ನೀವು ರೂಪಾಯಿ ಕೊಟ್ಟು ಪೆಟಿಎಂ ಹಣ ಕೊಳ್ಳುವುದಿಲ್ಲವೇ? ಹಾಗೆ ಇದು ಕೂಡ. ಮೊದಲಿಗೆ ಮಾರುಕಟ್ಟೆಯಲ್ಲಿ ಇರುವ ಹಲವಾರು ಆಪ್ ಗಳಲ್ಲಿ ಅತ್ಯಂತ ಹೆಚ್ಚು ಜನ ಬಳಸುತ್ತಿರುವ ಕಾಯಿನ್ ಬೇಸ್, ಬಿಟ್ ಕ್ವಿಕ್, ಕಾಯಿನ್ ಕಾರ್ನರ್ ಹೀಗೆ ಯಾವುದಾದರೊಂದು ತಂತ್ರಾಂಶವನ್ನ ನಿಮ್ಮ ಮೊಬೈಲ್ನಲ್ಲಿ ಅಥವಾ ಕಂಪ್ಯೂಟರ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ನಂತರ ಡಾಲರ್, ಯುರೋ ಹಣವನ್ನ ನೀಡಿ ಬಿಟ್ ಕಾಯಿನ್ ಕೊಳ್ಳಬಹುದು. ಹೀಗೆ ನೀವು ಕೊಂಡ ಬಿಟ್ ಕಾಯಿನ್ ಮೂಲಕ ಜಗತ್ತಿನೆಲ್ಲೆಡೆ ಇದನ್ನ ವಿನಿಮಯ ಮಾಧ್ಯಮವನ್ನಾಗಿ ಬಳಸಬಹದು. ಈ ಲೇಖನ ಬರೆಯುವಾಗ ಒಂದು ಬಿಟ್ ಕಾಯಿನ್ ಕೊಳ್ಳಲು ಐದು ಲಕ್ಷ ಮೂವತ್ತಮೂರು ಸಾವಿರ ಒಂಬೈನ್ನೋರ ಐವತ್ತನಾಲ್ಕು ರೂಪಾಯಿ ನೀಡಬೇಕಾಗುತ್ತದೆ.