ಮಗನ ಪ್ರದರ್ಶನ ಕೊಂಡಾಡಿದ "ಸೀನಿಯರ್ ಪಾಂಡ್ಯಾ"

ಬುಧವಾರ ನಡೆದ ಭಾರತ-ಬಾಂಗ್ಲಾದೇಶ ಪಂದ್ಯ ಕೇವಲ ಕ್ರಿಕೆಟ್ ಅಭಿಮಾನಿಗಳನ್ನಷ್ಟೇ ಸ್ವತಃ ಆ ಪಂದ್ಯದ ಹೀರೋ ಹಾರ್ದಿಕ್ ಪಾಂಡ್ಯಾ ಅವರ ತಂದೆ ಹಿಮಾಂಶು ಪಾಂಡ್ಯಾ ಅವರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಪುತ್ರ ಹಾರ್ದಿಕ್ ಪಾಂಡ್ಯ ಜೊತೆ ತಂದೆ ಹಿಮಾಂಶು ಪಾಂಡ್ಯ (ಸಂಗ್ರಹ ಚಿತ್ರ)
ಪುತ್ರ ಹಾರ್ದಿಕ್ ಪಾಂಡ್ಯ ಜೊತೆ ತಂದೆ ಹಿಮಾಂಶು ಪಾಂಡ್ಯ (ಸಂಗ್ರಹ ಚಿತ್ರ)
Updated on: 

ಮುಂಬೈ: ಬುಧವಾರ ನಡೆದ ಭಾರತ-ಬಾಂಗ್ಲಾದೇಶ ಪಂದ್ಯ ಕೇವಲ ಕ್ರಿಕೆಟ್ ಅಭಿಮಾನಿಗಳನ್ನಷ್ಟೇ ಸ್ವತಃ ಆ ಪಂದ್ಯದ ಹೀರೋ ಹಾರ್ದಿಕ್ ಪಾಂಡ್ಯಾ ಅವರ ತಂದೆ ಹಿಮಾಂಶು ಪಾಂಡ್ಯಾ ಅವರ  ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಇಡೀ ಪಂದ್ಯದ ಫಲಿತಾಂಶ ಹೊತ್ತು ನಿಂತಿದ್ದ ಅಂತಿಮ ಮತ್ತು ನಿರ್ಣಾಯಕ ಓವರ್ ಅನ್ನು ಧೋನಿ ಹಾರ್ದಿಕ್ ಪಾಂಡ್ಯಾ ಕೈಗೆ ನೀಡಿದ್ದಾಗ ಅದೆಷ್ಟೋ ಮಂದಿಯ ಹುಬ್ಬೇರಿತ್ತು. ಆದರೆ ಮುಂಬೈನ  ನಿವಾಸವೊಂದರಲ್ಲಿ ಕುಳಿತಿದ್ದ ವ್ಯಕ್ತಿ ಮಾತ್ರ ಭಾರತ ಗೆಲ್ಲುತ್ತದೆ ಎಂಬ ಆಶಾಭಾವನೆಯಿಂದಿದ್ದರು. ಅದು ಬೇರಾರೂ ಅಲ್ಲ ಆ ಪಂದ್ಯದ ಹೀರೋ ಹಾರ್ದಿಕ್ ಪಾಂಡ್ಯ ಅವರ ತಂದೆ ಹಿಮಾಂಶು  ಪಾಂಡ್ಯಾ.

ಪಂದ್ಯದ ಬಳಿಕ ಖಾಸಗಿ ಪತ್ರಿಕೆಯೊಂದಿಗೆ ಮಾತನಾಡಿರುವ ಹಿಮಾಂಶ ಪಾಂಡ್ಯಾ ಅವರು, ನಿಜಕ್ಕೂ ಭಾರತ-ಬಾಂಗ್ಲಾ ಪಂದ್ಯ ಅಮೋಘವಾಗಿತ್ತು. ಪಂದ್ಯ ವೀಕ್ಷಿಸುತ್ತಿದ್ದ ನಾವೆಲ್ಲರೂ ಫಲಿತಾಂಶ  ಏನಾಗುತ್ತದೆ ಎಂದು ಚಡಪಡಿಸುತ್ತಿದ್ದೆವು. ಆದರೂ ಮನದ ಮೂಲೆಯಲ್ಲಿ ಭಾರತ ಪಂದ್ಯ ಗೆಲ್ಲುತ್ತದೆ ಎಂಬ ಆಶಾಭಾವವಿತ್ತು. ಅಂತಿಮ ಓವರ್ ನ ಅತೀವ ಒತ್ತಡವನ್ನು ತಮ್ಮ ಮಗ ಹಾರ್ದಿಕ್  ಪಾಂಡ್ಯಾ ಯಶಸ್ವಿಯಾಗಿ ನಿಭಾಯಿಸಿದ್ದಾನೆ ಎಂದು ಹಸನ್ಮುಖರಾಗಿ ಹೇಳಿದರು.

