ಕೊಹ್ಲಿ, ಎಂಎಸ್ ಧೋನಿ, ರಾಹುಲ್ ದ್ರಾವಿಡ್ ಜತೆ ಅನಿಲ್ ಕುಂಬ್ಳೆ ಮಹತ್ವದ ಚರ್ಚೆ

ಭಾರತ ಕ್ರಿಕೆಟ್ ತಂಡದ ಭವಿಷ್ಯಕ್ಕಾಗಿ ದೂರದೃಷ್ಟಿ ಯೋಜನೆಯನ್ನು ಹೊಂದಿರುವ ತಂಡದ ಕೋಚ್ ಅನಿಲ್ ಕುಂಬ್ಳೆ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಭಾರತ...
ನಾಯಕರ ಸಭೆ
ನಾಯಕರ ಸಭೆ
Updated on: 

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಭವಿಷ್ಯಕ್ಕಾಗಿ ದೂರದೃಷ್ಟಿ ಯೋಜನೆಯನ್ನು ಹೊಂದಿರುವ ತಂಡದ ಕೋಚ್ ಅನಿಲ್ ಕುಂಬ್ಳೆ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಭಾರತ ಎ ತಂಡದ ಕೋಚ್ ರಾಹುಲ್ ದ್ರಾವಿಡ್, ಏಕದಿನ ಹಾಗೂ ಟಿ20 ತಂಡದ ನಾಯಕ ಎಂಎಸ್ ಧೋನಿ, ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರ ಜತೆ ಚರ್ಚೆ ನಡೆಸಿದರು.

ಆಲೂರಿನಲ್ಲಿ ಅಭ್ಯಾಸ ಪಂದ್ಯ ಮುಕ್ತಾಯದ ಬಳಿಕ ಸಭೆ ಸೇರಿ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದರು. ಕುಂಬ್ಳೆಗ ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸ ತರಬೇತುದಾರನಾಗಿ ಮೊದಲ ವಿದೇಶಿ ಸರಣಿ ಇದಾಗಿದ್ದು, ಯೋಜನೆಗಳ ಕುರಿತು ನಾಯಕರಿಂದ ಸಲಹೆ ಪಡೆದರು ಎನ್ನಲಾಗಿದೆ.

ಸಭೆ ನಂತರ ಆಟಗಾರರ ಮನರಂಜನೆಗಾಗಿ ಗಾಯಕಿ, ನಟಿ ವಸುಂಧರಾ ದಾಸ್ ಅವರ ಡ್ರಮ್ ಜಮ್ ತಂಡದಿಂದ ಮನರಂಜನೆಗಾಗಿ ಸಂಗೀತಗೋಷ್ಠಿಯನ್ನು ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com