ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಅಜರುದ್ದೀನ್ ದಾಖಲೆ ಸರಿಗಟ್ಟಿದ ಕ್ಯಾಪ್ಟನ್ ವಿರಾಟ್ ಕೊಹ್ಲಿ!

ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಾಜಿ ನಾಯಕ ಮಹಮದ್ ಅಜರುದ್ದೀನ್ ಅವರ ದಾಖಲೆಯೊಂದನ್ನು ಚೆನ್ನೈನಲ್ಲಿ ಸರಿಗಟ್ಟಿದ್ದಾರೆ.

ಚೆನ್ನೈ: ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಾಜಿ ನಾಯಕ ಮಹಮದ್ ಅಜರುದ್ದೀನ್ ಅವರ ದಾಖಲೆಯೊಂದನ್ನು ಚೆನ್ನೈನಲ್ಲಿ ಸರಿಗಟ್ಟಿದ್ದಾರೆ.

ಟೀಂ ಇಂಡಿಯಾದ ನಾಯಕರಾಗಿ ಅತೀ ಹೆಚ್ಚು ಪಂದ್ಯವನ್ನು ಗೆಲ್ಲಿಸಿಕೊಟ್ಟ ದಾಖಲೆ ಪೈಕಿ ಮಹಮದ್ ಅಜರುದ್ದೀನ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಕೊಹ್ಲಿ ಸರಿಗಟ್ಟಿದ್ದು, ಇಂಗ್ಲೆಂಡ್ ವಿರುದ್ಧ ಚೆನ್ನೈ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್  ಮತ್ತು 75 ರನ್ ಗಳ ಅಂತದರಲ್ಲಿ ಜಯಿಸುವ ಮೂಲಕ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಚೆನ್ನೈ ಪಂದ್ಯದ ಗೆಲುವಿನ ಮೂಲಕ ಕೊಹ್ಲಿ ತಮ್ಮ ನೇತೃತ್ವದಲ್ಲಿನ ತಂಡದ ಗೆಲುವಿನ ಸಂಖ್ಯೆಯನ್ನು 14ಕ್ಕೆ ಏರಿಸಿಕೊಂಡರು.  ಅಜರುದ್ದೀನ್ ಕೂಡ ತಮ್ಮ ನಾಯಕತ್ವದಲ್ಲಿ 14 ಟೆಸ್ಟ್ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಆ ಮೂಲಕ ಕೊಹ್ಲಿ, ಅಜರುದ್ದೀನ್ ಅವರ ದಾಖಲೆ ಸರಿಗಟ್ಟಿದ್ದು, ಟೀಂ ಇಂಡಿಯಾ ನಾಯಕರಾಗಿ ಅತೀ ಹೆಚ್ಚು ಪಂದ್ಯವನ್ನು ಗೆಲ್ಲಿಸಿಕೊಟ್ಟ  ನಾಯಕರ ಪಟ್ಟಿಯಲ್ಲಿ ಅಜರುದ್ದೀನ್ ಹಾಗೂ ಕೊಹ್ಲಿ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.

ಪಟ್ಟಿಯಲ್ಲಿ ಎಂಎಸ್ ಧೋನಿ ಅಗ್ರ ಸ್ಥಾನದಲ್ಲಿದ್ದು, ಧೋನಿ ಒಟ್ಟು 27 ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಅಂತೆಯೇ ಎರಡನೇ ಸ್ಥಾನದಲ್ಲಿ ಮಾಜಿ ನಾಯಕ ಸೌರವ್ ಗಂಗೂಲಿ ಇದ್ದು, ಅವರು ಒಟ್ಟು 21 ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com