"ಕೊನೆಯ ಓವರ್ ನಲ್ಲಿ 11 ರನ್ ಗಳು ಬೇಕಿದ್ದಾಗ ಬಾಂಗ್ಲಾದೇಶದ ಮುಶ್ಫಿಕರ್ ರಹೀಮ್ 2 ಮತ್ತು 3ನೇ ಎಸೆತಗಳನ್ನು ಬೌಂಡರಿಗೆ ಅಟ್ಟಿದ್ದರು. ಆಗ ಟಿವಿ ನೋಡುತ್ತಿದ್ದ ನಾವು ಗೆಲ್ಲುವುದು  ಅಸಾಧ್ಯ ಎಂದು ಹೇಳಿದ್ದೆ. ಆದರೂ ಮನದ ಮೂಲೆಯಲ್ಲಿ ಭಾರತ ಗೆಲ್ಲಬಹುದು ಎಂದು ಎಣಿಸುತ್ತಿದ್ದೆ. ಆದರೆ ನಾಲ್ಕು ಮತ್ತು ಐದನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಸತತ 2 ವಿಕೆಟ್ ಪಡೆಯುವ  ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದ್ದ ಎಂದು ಹಿಮಾಂಶು ಪಾಂಡ್ಯಾ ಹೇಳಿದ್ದಾರೆ.

ಇನ್ನು ತಮ್ಮ ಮಗ ಆಡುವಾಗ ನಿಮ್ಮ ಅನುಭವ ಹೇಗಿತ್ತು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೀನಿಯರ್ ಪಾಂಡ್ಯಾ, ಆ ವೇಳೆ ನಮಗೆ ನಮ್ಮ ಮಗ ಆಡುತ್ತಿದ್ದಾನೆ ಎಂಬುದಕ್ಕಿಂತ ಭಾರತ  ತಂಡ ಆಡುತ್ತಿದೆ ಎಂಬ ಭಾವವೇ ಹೆಚ್ಚಾಗಿತ್ತು. ಹೀಗಾಗಿ ಮಗನ ಆಟದ ಕುರಿತು ಹೆಚ್ಚಾಗಿ ಗಮನ ಹರಿಸಲಾಗಲಿಲ್ಲ ಎಂದು ಹಿಮಾಂಶು ಪಾಂಡ್ಯಾ ಹೇಳಿದ್ದಾರೆ.

ಧೋನಿಯನ್ನು ಶ್ಲಾಘಿಸಿದ ಹಿಮಾಂಶು ಪಾಂಡ್ಯಾ

ಇದೇ ವೇಳೆ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಹಿಮಾಂಶು ಪಾಂಡ್ಯಾ ಅವರು ಶ್ಲಾಘಿಸಿದ್ದು, ತಂಡದಲ್ಲಿ ಸುರೇಶ್ ರೈನಾರಂತಹ ಹಿರಿಯ ಬೌಲರ್ ಗಳಿದ್ದರೂ  ಪಾಂಡ್ಯಾ ಮೇಲಿನ ನಂಬಿಕೆಯಿಂದಾಗಿ ಧೋನಿ ಆತನಿಗೆ ಜವಾಬ್ದಾರಿ ಹೊರಿಸಿದ್ದರು. ಇದಕ್ಕೆ ನಾವು ಧನ್ಯವಾದ ಹೇಳುತ್ತೇವೆ. ಅಂತೆಯೇ ಧೋನಿ ಇಟ್ಟಿದ್ದ ನಂಬಿಕೆಯನ್ನು ತಮ್ಮ ಪುತ್ರ  ಯಶಸ್ವಿಯಾಗಿ ನಿಭಾಯಿಸಿದ್ದಾನೆ ಎಂದು ಅವರು ಹೇಳಿದರು.

ಅಂತೆಯೇ ತಮ್ಮ ಪುತ್ರ ಪಂದ್ಯದಲ್ಲಿ 15 ರನ್ ಗಳಿಸಿ ನಿರ್ಣಾಯಕ ಘಟದಲ್ಲಿ 2 ಪ್ರಮುಖ ವಿಕೆಟ್ ಗಳಿಸಿದ್ದರು. ಹೀಗಾಗಿ ಪಂದ್ಯ ಶ್ರೇಷ್ಢ ಪ್ರಶಸ್ತಿಗೆ ಆತ ಅರ್ಹನಾಗಿದ್ದ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com