ರಣಜಿ ಕ್ರಿಕೆಟ್: ವಿಶ್ವದಾಖಲೆ ಬರೆದ ಗುಜರಾತ್ ಸಮಿತ್ ಗೋಹೆಲ್

ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗುಜರಾತ್ ಆರಂಭಿಕ ಆಟಗಾರ ಸಮಿತ್ ಗೋಹೆಲ್ ಒಡಿಶಾ ವಿರುದ್ಧ ವಿಶ್ವದಾಖಲೆ ಆಟವಾಡಿದ್ದಾರೆ...
ಸಮಿತ್ ಗೋಹೆಲ್
ಸಮಿತ್ ಗೋಹೆಲ್
Updated on
ನವದೆಹಲಿ: ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗುಜರಾತ್ ಆರಂಭಿಕ ಆಟಗಾರ ಸಮಿತ್ ಗೋಹೆಲ್ ಒಡಿಶಾ ವಿರುದ್ಧ ವಿಶ್ವದಾಖಲೆ ಆಟವಾಡಿದ್ದಾರೆ. 
ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸಮಿತ್ ಗೋಹೆಲ್ ಎರಡನೇ ಇನ್ನಿಂಗ್ಸ್ ನಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಅಜೇಯ 359 ರನ್ ಸಿಡಿಸಿದ್ದಾರೆ. ಈ ಮೂಲಕ ಆರಂಭಿಕ ಆಟಗಾರನೋರ್ವ ಗಳಿಸಿದ ಅತ್ಯಧಿಕ ರನ್ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. 
1899ರಲ್ಲಿ ಇಂಗ್ಲೆಂಡ್ ನ ಸರ್ರೆ ತಂಡದ ಬಾಬಿ ಅಬೆಲ್ 357 ರನ್ ಗಳಿಸುವ ಮೂಲಕ ವಿಶ್ವದಾಖಲೆ ಬರೆದಿದ್ದರು. ಇದೀಗ ಗೋಹೆಲ್ 359 ರನ್ ಸಿಡಿಸುವ ಮೂಲಕ ಅಗ್ರಸ್ಥಾನಕ್ಕೇರಿದ್ದಾರೆ. ಗೋಹೆಲ್ 723 ಎಸೆತಗಳಲ್ಲಿ 45 ಬೌಂಡರಿ ಮತ್ತು 1 ಸಿಕ್ಸ್ ರ ಒಳಗೊಂಡಂತೆ 359 ರನ್ ಸಿಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com