಕನಡಪ್ರಭ ಬಳಗದ ಬಹುದೊಡ್ಡ ಅಭಿಮಾನಿಯಾಗಿದ್ದು, ನನ ದಿನ ಶುರುವಾಗುವುದೇ ಪತ್ರಿಕೆಯನು ಓದಿ. ಅದರಲ್ಲೂ ಬೈಟು ಕಾಫಿ ಮತ್ತು ಸಂಪಾದಕೀಯ ಪುಟಗಳ ಅಂಕಣಗಳನು ಅದರಲ್ಲೂ ಪಿ. ತ್ಯಾಗರಾಜ್, ರಾಧಾಕೃಷ್ಣ ಭಡ್ತಿ, ಚೈತನ್ಯ ಹೆಗಡೆ, ವಿಶ್ವೇಶ್ವರ ಭಟ್ ಮತ್ತು ಮಣಿಕಾಂತ್ ಅವರ ಲೇಖನಗಳನು ಮಾತ್ರ ಮಿಸ್ ಮಾಡುವುದಿಲ್ಲ.
ಆದರೆ ನಮ್ಮದೊಂದು ಅನಿಸಿಕೆ, ಕನಡಪ್ರಭದ ಪ್ರಿಟಿಂಗ್ ಕ್ವಾಲಿಟಿ ಉತ್ತಮವಾದರೆ, ಪತ್ರಿಕೆ ಓದಲು ಇನಷ್ಟು ಖುಷಿಯಾಗುತ್ತದೆ. ಮಿರಿ ಮಿರಿ ಮಿಂಚುತ್ತಾ ನಮ್ಮ ನೆಚ್ಚಿನ ಕನಡಪ್ರಭ ಕನಡಿಯಂತೆ ಹೊಳೆಯಬೇಕು.
- ರಾಜೇಶ್ ಅರ್ಕಾವರ್, ಚಂದ್ರಾಲೇಔಟ್, ಬೆಂಗಳೂರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

