ಅಂಕಣಗಳು

ನಾವು ಬದಲಾದರಲ್ಲವೇ ದೇಶ ಬದಲಾಗೋದು?

ನಾವು ಬದಲಾದರಲ್ಲವೇ ದೇಶ ಬದಲಾಗೋದು?
Published On :

ಮೋದಿ ಸರ್ಕಾರ ಬಂದೊಡನೆ ಎಲ್ಲವೂ ಏಕಾಏಕಿ ಬದಲಾಗಿ ಹೋಗುತ್ತದೆ ಎಂಬ ಭರವಸೆಯಲ್ಲಿ ಭಾರತೀಯರಿದ್ದಾರೆ. ಆದರೆ ಬದಲಾವಣೆಯೆಂಬುದು ಒಬ್ಬೇ ವ್ಯಕ್ತಿಯಿಂದ ಸಾಧ್ಯವಾಗುವಂಥದ್ದಲ್ಲ. ಭಾರತ ಬದಲಾಗಲು ಪ್ರಧಾನಿ ಪರಿಶ್ರಮ ಪಟ್ಟರಷ್ಟೇ ಸಾಲದು, ಪ್ರಜೆಗಳ ಪ್ರಯತ್ನವೂ ಬೇಕು. ಎಲ್ಲದಕ್ಕೂ ಮೊದಲು ಬದಲಾಗಬೇಕಿರುವುದು ನಮ್ಮ ಈ ಗುಣಗಳು...  
-ಸಿನಿಮಾ ಟಿಕೆಟ್‌ಗಾಗಿ ಗಂಟೆಗಟ್ಟಲೆ ಕಾಯುತ್ತೇವೆ, ಸಿನಿಮಾ ನೋಡಿ ಮುಗಿದ ಮೇಲೆ, ಯಾವುದೋ ಬಸ್ಸಿಗೋ ರೈಲಿಗೆ ಹೋಗೋ ರೀತಿಯಲ್ಲಿ ನುಗ್ಗುತ್ತೇವೆ ಏಕೆ?
-ಗೋಡೆ ಕಂಡ ತಕ್ಷಣ ಜಿಪ್ ಎಳೆದು ಮೂತ್ರ ವಿಸರ್ಜಿಸುತ್ತೇವೆ. ಶೌಚಾಲಯ ಹುಡುಕುವ ತಾಳ್ಮೆ ಯಾಕಿಲ್ಲ?
-ಪೋಲಿಸ್ ಇದ್ದರೆ ಮಾತ್ರ ನಾವು ಟ್ರಾಫಿಕ್ಕಿನ ಕೆಂಪು ದೀಪಗಳಿಗೆ ಮರ್ಯಾದೆ ಕೊಡುವುದೇಕೆ?
-ಬೆಳಿಗ್ಗೆ-ಸಂಜೆ ರಶ್ ವೇಳೆಯಲ್ಲಿ ಮಹಿಳೆಯರ ಹಿಂದೆ ಬಸ್ಸು ಹತ್ತಿ, ಅವರಿಗೆ ಅಂಟಿಕೊಂಡು ನಿಲ್ಲೋದೇಕೆ?
-ಸೈಕಲ್, ಬೈಕ್ ಮೇಲಿನಿಂದ ಯಾರಾದರು ಹುಡುಗರು ಎಡವಟ್ಟಾಗಿ ಬಿದ್ದರೆ,"ತಲೆ ನೆಟ್ಟಗೆ ಇಟ್ಟುಕೊಂಡು ಹೊಡಿಯೋ ಗಾಡಿನಾ" ಅನ್ನೋ ಜನ, ಅದೇ ಹುಡಿಗಿಯರು ಬಿದ್ದರೇ, ಅಬ್ಬಬ್ಬಾ ಅದೇನು ಕಾಳಜಿ, ಅದೇನು ಅರೈಕೆ! ಈ ಇಬ್ಬಗೆ ನೀತಿಯೇಕೆ?
-ಬ್ಯಾಂಕ್, ಪೋಸ್ಟ್ ಆಫೀಸಿನಲ್ಲಿ ಯಾರಾದರು ಪುರಷರು ಪೆನ್ ಕೇಳಿದರೆ, ಮೇಲಿನಿಂದ ಕೆಳಗೆ ಒಮ್ಮೆ ನೋಡಿ ಅಳತೆ ಮಾಡಿ, ಕ್ಯಾಪ್ ತೆಗೆದು ಕೊಡುತ್ತಾರೆ, ಅದೇ ಒಂದು ಹೆಣ್ಣು ಕೇಳಿದರೆ, ರಾಕೆಟ್ ತರಹ ಹತ್ತಾರು ಪೆನ್ ಹಾರಿ ಬರುತ್ತವೆ ಏಕೆ ಹೀಗೆ?
-ನಮ್ಮ ಕರ್ನಾಟದಲ್ಲಿನ ದಿನಪತ್ರಿಕೆಗಳಿಗೆ ಅಮ್ಮಮ್ಮ ಅಂದರೆ 4 ರುಪಾಯಿ. ಆದೇ ಕೋಕಾ ಕೋಲಾ ಬೇಕಾದರೆ 10 ರುಪಾಯಿ ಕೊಟ್ಟು ಗ್ಯಾಸ್ ರೋಗ ತಂದುಕೊಳ್ಳುತ್ತಾರೆ, ಆದರೆ 4 ರುಪಾಯಿ ಕೊಟ್ಟು ಪೇಪರ್ ಓದುವುದಿಲ್ಲ. ಯಾರೋ ಖರೀದಿಸಿದ ಪುಣ್ಯಾತ್ಮನಿಂದ ಕಸಿದು ಓದುತ್ತಾರೆ. ಈ ಕಂಜೂಸ್ ಗುಣವೇಕೆ?
