ಪುಣೆ ಸೂಪರ್ ಜೈಟ್ಸ್ ಗೆ ಮತ್ತೆ ಮುಖಭಂಗ

ಹ್ಯಾಟ್ರಿಕ್ ಸೋಲು ಕಂಡಿದ್ದ ಧೋನಿ ಪಡೆ ಭಾನುವಾರ ಕೋಲ್ಕತಾ ವಿರುದ್ಧದ ಪಂದ್ಯದಲ್ಲೂ ಸೋಲು ಕಾಣುವ ಮೂಲಕ ಸತತ ನಾಲ್ಕನೇ ಸೋಲು ಕಂಡಿದೆ...
ಅಂಪೈರ್ ರೊಂದಿಗೆ ಚರ್ಚೆ ಮಾಡುತ್ತಿರುವ ಪುಣೆ ತಂಡ ನಾಯಕ ಧೋನಿ
ಅಂಪೈರ್ ರೊಂದಿಗೆ ಚರ್ಚೆ ಮಾಡುತ್ತಿರುವ ಪುಣೆ ತಂಡ ನಾಯಕ ಧೋನಿ
Updated on: 

ಪುಣೆ: ಐಪಿಎಲ್-9ನಲ್ಲಿ ಅದೇಕೋ ಅದೃಷ್ಟದ ನಾಯಕ ಧೋನಿ ಪ್ಲಾನ್ ಗಳು ವರ್ಕ್ ಔಟ್ ಆದಂತೆ ಕಾಣುತ್ತಿಲ್ಲ. ಈ ಹಿಂದಿನ ಸತತ 3 ಪಂದ್ಯಗಳನ್ನು ಸೋತು ಹ್ಯಾಟ್ರಿಕ್ ಸೋಲು ಕಂಡಿದ್ದ ಧೋನಿ ಪಡೆ ಭಾನುವಾರ ಕೋಲ್ಕತಾ ವಿರುದ್ಧದ ಪಂದ್ಯದಲ್ಲೂ ಸೋಲು ಕಾಣುವ ಮೂಲಕ ಸತತ ನಾಲ್ಕನೇ ಸೋಲು ಕಂಡಿದೆ.

ನಿನ್ನೆ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕಚಾ ನೈಟ್ ರೈಡರ್ಸ್ ವಿರುದ್ಧ ಪುಣೆ ಸೂಪರ್ ಜೈಂಟ್ಲ್ ತಂಡ 2 ವಿಕೆಟ್ ಗಳ ಅಂತರದಿಂದ ಸೋಲು ಕಂಡಿತು. ಟಾಸ್ ಗೆದ್ದ ಕೆಕೆಅರ್ ನಾಯಕ  ಗೌತಮ್ ಗಂಭೀರ್ ಪುಣೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿದರು. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಧೋನಿ ಪಡೆ ನಿಗದಿತ 20 ಓವರ್ ಗಳಲ್ಲಿ ರಹಾನೆ (67 ರನ್)ಅವರ  ಅಮೋಘ ಅರ್ಧಶತಕ ಮತ್ತು ಸ್ಮಿತ್ (31)ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 160 ರನ್ ಗಳ ಸವಾಲಿನ ಮೊತ್ತ ಕಲೆಹಾಕಿತು.

ಕೆಕೆಆರ್ ಪರ ಶಕೀಬ್ ಅಲ್ ಹಸನ್, ಸುನಿಲ್ ನರೇನ್, ಆರ್ ಸತೀಶ್ ಮತ್ತು ಯಾದವ್ ತಲಾ 1 ವಿಕೆಟ್ ಪಡೆದರು.

ಈ ಮೊತ್ತವನ್ನು ಬೆನ್ನು ಹತ್ತಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ಇನ್ನೂ ಮೂರು ಎಸೆತಗಳು ಬಾಕಿ ಇರುವಂತೆಯೇ ಅಂದರೆ 19.3 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿ  ಜಯಭೇರಿ ಭಾರಿಸಿತು. ಕೆಕೆಆರ್ ಪರ ಯಾದವ್ 60 ರನ್ ಸಿಡಿಸಿದರೆ, ಯೂಸುಫ್ ಪಠಾಣ್ 36 ರನ್ ಗಳಿಂದ ಉತ್ತಮ ಸಾಥ್ ನೀಡಿದರು. ಪಂದ್ಯದ ಯಾವುದೇ ಹಂತದಲ್ಲಿ ಪುಣೆ ಪ್ರಾಬಲ್ಯ  ಸಾಧಿಸಲು ಬಿಡದ ಕೆಕೆಆರ್ ಬ್ಯಾಟ್ಸಮನ್ ಗಳು ಅಂತಿಮ ಓವರ್ ನ ಮೂರನೇ ಎಸೆತದಲ್ಲಿ ಗೆಲುವಿನ ರನ್ ಭಾರಿಸಿದರು.

ಪುಣೆ ಪರ ಮಾರ್ಕೆಲ್, ಪೆರೆರಾ ಮತ್ತು ಭಾಟಿಯಾ ತಲಾ 2 ವಿಕೆಟ್ ಪಡೆದರೆ, ಆರ್ ಅಶ್ವಿನ್ 1 ವಿಕೆಟ್ ಪಡೆದರು. ಕೋಲ್ಕತಾ ಪದ ಅಮೋಘ ಬ್ಯಾಟಿಂಗ್ ಮಾಡಿ 60 ಸಿಡಿಸಿದ ಯಾದವ್  ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com