ಬಂಗಾರಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಇರುವ ಮಹತ್ವ ಇಂದಿನದ್ದಲ್ಲ. ಕ್ರಿಸ್ತ ಪೂರ್ವ 5 ನೇ ಶತಮಾನದಲ್ಲಿ ಇಂದಿನ ಟರ್ಕಿ ದೇಶಕ್ಕೆ ಸೇರಿದ ಲಿಡಿಯಾದಲ್ಲಿ ಕೊಡು-ಕೊಳ್ಳುವಿಕೆಯ ಮಾಧ್ಯಮವಾಗಿ ಉಪಯೋಗಿಸುತ್ತಿದ್ದರು. ನಾಣ್ಯ ಎಷ್ಟು ತೂಕ ಹೊಂದಿದೆ ಎನ್ನುವುದರ ಮೇಲೆ ಅದರ ಮೌಲ್ಯ ನಿರ್ಧಾರ ಆಗುತ್ತಾ ಇತ್ತು.
19ನೇ ಶತಮಾನದಲ್ಲಿ ಜಗತ್ತಿನ ಬಹುಪಾಲು ದೇಶಗಳು ತಮ್ಮ ಕರೆನ್ಸಿ ಮೌಲ್ಯವನ್ನು ಚಿನ್ನದೊಂದಿಗೆ ಹೋಲಿಕೆ ಮಾಡುತ್ತಿದ್ದವು. ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಣಿಕೆ ಕಷ್ಟವಾಯ್ತು. ವ್ಯಾಪಾರ, ವಹಿವಾಟಿಗೆ ಹೊರಡುವ ನಾವಿಕರು ನೂರಾರು ಕೆ.ಜಿ ಚಿನ್ನವ ಸಾಗಿಸುವುದು ಸುಲಭದ ಕೆಲಸವಾಗಿರಲಿಲ್ಲ, ಜೊತೆಗೆ ಕಳ್ಳ- ಕಾಕರರ ಭಯ ಬೇರೆ, ಹೀಗಾಗಿ ಪೇಪರ್ ಮೇಲೆ ಮೌಲ್ಯ ಮುದ್ರಿಸತೊಡಗಿದರು. ಇಂತಹ ಪೇಪರ್ ಕೊಟ್ಟು ಅಷ್ಟೇ ಮೌಲ್ಯದ ಚಿನ್ನ ಪಡೆಯುವ ಅವಕಾಶ ಕಲ್ಪಿಸಲಾಯಿತು. ಚಿನ್ನವನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸಾಗಿಸುವುದು ಇದರಿಂದ ತಪ್ಪಿತು. ಯಾವ ದೇಶ ಅತಿ ಹೆಚ್ಚು ಬಂಗಾರ ಹೊಂದಿದೆಯೋ ಆ ದೇಶ ಹೆಚ್ಚು ಶ್ರೀಮಂತ ದೇಶ ಎಂದು ಪರಿಗಣಿಸಲಾಗುತ್ತಿತ್ತು. 1870 ರಿಂದ 1914ರ ವರೆಗೆ ಚಿನ್ನ ವಹಿವಾಟಿನ ಮೂಲವಾಗಿತ್ತು. ಮೊದಲನೇ ಮಹಾಯುದ್ಧದ ನಂತರ ಸಾಂಬಾರ ಪದಾರ್ಥ, ಬೆಳ್ಳಿ, ತಾಮ್ರಗಳು ಕೂಡ ನಾಣ್ಯದ ಮೌಲ್ಯ ಅಳೆಯುವ ಸಾಧನಗಳಾಗಿ ಉಪಯೋಗಿಸಲ್ಪಟವು. ಇಂಗ್ಲೆಂಡ್ ಹಾಗು ಅದರ ಸಾಮಂತ ದೇಶಗಳು ಮಾತ್ರ ಬಂಗಾರವನ್ನು ಮೌಲ್ಯ ಅಳೆಯುವ ಸಾಧನವನ್ನಾಗಿ ಬಳಸುತ್ತಿದ್ದವು. 