-ಸುಮಾರು ಗಂಟೆಗಟ್ಟಲೆ ಕಾದು ಕಾದು, ಬಸ್ಸು ಹತ್ತಿದವರು, ಇಳಿಯುವ ತಾಣ ಬಂದಾಕ್ಷಣ, ಇಳಿಯಲಿಕ್ಕೆ ಅದೇಕಷ್ಟು ಆತುರ. ನಿಮ್ಮ ಊರು ಎಲ್ಲಿಗೂ ಓಡಿಹೋಗದು ಸ್ವಾಮಿ, ಮೊದಲು ಹಿರಿಯರಿಗೆ ಇಳಿಯಲು ಅನುವುಮಾಡಿಕೊಡಿ.
-ನೋಟುಗಳನ್ನು ಕೊಡುವಾಗ, ಕೆಲವರು ಎಂಜಲು ಮೆತ್ತಿ ಎಣಿಸಿ ಕೊಡುತ್ತಾರೆ. ನಿಮ್ಮ ಜೊಲ್ಲು ನಿಮ್ಮ ಬಾಯಲ್ಲೇ ಇರಲಿ, ಇನ್ನೊಬ್ಬರ ಜೇಬು ಸೇರುವುದು ಬೇಡ.
-ಅಕ್ಕ ಪಕ್ಕ ಸುಮಾರು ಪ್ರಯಾಣಿಕರು ಸುಖ ನಿದ್ರೆಯಲ್ಲಿರುವಾಗ, ಜೋರಾಗಿ ಮೊಬೈಲ್‌ನಲ್ಲಿ ಮಾತನಾಡುವುದೇಕೆ?
-ಅಮ್ಮಾ ಕಕ್ಕ ಮಾಡಬೇಕು  ಅಂತ ಮಗು ಕೇಳಿದರೆ, "ಹೌದಾ, ಹೋಗಿ ಆ ಎದುರು ರಸ್ತೆ ಪಕ್ಕ ಕೂತುಕೊಂಡು ಮಾಡು" ಅಂತ ಹೇಳೋ ತಾಯಂದಿರಿಗೆ ಏನನ್ನಬೇಕು?
-ರೈಲಿನಲ್ಲಿ ನಿಲ್ಲಲು ಜಾಗ ಇದ್ದರು ಸಹ ಟಾಯ್ಲೆಟ್ ಪಕ್ಕ ನಿಂತು ಸಹ ಪ್ರಯಾಣಿಕರಿಗೆ ಮುಜುಗರ ಉಂಟುಮಾಡುವುದೇಕೆ?
-ಪಾಪ! ಪ್ರೇಮಿಗಳಿಗೆ ಯಾವುದೇ ಏಕಾಂತ ಜಾಗ ಸಿಗದೆ, ಪಾರ್ಕ್‌ಗಳಲ್ಲಿ ಕುಳಿತು ಮಾತುಕತೆಯಲ್ಲಿ ಮಗ್ನರಾಗಿರುವಾಗ, ಸಂಭಂದವಿಲ್ಲದ ಕೆಲವು ಮಂದಿ ಅವರ ಮುಂದೆ ಟಳಾಯಿಸುವುದು, ಮುಂದೇನೆ ಕುಳಿತುಕೊಳ್ಳುವುದು, ಅದೆಂತಹ ಮೋಜೋ?
-ಅಂಗಡಿ, ಮಹಡಿ ಮೇಲಿನ ಮೂಲೆಗಳಲ್ಲಿ, ಗೋಡೆಗಳ ಮೇಲೆ ಉಗುಳಿ ಚಿತ್ತಾರ ಬಿಡಿಸುವುದೇಕೆ? ಇದನ್ನೇ ಬೇರೆ ಯಾರಾದರೂ ನಿಮ್ಮ ಮನೆಯ ಮೇಲೆ ಮಾಡಿದರೆ ಸುಮ್ಮನಿರುತ್ತೀರಾ?
ಇವೆಲ್ಲ ಚಿಕ್ಕ ಸಂಗತಿಗಳೆನಿಸಬಹುದು. ಆದರೆ ಬದಲಾವಣೆ ಆಗಬೇಕಿರುವುದು ನಮ್ಮ ಈ ಗುಣಗಳಲ್ಲಿ ಎನ್ನುವುದು ಅರಿತುಕೊಂಡಾಗ ಮಾತ್ರ ದೇಶ ಬದಲಾದೀತು.

-ಆರ್.ಕೆ. ಗೌಡ, ಮಧುಗಿರಿ         

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.