ಕೋಚ್ ಬದಲಾದರೂ ಪಾಕಿಸ್ತಾನದ ಸ್ಥಿತಿ ಬದಲಾಗದು: ಶೊಯೆಬ್ ಅಖ್ತರ್

ಟಿ20 ವಿಶ್ವಕಪ್ ನಲ್ಲಿ ಹೀನಾಯ ಸೋಲುಕಂಡ ತವರಿಗೆ ಮರಳಿರುವ ಪಾಕಿಸ್ತಾನ ತಂಡ ವಿರುದ್ಧ ಅಭಿಮಾನಿಗಳ ಆಕ್ರೋಶ ಮುಂದುವರೆದಿ...
ಪಾಕಿಸ್ತಾನ ಮಾಜಿ ಕ್ರಿಕೆಚಿಗ ಶೊಯೆಬ್ ಅಖ್ತರ್ (ಸಂಗ್ರಹ ಚಿತ್ರ)
ಪಾಕಿಸ್ತಾನ ಮಾಜಿ ಕ್ರಿಕೆಚಿಗ ಶೊಯೆಬ್ ಅಖ್ತರ್ (ಸಂಗ್ರಹ ಚಿತ್ರ)
Updated on: 

ಲಾಹೋರ್: ಟಿ20 ವಿಶ್ವಕಪ್ ನಲ್ಲಿ ಹೀನಾಯ ಸೋಲುಕಂಡ ತವರಿಗೆ ಮರಳಿರುವ ಪಾಕಿಸ್ತಾನ ತಂಡ ವಿರುದ್ಧ ಅಭಿಮಾನಿಗಳ ಆಕ್ರೋಶ ಮುಂದುವರೆದಿರುವಂತೆಯೇ, ಮಾಜಿ ಕ್ರಿಕೆಟಿಗ ಶೊಯೆಬ್  ಅಖ್ತರ್ ಕೂಡ ತಮ್ಮ ಟೀಕಾ ಪ್ರಹಾರವನ್ನು ಮುಂದುವರೆಸಿದ್ದಾರೆ.

ಪಿಸಿಬಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ವಕಾರ್ ಯೂನಿಸ್ ಅವರು ತಮ್ಮ ರಾಜಿನಾಮೆ ಸಲ್ಲಿಸಿ ಅಭಿಮಾನಿಗಳ ಕ್ಷಮೆ ಕೋರಿದ ಹಿನ್ನಲೆಯಲ್ಲಿ  ಮಾತನಾಡಿದ ಅಖ್ತರ್, "ವಕಾರ್‌ ಯೂನಿಸ್‌ ಅವರು ಕೋಚ್‌ ಸ್ಥಾನದಿಂದ ಕೆಳಗಿಳಿದ ಮಾತ್ರಕ್ಕೆ ಪಾಕ್‌ ಕ್ರಿಕೆಟ್‌ನಲ್ಲಿ ಏನೂ ಬದಲಾವಣೆಗಳಾಗುವುದಿಲ್ಲ. ವಕಾರ್‌ ಪಾಕ್‌ ಕ್ರಿಕೆಟ್‌ ಕಂಡ ಶ್ರೇಷ್ಠ  ಆಟಗಾರರಲ್ಲಿ ಒಬ್ಬರು. ಅವರು ಬಹಿರಂಗವಾಗಿ ಕ್ಷಮೆ ಕೇಳಿದ್ದನ್ನು ನೋಡಿ ತುಂಬಾ ಬೇಸರವಾಯಿತು. ಯಾರೊ ಒಬ್ಬರು ರಾಜೀನಾಮೆ ನೀಡಿದ ತಕ್ಷಣ ಪಾಕ್‌ ಕ್ರಿಕೆಟ್‌ನಲ್ಲಿ ಎಲ್ಲವೂ ಸರಿ  ಹೋಗಲಿದೆ ಎಂಬ ನಂಬಿಕೆ ನನಗಂತೂ ಖಂಡಿತಾ ಇಲ್ಲ’ ಎಂದು ಹೇಳಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಕ್ರಿಕೆಟಿಗ ರಮೀಜ್ ರಾಜಾ, ‘ಯಾರೊ ಒಬ್ಬರನ್ನು ಗುರಿಯಾಗಿಸಿ ಕೊಂಡು ಟೀಕಿಸುವುದು ಅಥವಾ ಅವರ ರಾಜೀನಾಮೆ  ಪಡೆಯುವುದರಿಂದ ಏನೂ ಪ್ರಯೋಜನ ಇಲ್ಲ. ಪಿಸಿಬಿಯ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗಬೇಕು. ಅದಕ್ಕೆ ಈಗ ಕಾಲ ಕೂಡಿ ಬಂದಿದೆ. ತಂಡದಲ್ಲಿರುವ ಆಟಗಾರರೇ ಜವಾಬ್ದಾರಿ  ಮರೆತು ಆಡಿದರೆ ಅದಕ್ಕೆ ಹೊಣೆ ಯಾರು. ತಂಡದಲ್ಲಿ ಆಡುತ್ತಿರುವ ಕೆಲ ಆಟಗಾರರು ಹೋರಾಟದ ಮನೋಭಾವವನ್ನೇ ಮರೆತಂತಿದೆ. ಮೊದಲು ಅಂತಹವರನ್ನು ಹೊರಗಿಟ್ಟು ಹೊಸ  ಮುಖಗಳಿಗೆ ಅವಕಾಶ ನೀಡಬೇಕು’ ಎಂದು ರಮೀಜ್‌ ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com