1854ರಲ್ಲಿ ಪೋರ್ಚುಗಲ್, 1871ರಲ್ಲಿ ಜರ್ಮನಿ ಹೀಗೆ ಎಲ್ಲರೂ ಬಂಗಾರದ ಹಿಂದೆ ಬಿದ್ದರು. ಒಂದು ಗ್ರಾಂ ಚಿನ್ನಕೆ ಇಷ್ಟು ಬೆಲೆ ಎಂದು ನಿಗದಿಪಡಿಸಿದರು. ಅಮೇರಿಕಾ ಆ ದಿನಗಳಲ್ಲಿ ಅತಿ ಹೆಚ್ಚು ಬಂಗಾರ ಹೊಂದಿದ ದೇಶವಾಗಿತ್ತು. ಹೀಗಾಗಿ ಎರಡನೇ ಮಹಾಯುದ್ಧದ ನಂತರ ಜಗತ್ತಿನ ಎಲ್ಲಾ ದೇಶಗಳು ತಮ್ಮ ಕರೆನ್ಸಿ ಮೌಲ್ಯವನ್ನು ಅಮೆರಿಕಾದ ಡಾಲರ್ ಮೌಲ್ಯದೊಂದಿಗೆ ತುಲನೆ ಮಾಡಿ ನಿಗದಿ ಮಾಡಲು ಶುರು ಮಾಡಿದರು.
ಕ್ರಿಪ್ಟೊ ಕರೆನ್ಸಿ ಯುಗಕ್ಕೆ ನಾವು ಅಂಬೆಗಾಲಿಡಲು ಶುರು ಮಾಡಿದ್ದೇವೆ. ಜಗತ್ತು ಪೂರ್ತಿ ಈ 'ಹೊಸಹಣ'ಕ್ಕೆ ಹೊಂದಿಕೊಳ್ಳುವವರೆಗೆ ಚಿನ್ನದ ಮೋಹ ಮಾಸುವುದಿಲ್ಲ. ಆಟದ ನಿಯಮ ಬರೆಯುವವರ ಮನಸ್ಸಿನಲ್ಲಿ ಏನಿದೆ? ಎನ್ನುವುದರ ಮೇಲೆ ಚಿನ್ನ ತನ್ನ ಹೊಳಪು ಕಳೆದುಕೊಳ್ಳುತ್ತದೆಯೋ ಇಲ್ಲ ಮಾರುಕಟ್ಟೆಯನ್ನು ಎಂದಿನಂತೆ ಆಳುತ್ತದೆಯೂ ಎನ್ನುವುದು ನಿರ್ಧಾರವಾಗಲಿದೆ. ಇದೇನೇ ಇರಲಿ ಮನುಷ್ಯ ತಂತ್ರಜ್ಞಾನ ಬಳಸಿಕೊಂಡು ಎಷ್ಟೇ ದೊಡ್ಡ ಮಟ್ಟಕ್ಕೆ ಬೆಳೆಯಲಿ, ಕಂಪ್ಯೂಟರ್ ಪರದೆಯ ಮೇಲೆ ಸಾವಿರಾರು ಕೋಟಿ ಮೌಲ್ಯ ಸೃಷ್ಟಿಸಲಿ, ಆತನ ಒಳ ಮನಸ್ಸು ಯಾವುದಕ್ಕೆ ನಿಜವಾದ ಮೌಲ್ಯವಿದೆ ಎನ್ನುವುದನ್ನ ಗ್ರಹಿಸುತ್ತದೆ. ಹೀಗಾಗಿ ಇನ್ನೊಂದು ದಶಕ ಚಿನ್ನವನ್ನ ಹೂಡಿಕೆದಾರರು ಬಿಡುವ ಸಾಧ್ಯತೆ ಕಡಿಮೆ. ಆಮೇಲಿನ ಕಥೆಯೇನು? ಬದುಕು ಹಿಂದಿನ ರೀತಿಯಿಲ್ಲ. ಹತ್ತು ವರ್ಷದಲ್ಲಿ ಏನಾಗಬಹುದು ಎಂದು ಊಹಿಸುವುದು ಕಷ್ಟವಾಗಿದೆ. ಈಗೇನಿದ್ದರೂ ಎರಡು ಜಾಸ್ತಿ ಎಂದರೆ ಮೂರು ವರ್ಷಗಳ ಅವಧಿಗೆ ಮಾತ್ರ ಪ್ಲಾನ್ ಮಾಡುತ್ತಾ ಹೋಗಬೇಕು. ಬದಲಾದ ಸನ್ನಿವೇಶದಲ್ಲಿ ಮೂರು ವರ್ಷ ಕೂಡ ಲಾಂಗ್ ಟರ್ಮ್ ಎನ್ನಿಸಿಕೊಳ್ಳಲಿದೆ.
