

ನವದೆಹಲಿ: ಕ್ರಿಕೆಟಿಗ ಹರ್ಭಜನ್ ಸಿಂಗ್ ಟ್ವಿಟರ್ ಕಾಳಗ ವಿಚಾರವಾಗಿ ಮತ್ತೆ ಸುದ್ದಿಯಲ್ಲಿದ್ದು, ಪ್ರಧಾನಿ ಮೋದಿ ಅವರ ಗಮನ ಸೆಳೆಯಲು ಹಾಕಿದ್ದ ಒಂದು ಫೋಟೋಗೆ ಬಂದ ಪ್ರತಿಕ್ರಿಯೆಗಳು ಭಜ್ಜಿ ಅವರ ಕೋಪ ನೆತ್ತಿಗೇರಿವಂತೆ ಮಾಡಿದೆ.
ಮಗುವಿನ ತಾಯಿಯೊಬ್ಬಳನ್ನು ನಡುರಸ್ತೆಯಲ್ಲಿಯೇ ಪೊಲೀಸ್ ಪೇದೆಯೊಬ್ಬ ಲಾಠಿಯಿಂದ ಹೊಡೆಯುತ್ತಿರುವ ದೃಶ್ಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರ ಕೋಪಕ್ಕೆ ಕಾರಣವಾಗಿದ್ದು, ಕೂಡಲೇ ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿದ್ದಾರೆ. "ರಕ್ಷಕರಾಗಬೇಕಿದ್ದ ಪೊಲೀಸರು ನಮ್ಮವರನ್ನೇ ಥಳಿಸುತ್ತಿರುವುದು ಸರಿಯಲ್ಲ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ" ಎಂದು ಟ್ವಿಟರ್ ನಲ್ಲಿ ಭಜ್ಜಿ ಮನವಿ ಮಾಡಿದ್ದರು.
ಹರ್ಭಜನ್ ಸಿಂಗ್ ಅವರ ಟ್ವೀಟ್ ಅನ್ನು ವಿರೋಧಿಸಿ ಕೆಲವರು ಪ್ರತಿಕ್ರಿಯೆ ನೀಡಿದ್ದರು. ಓರ್ವ ಬಳಕೆದಾರ ಮಾತ್ರ ಆ ಮಹಿಳೆ ನಿಮ್ಮ ರಾಜ್ಯದವರೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದ. ಇದಕ್ಕೆ ಕಠಿಣವಾಗಿ ಪ್ರತಿಕ್ರಿಯಿಸಿದ್ದ ಭಜ್ಜಿ, ಆಕೆ ನಮ್ಮ ರಾಜ್ಯದವರೇ ಆಗಿಬೇಕೆಂದು ಇಲ್ಲ. ಯಾರೇ ಆದರೂ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಹೇಳಿದ್ದರು. ಆದರೆ ಅಷ್ಟಕ್ಕೇ ಸುಮ್ಮನಾಗದ ಆ ವ್ಯಕ್ತಿ ಮತ್ತೆ ಭಜ್ಜಿ ಕಾಲೆಳೆದಾಗ ಆಕ್ರೋಶಗೊಂಡ ಹರ್ಭಜನ್, ನೀನೊಬ್ಬ ಮೂರ್ಖ, ಮೊದಲು ನಿನ್ನನ್ನು ಬಂಧಿಸಬೇಕು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.
ಟ್ವಿಟರ್ ನಲ್ಲಿ ಭಜ್ಜಿ ಕಾಳಗ ಪ್ರಸಂಗದ ಸರಣಿ ಟ್ವೀಟ್ ಗಳು ಈ ಕೆಳಕಂಡಂತಿವೆ.