ಸಾಂಪ್ರದಾಯಿಕ ಎದುರಾಳಿ ಪಾಕ್ ಮಣಿಸಿದ ಟೀಂ ಇಂಡಿಯಾಗೆ ಮೋದಿ ಅಭಿನಂದನೆ

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಭರ್ಜರಿ ಜಯ ಗಳಿಸಿದ ಟೀಂ ಇಂಡಿಯಾ..
ಟೀಂ ಇಂಡಿಯಾ-ನರೇಂದ್ರ ಮೋದಿ
ಟೀಂ ಇಂಡಿಯಾ-ನರೇಂದ್ರ ಮೋದಿ

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಭರ್ಜರಿ ಜಯ ಗಳಿಸಿದ ಟೀಂ ಇಂಡಿಯಾಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಪಾಕ್ ವಿರುದ್ಧ ಟೀಂ ಇಂಡಿಯಾ ಅಮೋಘ ಜಯ ಗಳಿಸಿದಕ್ಕೆ ಮೋದಿ ಅವರು ಹ್ಯಾಟ್ಸ್ ಆಫ್ ಬ್ಲೂ ಬಾಯ್ಸ್ ಎಂದು ಟ್ವೀಟಿಸಿದ್ದಾರೆ.

ಕೋಲ್ಕತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ 119 ರನ್ ಗಳ ಗುರಿಯನ್ನು ಕೇವಲ 15.5 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಯಶಸ್ವಿಯಾಗಿ ಗುರಿಮುಟ್ಟಿತು.

ಭರ್ಜರಿ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಭರ್ಜರಿ ಅರ್ಧಶತಕ ಸಿಡಿಸುವ ಮೂಲಕ ಭಾರತ ತಂಡವನ್ನು ಗೆಲುವಿಗೆ ಕಾರಣರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com