ಚಿನ್ನದ ಮೋಹ ಇಂದಿನದಲ್ಲ ಎನ್ನುವುದು ತಿಳಿಯಿತು, ಅಂತೆಯೇ ಮನುಷ್ಯನ ಮೂಲಗುಣ ಕಣ್ಣಿಗೆ ಕಾಣುವ ವಸ್ತುವಿನ ಮೇಲೆ ಹೆಚ್ಚು ನಂಬಿಕೆ ಎನ್ನುವುದು ಕೂಡ ವೇದ್ಯವಾಗುತ್ತಿದೆ. ಇಂತಹ ಬಂಗಾರದ ಮೇಲಿನ ಬೆಲೆ ಏರಿಕೆ ಏಕಾಗುತ್ತದೆ ಎನ್ನುವುದನ್ನ ಕೂಡ ನೋಡೋಣ.
ಬೆಲೆಯೇರಿಕೆಗೆ ಕಾರಣಗಳೇನು
ಕೊನೆ ಮಾತು: ಗಮನಿಸಿ 2021, 22 ರ ವರೆಗೂ ಇದು ಏರುಗತಿಯಲ್ಲಿ ಇರುತ್ತದೆ. 2023 ಅಥವಾ 2024 ರಲ್ಲಿ ಇದು ಕುಸಿತ ಕಾಣುತ್ತದೆ. ಇದನ್ನ ಸದ್ಯದ ಸ್ಥಿತಿಯಿಂದ ಬಚಾವಾಗಲು, ಅಥವಾ ಬೇರೆ ಹೂಡಿಕೆಯ ಮೇಲೆ ನಂಬಿಕೆ ಇರದ ಕಾರಣ ಕೊಳ್ಳುವುದಿದ್ದರೆ ಸ್ವಲ್ಪ ನಿಧಾನಿಸುವುದು ಒಳ್ಳೆಯದು. ಗ್ರಾಂ ಚಿನ್ನದ ಬೆಲೆ ಐದು ಸಾವಿರ ತಲುಪಿದೆ. ಇದು 2021 ರಲ್ಲಿ 8 ರಿಂದ 10 ಸಾವಿರ ತಲುಪುತ್ತದೆ ಎನ್ನುವ ಊಹಾಪೋಹಗಳು ಕೂಡ ಮಾರುಕಟ್ಟೆಯಲ್ಲಿ ಬಹಳವಿದೆ. 2022ರ ನಂತರ ಇದರ ಮೇಲಿನ ಬೆಲೆ ಸಮಸ್ಥಿತಿಗೆ ಬರಲಿದೆ. ಒಂದಷ್ಟು ವರ್ಷದ ನಂತರ ಮತ್ತೆ ಏರಿಕೆಯಾಗುತ್ತದೆ. ಹೀಗಾಗಿ ಚಿನ್ನವನ್ನ ಬಹಳ ವರ್ಷಗಳ ಹೂಡಿಕೆ ಎಂದು ಪರಿಗಣಿಸಿದರೆ ಇದರ ಮೇಲಿನ ಹೂಡಿಕೆ ನಿಮಗೆಂದೂ ನಷ್ಟ ಮಾಡುವುದಿಲ್ಲ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement