

ಕೊಲ್ಕತ್ತಾ: ಸಾರ್ವಕಾಲಿಕ ಶ್ರೇಷ್ಠ ಆಟಗಾರನೆನಿಸಿಕೊಳ್ಳುವ ಎಲ್ಲ ಆರ್ಹತೆ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿಗಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಹೇಳಿದ್ದಾರೆ.
ಭಾರತದ ಟೆಸ್ಟ್ ತಂಡದ ನಾಯಕನಾಗಿರುವ ಕೊಹ್ಲಿ ನಿಜಕ್ಕೂ ಸಾಕಷ್ಟು ನಿಪುಣರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಕೊಹ್ಲಿ ಒಬ್ಬ ಅಪ್ರತಿಮ ಕ್ರಿಕೆಟಿಗನಾಗಿ ರೂಪುಗೊಳ್ಳಲಿದ್ದಾರೆ. ಅದೇ ವೇಗದಲ್ಲಿ ಸಾಗಿದ್ದೇ ಆದಲ್ಲಿ ಕೊಹ್ಲಿ ವಿಶ್ವ ಕ್ರಿಕೆಟ್ ನ ಎಲ್ಲಾ ದಾಖಲೆಗಳನ್ನು ಬ್ರೇಕ್ ಮಾಡಲಿದ್ದಾರೆ ಎಂದು ಇಮ್ರಾನ್ ಖಾನ್ ಹೊಗಳಿದ್ದಾರೆ.
ವಿರಾಟ್ ಕೊಹ್ಲಿ ಫುಟ್ ವರ್ಕ್ ಅದ್ಭುತವಾಗಿದ್ದು, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿಯುವುದರಿಂದ ತಂಡದ ಬ್ಯಾಟಿಂಗ್ ಗೆ ಆಧಾರಸ್ಥಂಭ ಎನಿಸಿಕೊಂಡಿದ್ದಾರೆಂದು ಮಾಜಿ ಆಲ್ ರೌಂಟರ್ ಇಮ್ರಾನ್ ಖಾನ್ ಹೇಳಿದ್ದಾರೆ